ಜಹಾಂಗೀರ್‌ಪುರಿ ಹಿಂಸಾಚಾರ: ಆರೋಪಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ

ನವದೆಹಲಿ: ಇತ್ತೀಚಿನ ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಅನ್ಸಾರ್ ಸೇರಿದಂತೆ ವಿವಿಧ ಶಂಕಿತರ ವಿರುದ್ಧ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯದ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿ (ECIR), ED ಪೊಲೀಸ್ ಎಫ್‌ಐಆರ್‌ಗೆ ಸಮಾನವಾಗಿದೆ, ಇದನ್ನು ಫೆಡರಲ್ ಏಜೆನ್ಸಿಯು ಹಣ ವರ್ಗಾವಣೆ ತಡೆ … Continued

ಭಾರತದಲ್ಲಿ ಸತತ ನಾಲ್ಕನೇ ದಿನ 2,000ಕ್ಕಿಂತ ಹೆಚ್ಚು ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,527 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು 33 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ 2,000 ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕನ್ನು ದಾಖಲಿಸಿದ ಸತತ ನಾಲ್ಕನೇ ದಿನವಾಗಿದೆ. ಶನಿವಾರದ ಸಂಖ್ಯೆಗಳೊಂದಿಗೆ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ … Continued

ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆಗೆ ರಾಜೀವಕುಮಾರ್ ರಾಜೀನಾಮೆ; ಸುಮನ್ ಬೆರಿ ನೂತನ ಉಪಾಧ್ಯಕ್ಷ

ನವದೆಹಲಿ: ರಾಜೀವಕುಮಾರ್ ಅವರ ಹಠಾತ್ ರಾಜೀನಾಮೆ ನಂತರ ಕೇಂದ್ರ ಸರ್ಕಾರ ಶುಕ್ರವಾರ ಸುಮನ್ ಕೆ, ಬೆರಿ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ರಾಜೀವಕುಮಾರ್ ಅವರ ಅಧಿಕಾರಾವಧಿ ಏಪ್ರಿಲ್ 30ಕ್ಕೆ ಕೊನೆಗೊಳ್ಳಲಿದೆ. ಬೆರಿ ಮೇ 1, 2022 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಆದೇಶ ತಿಳಿಸಿದೆ. ಖ್ಯಾತ ಅರ್ಥಶಾಸ್ತ್ರಜ್ಞರಾದ ರಾಜೀವಕುಮಾರ್ ಅವರು ಆಗಸ್ಟ್ 2017 … Continued

ಉತ್ತರ ಪ್ರದೇಶ: ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕಾಗಿ ಆಗ್ರಾದಲ್ಲಿ 150 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿ: ಆಗ್ರಾದಲ್ಲಿ ಪೊಲೀಸರ ಅನುಮತಿಯಿಲ್ಲದೆ ಮಸೀದಿಯ ಮುಂಭಾಗದ ರಸ್ತೆಯಲ್ಲಿ ನಮಾಜ್ ಮಾಡಿದ 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಸ್ತೆಗಳಲ್ಲಿ ನಮಾಜ್‌ ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಸಂಚಾರಕ್ಕೆ ಅಡ್ಡಿ ಉಂಟಾದರೆ ರಸ್ತೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಇದು ನಡೆದಿದೆ. ಸೆಕ್ಷನ್ … Continued

ನಾನು ಭಾರತೀಯ ಲಸಿಕೆ ತೆಗೆದುಕೊಂಡಿದ್ದೇನೆ, ಕೌಶಲ್ಯಪೂರ್ಣ ಭಾರತೀಯರು ಬ್ರಿಟನ್ನಿಗೆ ಸ್ವಾಗತ, ಭಾರತದಿಂದ ಪರಾರಿಯಾದವರಿಗೆ ಸ್ವಾಗತವಿಲ್ಲ : ಬೋರಿಸ್ ಜಾನ್ಸನ್

ನವದೆಹಲಿ: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ನೈಪುಣ್ಯ ಭಾರತೀಯರನ್ನು ಶ್ಲಾಘಿಸಿದ್ದಾರೆ ಮತ್ತು ಅವರು ಬ್ರಿಟನ್ನಿಗೆ ಬರುವುದನ್ನು ತಡೆಯುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿ ಬ್ರಿಟನ್‌ನ ಕಾನೂನು ವ್ಯವಸ್ಥೆಯನ್ನು ಬಳಸಿಕೊಳ್ಳಲು ಬಯಸುವವರನ್ನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸ್ವಾಗತಿಸುವುದಿಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. … Continued

ಇಂಡೋ-ಪೆಸಿಫಿಕ್ ಸುರಕ್ಷತೆಗೆ ಒತ್ತು: ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ-ಜಾನ್ಸನ್

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಭಾರತದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಲು ಬ್ರಿಟನ್ ಮುಂದಾಗಿದ್ದು, ಶುದ್ಧ ಮತ್ತು ನವೀಕರಿಸಬಹುದಾದ ಇಂಧನದ ಭವಿಷ್ಯದ ಯೋಜನೆಗಳಲ್ಲಿ ಭಾರತದ ಹೊಸ ಸಹಕಾರವನ್ನು ಬಯಸಿದೆ. ಪ್ರಮುಖವಾಗಿ ಭಾರತ-ಇಂಗ್ಲೆಂಡ್ … Continued

ಮಗುವಿಗೆ ಜನ್ಮ ನೀಡಿದ 17 ವರ್ಷದ ಬಾಲಕಿ: ಅತ್ಯಾಚಾರ ಆರೋಪದ ಮೇಲೆ 12 ವರ್ಷದ ಬಾಲಕನ ಬಂಧನ…!

ಚೆನ್ನೈ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭ ಧರಿಸುವಂತೆ ಮಾಡಿದ ಆರೋಪದ ಮೇಲೆ 12 ವರ್ಷದ ಬಾಲಕನನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ತಂಜಾವೂರು ಅಖಿಲ ಮಹಿಳಾ ಪೊಲೀಸ್ ಪಡೆ ಬಂಧಿಸಿದೆ. ಹುಡುಗಿ ಏಪ್ರಿಲ್ 16 ರಂದು ಹೊಟ್ಟೆ ನೋವೆಂದು ಹೇಳಿದಾಗ ಆಕೆಯ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದಾಗ … Continued

ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ: ವಿಚಾರಣೆ ಮುಂದೂಡಿಕೆ ಕೋರಿದ ಆರ್‌ಎಸ್‌ ಎಸ್‌ ಕಾರ್ಯಕರ್ತನಿಗೆ 1,000 ರೂ. ದಂಡ ವಿಧಿಸಿದ ನ್ಯಾಯಾಲಯ

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆ ಮುಂದೂಡಿಕೆ ಕೋರಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರಾಜೇಶ್‌ ಕುಂಟೆ ಅವರಿಗೆ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯವು 1,000 ರೂ.ಗಳ ದಂಡ ವಿಧಿಸಿದ್ದು, ಅದನ್ನು ರಾಹುಲ್‌ ಗಾಂಧಿ ಅವರಿಗೆ ಪಾವತಿಸುವಂತೆ ಆದೇಶ ಮಾಡಿದೆ. ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್‌ಎಸ್‌ಎಸ್‌ ಕಾರಣ ಎಂದು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಜಾಮೀನು ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದ ಶಂಕೆಯ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಹಾರಾಷ್ಟ್ರ ಸಂಪುಟ ದರ್ಜೆ ಸಚಿವ ನವಾಬ್‌ ಮಲಿಕ್‌ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಸೂಕ್ತ ನ್ಯಾಯಾಲಯದಲ್ಲಿ ನೀವು ಜಾಮೀನು … Continued

ದೆಹಲಿಯ ರೋಹಿಣಿ ನ್ಯಾಯಾಲಯದ ಹೊರಗೆ ಗುಂಡಿನ ದಾಳಿ, ಇಬ್ಬರಿಗೆ ಗಾಯ

ನವದೆಹಲಿ: ಶುಕ್ರವಾರ, ಏಪ್ರಿಲ್ 22 ರಂದು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಳಿಗ್ಗೆ 9:40 ರ ಸುಮಾರಿಗೆ ರೋಹಿಣಿ ನ್ಯಾಯಾಲಯದ ಗೇಟ್ ಸಂಖ್ಯೆ 8 ರ ಬಳಿ ಇಬ್ಬರು ವಕೀಲರಾದ ಸಂಜೀವ್ ಚೌಧರಿ ಮತ್ತು ರಿಷಿ ಚೋಪ್ರಾ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಜಗಳ ನಡೆದಿದೆ. ಎನ್‌ಎಪಿ … Continued