ಶ್ರೀಲಂಕಾದಲ್ಲಿ ಹಿಂಸಾಚಾರ : ಅಶಾಂತಿ ಶಮನಕ್ಕೆ ಕಂಡಲ್ಲಿ ಗುಂಡಿಕ್ಕಲು’ ಆದೇಶಿಸಿದ ಸರ್ಕಾರ

ಕೊಲಂಬೊ: ಸಾವುಗಳು. ಅಗ್ನಿಸ್ಪರ್ಶ. ರಾಷ್ಟ್ರವ್ಯಾಪಿ ಕರ್ಫ್ಯೂ. ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರತಿಭಟನೆ ಮುಂದುವರಿದಿರುವಂತೆಯೇ ಕಳೆದ ಎರಡು ದಿನಗಳಿಂದ ಶ್ರೀಲಂಕಾ ಅಭೂತಪೂರ್ವ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಸೋಮವಾರ ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ನೀಡಿದ ನಂತರ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಆಹಾರ, ಇಂಧನ ಮತ್ತು ಔಷಧಿಗಳ ತೀವ್ರ ಕೊರತೆ ಮತ್ತು ದೀರ್ಘಕಾಲದ … Continued

ಸೆಕ್ಷನ್ 124ಎ ಮರುಪರಿಶೀಲನೆ ಆಗುವ ವರೆಗೆ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಬಹುದೇ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ನವದೆಹಲಿ: ಐಪಿಸಿ ಸೆಕ್ಷನ್ 124 ಎ ಮರುಪರಿಶೀಲನೆ ಮಾಡುವ ಕೇಂದ್ರ ಸರ್ಕಾರದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಾಕಿ ಉಳಿದಿರುವ ಎಲ್ಲ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಲು ಸರ್ಕಾರಗಳಿಗೆ ನಿರ್ದೇಶನ ನೀಡಬಹುದೇ ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಕೇಂದ್ರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನಾಳೆಯೊಳಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ … Continued

ಅಸಾನಿ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ ಮುಳುಗಿದ ದೋಣಿಗಳು: 60 ಮೀನುಗಾರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು | ವೀಕ್ಷಿಸಿ

ಗಂಜಾಮ್ (ಒಡಿಶಾ): ಅಸಾನಿ ಚಂಡಮಾರುತದ ಕಾರಣದಿಂದ ಒಡಿಶಾ ಕರಾವಳಿಯಲ್ಲಿ ಅಲೆಗಳ ಆರ್ಭಟಕ್ಕೆ ದೋಣಿಗಳು ಮುಳುಗಿದ್ದು, ಸುಮಾರು 60 ಮೀನುಗಾರರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸಣಾರ್ಯಪಲ್ಲಿ, ಬಡಾ ಆರ್ಯಪಲ್ಲಿ ಮತ್ತು ಗೋಲಬಂಧ ಭಾಗದ ಮೀನುಗಾರರು ತಮ್ಮ ಆರು ಮೀನುಗಾರಿಕಾ ಬೋಟುಗಳಲ್ಲಿ ಹೆಚ್ಚಿನ ಪ್ರಮಾಣದ ಮೀನುಗಳೊಂದಿಗೆ ತೀರಕ್ಕೆ ಮರಳುತ್ತಿದ್ದರು. ಇದ್ದಕ್ಕಿದ್ದಂತೆ ಸಮುದ್ರ ಪ್ರಕ್ಷುಬ್ಧವಾಯಿತು. ಮಂಗಳವಾರ ಗಂಜಾಂನ ಛತ್ರಪುರ ಬಳಿಯ ಆರ್ಯಪಲ್ಲಿ … Continued

ಅಲಹಾಬಾದ್ ಹೈಕೋರ್ಟ್ ನಲ್ಲಿ ವಕೀಲರ ಪ್ರತಿಭಟನೆಯಿಂದಾಗಿ ತಾಜ್ ಮಹಲ್ ಇತಿಹಾಸ ಪ್ರಕರಣದ ವಿಚಾರಣೆ ಮೇ 12ಕ್ಕೆ ಮುಂದೂಡಿಕೆ

ಲಕ್ನೋ: ವಕೀಲರು ಕಲಾಪದಿಂದ ದೂರ ಉಳಿದ ಕಾರಣ ಅಲಹಾಬಾದ್ ಹೈಕೋರ್ಟ್‌ನಲ್ಲಿ ತಾಜ್ ಮಹಲ್ ಇತಿಹಾಸದ ಸತ್ಯಶೋಧನೆ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ (ಮೇ ೧೨ ಮುಂದೂಡಲಾಗಿದೆ. ಬಿಜೆಪಿಯ ಅಯೋಧ್ಯೆ ಘಟಕದ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಹೈಕೋರ್ಟ್‌ನ ಲಕ್ನೋ ಪೀಠದ ರಿಜಿಸ್ಟ್ರಿಯಲ್ಲಿ ಶನಿವಾರ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಮೂರ್ತಿ … Continued

ಕುತುಬ್ ಮಿನಾರ್‌ಗೆ ವಿಷ್ಣು ಸ್ತಂಭ ಎಂದು ಮರುನಾಮಕರಣಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ಮತಪ್ರದರ್ಶನ

ನವದೆಹಲಿ: ಮಂಗಳವಾರ ದೆಹಲಿಯ ಕುತುಬ್ ಮಿನಾರ್‌ಗೆ ಹಿಂದೂ ಸಂಘಟನೆಗಳು ಪ್ರದರ್ಶನ ನಡೆಸಿ, ಸ್ಮಾರಕವನ್ನು ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದರು. ಮಹಾಕಾಲ್ ಮಾನವ ಸೇವಾ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿರುವ ಕುತುಬ್ ಮಿನಾರ್‌ನಲ್ಲಿ ಭಾರೀ ಪೊಲೀಸ್ ನಿಯೋಜನೆಯ ನಡುವೆ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಈ … Continued

ಬಿಜೆಪಿ ನಾಯಕ ತಜಿಂದರ್ ಬಗ್ಗಾಗೆ ರಿಲೀಫ್‌ ನೀಡಿದ ಹೈಕೋರ್ಟ್ : ಜುಲೈ 5ರ ವರೆಗೆ ಬಂಧನಕ್ಕೆ ನಿರ್ಬಂಧ

ಚಂಡಿಗಡ: ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರಿಗೆ ಪ್ರಮುಖ ನಿರಾಳತೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಪಂಜಾಬ್ ಸರ್ಕಾರವನ್ನು ಜುಲೈ 5 ರವರೆಗೆ ಬಿಜೆಪಿ ನಾಯಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ಬಂಧಿಸಿದೆ. ಕಳೆದ ವಾರ ಮೊಹಾಲಿ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿ ಬಗ್ಗಾ ಸಲ್ಲಿಸಿದ್ದ ಅರ್ಜಿಯ … Continued

ಮೇರು ಸಂಗೀತಗಾರ, ಸಂತೂರ್‌ ಮಾಂತ್ರಿಕ ಪದ್ಮವಿಭೂಷಣ ಪಂಡಿತ್ ಶಿವಕುಮಾರ ಶರ್ಮಾ ವಿಧಿವಶ

ನವದೆಹಲಿ: ಹಿಂದೂಸ್ತಾನೀ ಸಂಗೀತದ ಸಂತೂರ್ ಮಾಂತ್ರಿಕ ಹಾಗೂ ಸಂಗೀತ ಸಂಯೋಜಕ ಪದ್ಮವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಆರು ತಿಂಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್‌ಗೆ ಒಳಗಾಗಿದ್ದರು. ಅವರು ಅವರು ಮೇ 15 ರಂದು ಭೋಪಾಲ್ ಲೈವ್ ಕನ್ಸರ್ಟ್‌ನಲ್ಲಿ ಕೊಳಲು ದಂತಕಥೆ … Continued

10 ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರೇ? ಮಂಗಳವಾರ ಸುಪ್ರೀಂಕೋರ್ಟ್‌ನಿಂದ ವಿಚಾರಣೆ

ನವದೆಹಲಿ: ಅಲ್ಪಸಂಖ್ಯಾತರ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ ಮತ್ತು ಈ ಸಂಬಂಧ ಯಾವುದೇ ನಿರ್ಧಾರವನ್ನಾದರೂ ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 10 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ವಾದಿಸಿ ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸಲು ಮಾರ್ಗಸೂಚಿಗಳನ್ನು ರೂಪಿಸಲು ನಿರ್ದೇಶನಗಳನ್ನು … Continued

ಪಂಜಾಬ್‌ನ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಸ್ಫೋಟ-ಭಯೋತ್ಪಾದನೆ ಕೋನ ತಳ್ಳಿಹಾಕಿದ ಪೊಲೀಸ್‌: ಮೂಲಗಳು

ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಗುಪ್ತಚರ ಕಚೇರಿಯ ಮೂರನೇ ಮಹಡಿಯಲ್ಲಿ ಸೋಮವಾರ ರಾತ್ರಿ ಸಣ್ಣ ಸ್ಫೋಟ ಸಂಭವಿಸಿದ್ದು, ಕಿಟಕಿಗಳು ಒಡೆದು ಆಸ್ತಿಗೆ ಹಾನಿಯಾಗಿದೆ. ರಾಕೆಟ್ ಲಾಂಚರ್ ಬಳಸಿ ಕಟ್ಟಡದ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ಎಸೆಯಲಾಯಿತು ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಪೊಲೀಸ್ ಮೂಲಗಳು ಸ್ಫೋಟವು ಭಯೋತ್ಪಾದಕ ದಾಳಿಯಲ್ಲ ಮತ್ತು ಕಚೇರಿಯಲ್ಲಿ ಇರಿಸಲಾಗಿದ್ದ ಸ್ಫೋಟಕಗಳಿಂದ ಸಂಭವಿಸಿದೆ … Continued

ದೇಶದ್ರೋಹ ಕಾನೂನಿನ ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಶದ್ರೋಹದ ಕಾನೂನಿನ ಐಪಿಸಿ ಸೆಕ್ಷನ್ 124 ಎ ಅನ್ನು ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ದೇಶವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸಿಕೊಳ್ಳುತ್ತಿರುವ ಸಮಯದಲ್ಲಿ ವಸಾಹತುಶಾಹಿ ಕಾನೂನುಗಳನ್ನು ತೊಡೆದುಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಸರ್ಕಾರ ವಿವಿಧ ವಸಾಹತುಶಾಹಿ ಕಾನೂನುಗಳನ್ನು ಮರುಪರಿಶೀಲಿಸಲು ನಿರ್ಧರಿಸಿದೆ … Continued