ಹಿಜಾಬ್ ತೀರ್ಪು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿದ ತಮಿಳುನಾಡು ತೌಹೀದ್ ಜಮಾತ್‌ನ ಮೂವರು ಪದಾಧಿಕಾರಿಗಳ ಮೇಲೆ ಪ್ರಕರಣಗಳು ದಾಖಲು

ಮದುರೈ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ತಮಿಳುನಾಡು ತೌಹೀದ್ ಜಮಾತ್ ನ ಮೂವರು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಜಮಾತ್ ಇತ್ತೀಚೆಗೆ ಮಧುರೈನ ಕೋರಿಪಾಳ್ಯಂ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸಿತ್ತು. ಪದಾಧಿಕಾರಿಗಳೊಬ್ಬರ ಭಾಷಣ ಇದೀಗ ತಪ್ಪು ಕಾರಣಗಳಿಗಾಗಿ ವೈರಲ್ … Continued

ಜಪಾನ್ ಪ್ರಧಾನಿ ಭಾರತಕ್ಕೆ ಆಗಮನ: ಪ್ರಧಾನಿ ಮೋದಿ ಜೊತೆ ಶೃಂಗಸಭೆ

ನವದೆಹಲಿ: ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರು ಅಲ್ಪ ಸಮಯದ ಭೇಟಿಗಾಗಿ ನವದೆಹಲಿಗೆ ಆಗಮಿಸಿದ್ದಾರೆ. ಸಂಜೆ 5 ಗಂಟೆಗೆ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೃಂಗಸಭೆಯ ಮಾತುಕತೆ ನಡೆಸಲಿದ್ದಾರೆ. ಜಪಾನ್ ಪ್ರಧಾನಿ ಮಧ್ಯಾಹ್ನ 3:40 ರ ಸುಮಾರಿಗೆ ನವದೆಹಲಿಗೆ ಆಗಮಿಸಿದರು ಮತ್ತು ಭಾನುವಾರ ಬೆಳಿಗ್ಗೆ 8 ಗಂಟೆಗೆ ನಿರ್ಗಮಿಸಲಿದ್ದಾರೆ. … Continued

ಕುಡಿದ ಮತ್ತಿನಲ್ಲಿ ಕ್ಯಾಮರಾ ಮುಂದೆಯೇ ತನ್ನನ್ನು ತಾನೇ ಇರಿದುಕೊಂಡ ಯುವಕ-ಸಾವು

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಕಂಠಪೂರ್ತಿ ಕುಡಿದು ಕೈಯ್ಯಲ್ಲಿ ಚಾಕು ಹಿಡಿದುಕೊಂಡು ಹೋಳಿ ನೃತ್ಯ ಮಾಡುತ್ತ ತನಗೆ ತಾನೇ ಚಾಕು ಇರಿದುಕೊಂಡಿದ್ದು, ಗಾಯಗೊಂಡ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಘಟನೆಯ ವೀಡಿಯೋದಲ್ಲಿ ಕಂಠಪೂರ್ತಿ ಕುಡಿದಿರುವ ಗೋಪಾಲ (38) ಎಂಬಾತ ತನ್ನ ಸ್ನೇಹಿತರೊಂದಿಗೆ ಹೋಳಿ ಪೈರಿನ … Continued

ಇನ್ಮುಂದೆ ಎಟಿಎಂಗಳಲ್ಲಿ ಚಿನ್ನವೂ ಸಿಗಲಿದೆ..! ಭಾರತದ ಮೊದಲ ಚಿನ್ನ ನೀಡುವ ಎಟಿಎಂ ಶೀಘ್ರವೇ ಆರಂಭ

ಹೈದರಾಬಾದ್: ಈವರೆಗೆ ಹಣ ಮಾತ್ರ ನೀಡುತ್ತಿದ್ದ ಎಟಿಎಂನಲ್ಲಿ ಶೀಘ್ರವೇ ಚಿನ್ನವನ್ನೂ ಖರೀದಿಸಬಹುದು. ಭಾರತದ ಹೈದರಾಬಾದ್‌ನಲ್ಲಿ ಇದು ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ. ಗೋಲ್ಡ್‌ ಸಿಕ್ಕಾ ಕಂಪನಿಯು ಶೀಘ್ರದಲ್ಲೇ ಹೈದರಾಬಾದ್‌ನ ಗುಲ್ಜಾರ್ ಹೌಸ್‌, ಅಬಿಡ್ಸ್ ಮತ್ತು ಸಿಕಂದರಾಬಾದ್‌ನಲ್ಲಿ ಈ ಚಿನ್ನ ನೀಡುವ ಎಟಿಎಂಗಳನ್ನು ಸ್ಥಾಪಿಸಲು ಯೋಜಿಸಿದೆ ಮತ್ತು ಇದಕ್ಕೆ ಬರುವ ಪ್ರತಿಕ್ರಿಯೆಯನ್ನು ಅವಲಂಬಿಸಿ ದೇಶಾದ್ಯಂತ ಇದನ್ನು ವಿಸ್ತರಿಸಲು ಯೋಜಿಸಿದೆ. … Continued

ಆಸ್ತಿ ವಿವಾದ-ಟ್ಯಾಂಕ್ ನೀರು ಖಾಲಿ ಮಾಡಿ, ಹೊರಗಿಂದ ಕೊಠಡಿ ಲಾಕ್‌ ಮಾಡಿ ಮಗನ ಮನೆಗೇ ಬೆಂಕಿಯಿಟ್ಟ ವೃದ್ಧ: ಇಬ್ಬರು ಮೊಮ್ಮಕ್ಕಳ ಸಹಿತ ಮಗ, ಸೊಸೆ ಸಜೀವ ದಹನ

ತೊಡುಪ್ಪುಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹ ಶನಿವಾರ ದುರಂತ ಅಂತ್ಯ ಕಂಡಿದ್ದು, ವೃದ್ಧ ತಂದೆಯೇ ಮಗ ಮತ್ತು ಆತನ ಕುಟುಂಬ ಮಲಗಿದ್ದ ಕೋಣೆಗೆ ಬೀಗ ಹಾಕಿ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ. ಶುಕ್ರವಾರ ಮಧ್ಯರಾತ್ರಿ 12:45ಕ್ಕೆ ಚೀನಿಕುಝಿಯಿಲ್‌ನಲ್ಲಿ ಈ ಘಟನೆ ನಡೆದಿದೆ. … Continued

ವರ್ಲ್ಡ್​ ಹ್ಯಾಪಿನೆಸ್​ ದೇಶಗಳ ಪಟ್ಟಿ: ಫಿನ್​ಲ್ಯಾಂಡ್​ ಅತ್ಯಂತ ಸುಖಿ ದೇಶವಾದರೆ ಅಫ್ಘಾನಿಸ್ತಾನ ಅತ್ಯಂತ ‘ಅತೃಪ್ತಿಕರ’ ದೇಶ.. ಭಾರತ..?

ಹೆಲ್ಸಿಂಕಿ: ವೈಯಕ್ತಿಕ ಯೋಗಕ್ಷೇಮ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಬೆಂಬಲದ ಮಾನದಂಡಗಳ ಮೇಲೆ ನಿರ್ಧರಿಸಲಾಗುವ ಅತ್ಯಂತ ಸಂತೋಷದಾಯಕ ದೇಶದ ಪಟ್ಟಿಯಲ್ಲಿ ಫಿನ್​ಲ್ಯಾಂಡ್​ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ. ಈ ಪುಟ್ಟ ದೇಶ ಸತತವಾಗಿ ಐದನೇ ಬಾರಿಗೆ ಈ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಈ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ಅತೃಪ್ತಿಕರ ದೇಶ ಎಂದು ಅಫ್ಘಾನಿಸ್ತಾನ ಕರೆಯಿಸಿಕೊಂಡರೆ, ಲೆಬನಾನ್​ ನಂತರದ … Continued

ಕಾಂಗ್ರೆಸ್ ಒಂದೇ ಪಕ್ಷ, ಒಬ್ಬರೇ ಅಧ್ಯಕ್ಷರು: ಸೋನಿಯಾ ಗಾಂಧಿ ಭೇಟಿ ಬಳಿಕ ಗುಲಾಂ ನಬಿ ಆಜಾದ್ ಹೇಳಿಕೆ

ನವದೆಹಲಿ: ಭಿನ್ನಮತೀಯ 23 (ಜಿ-23) ಬಣ ಮತ್ತು ಪಕ್ಷದ ಹೈಕಮಾಂಡ್ ನಡುವಿನ ಹೊಂದಾಣಿಕೆಯ ಮಾತುಕತೆಗಳ ನಡುವೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ 10, ಜನಪಥ್‌ಗೆ ಆಗಮಿಸಿದ್ದರು. ಈ ವಾರದ ಆರಂಭದಲ್ಲಿ, ಸೋನಿಯಾ ಗಾಂಧಿ ಅವರು ಗುಲಾಂ ನಬಿ ಆಜಾದ್ ಅವರೊಂದಿಗೆ ಎರಡು ಬಾರಿ … Continued

ರಷ್ಯಾವನ್ನು ಧೈರ್ಯದಿಂದ ಎದುರಿಸಿ ನಿಂತ ಉಕ್ರೇನ್ ಅಧ್ಯಕ್ಷರ ಶೌರ್ಯ ಗೌರವಿಸಲು ಅಸ್ಸಾಂ ಮೂಲದ ಚಹಾ ಪುಡಿಗೆ ಝೆಲೆನ್ಸ್ಕಿ ಹೆಸರು..!

ಗುವಾಹತಿ: ಅಸ್ಸಾಂ ಮೂಲದ ಟೀ ಸ್ಟಾರ್ಟ್‌ಅಪ್‌ನವರು ರಷ್ಯಾದ ಆಕ್ರಮಣದ ವಿರುದ್ಧ ಶೌರ್ಯ ಮತ್ತು ಧೈರ್ಯ ತೋರಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹೆಸರಿನ ಚಹಾ ಪುಡಿಯ ಬ್ರ್ಯಾಂಡ್‌ ಪ್ರಾರಂಭಿಸಿದ್ದಾರೆ…! ಅಸ್ಸಾಂ ಚಹಾವು ಪ್ರಪಂಚದಾದ್ಯಂತ ಅದರ ದೃಢವಾದ ಸುವಾಸನೆ ಮತ್ತು ಬಲವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಐಷಾರಾಮಿ ಚಹಾಗಳಲ್ಲಿ ಪರಿಣತಿ ಹೊಂದಿರುವ ಗುವಾಹತಿಯ ಅರೋಮಿಕಾ ಟೀ ಮಾಲೀಕರಾದ … Continued

ಪಂಜಾಬ್: ಸಚಿವರಾಗಿ 10 ಶಾಸಕರಿಂದ ಇಂದು ಪ್ರಮಾಣ ವಚನ ಸ್ವೀಕಾರ

ಚಂಡೀಗಡ: ಪಂಜಾಬ್‌ನ ಕ್ಯಾಬಿನೆಟ್ ಮಂತ್ರಿಗಳಾಗಿ ಒಟ್ಟು 10 ಶಾಸಕರು ಸಚಿವರಾಗಿ ಮಾರ್ಚ್ 19 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಚಂಡೀಗಡದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಎಪಿ ಶಾಸಕರಾದ ಹರ್ಪಾಲ್ ಸಿಂಗ್ ಚೀಮಾ, ಡಾ. ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ ಮತ್ತು ಡಾ ವಿಜಯ್ ಸಿಂಗ್ಲಾ ಅವರು ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು … Continued

ಮಾರ್ಚ್ 25 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಪ್ರಮಾಣ ವಚನ

ಲಕ್ನೊ: ಯೋಗಿ ಆದಿತ್ಯನಾಥ ಅವರು ಮಾರ್ಚ್ 25 ರಂದು ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಸಮಾರಂಭವು ಮಾರ್ಚ್ 25 ರಂದು ಶುಕ್ರವಾರ ಸಂಜೆ 4 ಗಂಟೆಗೆ ಲಕ್ನೋದ ಭಾರತ … Continued