ಸಮಾಜವಾದಿ ಪಕ್ಷದ ಸಂಸ್ಥಾಪಕ, ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಯಾದವ್ ನಿಧನ

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (82) ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾದ ಅವರಿಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ಹಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಿಸದೆ ಅವರು ಸೋಮವಾರ ಬೆಳಿಗ್ಗೆ ನಿಧನರಾದರು. ಮುಲಾಯಂ ಸಿಂಗ್‌ ನಿಧನದ ಸುದ್ದಿಯನ್ನು ಅವರ ಪುತ್ರ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ … Continued

ಇಂಗ್ಲೆಂಡ್ ಬೌಲರ್ ಕ್ಯಾಚ್ ತೆಗೆದುಕೊಳ್ಳದಂತೆ ತಡೆದ ಆಸ್ಟ್ರೇಲಿಯಾ ಬ್ಯಾಟರ್‌ ಮ್ಯಾಥ್ಯೂ ವೇಡ್: ಇದು ಈಗ ತೀವ್ರ ಚರ್ಚೆಗೆ ಗ್ರಾಸ | ವೀಕ್ಷಿಸಿ

ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದ ಸಮಯದಲ್ಲಿ ರಿಟರ್ನ್ ಕ್ಯಾಚ್ ತೆಗೆದುಕೊಳ್ಳದಂತೆ ಮಾರ್ಕ್ ವುಡ್ ಅವರನ್ನು ಮ್ಯಾಥ್ಯೂ ವೇಡ್ ತಡೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಇಂಗ್ಲೆಂಡ್‌ ನೀಡಿದ್ದ 209 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 17 ನೇ ಓವರ್‌ನಲ್ಲಿ, ವುಡ್ ಅವರು ಟಾಪ್-ಎಡ್ಜ್ ಮಾಡಿದರು ಮತ್ತು ಚೆಂಡು ನೇರವಾಗಿ ಗಾಳಿಯಲ್ಲಿ … Continued

ರಾತ್ರಿಯಲ್ಲಿ ಜಿಂಕೆ ಬೇಟೆಯಾಡಿದ ಕಪ್ಪು ಚಿರತೆಗೆ ಅಡ್ಡಿಯಾದ ಸ್ಪಾಟ್‌ಲೈಟ್‌ ಬೆಳಕು, ಮತ್ತೊಂದು ಚಿರತೆ ಪಾಲಾದ ಆಹಾರ | ವೀಕ್ಷಿಸಿ

ಕಪ್ಪು ಚಿರತೆ ಕಾಡಿನಲ್ಲಿ ಜಿಂಕೆಯನ್ನು ಬೇಟೆಯಾಡುತ್ತಿರುವ ದೃಶ್ಯವನ್ನು ತೋರಿಸುವ ವೀಡಿಯೊವು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, “ಒಂದು ಪರಿಪೂರ್ಣ ಸೆರೆಹಿಡಿಯುವಿಕೆ. ಚಿರತೆ ಮತ್ತು ವೀಡಿಯೊಗ್ರಾಫರ್ ಇಬ್ಬರೂ ಎಂದು ಅವರು ಶೀರ್ಷಿಕೆ ಬರೆದಿದ್ದಾರೆ. ಕ್ಲಿಪ್‌ನಲ್ಲಿ, ಜಿಂಕೆ ಮೃತದೇಹದ ಕುತ್ತಿಗೆಯನ್ನು ಕಪ್ಪು ಚಿರತೆ ದವಡೆಯಿಂದ … Continued

ಆರ್‌ಜೆಡಿ ಸಭೆಯಿಂದ ಮಧ್ಯದಲ್ಲೇ ಹೊರ ನಡೆದ ಲಾಲು ಯಾದವ್ ಪುತ್ರ ತೇಜ ಪ್ರತಾಪ್‌ : ಪಕ್ಷದ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಕ್ರೋಶ

ನವದೆಹಲಿ: ಲಾಲು ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರು ಭಾನುವಾರ ದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ತಮ್ಮ ಸಹೋದ್ಯೋಗಿಯೊಬ್ಬರು “ನಿಂದನೆ” ಮಾಡಿದ್ದಾರೆ ಎಂದು ಆರೋಪಿಸಿ ಸಭೆ ಬಿಟ್ಟು ಮಧ್ಯದಲ್ಲಿಯೇ ಹೊರಬಂದಿದ್ದಾರೆ. ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಭೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಬಂದ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಾಕ್ ವಿರುದ್ಧ … Continued

ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯ: ಹೊಸ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಬಣದ ಆಯ್ಕೆ

ಮುಂಬೈ: ಶಿವಸೇನಾದ ಎರಡು ಬಣಗಳ ಕಿತ್ತಾಟದ ನಡುವೆ, ಪಕ್ಷದ ‘ಬಿಲ್ಲು-ಬಾಣ’ಗಳನ್ನು ಚುನಾವಣಾ ಆಯೋಗ ಎರಡೂ ಬಣಕ್ಕೂ ನಿರ್ಬಂಧಿಸಿದೆ. ಮುಂಬರಲಿರುವ ಮುಂಬೈ ಅಂಧೇರಿ ಪೂರ್ವ ಕ್ಷೇತ್ರದ ಉಪ ಚುನಾವಣೆಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಹೊಸ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಉದ್ಧವ್ ಠಾಕ್ರೆ ನೇತೃತ್ವದ ಬಣವು ಮೂರು ಹೊಸ ಹೆಸರು … Continued

ಗುಜರಾತಿನ ಮೊಧೇರಾ ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ: ಪ್ರಧಾನಿ ಮೋದಿ ಘೋಷಣೆ

ಗುಜರಾತ್‌ನ ಮೊಹ್ಸಾನಾ ಜಿಲ್ಲೆಯ ಮೊಧೇರಾವನ್ನು ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಅಕ್ಟೋಬರ್ 9 ರಿಂದ 11ರ ವರೆಗೆ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಗುಜರಾತ್ ಪ್ರವಾಸದಲ್ಲಿದ್ದು, ತಮ್ಮ ಮೊದಲ ದಿನದಲ್ಲಿ, ಪ್ರಧಾನಿ ಮೊಧೇರಾಕ್ಕೆ ಭೇಟಿ ನೀಡಿದರು ಮತ್ತು ನವೀಕರಿಸಬಹುದಾದ ಇಂಧನ ತಯಾರಿಸುವ ಭಾರತದ … Continued

ದೆಹಲಿ ಎಎಪಿ ಸರ್ಕಾರದ ಸಚಿವರಾಗಿ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಾದದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜೇಂದ್ರ ಪಾಲ್ ಗೌತಮ್

ನವದೆಹಲಿ: ಈ ವಾರದ ಆರಂಭದಲ್ಲಿ ನೂರಾರು ಜನರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ “ಸಾಮೂಹಿಕ ಧಾರ್ಮಿಕ ಮತಾಂತರ” ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ಉಂಟಾದ ವಿವಾದದ ನಂತರ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಭಾನುವಾರ ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯ ಸಮಾಜ ಕಲ್ಯಾಣ ಸಚಿವ ಗೌತಮ್‌ ಅವರು, ಭಾರತೀಯ … Continued

ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ, ಜನಸಂಖ್ಯೆ ಇಳಿಮುಖವಾಗುತ್ತಿದೆ: ಮೋಹನ ಭಾಗವತ್‌ ಹೇಳಿಕೆಗೆ ಓವೈಸಿ

ಹೈದರಾಬಾದ್: ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ, ಜನಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಭಾನುವಾರ ಹೇಳಿದ್ದಾರೆ. ಜನಸಂಖ್ಯೆ ಅಸಮತೋಲನದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರು ಇಬ್ಬರು … Continued

ವ್ಯಕ್ತಿಯ ಮದುವೆ ಬಗ್ಗೆ ತಿಳಿದ ನಂತರವೂ ಮಹಿಳೆ ಲೈಂಗಿಕ ಸಂಬಂಧ ಮುಂದುವರಿಸಿದರೆ ಅತ್ಯಾಚಾರ ಆರೋಪ ನಿಲ್ಲುವುದಿಲ್ಲ: ಕೇರಳ ಹೈಕೋರ್ಟ್

ತಿರುವನಂತಪುರಂ: ವ್ಯಕ್ತಿ ವಿವಾಹವಾಗಿರುವ ವಿಚಾರ ಗೊತ್ತಿದ್ದೂ ಆತನ ಜೊತೆ ಲೈಂಗಿಕ ಸಂಬಂಧ ಮುಂದುವರಿಸಿದರೆ ವಿವಾಹವಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪ ನಿಲ್ಲುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ. ಐಪಿಸಿ ಸೆಕ್ಷನ್‌ಗಳಾದ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 376 (ಅತ್ಯಾಚಾರ) ಅಡಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಆರೋಪಿತ … Continued

ನಿತೀಶಕುಮಾರ್ ಭ್ರಮೆ ಒಳಗಾಗಿದ್ದಾರೆ, ರಾಜಕೀಯವಾಗಿ ಒಂಟಿಯಾಗುತ್ತಿದ್ದಾರೆ: ಬಿಹಾರ ಸಿಎಂಗೆ ಪ್ರಶಾಂತ್ ಕಿಶೋರ್ ತಿರುಗೇಟು

ನವದೆಹಲಿ: ಪ್ರಶಾಂತ ಕಿಶೋರ್ ಅವರು ಜೆಡಿಯು ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಕೇಳಿಕೊಂಡಿದ್ದರು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ್ ಹೇಳಿಕೆ ನೀಡಿದ ಒಂದು ದಿನದ ನಂತರ, ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ್‌ ಪ್ರತಿಕ್ರಿಯೆ ನೀಡಿದ್ದಾರೆ. “ನಿತೀಶ್ ಭ್ರಮೆಗೆ ಒಳಗಾಗುತ್ತಿದ್ದಾರೆ ಮತ್ತು ರಾಜಕೀಯವಾಗಿ ಪ್ರತ್ಯೇಕವಾಗುತ್ತಿದ್ದಾರೆ. ಅವರು ಏನನ್ನಾದರೂ ಹೇಳಲು ಬಯಸುತ್ತಾರೆ ಆದರೆ ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ಹೇಳುತ್ತಾರೆ, ಎಂದು ಪ್ರಸ್ತುತ … Continued