ಪಾಕಿಸ್ತಾನದಲ್ಲಿ ಉತ್ಖನನದ ವೇಳೆ 2300 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಬೌದ್ಧ ದೇವಾಲಯ ಪತ್ತೆ..!

ಪಾಕಿಸ್ತಾನದ ಪೇಶಾವರದಲ್ಲಿ ಉತ್ಖನನದ ಸಮಯದಲ್ಲಿ, ಪುರಾತತ್ತ್ವಜ್ಞರು 2300 ವರ್ಷಗಳಷ್ಟು ಹಳೆಯದಾದ ಭಗವಾನ್ ಬುದ್ಧನ ಅತ್ಯಂತ ಪುರಾತನ ದೇವಾಲಯವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವರದಿಯ ಪ್ರಕಾರ, ಇಟಾಲಿಯನ್ ಪುರಾತತ್ವಶಾಸ್ತ್ರಜ್ಞರ ತಂಡವು ವಾಯವ್ಯ ಪಾಕಿಸ್ತಾನದಲ್ಲಿ 2,300 ವರ್ಷಗಳಷ್ಟು ಹಳೆಯದಾದ ಬೌದ್ಧರ ಅವಧಿಯ ಅಪ್ಸಿಡಾಲ್ ದೇವಾಲಯ ಮತ್ತು ಇತರ ಕೆಲವು ಅಮೂಲ್ಯ ಕಲಾಕೃತಿಗಳನ್ನು ಕಂಡುಹಿಡಿದಿದೆ. ಈ ಉತ್ಖನನಗಳನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ … Continued

ಬೆಂಕಿ ಹೊತ್ತಿ ಉರಿಯುತ್ತಿರುವ ಎತ್ತರದ ಕಟ್ಟಡದ ಕಿಟಕಿಯಿಂದ ಇಬ್ಬರು ಹದಿಹರೆಯದವರು ನೇತಾಡಿ ಪಾರಾದ ಭಯಾನಕ ದೃಶ್ಯ ಸೆರೆ…ವೀಕ್ಷಿಸಿ

ಉರಿಯುತ್ತಿರುವ ಕಟ್ಟಡದ ಕಿಟಕಿಗೆ ಇಬ್ಬರು ಹದಿಹರೆಯದವರು ನೇತಾಡುತ್ತಿರುವ ಭಯಾನಕ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್‌ನ ಈಸ್ಟ್ ವಿಲೇಜ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, 13 ಮತ್ತು 18 ವರ್ಷ ವಯಸ್ಸಿನ ಇಬ್ಬರು ಹದಿಹರೆಯದವರು ಉರಿಯುತ್ತಿರುವ ಕಟ್ಟಡದಿಂದ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸಿದೆ. ವಿಡಿಯೊ ಕ್ಲಿಪ್ ನಲ್ಲಿ ಆರಂಭದಲ್ಲಿ ಕಟ್ಟಡದ … Continued

ಫಿಲಿಪೈನ್ಸ್​ನಲ್ಲಿ ಭೀಕರ ಚಂಡಮಾರುತ: ಕನಿಷ್ಠ 75 ಜನರು ಸಾವು

ಮನಿಲಾ: ಫಿಲಿಪೈನ್ಸ್​ನಲ್ಲಿ ಅಪ್ಪಳಿಸಿದ ರೈ ಟೈಫೂನ್ (ಚಂಡಮಾರುತ) ಚಂಡಮಾರುತದಿಂದ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ತೀವ್ರ ಹಾನಿಗೊಳಗಾದ ದ್ವೀಪಗಳಿಗೆ ನೀರು ಮತ್ತು ಆಹಾರವನ್ನು ತಲುಪಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಗಂಟೆಗೆ 195 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸೂಪರ್ ಟೈಫೂನ್ ಆಗಿ ಗುರುವಾರ ಚಂಡಮಾರುತವು ಫಿಲಿಪೈನ್ಸ್​ಗೆ ಅಪ್ಪಳಿಸಿದ್ದರಿಂದ ಪ್ರವಾಹದಲ್ಲಿ ಗ್ರಾಮಗಳು ಮುಳುಗಿ ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ … Continued

ಚೀನಾದ ಅತ್ಯಂತ ಹಿರಿಯ ವ್ಯಕ್ತಿ ಅಲಿಮಿಹಾನ್ ಸೆಯಿತಿ 135 ನೇ ವಯಸ್ಸಿನಲ್ಲಿ ನಿಧನ

ಬೀಜಿಂಗ್: ಚೀನಾದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದ ಅಲಿಮಿಹಾನ್ ಸೆಯಿತಿ ಅವರು 135 ನೇ ವಯಸ್ಸಿನಲ್ಲಿ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ನಿಧನಳಾಗಿದ್ದಾಳೆ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕಶ್ಗರ್ ಪ್ರಿಫೆಕ್ಚರ್‌ನ ಶುಲೆ ಕೌಂಟಿಯ ಕೊಮುಕ್ಸೆರಿಕ್ ಟೌನ್‌ಶಿಪ್‌ನಿಂದ ಬಂದ ಸೆಯಿತಿ, ಜೂನ್ 25, 1886 ರಂದು ಜನಿಸಿದ್ದರು ಎಂದು ಚೀನಾದ ಪ್ರಚಾರ ವಿಭಾಗವನ್ನು ಉಲ್ಲೇಖಿಸಿ ಕ್ಸಿನ್‌ಹುವಾ … Continued

ಓಮಿಕ್ರಾನ್ ರೂಪಾಂತರದ ವಿರುದ್ಧ ಸ್ಪುಟ್ನಿಕ್ ವಿ ‘ಬಲವಾದ’ ರಕ್ಷಣೆ ನೀಡುತ್ತದೆ: ಆರ್‌ಡಿಐಎಫ್

ಮಾಸ್ಕೋ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರದಿಂದ ಉಂಟಾದ ಗಂಭೀರ ರೋಗಲಕ್ಷಣಗಳು ಮತ್ತು ಆಸ್ಪತ್ರೆಗೆ ದಾಖಲಾತಿ ವಿರುದ್ಧ ಬಲವಾದ ರಕ್ಷಣೆಯನ್ನು ಒದಗಿಸುತ್ತದೆ ಎಂದು ಲಸಿಕೆ ಅಭಿವರ್ಧಕರ ಪ್ರಾಥಮಿಕ ಅಧ್ಯಯನವನ್ನು ಉಲ್ಲೇಖಿಸಿ ಆರ್‌ಡಿಐಎಫ್ ಶುಕ್ರವಾರ ತಿಳಿಸಿದೆ. ಬೂಸ್ಟರ್ ಶಾಟ್ ಆಗಿ ಬಳಸಿದಾಗ, ರಷ್ಯಾದ ಸಿಂಗಲ್-ಡೋಸ್ ಸ್ಪುಟ್ನಿಕ್ ಲೈಟ್ ಓಮಿಕ್ರಾನ್ ರೂಪಾಂತರದ ವಿರುದ್ಧ ಪ್ರಬಲವಾದ … Continued

ಜಪಾನ್​ನ ಒಸಾಕಾದಲ್ಲಿ ಅಗ್ನಿ ದುರಂತ; 27 ಜನರು ಸಾವು

ಟೋಕಿಯೊ: ಜಪಾನ್‌ನ ಒಸಾಕಾ ಜಿಲ್ಲೆಯ ವಾಣಿಜ್ಯ ಕಟ್ಟಡವೊಂದರಲ್ಲಿ ಶುಕ್ರವಾರ (ಡಿಸೆಂಬರ್ 17) ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 27 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಬೆಂಕಿಗೆ ಆಹುತಿಯಾದ ಮಹಡಿಯು ಮಾನಸಿಕ ಆರೋಗ್ಯ ಸೇವೆಗಳು ಮತ್ತು ಸಾಮಾನ್ಯ ವೈದ್ಯಕೀಯ ಆರೈಕೆಯನ್ನು ಒದಗಿಸುವ ಕ್ಲಿನಿಕ್ ಅನ್ನು ಹೊಂದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಒಸಾಕಾ … Continued

ಡೆಲ್ಟಾ, ಮತ್ತು ಮೂಲ ಕೋವಿಡ್-19 ವೈರಸ್‌ 70 ಪಟ್ಟು ಹೆಚ್ಚು ವೇಗವಾಗಿ ಓಮಿಕ್ರಾನ್ ವೈರಸ್‌ ಸೋಂಕು ತಗುಲುತ್ತದೆ: ಅಧ್ಯಯನ…!

ಬೀಜಿಂಗ್; ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮಿಕ್ರಾನ್, ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ, ಆದರೆ, ರೋಗದ ತೀವ್ರತೆ ಅತ್ಯಂತ ಕಡಿಮೆ ಇದ್ದಂತೆ ತೋರುತ್ತಿದೆ ಎಂದು ಹಾಂಗ್‌ಕಾಂಗ್‌ನ ಹೊಸ ಅಧ್ಯಯನವೊಂದು ಹೇಳಿದೆ. ಡೆಲ್ಟಾ ರೂಪಾಂತರ ತಳಿ ಮತ್ತು ಮೂಲ ವೈರಸ್ ಸಾರ್ಸ್-ಕೋವ್-2ಕ್ಕೆ ಹೋಲಿಸಿದರೆ ಓಮೈಕ್ರಾನ್ … Continued

ಓಮಿಕ್ರಾನ್ ಭಯದ ನಡುವೆ ಬ್ರಿಟನ್ನಿನಲ್ಲಿ ಈವರೆಗಿನ ಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣ ದಾಖಲು..!

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈವರೆಗಿನಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ಬ್ರಿಟನ್‌ ಮಂಗಳವಾರ 78,610 ದಾಖಲಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ಬ್ರಿಟಿಷ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ ಮಧ್ಯದ ವೇಳೆಗೆ ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಬಲವಾದ ಕೊರೊನಾ ವೈರಸ್ ರೂಪಾಂತರವಾಗಬಹುದು … Continued

ಕೋವಿಡ್‌-19 ಲಸಿಕೆ ಹಾಕಿಸಿಕೊಳ್ಳದಿದ್ದರೆ ಉದ್ಯೋಗಿಗಳನ್ನು ವಜಾಗೊಳಿಸಲಿರುವ ಗೂಗಲ್: ವರದಿ

ನವದೆಹಲಿ: ಆಲ್ಫಾಬೆಟ್ ಇಂಕ್‌ನ ಗೂಗಲ್ ತನ್ನ ಉದ್ಯೋಗಿಗಳಿಗೆ ಕೋವಿಡ್‌-19 ಲಸಿಕೆ ನಿಯಮಗಳನ್ನು ಅನುಸರಿಸದಿದ್ದರೆ ಅವರು ತಮ್ಮ ವೇತನವನ್ನು ಕಳೆದುಕೊಳ್ಳುತ್ತಾರೆ ಮತ್ತು ಅಂತಿಮವಾಗಿ ವಜಾಗೊಳಿಸಲಾಗುತ್ತದೆ ಎಂದು ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಸಿಎನ್‌ಬಿಸಿ (CNBC) ಮಂಗಳವಾರ ವರದಿ ಮಾಡಿದೆ. ವರದಿಯ ಪ್ರಕಾರ, ಉದ್ಯೋಗಿಗಳು ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ಘೋಷಿಸಲು ಮತ್ತು ಪುರಾವೆಗಳನ್ನು ತೋರಿಸುವ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಅಥವಾ … Continued

ಬ್ರಿಟನ್‌ನಲ್ಲಿ ಓಮಿಕ್ರಾನ್ ರೂಪಾಂತರದಿಂದ ಮೊದಲ ಸಾವು ದಾಖಲು

ಲಂಡನ್‌:ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರ ಪತ್ತೆಯಾದ ನಂತರ ಬ್ರಿಟನ್ನಿನಲ್ಲಿ ಕನಿಷ್ಠ ಒಬ್ಬ ರೋಗಿಯು ಮೃತಪಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಹೇಳಿದ್ದಾರೆ. ದುಃಖಕರವೆಂದರೆ ಕನಿಷ್ಠ ಒಬ್ಬ ರೋಗಿ ಓಮಿಕ್ರಾನ್‌ನಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ” ಎಂದು ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದರು. ಓಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ.  ಆದ್ದರಿಂದ ಜನಸಂಖ್ಯೆಯ ಮೂಲಕ ಅದು ಹರಡುವ … Continued