ಕೇರಳ ಹೈಕೋರ್ಟ್‌ನ ವರ್ಚುವಲ್‌ ವಿಚಾರಣೆಗೆ ಸ್ನಾನಗೃಹದಿಂದ ಹಾಜರಾದ ವ್ಯಕ್ತಿ..!

ತಿರುವನಂತಪುರಂ: ಕೋವಿಡ್‌ ಪ್ರಕರಣಗಳು ಉಲ್ಬಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ಆರಂಭಿಸಿದ ಬಳಿಕ ವಕೀಲರು ಮತ್ತು ದಾವೆದಾರರು ನ್ಯಾಯಾಲಯದ ಶಿಷ್ಟಾಚಾರ ಉಲ್ಲಂಘಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಕೇರಳ ಹೈಕೋರ್ಟ್‌ ಕೂಡ ಅಂತಹದ್ದೊಂದು ಘಟನೆಗೆ ಸೋಮವಾರ ಸಾಕ್ಷಿಯಾಯಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಸೋಮವಾರದಿಂದ ಹೈಕೋರ್ಟ್‌ ಸಂಪೂರ್ಣವಾಗಿ ಆನ್‌ಲೈನ್‌ ಕಲಾಪಕ್ಕೆ ಹೊರಳಿದ್ದು ನ್ಯಾ. ವಿ … Continued

ರೋಬೋಟ್-ಮೇಕರ್‌ಗೆ ಮುಖೇಶ್ ಅಂಬಾನಿ 132 ಮಿಲಿಯನ್‌ ಡಾಲರ್‌ ಹೂಡಿಕೆ

ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತೀಯ ರೊಬೊಟಿಕ್ಸ್ ಸ್ಟಾರ್ಟಪ್ ಅನ್ನು ಖರೀದಿಸುತ್ತಿದೆ. ಇ-ಕಾಮರ್ಸ್ ಗೋದಾಮುಗಳು ಮತ್ತು ಇಂಧನ ಉತ್ಪಾದನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ರೋಬೋಟ್‌ಗಳನ್ನು ಬಳಸುವ ಆಡ್ವೆರ್ಬ್ ಟೆಕ್ನಾಲಜೀಸ್‌ನಲ್ಲಿನ ಬಹುಪಾಲು ಪಾಲಿಗಾಗಿ ರಿಲಯನ್ಸ್ $132 ಮಿಲಿಯನ್ ಪಾವತಿಸಿದೆ ಎಂದು ಸ್ಟಾರ್ಟಪ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಗೀತ್ ಕುಮಾರ್ ಮಂಗಳವಾರ ಫೋನ್ … Continued

ಮುಲಾಯಂ ಸಿಂಗ್ ಯಾದವ್ ಸೊಸೆ ಇಂದು ಬಿಜೆಪಿಗೆ ಸೇರ್ಪಡೆ..?: ಬಿಜೆಪಿ ನಾಯಕನ ಹೇಳಿಕೆ

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಇಂದು ಅಥವಾ ನಾಳೆ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮಂಗಳವಾರ ರಾತ್ರಿ ಹೇಳಿದ್ದಾರೆ. ಯಾದವ್ ಅವರು ಬಿಜೆಪಿಗೆ ಸೇರ್ಪಡೆಯಾದರೆ, ರಾಜ್ಯ ಚುನಾವಣೆಗೆ ಕೆಲವೇ ವಾರಗಳಿರುವಾಗ ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ. ಮುಲಾಯಂ ಸಿಂಗ್ … Continued

ಐಎನ್‌ಎಸ್‌ ರಣವೀರ್ ಹಡಗಿನಲ್ಲಿ ಸ್ಫೋಟ : ನೌಕಾಪಡೆಯ ಮೂವರು ಸಾವು

ನವದೆಹಲಿ: ಭಾರತೀಯ ನೌಕಾಪಡೆಯ ದಾಳಿ ನೌಕೆ ಐಎನ್​ಎಸ್ ರಣವೀರ್​ನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ, ಹಲವರಿಗೆ ಗಾಯವಾಗಿದೆ. ಮುಂಬೈನಲ್ಲಿ ನೌಕಾಪಡೆಯ ಧಕ್ಕೆಯಲ್ಲಿ ನಡೆದ ದುರಂತದಲ್ಲಿ ಮೂವರುಮೃತಪಟ್ಟಿದ್ದನ್ನು ರಕ್ಷಣಾ ಇಲಾಖೆಯು ಪತ್ರಿಕಾ ಹೇಳಿಕೆಯಲ್ಲಿ ದೃಢಪಡಿಸಿದೆ. ಯುದ್ಧನೌಕೆಯ ಕಂಪಾರ್ಟ್​ಮೆಂಟ್​ ಒಂದರಲ್ಲಿ ಸ್ಫೋಟ ಸಂಭವಿಸಿದೆ. ಆದರೆ ನೌಕೆಗೆ ದೊಡ್ಡಮಟ್ಟದಲ್ಲಿ ಹಾನಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೌಕೆಯಲ್ಲಿದ್ದ … Continued

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.. ಪ್ರಾಯೋಗಿಕ ಪರೀಕ್ಷೆಗೂ ದಿನಾಂಕ ನಿಗದಿ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ (PUC Board) 2021-22 ನೇ ಸಾಲಿನ ದ್ವೀತಿಯ ಪಿಯುಸಿ (Second PUC)ಯ ತಾತ್ಕಾಲಿಕ ವೇಳಾಪಟ್ಟಿ (Exam Timetable) ಬಿಡುಗಡೆ ಮಾಡಿದೆ. ಆ ಪ್ರಕಾರ ಏಪ್ರಿಲ್ 16ರಿಂದ ಮೇ 4ರವರೆಗೆ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದೆ. ಏಪ್ರಿಲ್​ 14 ಗಣಿತ, ಏಪ್ರಿಲ್​ 18 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಏ.20ರಂದು ಇತಿಹಾಸ, ಭೌತಶಾಸ್ತ್ರ, … Continued

ಭಾರತೀಯ ಸೇನೆಯಿಂದ ಹಿಮಪಾತದಲ್ಲಿ ಸಿಲುಕಿದ್ದ 14 ಮಂದಿ ರಕ್ಷಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಹಿಮ ಕುಸಿತದಲ್ಲಿ ಸಿಲುಕಿದ್ದ 14 ನಾಗರಿಕರನ್ನು ಭಾರತೀಯ ಸೇನೆ ರಕ್ಷಿಸಿದೆ. ಹಿಮಪಾತದಲ್ಲಿ 14 ಜನರು ಸಿಲುಕಿಕೊಂಡಿದ್ದರು. ಅವರನ್ನು ಭಾರತೀಯ ಸೈನಿಕರು ರಕ್ಷಣೆ ಮಾಡಿದ್ದು, ಅವರನ್ನು ಹತ್ತಿರದ ಸೇನಾ ಶಿಬಿರಕ್ಕೆ ಕರೆದೊಯ್ದು ಆಹಾರ ನೀಡಲಾಗಿದೆ. ಸಿಲುಕಿಕೊಂಡವರಲ್ಲಿ ಹೃದ್ರೋಗಿಗಳು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಹ ಇದ್ದರು. ಪ್ರಯಾಣಿಕರು ತುಂಬಿರುವ … Continued

ಅಕ್ರಮ ಮರಳುಗಾರಿಕೆ ಪ್ರಕರಣ: ಪಂಜಾಬ್‌ ಸಿಎಂ ಚನ್ನಿ ಸೋದರಳಿಯ-ಇತರರ ಮನೆಗಳ ಮೇಲೆ ಇಡಿ ದಾಳಿ

ಚಂಡೀಗಢ: ಅಕ್ರಮ ಮರಳು ಗಣಿಗಾರಿಕೆ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಇರುವಾಗ ಜಾರಿ ನಿರ್ದೇಶನಾಲಯ ಮಂಗಳವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ತನಿಖಾ ಸಂಸ್ಥೆಯು ಇಂದು ಮುಂಜಾನೆ ಮೊಹಾಲಿಯಲ್ಲಿರುವ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ … Continued

ಆಘಾತಕಾರಿ ಘಟನೆ: ಪ್ರಾಣಿಬಲಿ ಕೊಡುವ ವೇಳೆ ಮೇಕೆ ಬದಲು ಮನುಷ್ಯನನ್ನೇ ಕತ್ತರಿಸಿದ ಕುಡುಕ..!

ಅಮರಾವತಿ (ಆಂಧ್ರಪ್ರದೇಶ): ಕುಡಿತದ ಅಮಲಿನಲ್ಲಿ ಬಲಿಕೊಡಬೇಕಿದ್ದ ಮೇಕೆಯ ಬದಲು ಮತ್ತೊಬ್ಬ ವ್ಯಕ್ತಿಯ ಕತ್ತು ಕೊಯ್ದಿರುವ ಆಘಾತಕಾರಿ ಘಟನೆ ನಡೆದಿದೆ.ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ ಸಂಕ್ರಾಂತಿ ಆಚರಣೆ ವೇಳೆ ಈ ಘಟನೆ ನಡೆದಿದೆ. ಪೋಲೀಸರ ಪ್ರಕಾರ, ಅಮಲೇರಿದ ಸ್ಥಿತಿಯಲ್ಲಿದ್ದ ಚಲಪತಿ ಎಂಬಾತ ಮೇಕೆಯನ್ನು ಕಡಿಯುವ ಬದಲು ಮೇಕೆಯನ್ನು ಹಿಡಿದಿದ್ದ ವ್ಯಕ್ತಿಯೊಬ್ಬನನ್ನು ಹಿಡಿದಿದ್ದ ವ್ಯಕ್ತಿಯೊಬ್ಬನ ಕುತ್ತಿಗೆಯನ್ನು ಕತ್ತರಿಸಿದ್ದಾನೆ.ತೀವ್ರ ರಕ್ತಸ್ರಾವದಿಂದ … Continued

ಭಾರತದಲ್ಲಿ ಹೊಸದಾಗಿ 2.38 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 20 ಸಾವಿರ ಕಡಿಮೆ

ನವದೆಹಲಿ: , ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ (ಮಂಗಳವಾರ) 2,38,018 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ. ಇದು ಭಾರತದ ಪ್ರಸ್ತುತ ಸಕ್ರಿಯ ಪ್ರಕರಣವನ್ನು 17,36,628 ಕ್ಕೆ ಒಯ್ದಿದೆ. ಸಕ್ರಿಯ ಪ್ರಕರಣಗಳು ಪ್ರಸ್ತುತ ಶೇಕಡಾ 4.62 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 310 ಕೊರೊನಾ ರೋಗಿಗಳು ಪ್ರಾಣ … Continued

ಕೋವಿಡ್‌-19 ಗರಿಷ್ಠ ದಾಟಿದ್ದೇವೆಯೇ?…ಕೊರೊನಾ ಉಲ್ಬಣದ ಮಧ್ಯೆಯೇ ಹಲವು ದೊಡ್ಡ ನಗರಗಳಲ್ಲಿ ಸೋಂಕು ಇಳಿಮುಖ

ನವದೆಹಲಿ: ಭಾರತದ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ, ಹಲವಾರು ಪ್ರಮುಖ ನಗರಗಳು ಈಗ ಇಳಿಕೆಯ ಪ್ರವೃತ್ತಿಯನ್ನು ವರದಿ ಮಾಡಲು ಪ್ರಾರಂಭಿಸಿವೆ. ಸೋಮವಾರ 31,111 ಹೊಸ ಪ್ರಕರಣಗಳನ್ನು ವರದಿ ಮಾಡಿರುವ ಮಹಾರಾಷ್ಟ್ರ – ಹಿಂದಿನ ದಿನಕ್ಕಿಂತ 10 ಸಾವಿರ ಕಡಿಮೆ ವರದಿ ಮಾಡಿದೆ. ಪಶ್ಚಿಮ ಬಂಗಾಳದಂತೆ ದೆಹಲಿ ಕೂಡ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವನ್ನು ವರದಿ ಮಾಡಿದೆ. ಭಾನುವಾರ … Continued