ಹಾಡಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ, ಪೂರ್ವಯೋಜಿತ ಕೃತ್ಯ ಎಂದ ಬಿಜೆಪಿ

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತನನ್ನು ಸೋಮವಾರ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಎಸ್. ಸಂಜಿತ್ ಎಂದು ಗುರುತಿಸಲಾಗಿದ್ದು, ಆತ ತನ್ನ ಪತ್ನಿಯೊಂದಿಗೆ ಮೋಟಾರ್ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ನಾಲ್ವರ ತಂಡವೊಂದು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ (ನವೆಂಬರ್ 15) ಬೆಳಿಗ್ಗೆ … Continued

ಐಐಎಂನಲ್ಲಿ ಭಗವದ್ಗೀತೆ..: ಡಿಸೆಂಬರ್‌ 13 ರಿಂದ ಐಐಎಂ ಅಹ್ಮದಾಬಾದ್‌ನಲ್ಲಿ ಕಾರ್ಪೊರೇಟ್ ವೃತ್ತಿಪರರಿಗೆ ಭಗವದ್ಗೀತೆ ಕೋರ್ಸ್‌ ಆರಂಭ..!

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಅಹಮದಾಬಾದ್ ಕಾರ್ಪೊರೇಟ್ ವೃತ್ತಿಪರರಿಗೆ ಮ್ಯಾನೇಜ್ಮೆಂಟ್ ಕಲಿಸಲು ಭಗವದ್ಗೀತೆಯ ಕೋರ್ಸ್ ಪ್ರಾರಂಭಿಸಲಿದೆ..! ಡಿಸೆಂಬರ್ 13 ರಿಂದ ಪ್ರಾರಂಭವಾಗುವ ಕಾರ್ಯಕ್ರಮವು ಗೀತೆಯಿಂದ ‘ಸಮಕಾಲೀನ ನಿರ್ವಹಣಾ ಪರಿಕಲ್ಪನೆಗಳು, ಸಂಘರ್ಷಗಳು, ಸಂದಿಗ್ಧತೆಗಳು ಮತ್ತು ವ್ಯವಹಾರದಲ್ಲಿನ ವ್ಯಾಪಾರ-ವಹಿವಾಟುಗಳ ಅನ್ವೇಷಣೆ’ (to explore contemporary management concepts, conflicts, dilemmas, and trade-offs in business)’ ಪಾಠಗಳು … Continued

ಖ್ಯಾತ ಇತಿಹಾಸಕಾರ, ಪದ್ಮವಿಭೂಷಣ ಪುರಸ್ಕೃತ ಬಾಬಾಸಾಹೇಬ್ ಪುರಂದರೆ ನಿಧನ

ಖ್ಯಾತ ಇತಿಹಾಸಕಾರ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್ ಪುರಂದರೆ ಎಂದೇ ಖ್ಯಾತರಾಗಿದ್ದ ಬಲವಂತ ಮೊರೇಶ್ವರ ಪುರಂದರೆ ಅಲ್ಪಕಾಲದ ಅನಾರೋಗ್ಯದಿಂದ ಇಂದು (ಸೋಮವಾರ) ಬೆಳಗ್ಗೆ 5 ಗಂಟೆಗೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾದರು. ಬಾಬಾಸಾಹೇಬ್‌ ಪುರಂದರೆ (99) ಅವರಿಗೆ ಒಂದು ವಾರದ ಹಿಂದೆ ನ್ಯುಮೋನಿಯಾ ಪತ್ತೆಯಾಗಿದ್ದು, ಅವರನ್ನು ನಗರದ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಿ … Continued

ಗೋವುಗಳಿಗಾಗಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಲು ಉತ್ತರ ಪ್ರದೇಶ ಸಜ್ಜು: ಇದು ದೇಶದಲ್ಲಿಯೇ ಮೊದಲು

ಮಥುರಾ: ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಸುಗಳಿಗೆ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧವಾಗಿದೆ ಎಂದು ರಾಜ್ಯ ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮಿ ನಾರಾಯಣ ಚೌಧರಿ ಭಾನುವಾರ ಹೇಳಿದ್ದಾರೆ. ನವೀನ ಯೋಜನೆಗೆ 515 ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ, ಬಹುಶಃ ದೇಶದಲ್ಲೇ ಮೊದಲನೆಯದು ಎಂದು ಸಚಿವರು ಹೇಳಿದರು. “112 ತುರ್ತು ಸೇವಾ ಸಂಖ್ಯೆಗೆ … Continued

ಭಾರತದಲ್ಲಿ 10,229 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 9.2% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 10,229 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 9.2% ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದೆ. ದೇಶದ ಒಟ್ಟು ಪ್ರಕರಣ ಈಗ 3,44,47,536ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 125 ಸಾವುಗಳು ವರದಿಯಾದ ನಂತರ ಒಟ್ಟು ಸಾವಿನ ಸಂಖ್ಯೆ 4,63,655 … Continued

ಭಾರೀ ಮಾದಕ ದ್ರವ್ಯ ಸಾಗಣೆ: ಗುಜರಾತಿನಲ್ಲಿ 600 ಕೋಟಿ ಮೌಲ್ಯದ 120 ಕೆಜಿ ಹೆರಾಯಿನ್ ವಶ…!

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ 120 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 600 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮೋರ್ಬಿಯ ಜಿಂಜುಡಾ ಗ್ರಾಮದಲ್ಲಿ ಕೋಟಿ ಮೌಲ್ಯದ 100 ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. “ಇದು … Continued

ದಕ್ಷಿಣ ಭಾರತದ ಕೊಡುಗೆಯಿಲ್ಲದೆ ಭಾರತದ ಪ್ರಗತಿ ಯೋಚಿಸಲೂ ಅಸಾಧ್ಯ : ಅಮಿತ್ ಶಾ

ತಿರುಪತಿ: ದಕ್ಷಿಣ ಭಾರತದ ರಾಜ್ಯಗಳ ಕೊಡುಗೆ ನಿರ್ಲಕ್ಷಿಸಿ ಭಾರತದ ಪ್ರಗತಿಯನ್ನು ಆಲೋಚಿಸಲು ಸಾಧ್ಯವೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದಕ್ಷಿಣ ವಲಯ ಮಂಡಳಿಯ 29ನೇ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳ ಪ್ರಾಚೀನ ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಮೌಲ್ಯವನ್ನು ಹೆಚ್ಚಿಸಿವೆ ಎಂದರು. ಸಭೆಯಲ್ಲಿ … Continued

ಮಹಾರಾಷ್ಟ್ರ: 6 ತಿಂಗಳಲ್ಲಿ ತಾಯಿಯಿಲ್ಲದ ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಸೇರಿದಂತೆ 400 ಮಂದಿಯಿಂದ ಅತ್ಯಾಚಾರ..!

ಔರಂಗಾಬಾದ್ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 16 ವರ್ಷದ ಬಾಲಕಿಯ ಮೇಲೆ 400 ಮಂದಿ ಅತ್ಯಾಚಾರವೆಸಗಿದ್ದಾರೆ. ಆಕೆ ದೂರು ದಾಖಲಿಸಲು ಪ್ರಯತ್ನಿಸಿದಾಗ ಪೋಲೀಸರೂ ಸಹ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆಕೆ ಈಗ ಎರಡು ತಿಂಗಳ ಗರ್ಭಿಣಿ ಎಂದು ಹೇಳಲಾಗಿದೆ. ಈ ವಾರ ಆಕೆ ಪೊಲೀಸರಿಗೆ ದೂರು … Continued

ಸಚಿವ ಸಂಪುಟದ 77 ಸಚಿವರ 8 ಗುಂಪುಗಳಾಗಿ ವಿಂಗಡಿಸಿ, ಅವರಿಗೆ ಆಡಳಿತ ಸುಧಾರಣಾ ಕಾರ್ಯ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಸುಧಾರಿಸುವ ಪ್ರಯತ್ನದಲ್ಲಿ, ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ತಂಡಗಳಿಗೆ ನೇಮಕಾತಿಗಾಗಿ ವೃತ್ತಿಪರರ ಪೂಲ್ ರಚಿಸಲು ಕೇಂದ್ರವು ಇಡೀ ಸಚಿವ ಸಂಪುಟದ 77 ಸದಸ್ಯರನ್ನು ಎಂಟು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯುವ ವೃತ್ತಿಪರರನ್ನು ಸೆಳೆಯಲು ಯೋಜಿಸುತ್ತಿದೆ, … Continued

ವಾಯು ಮಾಲಿನ್ಯದ ಬಿಕ್ಕಟ್ಟು: ದೆಹಲಿ ನಂತರ ಈಹ ಹರ್ಯಾಣದ 4 ಜಿಲ್ಲೆಗಳಲ್ಲಿ ನವೆಂಬರ್ 17 ರ ವರೆಗೆ ಶಾಲೆಗಳು ಬಂದ್‌

ನವದೆಹಲಿ: ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಿಕ್ಕಟ್ಟಿನ ಮಧ್ಯೆ, ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಭಾನುವಾರ ನಿರ್ಧರಿಸಿದೆ. ನವೆಂಬರ್ 17 ರ ವರೆಗೆ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲು ಸಹ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. … Continued