ಕಾಶಿ ದೇವಸ್ಥಾನದಲ್ಲಿ ಗಿಟಾರ್‌ನೊಂದಿಗೆ ಹನುಮಾನ್ ಚಾಲೀಸಾ ಪಠಣ ಮಾಡುತ್ತಿರುವ ವಿದೇಶಿಯರು | ವೀಕ್ಷಿಸಿ

ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಹನುಮಂತನ ಕೃಪಾಶೀರ್ವಾದ ಪಡೆಯಲು ಹಾಗೂ ದುಷ್ಟಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಹನುಮಾನ್ ಚಾಲೀಸಾವನ್ನು ಅತ್ಯಂತ ಸಮರ್ಪಣೆಯಿಂದ ಓದುವವರು ತಮ್ಮ ಪ್ರಯತ್ನಗಳಲ್ಲಿ ಅಡೆತಡೆಗಳನ್ನು ನಿವಾರಿಸುವ ಭಗವಾನ್ ಹನುಮಂತನ ದಿವ್ಯ ರಕ್ಷಣೆಯನ್ನು ಆಹ್ವಾನಿಸುತ್ತಾರೆ ಎಂದು ನಂಬಲಾಗಿದೆ. ಭಾರತೀಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳು ಅನೇಕ ವಿದೇಶಿಯರನ್ನು … Continued

ಎಎಪಿಗೆ ಹಿನ್ನಡೆ: ಬಿಜೆಪಿಯ ತಜೀಂದರ್ ಬಗ್ಗಾ, ಕುಮಾರ ವಿಶ್ವಾಸ್ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಪಂಜಾಬ್-ಹರಿಯಾಣ ಹೈಕೋರ್ಟ್

ಚಂಡೀಗಡ: ಮಾಜಿ ಎಎಪಿ ನಾಯಕ ಕುಮಾರ ವಿಶ್ವಾಸ ಮತ್ತು ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ದಾಖಲಾಗಿದ್ದ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ಬಗ್ಗಾ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಮುಂದುವರಿಸುವುದು ‘ಕಾನೂನಿನ ಪ್ರಕ್ರಿಯೆಯ ದುರುಪಯೋಗ’ ಎಂದು ನ್ಯಾಯಾಲಯ ಹೇಳಿದೆ. ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ … Continued

ಕರ್ನಾಟಕ ಹಿಜಾಬ್ ನಿಷೇಧ : ನಾಳೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟ ಸಾಧ್ಯತೆ

ನವದೆಹಲಿ: ಹಿಜಾಬ್ ನಿಷೇಧ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ತೀರ್ಪು ಗುರುವಾರ (ಅಕ್ಟೋಬರ್ 13) ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕ ಸರ್ಕಾರವು ರಾಜ್ಯದ ಶಾಲೆ – ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಬಳಿಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್‌ … Continued

ಎಲ್‌ಪಿಜಿ ಮಾರಾಟದಲ್ಲಿ ನಷ್ಟ: 3 ತೈಲ ಮಾರಾಟ ಕಂಪನಿಗಳಿಗೆ ₹22,000 ಕೋಟಿ ಪರಿಹಾರ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಮಾರಾಟದಿಂದ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳಿಗೆ 22,000 ಕೋಟಿ ರೂ.ಗಳನ್ನು ಒಂದು ಸಲದ ಅನುದಾನವಾಗಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ … Continued

ಪ್ರವಾಹದಿಂದಾಗಿ ಹೆಚ್ಚುತ್ತಿರುವ ಮಲೇರಿಯಾ: ಭಾರತದಿಂದ 62 ಲಕ್ಷ ಸೊಳ್ಳೆ ಪರದೆಗಳ ಖರೀದಿಗೆ ಮುಂದಾದ ಪಾಕಿಸ್ತಾನ-ವರದಿ

ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ, ಪಾಕಿಸ್ತಾನದ ಆರೋಗ್ಯ ಸಚಿವಾಲಯವು ಮಂಗಳವಾರ ಭಾರತದಿಂದ 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲು ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನದಲ್ಲಿ ಶತಮಾನದ ಪ್ರವಾಹದ ನಂತರ ಈಗ ಮಲೇರಿಯಾ ಸೋಂಕು ಹರಡುತ್ತಿದೆ. ಮಲೇರಿಯಾ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ರಸ್ತುತ ಪಾಕಿಸ್ತಾನಿಗಳಿಗೆ ಈಗ ಸೊಳ್ಳೆಗಳ ಕಾಟ ತಡೆಯುವುದು ದೊಡ್ಡ … Continued

50 ವರ್ಷಗಳ ಹಿಂದೆ ತಮಿಳುನಾಡು ದೇವಾಲಯದಿಂದ ಕಳುವಾದ ಎರಡು ಪುರಾತನ ವಿಗ್ರಹಗಳು ಅಮೆರಿಕದ ವಸ್ತುಸಂಗ್ರಹಾಲಯದಲ್ಲಿ ಪತ್ತೆ..!

ಚೆನ್ನೈ: ತಮಿಳುನಾಡು ಐಡಲ್ ವಿಂಗ್ ಸಿಐಡಿಯು ತಮಿಳುನಾಡಿನಲ್ಲಿ ಕದ್ದ ಎರಡು ವಿಗ್ರಹಗಳನ್ನು ಅಮೆರಿಕದ ವಸ್ತುಸಂಗ್ರಹಾಲಯದಲ್ಲಿ ಪತ್ತೆಹಚ್ಚಿದೆ ಮತ್ತು ಅವುಗಳನ್ನು ದೇಶಕ್ಕೆ ಹಿಂದಿರುಗಿಸಲು ದಾಖಲೆಗಳನ್ನು ಸಲ್ಲಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ತಿರುವರೂರು ಜಿಲ್ಲೆಯ ಆಲತ್ತೂರಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಯೋಗನರಸಿಂಹ ಮತ್ತು ಗಣೇಶನ ಎರಡು ಪುರಾತನ ವಿಗ್ರಹಗಳನ್ನು ಅಮೆರಿಕದ ಮಿಸೌರಿ ಕಾನ್ಸಾಸ್‌ ನಗರದ … Continued

ಬಿಗ್‌ಬಾಸ್‌ ಮನೆಗೆ ಬಂದ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ನಂತರ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಅತ್ಯಾಚಾರದ ಬೆದರಿಕೆ

ನವದೆಹಲಿ: ಚಿತ್ರನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಬುಧವಾರ ಹೇಳಿದ್ದಾರೆ. ತನ್ನ Instagram DM ಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅಧ್ಯಕ್ಷರು, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ ಎಂದು … Continued

ಕೇರಳದ ನರಬಲಿ ಪ್ರಕರಣದಲ್ಲಿ ಹೊರಬಿದ್ದ ಭಯಾನಕ ವಿವರಗಳು : ಯೌವನ ಕಾಪಾಡಿಕೊಳ್ಳಲು ಬಲಿಕೊಟ್ಟು ನಂತರ ಮಾಂಸ ಬೇಯಿಸಿ ತಿಂದಿದ್ದರಂತೆ ಆರೋಪಿ ದಂಪತಿ…!

ತಿರುವನಂತಪುರಂ: ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ಮಾಟಮಂತ್ರದ ಭಾಗವಾಗಿ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟು ಅವರ ದೇಹದ ಭಾಗಗಳನ್ನು ತುಂಡುತುಂಡು ಮಾಡಿ ಹೂತಿಟ್ಟ ಪ್ರಕರಣದ ಇನ್ನಷ್ಟು ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ. ಈ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಬಂಧಿತ ವ್ಯಕ್ತಿಗಳನ್ನು ಸ್ಥಳೀಯ ಮಸಾಜ್ ಥೆರಪಿಸ್ಟ್ ಭಗವಲ್ ಸಿಂಗ್ ಎಂದು ಆತನ ಪತ್ನಿ ಲೈಲಾ … Continued

ಪೊಲೀಸ್‌ ಬಸ್​ ಇಂಧನದ ಟ್ಯಾಂಕ್ ಸ್ಫೋಟ, ಓರ್ವ ಸಜೀವ ದಹನ: ದೃಶ್ಯ ಸೆರೆ

ಪಾಟ್ನಾ: ಬಿಹಾರದ ಚಾಪ್ರಾ-ಸಿವಾನ್ ಫ್ರೀ ವೇಯಲ್ಲಿ ಬುಧವಾರ ಬೆಳಗ್ಗೆ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಗೊಂದಲದ ವೀಡಿಯೊದಲ್ಲಿ ಬಸ್‌ನ ಕೆಳಗಿರುವ ಅನೇಕ ಬೈಕರ್‌ಗಳಲ್ಲಿ ಒಬ್ಬರು ಬೆಂಕಿ ಉರಿಯುತ್ತಿರುವಾಗ ಅದರ ಮಧ್ಯದಲ್ಲಿಯೇ ಸಿಲುಕಿಕೊಂಡಿರುವುದು ಕಂಡುಬಂದಿದೆ. ಪೊಲೀಸ್‌ ಬಸ್‌ನ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡ ನಂತರ ಬಸ್‌ಗೆ ಬೆಂಕಿ ಹಿಡಿದಿದೆ. ಬಸ್‌ … Continued

ಚಲಿಸುತ್ತಿರುವ ರೈಲಿನಲ್ಲಿ ಮಾರಕಾಸ್ತ್ರ ಹಿಡಿದು ಘೋಷಣೆ ಕೂಗುತ್ತಿದ್ದ ಮೂವರು ವಿದ್ಯಾರ್ಥಿಗಳ ವೀಡಿಯೊ ವೈರಲ್‌ ಆದ ನಂತರ ಬಂಧನ | ವೀಕ್ಷಿಸಿ

ಚೆನ್ನೈ: ಚೆನ್ನೈನ ಮೂವರು ಕಾಲೇಜು ವಿದ್ಯಾರ್ಥಿಗಳು ರೈಲಿನಲ್ಲಿ ಹರಿತವಾದ ಆಯುಧಗಳನ್ನು ಹಿಡಿದುಕೊಂಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ವಿಭಾಗೀಯ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ಮಂಗಳವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಮೂವರು ವ್ಯಕ್ತಿಗಳು ತಮ್ಮ ಕೈಯಲ್ಲಿ ಮಚ್ಚಿನಿಂದ ಚಲಿಸುವ ರೈಲಿನ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಿರುವ ವೀಡಿಯೊ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಮೂವರು ವ್ಯಕ್ತಿಗಳನ್ನು ಗುಮ್ಮಿಡಿಪೂಂಡಿಯ … Continued