ನಡ್ಡಾ ಪೋಸ್ಟರ್‌ ಕಿತ್ತಿದ್ದಕ್ಕೆ ಬಿಜೆಪಿ-ಟಿಎಂಸಿ ಆರೋಪ ಪ್ರತ್ಯಾರೋಪ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಪರಿವರ್ತನ ರಥಯಾತ್ರೆ’ ಗಿಂತ ಮುಂಚೆ ಮಾಲ್ಡಾದಲ್ಲಿ ಬಿಜೆಪಿ ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಈ ಘಟನೆಗೆ ಆಡಳಿತಾರೂಢ ಟಿಎಂಸಿ ಸರ್ಕಾರವೇ ಇದಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ, ಆದರೆ, ತಮ್ಮ ಪಕ್ಷದ ಮುಖಂಡರ ಮಧ್ಯದ ಭಿನ್ನಾಭಿಪ್ರಾಯಗಳಿಂದಾಗಿ ಬಿಜೆಪಿಯವರೇ ನಡ್ಡಾ ಅವರ ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ ಎಂದು … Continued

ತಿಂದ ಇಡ್ಲಿ ದುಡ್ಡು ಕೇಳಿದ್ದಕ್ಕೆ ವ್ಯಾಪಾರಿ ಹತ್ಯೆ

ಥಾಣೆ(ಮಹಾರಾಷ್ಟ್ರ): ಇಲ್ಲಿನ ಮೀರಾ ರಸ್ತೆಯಲ್ಲಿ ರಸ್ತೆ ಪಕ್ಕದಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಮೂವರು ಗ್ರಾಹಕರು ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತನನ್ನು ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಆತ ಇಡ್ಲಿ ಮಾರಾಟ ಮಾಡುತ್ತಿದ್ದ. ಮೂವರು ಗ್ರಾಹಕರು ಅವರ ರಸ್ತೆ ಬದಿಯ ಡಬ್ಬಾ ಅಂಗಡಿಗೆ ಬಂದು 20 ರೂ. ಬಾಕಿ ಇದೆ ಎಂದು ಜಗಳ ತೆಗೆದರು. … Continued

ಬ್ರಿಟನ್‌ನಲ್ಲಿ ಕೊರೋನಾ ರೂಪಾಂತರದ ವಿರುದ್ಧ ಅಸ್ಟ್ರಾಜೆನೆಕಾ ಪರಿಣಾಮಕಾರಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆಅಸ್ಟ್ರಾಜೆನೆಕಾ ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ, ಲಸಿಕೆಯನ್ನು ಅಭಿವೃದ್ಧಿಪಡಿಸಿದ ಆಕ್ಸ್‌ಫರ್ಡ್ ಸಂಶೋಧಕರ ಪ್ರಕಾರ, ಹೊಸ ವೈರಸ್ ರೂಪಾಂತರಗಳಲ್ಲಿ ಇದು ಪರಿಣಾಮಕಾರಿಯಾಗಿದೆ. ನವೆಂಬರ್‌ನಲ್ಲಿ ಯುಕೆಯಲ್ಲಿ ಮೊದಲ ಬಾರಿಗೆ ಹೊಸ ವೈರಸ್‌ ರೂಪಾಂತರ ಪತ್ತೆಯಾಗಿತ್ತು. ವೈರಸ್‌ನ ಹೊಸ ರೂಪಾಂತರ ಶೀಘ್ರವಾಗಿ ಹರಡುತ್ತದೆ. ಹೊಸ ಲಸಿಕೆ ರೋಗದ ಹರಡುವಿಕೆಯನ್ನು … Continued

ಕಿಸಾನ್‌ ವಿಶೇಷ ರೈಲು

ಅಗರ್ತಾಲ: ದೇಶದ ಈಶಾನ್ಯ ಪ್ರದೇಶಗಳ ರೈತರು ಮತ್ತು ಸಾಗಣೆದಾರರ ಅನುಕೂಲಕ್ಕಾಗಿ ಈಶಾನ್ಯ ಗಡಿನಾಡು ರೈಲ್ವೆ (ಎನ್‍ಎಫ್‍ಆರ್) ಕಿಸಾನ್ ವಿಶೇಷ ರೈಲುಗಳನ್ನು ಫೆ.11 ರಿಂದ ಅಗರ್ತಾಲದಿಂದ ಹೌರಾ ಮತ್ತು ಸೀಲ್ಡಾವರೆಗೆ ಓಡಿಸಲು ರೈಲ್ವೆ ಇಲಾಖೆ  ನಿರ್ಧರಿಸಿದೆ. ಕಿಸಾನ್ ವಿಶೇಷ ರೈಲು ಪ್ರತಿ ಗುರುವಾರ ವಾರಕ್ಕೊಮ್ಮೆ 19.15 ಗಂಟೆಗೆ ಅಗರ್ತಾಲದಿಂದ ಹೊರಟು ಶನಿವಾರ ಸೀಲ್ಡಾ ತಲುಪಲಿದೆ. ಧರ್ಮಾನ್ ನಗರ, … Continued

2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಸಹಿ

ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ಏರೋಸ್ಪೇಸ್‌ ಹಬ್‌ ಆಗಿರುವ ಕರ್ನಾಟಕ,ಹಾಗೂ ಮೂರು ದಿನಗಳಿಂದ ಬೆಂಗಳೂರಿನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಸಂಬಂಧಿಸಿದ 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಲಾಗಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ವೇಳೆ ಮಾತನಾಡಿದ … Continued

ಕೊವಿಡ್‌ ಲಸಿಕೆ: ೯೬ ಲಕ್ಷ ಆರೋಗ್ಯ ಕಾರ್ಯಕರ್ತರು,೭೮ ಲಕ್ಷ ಮಂಚೂಣಿ ಕೆಲಸಗಾರರಿಂದ ನೋಂದಣಿ

ನವ ದೆಹಲಿ: ಫೆಬ್ರವರಿ 3ರ ವರೆಗೆ ಒಟ್ಟು 96,28,179 ಆರೋಗ್ಯ ಕಾರ್ಯಕರ್ತರು ಮತ್ತು 78,51,249 ಮುಂಚೂಣಿ ಕೆಲಸಗಾರರು ಕೋವಿಡ್ -19 ಲಸಿಕೆಗಾಗಿ ನೋಂದಾಯಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ. ಅಂದಾಜು ಮೂರು ಕೋಟಿ ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರ ಲಸಿಕೆಗಾಗಿ ಕಾರ್ಯಾಚರಣಾ ವೆಚ್ಚವಾಗಿ ಮಾಡಬೇಕಾದ ಖರ್ಚು ಸುಮಾರು 80480 … Continued

ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸಹಕಾರಿ

ಬೆಂಗಳೂರು: ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಏರೋ ಏಂಡಿಯಾ ವೈಮಾನಿಕ ಪ್ರದರ್ಶನ ಸಹಕಾರಿಯಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 13ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ರಕ್ಷಣೆ ಮತ್ತು ವೈಮಾನಿಕ ವಲಯದಲ್ಲಿ ಭಾರತದ ಶಕ್ತಿ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಡಲು … Continued

ಜಮ್ಮು-ಕಾಶ್ಮೀರದಲ್ಲಿ ೪ಜಿ ಇಂಟರ್‌ನೆಟ್‌ ಸೇವೆ

ನವ ದೆಹಲಿ; 18 ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 4 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನಃ ಸ್ಥಾಪಿಸಲಾಗುತ್ತದೆ ಎಂದು ಯುಟಿಯ ವಿದ್ಯುತ್ ಮತ್ತು ಮಾಹಿತಿ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.೨೦೧೯ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹೈಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿತ್ತು.

ಸ್ಟಾರ್ಟ್‌ಅಪ್‌ಗಳಿಂದ ದೇಶದ ಆರ್ಥಿಕತೆಗೆ ಚಾಲನೆ :ರಾಜನಾಥ

ಬೆಂಗಳೂರು: 2020ರ ರಕ್ಷಣಾ ಆವೃತ್ತಿಯು ಸ್ಟಾರ್ಟ್ ಅಪ್‌ಗಳಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) 100 ಕೋಟಿ ರೂ.ಗಳ ವರೆಗೆ ಮೇಕ್-ಇನ್-ಇಂಡಿಯಾ ವೇದಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ, ಸ್ಟಾರ್ಟ್‌ ಅಪ್‌ಗಳಿಂದಲೇ ದೇಶದ ಆರ್ಥಿಕತೆಗೆ ಚಾಲನೆ ಸಿಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ. . ಮೂರು ದಿನಗಳ ಏರೋ ಇಂಡಿಯಾ … Continued

ಲೋಕಸಭೆ ಕಲಾಪ ಸೋಮವಾರ ಮುಂದೂಡಿಕೆ

ನವ ದೆಹಲಿ: ಕೃಷಿ ಕಾನೂನುಗಳ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿದ್ದು, ಲೋಕಸಭೆ ಕಲಾವನ್ನು ಫೆ.೮ಕ್ಕೆ ಮುಂದೂಡಲಾಯಿತು. ಪ್ರತಿಭಟನೆಯೊಂದಿಗೆ ವಿರೋಧ ಪಕ್ಷದ ಸದಸ್ಯರು ಮುಂದುವರಿದಿದ್ದರಿಂದ ಲೋಕಸಭಾ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು. ಶುಕ್ರವಾರ ಸಂಜೆ 4 ಗಂಟೆಗೆ ಸದನ ಆರಂಭವಾದ ನಂತರ ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಡಿಎಂಕೆ ಸದಸ್ಯರು ಸಬಾಪತಿಗಳ ಎದುರಿನ ಬಾವಿಗೆ ಬಂದು ಹೊಸ … Continued