ವಿದ್ಯುತ್ ಸ್ಪರ್ಶ: ಮೂವರು ಮಕ್ಕಳು ಸೇರಿ ಐವರು ಸಾವು

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಹೈ ಟೆನ್ಷನ್ ವೈರ್‌ನ ಸ್ಪರ್ಶದಿಂದ ಮೂವರು ಮಕ್ಕಳು ಸೇರಿದಂತೆ ಐವರು ಭಾನುವಾರ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಹಾಗೂ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನನ್ಪಾರಾ ಪ್ರದೇಶದ ಮಸುಪುರ್ ಗ್ರಾಮದಲ್ಲಿ ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಮೆರವಣಿಗೆ ನಡೆಸುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಗಾಡಿಯಲ್ಲಿ ಇರಿಸಲಾಗಿದ್ದ … Continued

ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂಕೆ ಸ್ಟಾಲಿನ್ ಅವಿರೋಧವಾಗಿ ಆಯ್ಕೆ

ಚೆನ್ನೈ: ಭಾನುವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರನ್ನು ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೊಸದಾಗಿ ರಚನೆಯಾದ ಜನರಲ್ ಕೌನ್ಸಿಲ್ ಸಭೆಯಲ್ಲಿ ಅವರನ್ನು ಪಕ್ಷದ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷ ಘೋಷಿಸಿದೆ. ಪಕ್ಷದ ಹಿರಿಯರಾದ ದುರೈಮುರುಗನ್ ಮತ್ತು ಟಿ ಆರ್ ಬಾಲು ಕ್ರಮವಾಗಿ … Continued

CISF ನೇಮಕಾತಿ 2022: ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೂ ಉದ್ಯೋಗಾವಕಾಶ, ವೇತನ 92 ಸಾವಿರ ರೂ. ವರೆಗೆ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯಲ್ಲಿ ಹೆಡ್ ಕಾನ್ಸ್‌ಟೇಬಲ್ (ಮಿನಿಸ್ಟ್ರೀಯಲ್) ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಸ್ಟೆನೋಗ್ರಾಫರ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಿಐಎಸ್‌ಎಫ್‌ (CISF) ಅಧಿಕೃತ ವೆಬ್‌ಸೈಟ್ http://cisf.gov.in ಗೆ ಭೇಟಿ ನೀಡಿ ಅರ್ಜಿ ಆನ್‌ಲೈನ್‌ ಮೂಲಕ ಸಲ್ಲಿಸಬಹುದು. ಒಟ್ಟು ಹುದ್ದೆಗಳ ಸಂಖ್ಯೆ- 540 ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ … Continued

ಜೆಡಿಯುವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ಹೇಳಿದ್ದ ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್‌: ಬಿಹಾರ ಸಿಎಂ ನಿತೀಶಕುಮಾರ

ಪಾಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ಅವರು ಜೆಡಿಯು ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಸಲಹೆ ನೀಡಿದ್ದರು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ್ ಶನಿವಾರ ಹೇಳಿದ್ದಾರೆ. ಸಮಾಜವಾದಿ ಐಕಾನ್ ಜಯಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳ ಸಿತಾಬ್ ಡಿಯಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಕಿಶೋರ್ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಇತ್ತೀಚೆಗೆ ನನ್ನನ್ನು ಭೇಟಿಯಾಗಲು ಬಂದಿದ್ದರು. … Continued

ಮಹಾರಾಷ್ಟ್ರ ಉಪಚುನಾವಣೆಯಲ್ಲಿ ಶಿವಸೇನೆ ಹೆಸರು-ಚಿಹ್ನೆ ಬಳಸದಂತೆ ಠಾಕ್ರೆ, ಶಿಂಧೆ ಬಣವನ್ನು ನಿರ್ಬಂಧಿಸಿದ ಚುನಾವಣಾ ಆಯೋಗ

ನವದೆಹಲಿ: ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಎರಡು ಶಿವಸೇನೆ ಬಣಗಳು ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆಯನ್ನು ಬಳಸದಂತೆ ಚುನಾವಣಾ ಆಯೋಗ (ಇಸಿಐ) ಶನಿವಾರ ಮಧ್ಯಂತರ ಆದೇಶದಲ್ಲಿ ನಿರ್ಬಂಧಿಸಿದೆ. ಏಕನಾಥ ಶಿಂಧೆ (ಅರ್ಜಿದಾರ) ನೇತೃತ್ವದ ಬಣ ಮತ್ತು ಉದ್ಧವ್ ಠಾಕ್ರೆ (ಪ್ರತಿವಾದಿ) ನೇತೃತ್ವದ … Continued

ಜನ್ಮ ನೀಡಲು ಮಹಿಳೆಗೆ ಒತ್ತಾಯ ಮಾಡಲಾಗದು; ಸಂತಾನೋತ್ಪತ್ತಿ ಆಯ್ಕೆ ಸಂವಿಧಾನದ 21ನೇ ವಿಧಿ ಭಾಗ: ಬಾಂಬೆ ಹೈಕೋರ್ಟ್‌

ಮುಂಬೈ: ಸಂವಿಧಾನದ 21ನೇ ವಿಧಿಯಡಿ ಮಹಿಳೆಯ ಸಂತಾನೋತ್ಪತ್ತಿ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿರುವುದರಿಂದ ಆಕೆಗೆ ಮಗು ಪಡೆಯಲು ಬಲವಂತ ಮಾಡಲಾಗದು ಎಂದು ಇತ್ತೀಚಿಗೆ ಬಾಂಬೆ ಹೈಕೋರ್ಟ್‌ ಹೇಳಿದೆ. ತನ್ನ ಒಪ್ಪಿಗೆ ಪಡೆಯದೇ ಪತ್ನಿಯು ಗರ್ಭಪಾತ ಮಾಡಿಸಿರುವುದು ಕ್ರೌರ್ಯ ಎಂಬ ಆಧಾರದಲ್ಲಿ ವಿಚ್ಛೇದನ ಕೋರಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅತುಲ್‌ ಚಂದೂರ್ಕರ್‌ ಮತ್ತು ಊರ್ಮಿಳಾ ಜೋಶಿ … Continued

ಜಾಹೀರಾತುಗಳು, ಭಾಷಣಗಳ ಮೇಲೆ ದೆಹಲಿ ಓಡುತ್ತಿದೆ: ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಕಟು ಪತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಟುವಾದ ಪತ್ರದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ವಿ.ಕೆ. ಸಕ್ಸೇನಾ ಅವರು ಅವರು ಮತ್ತು ಅವರ ಮಂತ್ರಿಗಳು ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಸಾಂವಿಧಾನಿಕ ಕರ್ತವ್ಯಗಳು ಮತ್ತು ಆಡಳಿತದ ಜವಾಬ್ದಾರಿಗಳಿಂದ ವಿಮುಖರಾಗಿರುವುದಾಗಿ ಆರೋಪಿಸಿದ್ದಾರೆ. ನಿಮ್ಮ ಸರ್ಕಾರವು ಜಾಹೀರಾತುಗಳು ಮತ್ತು ಭಾಷಣಗಳ ಸಹಾಯದಿಂದ ನಡೆಯುತ್ತಿದೆ ಎಂದು ಎಲ್-ಜಿ ತಮ್ಮ ಬರೆದ ಪತ್ರದಲ್ಲಿ … Continued

ದ್ವೇಷ ಬೆಳೆಸುವ -ಸಾಮಾಜಿಕ ಸಾಮರಸ್ಯ ಕದಡುವ ಯಾವುದೇ ಸಂಘಟನೆಯದರೂ ಅದು ರಾಷ್ಟ್ರ ವಿರೋಧಿ : ಪಿಎಫ್‌ಐ ನಿಷೇಧ ಕುರಿತು ಮೊದಲ ಬಾರಿಗೆ ಮಾತನಾಡಿದ ರಾಹುಲ್ ಗಾಂಧಿ

ತುಮಕೂರು: ದ್ವೇಷ ಬೆಳೆಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವ ಯಾವುದೇ ಸಂಘಟನೆಯದರೂ ಅದು ರಾಷ್ಟ್ರ ವಿರೋಧಿ ಎಂದು ಶನಿವಾರ  ಇದೇ ಮೊದಲ ಬಾರಿಗೆ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)  ನಿಷೇಧದ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ. ದ್ವೇಷವನ್ನು ಹರಡುವ ವ್ಯಕ್ತಿ ಯಾರು ಎಂಬುದು ಮುಖ್ಯವಲ್ಲ, ಅವರು ಯಾವ ಸಮುದಾಯದಿಂದ ಬಂದವರು ಎಂಬುದು ಮುಖ್ಯವಲ್ಲ, ದ್ವೇಷ ಮತ್ತು … Continued

ಜಾರ್ಖಂಡ್‌ನಲ್ಲಿ ದೇಶದಲ್ಲೇ ಅತಿ ಹೆಚ್ಚು ಹೆಣ್ಣು ಮಕ್ಕಳ ಬಾಲ್ಯವಿವಾಹ

ರಾಂಚಿ: ವಾಮಾಚಾರದ ಹತ್ಯೆಗಳಿಗೆ ಕುಖ್ಯಾತಿ ಪಡೆದಿರುವ ಜಾರ್ಖಂಡ್, ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆಯ ಪ್ರಕಾರ ಅತಿ ಹೆಚ್ಚು ಅಪ್ರಾಪ್ತ ಬಾಲಕಿಯರ ವಿವಾಹವನ್ನು ಹೊಂದಿರುವ ಕುಖ್ಯಾತಿಯನ್ನೂ ಗಳಿಸಿದೆ. ಗೃಹ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯಿಂದ ಹೊರತಂದ ಸಮೀಕ್ಷೆಯ ಪ್ರಕಾರ ಜಾರ್ಖಂಡ್‌ನಲ್ಲಿ ಅರ್ಹ ವಯಸ್ಸಿಗೆ ಮುಂಚಿತವಾಗಿ ಮದುವೆಯಾಗುವ ಹುಡುಗಿಯರ … Continued

ಬೇರೆ ಧರ್ಮಕ್ಕೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆ..? : ಅಧ್ಯಯನಕ್ಕೆ ಆಯೋಗ ರಚಿಸಿದ ಕೇಂದ್ರ

ನವದೆಹಲಿ: ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದು ಆನಂತರದಲ್ಲಿ ಬೇರೆ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬಹುದೇ ಎಂಬುದನ್ನು ಪರಿಶೀಲಿಸಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕೆ ಜಿ ಬಾಲಕೃಷ್ಣನ್‌ ಅವರ ನೇತೃತ್ವದ ಮೂವರು ಸದಸ್ಯರ ಆಯೋಗವನ್ನು ಕೇಂದ್ರ ಸರ್ಕಾರವು ರಚಿಸಿದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು … Continued