ಆರತಕ್ಷತೆ ವೇಳೆ ಎಲ್ಲರ ಮುಂದೆಯೇ ವರ ತನಗೆ ಮುತ್ತು ಕೊಟ್ಟಿದ್ದಕ್ಕೆ ಕೋಪಗೊಂಡು ಅಲ್ಲಿಂದಲೇ ಪೊಲೀಸ್ ಠಾಣೆಗೆ ತೆರಳಿ ವರನ ವಿರುದ್ಧ ದೂರು ನೀಡಿದ ವಧು…!

ಸಂಬಲ್‌ : ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ವೇಳೆ ವರ ಮಹಾಶಯ ಎಲ್ಲರ ಸಮ್ಮುಖದಲ್ಲಿಯೇ ತನಗೆ ಮುತ್ತು ಕೊಟ್ಟ ಎಂಬ ಕಾರಣಕ್ಕೆ ವಧು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ದಂಪತಿ ನವೆಂಬರ್ 26 ರಂದು ಉತ್ತರ ಪ್ರದೇಶದ ಸಾಮೂಹಿಕ ವಿವಾಹ ಯೋಜನೆ -2022ರಲ್ಲಿ ವಿವಾಹವಾದರು. ನವೆಂಬರ್ 28 ರಂದು ಪಾವಾಸಾ ಗ್ರಾಮದಲ್ಲಿ … Continued

ವಿಮಾನ ನಿಲ್ದಾಣಗಳು-ಸುತ್ತಮುತ್ತ 5G ಸೇವೆ ನಿರ್ಬಂಧಿಸಿ ಟೆಲಿಕಾಂ ಇಲಾಖೆ ಆದೇಶ : ವರದಿ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯದ ಕೋರಿಕೆಯ ಮೇರೆಗೆ ಟೆಲಿಕಾಂ ಇಲಾಖೆಯು ವಿಮಾನ ನಿಲ್ದಾಣಗಳಲ್ಲಿ ಮತ್ತು ಸುತ್ತಮುತ್ತಲಿನ ಹೆಚ್ಚಿನ ಆವರ್ತನ ಬ್ಯಾಂಡ್‌ಗಳಲ್ಲಿ 5G ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ವರದಿಗಳು ತಿಳಿಸಿವೆ. ವಾಯುಯಾನ ಸಚಿವಾಲಯವು ಒದಗಿಸಿದ ಬಫರ್ ಮತ್ತು ಸುರಕ್ಷತಾ ವಲಯದ ವಿವರಗಳನ್ನು ಆಧರಿಸಿ, ರನ್‌ವೇಯ ಎರಡೂ ತುದಿಗಳಿಂದ 2.1 ಕಿಲೋಮೀಟರ್ ಮತ್ತು ಮಧ್ಯದಿಂದ 910 ಮೀಟರ್ … Continued

ಕಡಿಮೆ ಅಂಕ ಪಡೆದ ವಿಷಯ ಪೋಷಕರಿಗೆ ತಿಳಿಸಿದ್ದಕ್ಕೆ ಗರ್ಭಿಣಿ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ ಶಾಲಾ ವಿದ್ಯಾರ್ಥಿಗಳು…!

ಸಿಲ್ಚಾರ್: ಇತ್ತೀಚಿನ ಪರೀಕ್ಷೆಯಲ್ಲಿ ತಮ್ಮ ಕಡಿಮೆ ಅಂಕಗಳ ಬಗ್ಗೆ ಚರ್ಚಿಸಲು ತಮ್ಮ ಪೋಷಕರನ್ನು ಕರೆದು ಮಾಹಿತಿ ನೀಡಿದ್ದಕ್ಕಾಗಿ ಗರ್ಭಿಣಿ ಶಿಕ್ಷಕಿಯೊಬ್ಬರ ಮೇಲೆ ಅಸ್ಸಾಂನ ದಿಬ್ರುಗಢದಲ್ಲಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಗುಂಪಾಗಿ ಹಲ್ಲೆ ನಡೆಸಿದ್ದು, ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಘಟನೆ ಸಂಬಂಧ 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಗರ್ಭಿಣಿಯಾಗಿರುವ ಇತಿಹಾಸ … Continued

ಎಲ್‌ಎಸಿ ಬಳಿ ಭಾರತ-ಅಮೆರಿಕ ಮಿಲಿಟರಿ ಸಮರಾಭ್ಯಾಸಕ್ಕೆ ಚೀನಾ ವಿರೋಧ

ಬೀಜಿಂಗ್: ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ಮಿಲಿಟರಿ ಅಭ್ಯಾಸವನ್ನು ವಿರೋಧಿಸುವುದಾಗಿ ಚೀನಾ ಬುಧವಾರ ಹೇಳಿದೆ, ಇದು ನವದೆಹಲಿ ಮತ್ತು ಬೀಜಿಂಗ್ ನಡುವೆ ಸಹಿ ಮಾಡಿದ ಎರಡು ಗಡಿ ಒಪ್ಪಂದಗಳ ಸ್ಪಿರಿಟ್‌ ಅನ್ನು ಉಲ್ಲಂಘಿಸುತ್ತದೆ ಎಂದು ಅದು ಪ್ರತಿಪಾದಿಸಿದೆ. ಭಾರತ-ಅಮೆರಿಕ ಜಂಟಿ ಮಿಲಿಟರಿ ಸಮಾರಾಭ್ಯಾಸದ 18 ನೇ ಆವೃತ್ತಿ ‘ಯುದ್ಧ … Continued

2021-22ರಲ್ಲಿ ಕಾಂಗ್ರೆಸ್‌ಗಿಂತ 6 ಪಟ್ಟು ಹೆಚ್ಚು ದೇಣಿಗೆ ಪಡೆದ ಬಿಜೆಪಿ….

ನವದೆಹಲಿ: 2021-22ರ ಆರ್ಥಿಕ ವರ್ಷದಲ್ಲಿ ಆಡಳಿತಾರೂಢ ಬಿಜೆಪಿಯು 614.53 ಕೋಟಿ ರೂ.ಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ, ಇದು ಇದೇ ವರ್ಷದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಪಡೆದ ನಿಧಿಗಿಂತ ಆರು ಪಟ್ಟು ಹೆಚ್ಚಾಗಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಕಾಂಗ್ರೆಸ್ 95.46 ಕೋಟಿ ರೂಪಾಯಿ ಹಣವನ್ನು ಪಡೆದಿದೆ. ಒಟ್ಟುಗೂಡಿಸಿದರೆ, ಏಳು ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಒಟ್ಟು ದೇಣಿಗೆಗಳಲ್ಲಿ 90% ಕ್ಕಿಂತ … Continued

ಮನೀಶ ಸಿಸೋಡಿಯಾ ಹಲವು ಬಾರಿ ಫೋನ್ ಬದಲಾಯಿಸಿದರು, ಸಾಕ್ಷ್ಯ ನಾಶಪಡಿಸಿದರು: ಮದ್ಯ ನೀತಿ ಪ್ರಕರಣದಲ್ಲಿ ಇ.ಡಿ. ಆರೋಪ

ನವದೆಹಲಿ: ಎಎಪಿ ನಾಯಕ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿ ಮದ್ಯ ನೀತಿ ಹಗರಣದ ಆರೋಪಿಗಳು ತಮ್ಮ ಫೋನ್ ಅನ್ನು ಹಲವು ಬಾರಿ ಬದಲಾಯಿಸಿದ್ದಾರೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಆರೋಪಿಸಿದೆ. ಬುಧವಾರ ಬಂಧನಕ್ಕೊಳಗಾದ ದೆಹಲಿಯ ಉದ್ಯಮಿ ಅಮಿತ್ ಅರೋರಾ ಮತ್ತು ಮನೀಶ್ ಸಿಸೋಡಿಯಾ ಅವರು 11 ಫೋನ್‌ಗಳನ್ನು … Continued

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6.3%

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.3 ರಷ್ಟು ಬೆಳವಣಿಗೆಯಾಗಿದೆ ಎಂದು ಬುಧವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು ತೋರಿಸಿವೆ. ಈ ಹಣಕಾಸು ವರ್ಷದಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದಾಖಲಾದ ಶೇಕಡಾ 13.5 ರ ಬೆಳವಣಿಗೆಯ ದರದ ಅರ್ಧದಷ್ಟು ಭಾರತೀಯ ಆರ್ಥಿಕತೆ ಬೆಳವಣಿಗೆ ಕಾಣಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದರು. ರಾಷ್ಟ್ರೀಯ ಅಂಕಿಅಂಶ ಕಚೇರಿ … Continued

ಪಾಲಿಗ್ರಾಫ್ ಪರೀಕ್ಷೆಯಲ್ಲಿ ಶ್ರದ್ಧಾಳನ್ನು ಕೊಂದಿದ್ದು ಒಪ್ಪಿಕೊಂಡ ಅಫ್ತಾಬ್ ಪೂನಾವಾಲಾ, ಆದ್ರೆ ಯಾವುದೇ ಪಶ್ಚಾತ್ತಾಪವಿಲ್ಲ: ವರದಿ

ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪಾಲಿಗ್ರಾಫ್ ಪರೀಕ್ಷೆಯಲ್ಲಿ ಶ್ರದ್ಧಾ ವಾಕರಳನ್ನು ತಾನೇ ಕೊಂದಿರುವುದಾಗಿ ಆರೋಪಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ಹತ್ಯೆಯ ನಂತರ ಶ್ರದ್ಧಾಳ ದೇಹದ ಭಾಗಗಳನ್ನು ಕಾಡಿನಲ್ಲಿ ಎಸೆದಿದ್ದನ್ನು ಅಫ್ತಾಬ್ ಒಪ್ಪಿಕೊಂಡಿದ್ದಾನೆ ಮತ್ತು ಆಕೆಯನ್ನು ಕೊಲ್ಲಲು ಬಹಳ ಹಿಂದೆಯೇ ಯೋಜಿಸಿದ್ದೆ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಫ್ತಾಬ್ ಅನೇಕ ಹುಡುಗಿಯರೊಂದಿಗೆ  ಸಂಬಂಧ … Continued

ಎನ್‌ಡಿಟಿವಿ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಮಂಡಳಿಗೆ ಪ್ರಣಯ್ ರಾಯ್-ರಾಧಿಕಾ ರಾಯ್‌ ರಾಜೀನಾಮೆ

ನವದೆಹಲಿ: ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಅವರು ಟೆಲಿವಿಷನ್ ಚಾನೆಲ್ ಅನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳುತ್ತಿರುವ ಕಾರಣ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡಿರುವ ಆರ್‌ಆರ್‌ಪಿಆರ್ (RRPR) ಸಂಸ್ಥೆಯು ಎನ್‌ಡಿಟಿವಿಯು ಸುದ್ದಿ ವಾಹಿನಿಯಲ್ಲಿ 29.18 ರಷ್ಟು ಪಾಲನ್ನು … Continued

ಘಟನೆ ನಡೆದು ನಾಲ್ಕು ವರ್ಷ ಮೀರಿದ್ದರೆ ನಿವೃತ್ತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಬೆಂಗಳೂರು:ನಿವೃತ್ತ ಅಧಿಕಾರಿಯ ವಿರುದ್ಧ ಆರೋಪಿಸಲಾದ ಘಟನೆಯು ನಡೆದು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೆ ಕರ್ನಾಟಕ ನಾಗರಿಕ ಸೇವೆಗಳ ಕಾನೂನಿನ ನಿಯಮ 214 (2) (ಬಿ)ರ ಅನ್ವಯ ಇಲಾಖಾ ತನಿಖಾ ಪ್ರಕ್ರಿಯೆಯನ್ನು ನಡೆಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಕರ್ನಾಟಕ ಗೃಹ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅನಿಲಕುಮಾರ ಹಾಗೂ ಟಿ. … Continued