ತಾಲಿಬಾನಿಗಳಿಂದ ಭಾರತೀಯ ಫೋಟೊ ಜರ್ನಲಿಸ್ಟ್‌ ಡ್ಯಾನಿಶ್ ಸಿದ್ಧಿಕಿ ಕ್ರೂರ ಹತ್ಯೆ: ವರದಿ

ವಾಷಿಂಗ್ಟನ್: ರಾಯಿಟರ್ಸ್‌ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಫೋಟೊ ಜರ್ನಲಿಸ್ಟ್‌, ಡ್ಯಾನಿಷ್ ಸಿದ್ದಕಿ ಅಘಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸತ್ತಿಲ್ಲ, ಬದಲಾಗಿ ಅವರ ಗುರುತನ್ನು ಪರಿಶೀಲಿಸಿದ ನಂತರ ತಾಲಿಬಾನಿಗಳು ‘ಕ್ರೂರವಾಗಿ ಹತ್ಯೆ ಮಾಡಿದ್ದಾರೆ’ ಎಂದು ಅಮೆರಿಕ ಮೂಲದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ವರದಿ ತಿಳಿಸಿದೆ. 38 ವರ್ಷದ ಸಿದ್ದಿಕಿ ಅವರು ಅಫಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ … Continued

ಟೋಕಿಯೊ ಒಲಿಂಪಿಕ್ಸ್‌: ಭಾರತಕ್ಕೆ 2 ನೇ ಪದಕದ ಭರವಸೆ , ಮಹಿಳೆಯರ 69 ಕೆಜಿ ಬಾಕ್ಸಿಂಗ್ ಸೆಮಿಫೈನಲ್ ಗೆ ಲೋವ್ಲಿನಾ ಬೊರ್ಗೊಹೈನ್‌

ಟೋಕಿಯೋ: ಭಾರತೀಯ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (69 ಕೆಜಿ) ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ನೀಡುವ ಭರವಸೆ ನೀಡಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ತೈಪೆಯ ನಿಯಾನ್-ಚಿನ್ ಚೆನ್ ಅವರನ್ನು 4-1 ಅಂಕಗಳಿಂದ ಸೋಲಿಸಿದರು. ಮೀರಾಬಾಯಿ ಚಾನು ಕಳೆದ ಶನಿವಾರ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ … Continued

ರಾಜ್ ಕುಂದ್ರಾ ಪ್ರಕರಣ:ಶಿಲ್ಪಾ ಶೆಟ್ಟಿಯಿಂದ ಮಾಧ್ಯಮಗಳ ವಿರುದ್ಧ ಬಾಂಬೆ ಹೈಕೋರ್ಟ್​​ನಲ್ಲಿ ಮಾನಹಾನಿ ಮೊಕದ್ದಮೆ

ಮುಂಬೈ: ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ತಡೆ ಕೋರಿ ವಿವಿಧ ಮಾಧ್ಯಮ ಸಂಸ್ಥೆಗಳು / ಸುದ್ದಿ ವಾಹಿನಿಗಳ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪರಿಣಾಮ್ ಲಾ ಅಸೋಸಿಯೇಟ್ಸ್ ಮೂಲಕ ಸಲ್ಲಿಸಿದ ತನ್ನ ಮೊಕದ್ದಮೆಯಲ್ಲಿ, ಮಾಧ್ಯಮಗಳು ಸುದ್ದಿಗಳನ್ನು ಸಂವೇದನಾಶೀಲಗೊಳಿಸುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸುವ … Continued

ಡ್ರೋನ್ ದಾಳಿ ಹಿಂದೆ ಪಾಕಿಸ್ತಾನದಲ್ಲಿರುವ ಚೀನಿಯರ ಕೈವಾಡ: ಬಿಜೆಪಿ

ಜಮ್ಮುವಿನ ಅಖ್ನೂರ್ ಸೆಕ್ಟರ್‌ನಲ್ಲಿ ಜೋಡಿಸಲಾದ ಡ್ರೋನ್ ಅನ್ನು ಹೊಡೆದುರುಳಿಸಿದ ಕೆಲವು ದಿನಗಳ ನಂತರ, ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ “ಡ್ರೋನ್ ದಾಳಿಗೆ” ಚೀನಾವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಚೀನಿಯರು ಪಾಕಿಸ್ತಾನದಲ್ಲಿ ಕುಳಿತಿದ್ದಾರೆ ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಒಂದೆಡೆ, ನಿಯಂತ್ರಣ ರೇಖೆ ಅಥವಾ ಅಂತಾರಾಷ್ಟ್ರೀಯ ಗಡಿಯಲ್ಲಿ ಶೆಲ್ ದಾಳಿ ಅಥವಾ ಗುಂಡಿನ … Continued

ಭಾರತದ ಪದಕದ ಭರವಸೆಯ ಬಾಕ್ಸರ್‌ ಮೇರಿ ಕೋಮ್ ಗೆ ಸೋಲು

ಟೋಕಿಯೊ:ಮಹಿಳೆಯರ ಬಾಕ್ಸಿಂಗ್‌ನಲ್ಲಿ ಭಾರತದ ಭರವಸೆಯಾಗಿದ್ದ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್, ಟೋಕಿಯೊ ಒಲಿಂಪಿಕ್ಸ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿ ಹೊರಬಿದ್ದಿದ್ದಾರೆ. ಮಹಿಳೆಯರ 51 ಕೆ.ಜಿ.ವಿಭಾಗದಲ್ಲಿ 16ರ ಸುತ್ತಿನ ಹೋರಾಟದಲ್ಲಿ ಮೇರಿ ಕೋಮ್, ಕೊಲಂಬಿಯಾದ ಇಂಗ್ರಿಟ್‌ ವಲೆನ್ಸಿಯಾ ವಿರುದ್ಧ 2-3 ಅಂತರದಿಂದ ಸೋಲು ಅನುಭವಿಸಿದರು. ಬಹುತೇಕ ತಮ್ಮ ಕೊನೆಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ 38 ವರ್ಷದ ಮೇರಿ … Continued

ತವರೂರು ಹುಬ್ಬಳ್ಳಿಯಲ್ಲಿ ಒಬ್ಬಂಟಿಯಾದ ಸಿಎಂ ಬೊಮ್ಮಾಯಿ: ಚರ್ಚೆಗೆ ಗ್ರಾಸ..!

ಹುಬ್ಬಳ್ಳಿ:ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರಿಂದ ಸ್ವಪಕ್ಷೀಯರೇ ದೂರ ಉಳಿದ ಕಾರಣ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿಯೇ ಏಕಾಂಗಿಯಾಗಿದ್ದಾರಾ ಎಂಬ ಅನುಮಾನ ಮೂಡುವಂತೆ ಮಾಡಿದೆ. ಮುಖ್ಯಮಂತ್ರ ಸ್ಥಾನಕ್ಕೇರಿದ ಬಳಿಕ ಇದೇ ಮೊದಲ ಬಾರಿಗೆ ಜನಿಸಿದ ಊರಿಗೆ ಭೇಟಿ ನೀಡಿದ್ದ ಬೊಮ್ಮಾಯಿ ಆಗಮನದ ವೇಳೆ ಧಾರವಾಡ ಜಿಲ್ಲೆಯ ಬಿಜೆಪಿಯ ಬೆರಳೆಣಿಕೆ ಮುಖಂಡರು ಹಾಜರಿದ್ದಿದ್ದು … Continued

ಕೇಂದ್ರದ ಮಹತ್ವದ ನಿರ್ಧಾರ.. ವೈದ್ಯಕೀಯ ಸೀಟು: ಒಬಿಸಿಗೆ ಶೇ. 27, ಆರ್ಥಿಕ ದುರ್ಬಲ ವರ್ಗಕ್ಕೆ ಶೇ. 10 ಮೀಸಲಾತಿ ಪ್ರಕಟ

ನವದೆಹಲಿ: 2021-22ನೇ ಸಾಲಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅಖಿಲ ಭಾರತ ಕೋಟಾದಲ್ಲಿ ಒಬಿಸಿಗಳಿಗೆ ಶೇ. 27 ಮತ್ತು ಆರ್ಥಿಕ ದುರ್ಬಲ ವರ್ಗಕ್ಕೆ(ಇಡಬ್ಲ್ಯೂಎಸ್) ಶೇ. 10 ರಷ್ಟು ಮೀಸಲಾತಿಯನ್ನು ಸರ್ಕಾರ ಗುರುವಾರ ಪ್ರಕಟಿಸಿದೆ. ಕಳೆದ ಸೋಮವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀರ್ಘಕಾಲದಿಂದ ಬಾಕಿ ಇರುವ ಈ … Continued

7 ಕೋಟಿ ದಾಟಿದ ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ, ಒಂದೇ ವರ್ಷದಲ್ಲಿ ಒಂದು ಕೋಟಿ​ ಹೆಚ್ಚಳ..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್​ ಅಕೌಂಟ್ನಲ್ಲಿ ಫಾಲೋವರ್ಸ್ ಸಂಖ್ಯೆ 7 ಕೋಟಿ (70 ಮಿಲಿಯನ್​) ದಾಟಿದ್ದು, ಇದು ಹೊಸ ಮೈಲಿಗಲ್ಲಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣ ಗಳಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ಸಕ್ರಿಯ ರಾಜಕಾರಣಿಗಳ ಪಟ್ಟಿಯಲ್ಲಿ ಮೋದಿ ಅಗ್ರಸ್ಥಾನ ಹೊಂದಿದ್ದಾರೆ. ನರೇಂದ್ರ ಮೋದಿಯವರು 2009ರಲ್ಲಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗಿನ ಸಂದರ್ಭದಲ್ಲಿ ಟ್ವಿಟರ್​ ಬಳಕೆ … Continued

ಭಾರತದಲ್ಲಿ 43,509 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಚೇತರಿಕೆ ಪ್ರಮಾಣ 97% ಕ್ಕಿಂತ ಹೆಚ್ಚು

ನವದೆಹಲಿ: ಭಾರತವು ಗುರುವಾರ 43,509 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ದೇಶದ ಸಕ್ರಿಯ ಪ್ರಕರಣಗಳನ್ನು ಇದು 4.03 ಲಕ್ಷಕ್ಕೂ ಹೆಚ್ಚಕ್ಕೆ ತೆಗೆದುಕೊಂಡು ಹೋಗಿದೆ. ಭಾರತದ ಕೋವಿಡ್ ಚೇತರಿಕೆ ದರ ಈಗ 97.38% ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ದೇಶವು 640 ಸಾವುಗಳನ್ನು ವರದಿ ಮಾಡಿದೆ. 43,000 ಹೊಸ ಕೋವಿಡ್ -19 ಪ್ರಕರಣಗಳ ಹೊರತಾಗಿ, … Continued

ಆಂತರಿಕ ವ್ಯಾಪಾರ ನಿಯಮ ಉಲ್ಲಂಘನೆ: ಸೆಬಿಯಿಂದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ 3 ಲಕ್ಷ ರೂ.ದಂಡ

ಮುಂಬೈ: ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಸಂಸ್ಥೆ ವಿಯಾನ್ ಇಂಡಸ್ಟ್ರೀಸ್ಗೆ ಆಂತರಿಕ ವಹಿವಾಟಿನ ಬಗ್ಗೆ ಸೆಬಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 3 ಲಕ್ಷ ರೂ.ದಂಡ ವಿಧಿಸಿದೆ. ಶಿಲ್ಪಾ ಶೆಟ್ಟಿ ಈ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದರು ಮತ್ತು … Continued