125 ಅಡಿ ಎತ್ತರದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಶುಕ್ರವಾರ ಹೈದರಾಬಾದ್‌ನಲ್ಲಿ 125 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಹೈದರಾಬಾದ್‌ನ ಈ ಡಾ.ಅಂಬೇಡ್ಕರ್ ಪ್ರತಿಮೆಯು ಭಾರತದ ಅತಿ ಎತ್ತರದ ಪ್ರತಿಮೆಯಾಗಿದೆ. ಅನಾವರಣ ಸಮಾರಂಭದಲ್ಲಿ 35,000 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಪ್ರತಿಮೆಯು ಹೈದರಾಬಾದ್‌ನ ಪ್ರಸಿದ್ಧ ಹುಸೇನ್ ಸಾಗರ್ ಸರೋವರದ … Continued

ಕರ್ನಾಟಕ ಚುನಾವಣೆ : 40-45 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜಿಸಿದ ಎನ್‌ಸಿಪಿ, ನಾಳೆ ಸಭೆ ; ಕಾಂಗ್ರೆಸ್‌ ಮೇಲೆ ಇದರ ಪರಿಣಾಮ ಏನು..?

ನವದೆಹಲಿ : “ವಿರೋಧ ಪಕ್ಷಗಳ ಏಕತೆ” ಹೆಸರಿನಲ್ಲಿ ಶರದ್ ಪವಾರ್ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಒಂದು ದಿನದ ನಂತರ, ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನ ಚುನಾವಣೆಯಲ್ಲಿ ತಾನು ಸ್ಪರ್ಧಿಸಬಹುದು ಎಂದು ಹೇಳಿದೆ. ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮುಂಬರುವ ಕರ್ನಾಟಕ … Continued

ತಿರುಪತಿ ದೇಗುಲದ ದಿವ್ಯ ದರ್ಶನ ಟೋಕನ್‌ ನೀಡುವಲ್ಲಿ ಪ್ರಮುಖ ಬದಲಾವಣೆ

ತಿರುಪತಿ: ದಿವ್ಯ ದರ್ಶನ ಟೋಕನ್‌ (Divya Darshan tokens)ಗಳನ್ನು ನೀಡುವುದಕ್ಕೆ ಸಂಬಂಧಪಟ್ಟಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೊಸ ಬದಲಾವಣೆ ಮಾಡಿದೆ. ಹೊಸ ನಿಯಮದಿಂದ ಪಾದಯಾತ್ರೆ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಆಗಮಿಸುವವರ ಮೇಲೆ ಪರಿಣಾಮ ಬೀರಲಿದೆ. ಈ ಮೊದಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವವರಿಗೆ ಪಾದಯಾತ್ರೆ ಮಾರ್ಗದಲ್ಲಿ ಮತ್ತು ಗಾಳಿಗೋಪುರಂನಲ್ಲಿ ದಿವ್ಯ ದರ್ಶನ … Continued

ಅಬಕಾರಿ ನೀತಿ ಹಗರಣ; ವಿಚಾರಣೆಗೆ ಹಾಜರಾಗಲು ಅರವಿಂದ ಕೇಜ್ರಿವಾಲಗೆ ಸಮನ್ಸ್ ನೀಡಿದ ಸಿಬಿಐ

ನವದೆಹಲಿ: ಈಗ ರದ್ದಾದ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 16ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದ್ದು, ಸಿಸೋಡಿಯಾ ಅವರು ಏಪ್ರಿಲ್ 17ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಾರ್ವಜನಿಕ ಆಸ್ತಿ … Continued

ಪ್ರಧಾನಿ ಮೋದಿಜಿ, ನಾವು ಕೊಳಕು ನೆಲದಲ್ಲಿ ಕುಳಿತುಕೊಳ್ಳಬೇಕು, ನಮಗೆ ಉತ್ತಮ ಶಾಲೆ ನಿರ್ಮಿಸಿಕೊಡಿ’: ಲಕ್ಷಾಂತರ ಜನರ ಹೃದಯ ಗೆದ್ದ ಪುಟ್ಟ ಬಾಲಕಿಯ ಕಳಕಳಿಯ ಮನವಿ | ವೀಕ್ಷಿಸಿ

ಕಥುವಾ (ಜಮ್ಮು ಮತ್ತು ಕಾಶ್ಮೀರ): ಪುಟ್ಟ ಬಾಲಕಿಯೊಬ್ಬಳು ತನ್ನ ಶಾಲೆಯಲ್ಲಿ ಅಸ್ವಚ್ಛ, ಧೂಳಿನ ನೆಲದ ಮೇಲೆ ತನ್ನ ಸ್ನೇಹಿತರೊಂದಿಗೆ, ತಾನು ಶಾಲೆಯಲ್ಲಿ ಕುಳಿತುಕೊಳ್ಳಬೇಕಾಗಿದ್ದು, ಇದರಿಂದ ತಾನು ಸಂತೋಷವಾಗಿಲ್ಲ ಹೇಳಿದ್ದಾಳೆ ಮತ್ತು ಪ್ರಧಾನಿ ಮೋದಿಯವರು ಈ ಬಗ್ಗೆ ಏನಾದರೂ ಮಾಡಬೇಕೆಂದು ಅವಳು ಬಯಸಿದ್ದಾಳೆ. ಫೇಸ್‌ಬುಕ್‌ನಲ್ಲಿ ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ … Continued

ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಪೋಸ್ಟರ್ ಹರಿದು ಹಾಕಿದ ನಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳೆಯರು | ವೀಕ್ಷಿಸಿ

ವಿಜಯವಾಡ: ಕೇಳಿರದ ಘಟನೆಯೊಂದರಲ್ಲಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಪೋಸ್ಟರ್ ಅನ್ನು ಹರಿದು ಹಾಕುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಹಿಳೆಯರ ಗುಂಪೊಂದು ನಾಯಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ….! ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತೆ ಎನ್ನಲಾದ ದಾಸರಿ ಉದಯಶ್ರೀ … Continued

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,109 ಹೊಸ ಕೋವಿಡ್ ಪ್ರಕರಣಗಳು ದಾಖಲು, 29 ಸಾವು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 11,109 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ ಹಾಗೂ 29 ಸಾವುಗಳು ದಾಖಲಾಗಿದೆ. ಇದು ಏಳು ತಿಂಗಳಲ್ಲಿ ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೆಹಲಿ ಮತ್ತು ರಾಜಸ್ಥಾನದಲ್ಲಿ ತಲಾ ಮೂರು ಸಾವುಗಳು ವರದಿಯಾಗಿದ್ದರೆ, ಛತ್ತೀಸ್‌ಗಢ ಮತ್ತು ಪಂಜಾಬ್‌ನಲ್ಲಿ ಎರಡು ಮತ್ತು ಹಿಮಾಚಲ ಪ್ರದೇಶ, … Continued

ಟೆಕ್ಸಾಸ್‌ ಫಾರ್ಮ್‌ ಸ್ಫೋಟದಲ್ಲಿ 18,000ಕ್ಕೂ ಹೆಚ್ಚು ಹಸುಗಳು ಸಾವು: ಇದು ಅಮೆರಿಕದ ಅತ್ಯಂತ ಮಾರಣಾಂತಿಕ ಕೊಟ್ಟಿಗೆ ಬೆಂಕಿ ಅನಾಹುತ

ಪಶ್ಚಿಮ ಟೆಕ್ಸಾಸ್‌ನ ಕುಟುಂಬ ಡೈರಿ ಫಾರ್ಮ್‌ನಲ್ಲಿ ಸ್ಫೋಟ ಮತ್ತು ಬೆಂಕಿಯ ನಂತರ 18,000 ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ, ಇದು ಅಮೆರಿಕದಲ್ಲಿ ದಾಖಲಾದ ಮಾರಣಾಂತಿಕ ಕೊಟ್ಟಿಗೆಯ ಬೆಂಕಿಯ ಘಟನೆ ಎಂದು ಹೇಳಲಾಗಿದೆ. ಕ್ಯಾಸ್ಟ್ರೋ ಕೌಂಟಿ ಶೆರಿಫ್ ಕಚೇರಿಯ ಚಿತ್ರಗಳು ಮತ್ತು ಹೇಳಿಕೆಗಳ ಪ್ರಕಾರ, ಅಗ್ನಿಶಾಮಕ ದಳದವರು ಸೋಮವಾರ ಡಿಮಿಟ್ ಬಳಿಯ ಸೌತ್ ಫೋರ್ಕ್ ಡೈರಿಯಿಂದ ಒಬ್ಬ … Continued

ಮಹಾಮಾನವತಾವಾದಿ-ನ್ಯಾಯ ಶಾಸ್ತ್ರಜ್ಞ-ಸಂಪಾದಕ-ಆರ್ಥಿಕ ತಜ್ಞ-ಸಮಾಜ ಸುಧಾರಕ-ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌

(೧೪-೦೪-೨೦೨೩ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ೧೩೨ನೇ ಜನ್ಮ ದಿನ, ಈ ನಿಮಿತ್ತ ಲೇಖನ) ಜಾತಿಯತೆ, ಅಸ್ಪೃಶ್ಯತೆ, ಅವಮಾನ ಮತ್ತು ಹಸವಿನಿಂದ ಕಂಗಾಲಾಗಿದ್ದ ಶೋಷಿತ ವರ್ಗದ ಜನರ ಒಡಲಾಳದಲ್ಲಿ ಹುದುಗಿದ್ದ ಸ್ವಾಭಿಮಾನ ಹೊರತರಲು ಹಗಲು-ರಾತ್ರಿ ದುಡಿದು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದವರು ಸಂವಿಧಾನ ಶಿಲ್ಪಿ ಡಾ. ಭೀಮರಾವ್‌ ರಾಮರಾವ್‌ ಅಂಬೇಡ್ಕರ ಅವರು. ಮಹಾರಾಷ್ಟ್ರದ … Continued

ಎನ್‌ಕೌಂಟರ್‌ನಲ್ಲಿ ಹತನಾದ ಗ್ಯಾಂಗ್‌ಸ್ಟರ್‌ ಮಗ ಮಾರುವೇಷದಲ್ಲಿದ್ದ: 42 ಸುತ್ತು ಗುಂಡು ಹಾರಾಟ ನಡೆದಿತ್ತು…!

ಲಕ್ನೋ: ಉಮೇಶ ಪಾಲ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕುಖ್ಯಾತ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ ಅಸದ್ ನನ್ನು ಉತ್ತರ ಪ್ರದೇಶದ ಪೊಲೀಸರು ಇಂದು, ಗುರುವಾರ ಝಾನ್ಸಿಯಲ್ಲಿ ಎನ್‌ಕೌಂಟರಿನಲ್ಲಿ ಹತನಾಗಿದ್ದಾನೆ. ಆತನ ಸಹ-ಆರೋಪಿ ಗುಲಾಂನನ್ನೂ ಗುಂಡಿಕ್ಕಿ ಕೊಲ್ಲಲಾಯಿತು. ಅಸದ್ ಮತ್ತು ಗುಲಾಮ್ ಇಬ್ಬರ ತಲೆಯ ಮೇಲೆ ತಲಾ ₹ 5 ಲಕ್ಷ ಬಹುಮಾನ ಘೋಷಸಲಾಗಿತ್ತು. … Continued