ಕೋವಿಡ್‌-19 ಮೂರನೇ ಅಲೆ ಭಯದ ಮಧ್ಯೆ ಮುಂದಿನ 100 ದಿನಗಳು ನಿರ್ಣಾಯಕ’ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೋವಿಡ್‌ -19 ರ ಮೂರನೇ ಅಲೆಯ ಭೀತಿಯ ಮಧ್ಯೆ, ಮುಂದಿನ 100 ದಿನಗಳು ನಿರ್ಣಾಯಕ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ನೀತಿ ಆಯೋಗದ ಸದಸ್ಯ-ಆರೋಗ್ಯದ ಡಾ.ವಿ.ಕೆ.ಪಾಲ್‌ ಮಾತನಾಡಿ, ಒಟ್ಟಾರೆಯಾಗಿ, ಜಗತ್ತು ಮೂರನೇ ಅಲೆಯತ್ತ ಸಾಗುತ್ತಿದೆ ಮತ್ತು ಮೂರನೇ ಅಲೆಯ ಬಗ್ಗೆ ಡಬ್ಲ್ಯೂಎಚ್‌ಒ ಎಚ್ಚರಿಕೆಯನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದರು. ಭಾರತೀಯರು ಜವಾಬ್ದಾರರಾಗಿರಬೇಕು … Continued

ನಮಗೆ ಭಯ ಇರದವರು ಬೇಕು, ಹೆದರುವವರು ಆರ್​ಎಸ್​ಎಸ್​​ಗೆ ಹೋಗಬಹುದು’:ಪಕ್ಷ ತೊರೆದವರಿಗೆ ರಾಹುಲ್ ಗಾಂಧಿ ಟಾಂಗ್‌

ನವದೆಹಲಿ: ಭಯ ಇರದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕು. ಪಕ್ಷದಲ್ಲಿ ಇರುವುದಕ್ಕೆ ಭಯಪಡುವವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದ ಸಾಮಾಜಿಕ ಜಾಲತಾಣದ ತಂಡದೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ. ತನ್ಮೂಲಕ, ಕಾಂಗ್ರೆಸ್ ಪಕ್ಷ ತೊರೆದ ಹಾಗೂ ಪಕ್ಷಕ್ಕೆ ಸಮಸ್ಯೆ ಉಂಟಾಗುವಂತೆ ವ್ಯವಹರಿಸುತ್ತಿರುವ ನಾಯಕರಿಗೆ ಕಟು … Continued

ಮುಂಬೈ: ಟಿ-ಸೀರೀಸ್ ಎಂಡಿ ಭೂಷಣ್ ಕುಮಾರ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು: ಸುಳ್ಳು, ಆಧಾರ ರಹಿತ ಎಂದ ಕಂಪನಿ

ದಿವಂಗತ ಗುಲ್ಶನ್ ಕುಮಾರ್ ಅವರ ಪುತ್ರ ಹಾಗೂ ಬಾಲಿವುಡ್ ನಿರ್ಮಾಪಕ ಮತ್ತು ಟಿ-ಸೀರೀಸ್ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಭೂಷಣ್ ಕುಮಾರ್ ಅವರು ಮಹಿಳೆಯೊಬ್ಬರಿಗೆ ಉದ್ಯೋಗ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ … Continued

ಟಿ- 20 ವಿಶ್ವಕಪ್ ಗುಂಪು ಪ್ರಕಟಿಸಿದ ಐಸಿಸಿ, ಒಂದೇ ಗುಂಪಿನಲ್ಲಿ ಭಾರತ-ಪಾಕಿಸ್ತಾನ

ಅಕ್ಟೋಬರ್ 17 ರಿಂದ ನವೆಂಬರ್ 14 ರ ವರೆಗೆ .ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ ನಲ್ಲಿ ಬಿಸಿಸಿಐ ಆಯೋಜಿಸಲಿರುವ ಐಸಿಸಿ ಪುರುಷರ ಟಿ- 20 ವಿಶ್ವಕಪ್ 2021 ರ ಗುಂಪುಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಭಾರತ ಪ್ರತಿಸ್ಪರ್ಧಿ ಪಾಕಿಸ್ತಾನ್‌ ಒಂದೇ ಗುಂಪಿನಲ್ಲಿದೆ. ಗ್ರೂಪ್ 2 ರಲ್ಲಿ ಮಾಜಿ … Continued

ಕಂದಹಾರ್‌: ತಾಲಿಬಾನ್ ದಾಳಿಯಲ್ಲಿ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೋ ವರದಿಗಾರ ಡ್ಯಾನಿಶ್ ಸಿದ್ದಿಕಿ ಸಾವು

ಕಾಬೂಲ್‌: ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ತಾಲಿಬಾನ್‌ ನಡೆಸಿದ ಘರ್ಷಣೆಯ ಸಂದರ್ಭ ಭದ್ರತಾ ಪಡೆಯೊಂದಿಗೆ ಇದ್ದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಗುರುವಾರ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್‌ಜೇ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ನಿನ್ನೆ ರಾತ್ರಿ ಕಂದಹಾರ್‌ನಲ್ಲಿ ಸ್ನೇಹಿತ ಡ್ಯಾನಿಶ್ … Continued

ಜುಲೈ 20ಕ್ಕೆ ದ್ವಿತೀಯ ಪಿಯು ಫಲಿತಾಂಶ, ರಿಜಿಸ್ಟರ್​ ನಂಬರ್​ ಇಲ್ಲದೆ ಫಲಿತಾಂಶ​ ನೋಡುವುದು ಹೇಗೆ?

ಬೆಂಗಳೂರು:ಕರ್ನಾಟಕದ ದ್ವಿತೀಯ ಪಿಯು ಫಲಿತಾಂಶಗಳನ್ನು ಜುಲೈ 20 ರಂದು ಪ್ರಕಟಿಸಲಾಗುವುದು ಎಂದು ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆ (ಡಿಪಿಯುಇ) ಹೇಳಿದೆ ಕೊರೊನಾದಿಂದ ಪರೀಕ್ಷೆ ರದ್ದಾಗಿರುವ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 20 ರಂದು ಪ್ರಕಟವಾಗಲಿದೆ. ಈಗಾಗಲೇ ಫಲಿತಾಂಶ ಪ್ರಕಟ ಮಾಡಲು ಪಿಯುಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ. ಜುಲೈ 20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು … Continued

ಹೊಸ ಐಟಿ ನಿಯಮ: ಒಂದು ತಿಂಗಳಲ್ಲಿ 20 ಲಕ್ಷ ಭಾರತೀಯ ಖಾತೆ ನಿಷೇಧಿಸಿದ ವಾಟ್ಸಾಪ್‌…!

ನವದೆಹಲಿ; ಮೇ 15ರಿಂದ – ಜೂನ್ 15, 2021 ರ ಅವಧಿಯಲ್ಲಿ ವಾಟ್ಸಾಪ್‌ 20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಭಾರತದ ಹೊಸ ಐಟಿ ನಿಯಮಗಳ ಅಡಿಯಲ್ಲಿ ಪ್ರಕಟವಾದ ತನ್ನ ಮೊದಲ ಮಾಸಿಕ ಅನುಸರಣೆ ವರದಿಯಲ್ಲಿ ತಿಳಿಸಿದೆ. ದೇಶದ ಹೊಸ ಮಧ್ಯವರ್ತಿ ಮಾರ್ಗಸೂಚಿಗಳ ಅಡಿಯಲ್ಲಿ, ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು … Continued

ಕಿಡ್ನಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾದ ದಂಪತಿ ಕೈಯಿಂದಲೇ ಹೋಯ್ತು ಬರೋಬ್ಬರಿ 40 ಲಕ್ಷ ರೂ.ಗಳು..!

ಹೈದ್ರಾಬಾದ್: ದಂಪತಿ ತಾವು ಮಾಡಿಕೊಂಡಿದ್ದ ಸಾಲ ತೀರಿಸಲು ಹಣವಿಲ್ಲದೆ ಕಿಡ್ನಿ ಮಾರಲು ಮುಂದಾಗಿ ಅದರಲ್ಲಿಯೂ 40 ಲಕ್ಷ ಕಳೆದುಕೊಂಡು ಮೋಸ ಹೋದ ಘಟನೆ ಹೈದರಬಾದ್‍ನಲ್ಲಿ ವರದಿಯಾಗಿದೆ. ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದ ದಂಪತಿ ವ್ಯಾಪಾರ ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮ ಆದಾಯ ಬಹುತೇಕ ನಿಂತು ಹೋಗಿತ್ತು. ಹೀಗಾಗಿ 1.5 ಲಕ್ಷ … Continued

ಬರೇಲಿ: ಮೊಬೈಲ್‌ ಕದ್ದ ಶಂಕೆ ಮೇರೆಗೆ ಐವರು ಮಕ್ಕಳಿಗೆ ಧಳಿಸಿ, ವಿದ್ಯುತ್‌ ಶಾಕ್‌ ನೀಡಿದ ಡೈರಿ ಮಾಲೀಕ..!

ಬರೇಲಿ: ತನ್ನ ಮೊಬೈಲ್ ಫೋನ್ ಕದಿಯುತ್ತಿದ್ದಾರೆಂದು ಆರೋಪಿಸಿದ ಡೈರಿ ಮಾಲೀಕರಿಂದ ಹಲವಾರು ಗಂಟೆಗಳ ಕಾಲ ಕಟ್ಟಿಹಾಕಿ, ಹೊಡೆದು ವಿದ್ಯುತ್ ಶಾಕಿಗೆ ಒಳಪಟ್ಟ ಐದು ಮಕ್ಕಳನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ರಕ್ಷಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಆರೋಪಿ ಅವ್ನೇಶ್ ಕುಮಾರ್ ಯಾದವ್ ಅವರು ಬಾರದಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರ ಪ್ರದೇಶದಲ್ಲಿ … Continued

ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಸುರೇಖಾ ಸಿಕ್ರಿ ಹೃದಯ ಸ್ತಂಭನದಿಂದ ನಿಧನ

ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಸುರೇಖಾ ಸಿಕ್ರಿ ತಮ್ಮ 75 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಸಿಕ್ರಿಯ ವ್ಯವಸ್ಥಾಪಕರು ನಿಧನವನ್ನು ದೃಢಪಡಿಸಿದ್ದಾರೆ. ಬಾಲಿಕಾ ವಾಧು ಚಿತ್ರದಲ್ಲಿ ಕಲ್ಯಾಣಿ ದೇವಿ ಎಂದು ಮನೆಯ ಮಾತಾಗಿದ್ದ ಸಿಕ್ರಿ ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ ಅನೇಕ ಪಾತ್ರಗಳ ಮೂಲಕ ಹೆಸರು ಗಳಿಸಿದ್ದರು. . ಸಿಕ್ರಿ … Continued