ತೆರಿಗೆ ಸಂಗ್ರಹ, ಪಿಂಚಣಿ ಪಾವತಿ: ಖಾಸಗಿ ಬ್ಯಾಂಕ್‌ಗಳಿಗೂ ಅನುಮತಿ

ತೆರಿಗೆ ಸಂಗ್ರಹ, ಪಿಂಚಣಿ ಪಾವತಿ ಹಾಗೂ ಸಣ್ಣ ಉಳಿತಾಯದ ಯೋಜನೆಗಳಂಥ ಸರಕಾರಿ ಸಂಬಂಧಿತ ವ್ಯವಹಾರಗಳನ್ನು ನಡೆಸಲು ಖಾಸಗಿ ಬ್ಯಾಂಕ್‌ಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅನುಮತಿ ನೀಡಿದ್ದಾರೆ. ಪ್ರಸ್ತುತ, ಕೆಲವು ದೊಡ್ಡ ಖಾಸಗಿ ವಲಯದ ಬ್ಯಾಂಕುಗಳಿಗೆ ಮಾತ್ರ ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರ ನಡೆಸಲು ಅವಕಾಶವಿದೆ. ಖಾಸಗಿ ಬ್ಯಾಂಕುಗಳಿಗೆ ಸರ್ಕಾರದ ವ್ಯವಹಾರವನ್ನು ನೀಡುವಲ್ಲಿ ಇರುವ ನಿರ್ಬಂಧವನ್ನು ತೆಗೆದುಹಾಕಲಾಯಿತು. … Continued

ಉತ್ತರ ಪ್ರದೇಶ: ಯುವತಿ ಅತ್ಯಾಚಾರಕ್ಕೆ ಯತ್ನಿಸಿ ಬೆಂಕಿ ಇಟ್ಟ ದುರುಳರು

ಶಹಜಹಾನ್‌ಪುರ: ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ, ವಿಫಲಗೊಂಡ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಆಕೆಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಶಹಜಾನ್‌ಪುರದ ರಾಯ್‌ಖೇಡಾ ಗ್ರಾಮದ ಬಳಿ ನಡೆದಿದೆ. ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಶಂಕಿತ ಆರೋಪಿಗಳನ್ನು … Continued

ಪಿಎಸ್‌ಯುಗಳ ಖಾಸಗೀಕರಣಕ್ಕೆ ಪಿಎಂ ಮೋದಿ ಪ್ರಬಲ ಪ್ರತಿಪಾದನೆ

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯತಂತ್ರರಹಿತ ಸಾರ್ವಜನಿಕ ವಲಯದ ಉದ್ದಿಮೆಗಳನ್ನು (ಪಿಎಸ್‌ಯು) ಖಾಸಗೀಕರಣಗೊಳಿಸಲು ಪ್ರಬಲ ಪ್ರತಿಪಾದನೆ ಮಾಡಿದ್ದಾರೆ. ಸರ್ಕಾರಕ್ಕೆ ವ್ಯವಹಾರದಲ್ಲಿ ಯಾವುದೇ ವ್ಯವಹಾರವಿಲ್ಲ ಎಂದು ಹೇಳಿದ ಅವರು, ತೆರಿಗೆದಾರರ ಹಣದ ಮೇಲೆ ನಷ್ಟವನ್ನುಂಟು ಮಾಡುವ ಘಟಕಗಳನ್ನು ಉಳಿಸಿಕೊಳ್ಳುವುದು ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಖರ್ಚು ಮಾಡಬಹುದಾದ ಸಂಪನ್ಮೂಲಗಳನ್ನು ಬರಿದಾಗಿಸುತ್ತದೆ . ತೈಲ ಮತ್ತು ಅನಿಲ,ವಿದ್ಯುತ್ ಕ್ಷೇತ್ರಗಳಲ್ಲಿರುವಂತಹ ಸಾರ್ವಜನಿಕ … Continued

ದೆಹಲಿ ಪೊಲೀಸರ ಎಚ್ಚರಿಕೆ ಫಲಕದಿಂದ ಪ್ರತಿಭಟನಾನಿರತರಿಗೆ ಅಸಮಾಧಾನ

ದೆಹಲಿ: ರೈತರು ಒಂದೆಡೆ ಸೇರಿರುವುದು ಕಾನೂನು ಬಾಹಿರ ಎಂದು ದೆಹಲಿ ಪೊಲೀಸರು ಟಕ್ರಿ ಗಡಿಯಲ್ಲಿ ಫಲಕ ಹಾಕಿರುವುದು ಹೋರಾಟ ನಿರತ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. “ಒಂದೆಡೆ ಸೇರಿ ಸಭೆ ನಡೆಸುವುದು ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ. ಇಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಲಾಗುವುದು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ಹಿಂದಿ ಹಾಗೂ ಪಂಜಾಬಿ ಭಾಷೆಯಲ್ಲಿ … Continued

ಆಮ್‌ ಆದ್ಮಿ ಪಕ್ಷದಿಂದ ಬಿಜೆಪಿಗೆ ಸವಾಲಿಲ್ಲ: ಗುಜರಾತ್‌ ಸಿಎಂ ರೂಪಾನಿ

ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್‌ನಲ್ಲಿರುವ ಬಿಜೆಪಿಗೆ ಸವಾಲಾಗಿಲ್ಲ, ಆದರೆ ಸೂರತ್‌ನಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ. ಈ ವಾರದ ಕೊನೆಯಲ್ಲಿ ಪಂಚಾಯಿತಿಗಳು ಮತ್ತು ನಾಗರಪಾಲಿಕರಿಗೆ ನಡೆಯುವ ಚುನಾವಣೆಯಲ್ಲಿ ಎಎಪಿ ಯಾವುದೇ ಸ್ಥಾನವನ್ನು ಗೆಲ್ಲುವುದಿಲ್ಲ. ನಾವು ಎಎಪಿಯಿಂದ ಯಾವುದೇ ಸವಾಲನ್ನು ಎದುರಿಸುವುದಿಲ್ಲ ಎಂದು ನಾನು ನಂಬುತ್ತೇನೆ. ಕಳೆದ ಬಾರಿ … Continued

ಪಶ್ಚಿಮ ಬಂಗಾಳಕ್ಕೆ ಕೊರೊನಾ ಲಸಿಕೆ ನೀಡುವಂತೆ ಪ್ರಧಾನಿಗೆ ಸಿಎಂ ಮಮತಾ ಮನವಿ

ವಿಧಾನಸಭೆ ಚುನಾವಣೆಗೆ ಮುಂಚೆ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಲಸಿಕೆ ಒದಗಿಸಬೇಕೆಂದು ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಎಪ್ರಿಲ್‌-ಮೇ ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ ಜನರು ಲಸಿಕೆಯಿಲ್ಲದೇ ಮತದಾನ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. ಜನರ ಆರೋಗ್ಯ ಮತ್ತು ಯೋಗಕ್ಷೇಮದ ಹಿತದೃಷ್ಟಿಯಿಂದ ತಕ್ಷಣವೇ ಜನರಿಗೆ ಲಸಿಕೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಮತ್ತು ಇತರ … Continued

ಮಾ.೧ರಿಂದ ೨ನೇ ಹಂತದ ಲಸಿಕೆ ಆರಂಭ:೬೦ರ ಮೇಲ್ಪಟ್ಟವರಿಗೆ ಉಚಿತ

  ನವ ದೆಹಲಿ: ದೇಶದಲ್ಲಿ ಮಾರ್ಚ್ ೧ರಿಂದ ಎರಡನೇ ಹಂತದ ಕೊವಿಡ್‌ ಲಸಿಕೆ ಹಾಕುವ ಅಭಿಯಾನ ಕೈಗೆತ್ತಿಕೊಳ್ಳಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. 45 ವರ್ಷ ದಾಟಿದ ಅನಾರೋಗ್ಯಪೀಡಿತರು ಮತ್ತು 60 ವರ್ಷ ದಾಟಿದ ಎಲ್ಲಾ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಹಾಕಲು ನಿರ್ಧರಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ … Continued

೧೫೦೦ ಸಮಾವೇಶಗಳು, ೧೫,೦೦೦ ವಾಟ್ಸಾಪ್‌ ಗ್ರುಪ್‌ಗಳು: ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ…!

ನವ ದೆಹಲಿ: ಮುಂಬರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ 1,500 ಕ್ಕೂ ಹೆಚ್ಚು ಬೃಹತ್‌ ಸಮಾವೇಶಗಳು, 15,000 ವಾಟ್ಸಾಪ್ ಗುಂಪುಗಳು ಮತ್ತು ಪಕ್ಷದ ಪ್ರಮುಖ ಮುಖಂಡರು ಶಿಬಿರ ನಡೆಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಪಶ್ಚಿಮ ಬಂಗಾಳದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರ ಪ್ರಕಾರ, ಮತದಾರರನ್ನು ತಲುಪಲು ಕನಿಷ್ಠ 1,500 ದೊಡ್ಡ ಮತ್ತು ಸಣ್ಣ ಸಮಾವೇಶಗಳನ್ನು ನಡೆಸುವಂತೆ ಬಿಜೆಪಿ ಕೇಂದ್ರ … Continued

ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

ಪುದುಚೆರಿ: ಪುದುಚೇರಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಅಲ್ಲಿನ ಮುಖ್ಯಮಂತ್ರಿ ಸ್ಥಾನಕ್ಕೆ ,ವಿ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಪತನವಾದ ಒಂದು ದಿನದ ಬಳಿಕ ಕೇಂದ್ರ ಸರ್ಕಾರ ವಿಧಾನಸಭೆಯನ್ನು ವಿಸರ್ಜಿಸಿ, ರಾಷ್ಟ್ರಪತಿ ಆಡಳಿತ ಜಾರಿ ಮಾಡಿದೆ. ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಬಹುಮತ ಕಳೆದುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಯಾವುದೇ ಪಕ್ಷ ಸರ್ಕಾರ … Continued

ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದ ಪ್ರಕರಣ ಹಿಂತೆಗೆಯಲು ಕೇರಳ ಸರ್ಕಾರ ನಿರ್ಧಾರ: ಚುನಾವಣಾ ಸ್ಟಂಟ್‌ ಎಂದ ಬಿಜೆಪಿ

ರಾಜ್ಯದ ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಕೇರಳದಲ್ಲಿ ಎಡರಂಗ ಸರ್ಕಾರವು ಶಬರಿಮಲೆ ಆಂದೋಲನ ಹಾಗೂ ನಾಗರಿಕ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ಬಿಜೆಪಿಯು ಎಡರಂಗದ ಸರ್ಕಾರದ ಈ ನಿರ್ಧಾರ ಚುನಾವಣಾ ಸ್ಟಂಟ್‌ ಎಂದು ಹೇಳಿದೆ. ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದಂತೆ 50,000 ಕ್ಕೂ ಹೆಚ್ಚು ಜನರ ವಿರುದ್ಧ … Continued