ಹಾಡುತ್ತಿರುವಾಗಲೇ ವೇದಿಕೆಯಲ್ಲಿ ಕುಸಿದುಬಿದ್ದು ನಿಧನರಾದ ಗಾಯಕ ಎಡವ ಬಶೀರ್

ಅಲ್ಲಪುಜ(ಕೇರಳ): ಕೇರಳದ ಅಲಪ್ಪುಳದಲ್ಲಿ ಹಾಡುತ್ತಿರುವಾಗಲೇ ಕುಸಿದುಬಿದ್ದು ಹಿರಿಯ ಗಾಯಕ ಎಡವ ಬಶೀರ್ ಶನಿವಾರ ನಿಧನರಾಗಿದ್ದಾರೆ. ಎಡವ ಬಶೀರ್ ಅವರು ಬ್ಲೂ ಡೈಮಂಡ್ ಆರ್ಕೆಸ್ಟ್ರಾದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಕೆ.ಜೆ.ಯೇಸುದಾಸ್ ಅವರ ಜನಪ್ರಿಯ ಹಿಂದಿ ಗೀತೆ ‘ಮಾನಾ ಹೋ ತುಮ್’ ಹಾಡನ್ನು ಹಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ವೇದಿಕೆಯಲ್ಲೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ … Continued

ಚೀನಾ ಹಿಂದಕ್ಕಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾದ ಅಮೆರಿಕ

ನವದೆಹಲಿ: ಅಮೆರಿಕ (ಯುಎಸ್‌ಎ) 2021-22ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತದ ಅಗ್ರ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ, ಇದು ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸಿದೆ ಎಂಬುದನ್ನು ಸೂಚಿಸುತ್ತದೆ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2021-22 ರಲ್ಲಿ, ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು 119.42 ಶತಕೋಟಿ ಅಮೆರಿಕನ್‌ ಡಾಲರ್‌ ಆಗಿದೆ. 2020-21 ರಲ್ಲಿ $ … Continued

ಮೊದಲ ಹೇಳಿಕೆಯಲ್ಲಿ ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದು ಎಂದು ಸರ್ಕಾರ: ಈಗ ಮತ್ತೊಂದು ಹೇಳಿಕೆಯಲ್ಲಿ ದುರ್ಬಳಕೆ ಎಚ್ಚರಿಕೆ ಹಿಂಪಡೆದ ಸರ್ಕಾರ

ನವದೆಹಲಿ: ಆಧಾರ್​ ಫೋಟೋಕಾಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಯುನಿಕ್​ ಐಡೆಂಟಿಫಿಕೇಷನ್​ ಆಥಾರಿಟಿ ಆಫ್​ ಇಂಡಿಯಾ (ಯುಐಡಿಎಐ) ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಬೆನ್ನಿಗೇ ಆ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಈಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅದಕ್ಕೆ ಸ್ಪಷ್ಟನೆ ನೀಡಿದೆ. ದುರುಪಯೋಗದ ಅಪಾಯಗಳ ಕುರಿತು ಆಧಾರ್‌ನ ನಕಲು ಪ್ರತಿಗಳನ್ನು ಹಂಚಿಕೊಳ್ಳದಂತೆ ಜನರನ್ನು ಕೇಳಿದ್ದ ಹೇಳಿಕೆಯನ್ನು … Continued

ನ್ಯಾಯಾಧೀಶರ ‘ಒಳ ಉಡುಪು ಕೇಸರಿ’ : ಪಿಎಫ್‌ಐ ಪ್ರಚೋದನಕಾರಿ ಸಮಾವೇಶದ ವಿರುದ್ಧ ಕೇರಳ ಹೈಕೋರ್ಟ್ ಕ್ರಮಕ್ಕೆ ಸೂಚಿಸಿದ ನಂತರ ಪಿಎಫ್‌ಐ ನಾಯಕನ ವಿವಾದಾತ್ಮಕ ಹೇಳಿಕೆ

ಅಲಪ್ಪುಳ (ಕೇರಳ): ಕೇರಳ ಪಾಪ್ಯುಲರ್ ಫ್ರಂಟ್ (ಪಿಎಫ್‌ಐ) ನಾಯಕ ಯಾಹಿಯಾ ತಂಗಲ್ ಅವರು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಒಳ ಉಡುಪು ಕೇಸರಿಯಾಗಿದೆ ಎಂದು ಹೇಳಿದ್ದಾರೆ. ಅಲಪ್ಪುಳದಲ್ಲಿ ನಡೆದ ಸಮಾವೇಶದಲ್ಲಿ ತಂಗಳ್ ಅವರು, “ಈಗ ನ್ಯಾಯಾಲಯಗಳು ಸುಲಭವಾಗಿ ಬೆಚ್ಚಿಬೀಳುತ್ತಿವೆ. ನಮ್ಮ ಅಲಪ್ಪುಳ ಸಮಾವೇಶದ ಘೋಷಣೆಗಳನ್ನು ಕೇಳಿ ಹೈಕೋರ್ಟ್ ನ್ಯಾಯಾಧೀಶರು ಬೆಚ್ಚಿಬೀಳುತ್ತಿದ್ದಾರೆ. … Continued

ಜ್ಞಾನವಾಪಿ, ಕುತುಬ್ ಮಿನಾರ್ ವಿವಾದದ ನಡುವೆ ಜಮಿಯತ್ ಮುಖ್ಯಸ್ಥರ ಸಭೆಯಲ್ಲಿ ‘ಇಸ್ಲಾಮೋಫೋಬಿಯಾ’ ಪ್ರಸ್ತಾಪ

ದಿಯೋಬಂದ್‌ (ಉತ್ತರ ಪ್ರದೇಶ): ಅವಮಾನಕ್ಕೊಳಗಾದ ನಂತರವೂ ಮೌನವಾಗಿರುವುದನ್ನು ಮುಸ್ಲಿಮರಿಂದ ಕಲಿಯಬೇಕು ಎಂದು ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಅಸದ್ ಮದನಿ ಹೇಳಿದರು. ನಾವು ನೋವನ್ನು ಸಹಿಸಿಕೊಳ್ಳುತ್ತೇವೆ, ಆದರೆ ದೇಶದ ಹೆಸರನ್ನು ಕೆಡಿಸಲು ಬಿಡುವುದಿಲ್ಲ.””ಜಮೀಯತ್ ಉಲೇಮಾ ಶಾಂತಿಯನ್ನು ಉತ್ತೇಜಿಸಲು ಮತ್ತು ನೋವು ಮತ್ತು ದ್ವೇಷವನ್ನು ಸಹಿಸಿಕೊಳ್ಳಲು ನಿರ್ಧರಿಸಿದರೆ, ಅದು ನಮ್ಮ ದೌರ್ಬಲ್ಯವಲ್ಲ, ಅದು ನಮ್ಮ ಶಕ್ತಿಯಾಗಿದೆ ಎಂದು … Continued

297 ಪೊಲೀಸ್‌ ಅಧಿಕಾರಿಗಳೂ ಸೇರಿ 424 ರಕ್ಷಿತ ವಿಐಪಿಗಳ ಭದ್ರತಾ ಕವರ್ ಹಿಂಪಡೆದ ಪಂಜಾಬ್ ಸರ್ಕಾರ..!

ಚಂಡೀಗಡ: ಪಂಜಾಬ್ ಸರ್ಕಾರ ನೀಡುತ್ತಿದ್ದ ಭದ್ರತೆ ಹಿಂತೆಗೆದುಕೊಳ್ಳುವಂತೆ ಆದೇಶಿಸಿದ ಬಳಿಕ ಪೊಲೀಸರಿಗೇ ಹೆಚ್ಚಿನ ರಕ್ಷಣೆ ಬೇಕಿರುವುದು ಬೆಳಕಿಗೆ ಬಂದಿದೆ. 424 ವಿಐಪಿಗಳ ಭದ್ರತಾ ಕವರ್ ಪಡೆಯುವ ಪಟ್ಟಿಯಲ್ಲಿ, 297 ಪೊಲೀಸ್ ಅಧಿಕಾರಿಗಳು ಸೇರಿದ್ದು, ಅವರನ್ನು ರಕ್ಷಿಸುವ 500ಕ್ಕೂ ಹೆಚ್ಚು ಪೊಲೀಸರನ್ನು ಈಗ ಹಿಂಪಡೆಯಲಾಗಿದೆ. ಆದಾಗ್ಯೂ, ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದರೆ ಸಂಪೂರ್ಣ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅರ್ಥವಲ್ಲ. … Continued

ತನ್ನ ಮರಿಯ ಕಳೇಬರ ಹೊತ್ತೊಯ್ಯುವ ತಾಯಿ ಆನೆ..! ಮನ ಕರಗುವ ದೃಶ್ಯ..ವೀಕ್ಷಿಸಿ

ಅಮ್ಮನ ಪ್ರೀತಿಗೆ ಬೆಲೆ ಕಟ್ಟಲಾಗದು, ಅದು ಮಾನವರಾಗಲಿ ಅಥವಾ ಪ್ರಾಣಿಗಳಾಗಲಿ ಅದು ಎಂದಿಗೂ ಬತ್ತದ ಪ್ರೀತಿ. ತಾಯಿ ಮಮತೆಯಲ್ಲಿ ನಾವು ವ್ಯತ್ಯಾಸವೇ ಇಲ್ಲ. ಇಲ್ಲಿ ತಾಯಿ ಆನೆಯ ಇಂಥದ್ದೇ ಮನಕಲಕುವ ದೃಶ್ಯ ನಮ್ಮ ಹೃದಯ ಹಿಂಡುವಂತೆ ಮಾಡುತ್ತದೆ. ತಾಯಿ ಆನೆಯ ರೋದನೆಯ ದೃಶ್ಯ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಆನೆಗಳು ಬುದ್ಧಿವಂತಿಕೆಯಲ್ಲಿಯೂ ಮುಂದೆ ಅದೇ ರೀತಿ ಭಾವನಾತ್ಮಕವಾಗಿಯೂ … Continued

ಅನಂತನಾಗ್‌ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಅನಂತನಾಗ್‌ (ಜಮ್ಮು): ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಕೊಲ್ಲಲ್ಪಟ್ಟ ಇಬ್ಬರು ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಗೆ ಸಂಬಂಧ ಹೊಂದಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ … Continued

ಕೊರೊನಾ 4ನೇ ಅಲೆ ಭೀತಿ ಮಧ್ಯೆ ಪುಣೆಯಲ್ಲಿ ನಾಲ್ಕು ಬಿಎ.4, ಮೂರು ಬಿಎ.5 ಒಮಿಕ್ರಾನ್ ಉಪರೂಪಾಂತರಗಳ ಪ್ರಕರಣಗಳು ದೃಢ..!

ಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ, ನಾಲ್ಕು ಪ್ರಕರಣಗಳು ಕೊರೊನಾ ವೈರಸ್‌ನ ಬಿ.ಎ. 4 ಒಮಿಕ್ರಾನ್ ರೂಪಾಂತರ ಮತ್ತು ಮೂರು ಪ್ರಕರಣಗಳು ಬಿ.ಎ.5 ಒಮಿಕ್ರಾನ್ ಉಪ-ವಂಶದ ರೂಪಾಂತರಗಳು ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಎಲ್ಲಾ ರೋಗಿಗಳು ಕೇವಲ … Continued

ಮುಖ್ಯಮಂತ್ರಿ ಕನ್ಯಾದಾನ ಯೋಜನೆ ಲಾಭ ಪಡೆಯಲು ಮರುಮದುವೆಗೆ ಯತ್ನಿಸಿ ಸಿಕ್ಕಿಬಿದ್ದ ಯೂತ್ ಕಾಂಗ್ರೆಸ್ ಮುಖಂಡ…!

ಸಾಗರ (ಮಧ್ಯಪ್ರದೇಶ): ಅಸಹಜ ಪ್ರಕರಣವೊಂದರಲ್ಲಿ, ಮಧ್ಯಪ್ರದೇಶದ ಸಾಗರ ಜಿಲ್ಲೆಯ ಬಾಲಾಜಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಸಂಯೋಜಕ ನೈತಿಕ್ ಚೌಧರಿ ಮಧ್ಯಪ್ರದೇಶ ಪೊಲೀಸರ ಬಲೆಗೆ ಬಿದ್ದಿದ್ದಾರೆ. 15 ದಿನಗಳ ಹಿಂದಷ್ಟೇ ನೈತಿಕ ಚೌಧರಿಗೆ ಮದುವೆಯಾಗಿತ್ತು..! ವರದಿಗಳ ಪ್ರಕಾರ, ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಪ್ರಯೋಜನಗಳನ್ನು ಪಡೆಯಲು … Continued