ಪಾಕಿಸ್ತಾನದ ಸ್ವಾತ್‌ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟ : 10 ಮಂದಿ ಸಾವು

ಪೇಶಾವರ: ಪಾಕಿಸ್ತಾನದ ಸ್ವಾತ್‌ನಲ್ಲಿರುವ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಶಂಕಿತ ಆತ್ಮಾಹುತಿ ದಾಳಿಯಲ್ಲಿ ಎಂಟು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಜಿಯೋ ಟಿವಿ ವರದಿ ಮಾಡಿದೆ. ಪೊಲೀಸ್ ಠಾಣೆಯೊಳಗೆ ಎರಡು ಸ್ಫೋಟಗಳು ಕಟ್ಟಡವನ್ನು … Continued

ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದ ಪಾಕಿಸ್ತಾನಿ ಮೂಲದ ಪ್ರಗತಿಪರ ಲೇಖಕ ತಾರೆಕ್ ಫತಾಹ್

ನವದೆಹಲಿ: ಕೆನಡಾ ಮೂಲದ ಪಾಕಿಸ್ತಾನಿ ಪತ್ರಕರ್ತ ಮತ್ತು ಲೇಖಕ ತಾರೆಕ್ ಫತಾಹ್ ಇಂದು, ಸೋಮವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಅವರ ಮಗಳು ನತಾಶಾ ಫತಾಹ್ ಹೇಳಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪಂಜಾಬ್ ಸಿಂಹ. ಹಿಂದೂಸ್ಥಾನದ ಮಗ, ಕೆನಡಾದ ಪ್ರೇಮಿ. ಸತ್ಯದ ಪ್ರತಿಪಾದಕ, ನ್ಯಾಯಕ್ಕಾಗಿ ಹೋರಾಟಗಾರ, ತುಳಿತಕ್ಕೊಳಗಾದವರ ಧ್ವನಿ ತಾರೆಕ್ ಫತಾಹ್ ಬ್ಯಾಟನ್ ಅನ್ನು ರವಾನಿಸಿದ್ದಾರೆ … Continued

ಪಾದ್ರಿ ಮಾತು ನಂಬಿ ಸ್ವರ್ಗಕ್ಕೆ ಹೋಗಲು ಹಸಿವಿನಿಂದ ಜೀವಂತ ಸಮಾಧಿಯಾದವರ 47 ಶವಗಳು ಪತ್ತೆ…! ಸಂಖ್ಯೆ ಹೆಚ್ಚಾಗುವ ಸಾಧ್ಯತೆ…!!

ನೈರೋಬಿ (ಕೀನ್ಯಾ) : ಆಫ್ರಿಕಾದ ಕೀನ್ಯಾ (Kenya)ದಲ್ಲಿ ಉಪವಾದಿಂದ ಜೀವಂತ ಸಮಾಧಿಯಾದವರ 47 ಕ್ಕೂ ಅಧಿಕ ಮಂದಿಯ ಶವಗಳು ಈವರೆಗೆ ಪತ್ತೆಯಾಗಿದೆ. ಪಾದ್ರಿ ಮಾತನ್ನು ನಂಬಿ, ಸ್ವರ್ಗಕ್ಕೆ ಹೋಗುವ ಆಸೆಯಲ್ಲಿ 47ಕ್ಕೂ ಅಧಿಕ ಮಂದಿ ಹಸಿವಿನಿಂದ ಬಳಲಿ ಜೀವಂತ ಸಮಾಧಿಯಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ನೀವು ಸ್ವರ್ಗಕ್ಕೆ ಹೋಗಬಯಸುತ್ತೀರಿ ಎಂದರೆ ಉಪವಾಸವಿರಬೇಕು, ಬಳಿಕ … Continued

ಇಂಜಿನ್‌ಗೆ ಬೆಂಕಿ ತಗುಲಿದ ನಂತರ ತುರ್ತು ಲ್ಯಾಂಡಿಂಗ್ ಮಾಡಿದ ಅಮೆರಿಕನ್ ಏರ್‌ಲೈನ್ಸ್ ವಿಮಾನ | ವೀಕ್ಷಿಸಿ

ಭಾನುವಾರ ಅಮೇರಿಕನ್ ಏರ್ಲೈನ್ಸ್ ವಿಮಾನಕ್ಕೆ ಹಕ್ಕಿಗಳ ಹೊಡೆತದಿಂದಾಗಿ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವು ಬೆಂಕಿ ಹೊತ್ತಕೊಂಡ ನಂತರ ವಿಮಾನವು ಕೊಲಂಬಸ್‌ನ ಜಾನ್ ಗ್ಲೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿರುವುದನ್ನು ತೋರಿಸುತ್ತದೆ. ವಿಮಾನದ ಬಲ ಇಂಜಿನ್‌ನಿಂದ ಜ್ವಾಲೆ ಮತ್ತು ಹೊಗೆ ಬರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಟೇಕ್ ಆಫ್ ಆದ ನಂತರ ಪ್ರಮುಖ … Continued

173 ವರ್ಷಗಳಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷಗಳಲ್ಲಿ 2022ಕ್ಕೆ 5ನೇ ಸ್ಥಾನ, 2023 ಇನ್ನೂ ಬಿಸಿಯಾಗಿರಬಹುದು: ವರದಿ

ನವದೆಹಲಿ: 2022ರಲ್ಲಿ ಅತಿಹೆಚ್ಚು ತಾಪಮಾನ ದಾಖಲಾಗಿದ್ದು, ಇದು ಜಾಗತಿಕವಾಗಿ ಅತಿಹೆಚ್ಚು ಸರಾಸರಿ ಉಷ್ಣಾಂಶ ದಾಖಲಾದ ವರ್ಷಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ವರದಿ ಹೇಳಿದೆ. 2022ರಲ್ಲಿ ಜಾಗತಿಕ ಸರಾಸರಿ ಉಷ್ಣಾಂಶಕ್ಕಿಂತ 1.15 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಸರಾಸರಿ ಉಷ್ಣಾಂಶ ದಾಖಲಾಗಿದೆ. 1850ರಿಂದ ದಾಖಲಾಗಿರುವ ಜಾಗತಿಕ ಉಷ್ಣಾಂಶದ ದತ್ತಾಂಶಗಳ ಪ್ರಕಾರ … Continued

ಉದ್ಯೋಗ ಕಡಿತದ ನಡುವೆ 1,854 ಕೋಟಿ ರೂ. ವೇತನ ಪಡೆದ ಗೂಗಲ್ ಮಾತೃ ಕಂಪನಿ ಆಲ್ಫಾಬೆಟ್‌ ಸಿಇಒ ಸುಂದರ್ ಪಿಚೈ…!

ನವದೆಹಲಿ: ಶುಕ್ರವಾರ ಬಿಡುಗಡೆಯಾದ ಸೆಕ್ಯುರಿಟೀಸ್ ಫೈಲಿಂಗ್ ಪ್ರಕಾರ ಆಲ್ಫಾಬೆಟ್ ಸಿಇಒ ಸುಂದರ ಪಿಚೈ ಅವರು 2022 ರಲ್ಲಿ ಸರಿಸುಮಾರು $226 ಮಿಲಿಯನ್ (ಅಂದಾಜು 1,854 ಕೋಟಿ ರೂ.) ಒಟ್ಟು ವೇತನ ಪಡೆದಿದ್ದಾರೆ. ಈ ಅಂಕಿ ಅಂಶವು ಆಲ್ಫಾಬೆಟ್ ಮಧ್ಯಮ ಕ್ರಮಾಂಕದ ಉದ್ಯೋಗಿಗಳು ಗಳಿಸಿದ ಸರಾಸರಿ ವೇತನಕ್ಕಿಂತ 800 ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಸುಂದರ ಪಿಚೈ … Continued

ಈ ವರ್ಷ 10 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರಿಗೆ ವೀಸಾ ನೀಡಲಿದೆ ಅಮೆರಿಕ

ವಾಷಿಂಗ್ಟನ್: ಈ ವರ್ಷ ಭಾರತೀಯರಿಗೆ ಅಮೆರಿಕವು 10 ಲಕ್ಷಕ್ಕಿಂತಲೂ ಹೆಚ್ಚು ವೀಸಾಗಳನ್ನು ನೀಡುವ ಹಾದಿಯಲ್ಲಿ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬೇಸಿಗೆಯಲ್ಲಿ ಅಮೆರಿಕ ಅಧ್ಯಕ್ಷ ಬೈಡನ್‌ ಆಡಳಿತವು ಈ ಶರತ್ಕಾಲದಲ್ಲಿ ಕಾಲೇಜುಗಳು ಆರಂಭವಾಗುವ ಮೊದಲು ಎಲ್ಲಾ ಭಾರತೀಯರಿಗೆ ವಿದ್ಯಾರ್ಥಿ ವೀಸಾಗಳನ್ನು ಪ್ರಕ್ರಿಯೆಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ದಕ್ಷಿಣ ಮತ್ತು ಮಧ್ಯ ಏಷ್ಯಾದ … Continued

ಭಾರತೀಯ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅಮೆರಿಕದ ರಕ್ಷಣಾ ಉಪ ಕಾರ್ಯದರ್ಶಿ

ವಾಷಿಂಗ್ಟನ್: ರಾಷ್ಟ್ರೀಯ ಭದ್ರತಾ ತಜ್ಞರಾದ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಸ್ವಾಧೀನ ಮತ್ತು ಸುಸ್ಥಿರತೆಯ ರಕ್ಷಣಾ ಉಪ ಕಾರ್ಯದರ್ಶಿಯಾಗಿ (Deputy Under Secretary of Defence for Acquisition and Sustainment) ಅಮೆರಿಕ ಸೆನೆಟ್ ದೃಢಪಡಿಸಿದೆ. ಅಧ್ಯಕ್ಷ ಜೋ ಬೈಡನ್‌ ಅವರು ಪ್ರಸ್ತುತ ರಕ್ಷಣಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು … Continued

2023ರ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕಿಗೆ ಅಗ್ರಸ್ಥಾನ ; ಭಾರತದ ಯಾವ ನಗರಗಳು ಈ ಪಟ್ಟಿಯಲ್ಲಿದೆ..

ನವದೆಹಲಿ: ಹೆನ್ಲಿ & ಪಾರ್ಟ್‌ನರ್ಸ್ ಮತ್ತು ನ್ಯೂ ವರ್ಲ್ಡ್ ವೆಲ್ತ್ ಪ್ರಕಟಿಸಿದ ಹೊಸ ವರದಿಯ ಪ್ರಕಾರ ನ್ಯೂಯಾರ್ಕ್ ನಗರವು ವಿಶ್ವದ ಅತ್ಯಂತ ಶ್ರೀಮಂತ ನಗರವಾಗಿ ಹೊರಹೊಮ್ಮಿದೆ. ನಂತರದ ಸ್ಥಾನಗಳಲ್ಲಿ ಟಾಪ್ ಜಪಾನ್‌ನ ಟೋಕಿಯೋ, ಅಮೆರಿಕಾದ ದ ಬೇ ಏರಿಯಾ, ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌, ಸಿಂಗಾಪುರ್, ಅಮೆರಿಕದ ಲಾಸ್ ಎಂಜಲೀಸ್, ಚೀನಾದ ಹಾಂಗ್‌ಕಾಂಗ್, ಬೀಜಿಂಗ್, ಶಾಂಘೈ ಹಾಗೂ … Continued

ಪರೀಕ್ಷಾ ಹಾರಾಟದ ಸಮಯದಲ್ಲಿ ಬಿಲಿಯನೇರ್ ಎಲೋನ್‌ ಮಸ್ಕ್‌ ನ ಸ್ಟಾರ್‌ಶಿಪ್ ಬೃಹತ್‌ ರಾಕೆಟ್‌ ಸ್ಫೋಟ | ವೀಕ್ಷಿಸಿ

ಬಿಲಿಯನೇರ್ ಎಲೋನ್ ಮಸ್ಕ್ ಅವರ ಐಕಾನಿಕ್ ರಾಕೆಟ್ ಸ್ಟಾರ್‌ಶಿಪ್, ಚಂದ್ರ ಮತ್ತು ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾದ ಅತಿದೊಡ್ಡ ಮತ್ತು ಶಕ್ತಿಯುತವಾದ ರಾಕೆಟ್ ಗುರುವಾರ ಬಾಹ್ಯಾಕಾಶ ನೌಕೆಯ ಮೊದಲ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಸ್ಫೋಟಗೊಂಡಿದೆ. ಇದರ ನಂತರ ಮುಂದಿನ ಸ್ಟಾರ್‌ಶಿಪ್ ಪರೀಕ್ಷೆಯು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ ಎಂದು ಮಸ್ಕ್ ಹೇಳಿದ್ದಾರೆ. “ಸ್ಟಾರ್‌ಶಿಪ್‌ನ ಮೊದಲ … Continued