ಹಜ್ ಯಾತ್ರೆ ವೇಳೆ ಶಾಖದ ಅಲೆಯಿಂದಾಗಿ 68 ಭಾರತೀಯರು ಸೇರಿ 1000ಕ್ಕೂ ಹೆಚ್ಚು ಸಾವು ; ವರದಿ

ರಿಯಾದ್‌ : ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಈ ವರ್ಷದ ಹಜ್ ಯಾತ್ರೆಯ ಸಮಯದಲ್ಲಿ ಬಿಸಿಲಿನ ತಾಪದ ನಡುವೆ ಮೃತಪಟ್ಟವರ ಸಂಖ್ಯೆ 1,000 ಮೀರಿದೆ ಎಂದು ಎಎಫ್‌ಪಿ (AFP) ಗುರುವಾರ (ಜೂನ್ 20) ವರದಿ ಮಾಡಿದೆ. ಇವರಲ್ಲಿ 68 ಭಾರತೀಯರು ಸಾವಿಗೀಡಾದ್ದಾರೆ ಎಂದು ಹೇಳಲಾಗಿದೆ. ವರದಿಯಾದ ಸಾವುಗಳಲ್ಲಿ, ಅರ್ಧದಷ್ಟು ಜನರು ನೋಂದಾಯಿಸದ ಯಾತ್ರಿಗಳಾಗಿದ್ದಾರೆ. ಅವರು ಪವಿತ್ರ ನಗರವಾದ … Continued

52 ಡಿಗ್ರಿ ಸೆಲ್ಸಿಯಸ್‌ ಸಮೀಪ ತಲುಪಿದ ತಾಪಮಾನ ; ಹಜ್​ ಯಾತ್ರೆಗೆ ತೆರಳಿದ್ದ 550 ಯಾತ್ರಿಕರು ಸಾವು

ಈ ವರ್ಷ ಹಜ್ ಸಮಯದಲ್ಲಿ ಕನಿಷ್ಠ 550 ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಮೆಕ್ಕಾದಲ್ಲಿ ಸುಡುವ ತಾಪಮಾನವು 50 ಸೆಂಟಿಗ್ರೇಡ್‌ಗಿಂತ ಹೆಚ್ಚಾಗಿದೆ. ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್‌ಹೀಟ್) ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಮೃತಪಟ್ಟವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟಿನವರು, ಅವರಲ್ಲಿ … Continued

ವೀಡಿಯೊ..| ಭಾರತೀಯ ಎಂದು ಭಾವಿಸಿ ಅಭಿಮಾನಿ ಮೇಲೆ ಹಲ್ಲೆ ಮಾಡಲು ಮುಂದಾದ ಪಾಕ್‌ ಬೌಲರ್ ರೌಫ್‌ : ನಂತರ ಆಗಿದ್ದು….

ವಾಷಿಂಗ್ಟನ್: ಅಮೆರಿಕದಲ್ಲಿರುವ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್‌ ರೌಫ್‌, ಕ್ರಿಕೆಟ್‌ ಅಭಿಮಾನಿಯೊಬ್ಬರ ಮೇಲೆ ಹಲ್ಲೆ ಮಾಡಲು ಹೋದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ನಂತರ ಆ ತಂಡದ ಕೆಲ ಆಟಗಾರರು ಅಮೆರಿಕದಲ್ಲಿ ಸಮಯ ಕಳೆಯುತ್ತಿದ್ದು, ರೌಫ್‌ ಕೂಡ ತಮ್ಮ ಕುಟುಂಬದೊಂದಿಗೆ ಫ್ಲೊರಿಡಾದಲ್ಲಿ ತಂಗಿದ್ದಾರೆ. ಪತ್ನಿಯೊಂದಿಗೆ ವಿಹಾರಕ್ಕೆ ಹೋದ ವೇಳೆ … Continued

ವೀಡಿಯೊ.. : ಹುಲಿ ಜೊತೆ ಹಗ್ಗ ಜಗ್ಗಾಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಲಾಢ್ಯ ವ್ಯಕ್ತಿ ; ಕೊನೆಯಲ್ಲಿ ಗೆದ್ದವರು ಯಾರು..? | ವೀಕ್ಷಿಸಿ

ಸಿಂಹ, ಹುಲಿ, ಚಿರತೆಯಂತಹ ಕಾಡು ಪ್ರಾಣಿಗಳ ಶಕ್ತಿ ಹೇಗಿರುತ್ತದೆ, ಅವು ಮನುಷ್ಯರಿಗಿಂತ ಬಲಶಾಲಿಯಾಗಿರುತ್ತವೆಯೇ ಮತ್ತು ಚಲನಚಿತ್ರಗಳಲ್ಲಿ ಸಿಂಹ ಮತ್ತು ಹುಲಿಗಳ ವಿರುದ್ಧ ಹೀರೋಗಳು ಹೋರಾಡುವ ರೀತಿಯಲ್ಲಿ ಹೋರಾಡಲು ನಿಜವಾಗಿಯೂ ಸಾಧ್ಯವೇ ಎಂದು ಎಂದಾದರೂ ಯೋಚಿಸಿದ್ದೇವೆಯೇ..? ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬ ಹುಲಿಯೊಂದಿಗೆ ಕಾದಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವ್ಯಕ್ತಿ ಸ್ವತಃ ಕುಸ್ತಿಪಟು ಎಂದು ತೋರುತ್ತದೆ, ಆದರೆ ಹುಲಿಯೊಂದಿಗಿನ … Continued

ಅಮೆರಿಕ v/s ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದು ; ಲೀಗ್‌ ಹಂತದಲ್ಲೇ T20 ವಿಶ್ವಕಪ್‌ನಿಂದ ಹೊರಬಿದ್ದ ಪಾಕಿಸ್ತಾನ…!

ನ್ಯೂಯಾರ್ಕ್‌ : ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಎಡಬಿಡದೆ ಮಳೆಯಿಂದಾಗಿ ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಗುಂಪು ಪಂದ್ಯವ ರದ್ದಾದ ನಂತರ ಪಾಕಿಸ್ತಾನವು 2024 ರ ಐಸಿಸಿ (ICC) ಪುರುಷರ T20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಶುಕ್ರವಾರದ ಪಂದ್ಯ ರದ್ದಾಗಿದ್ದರಿಂದ ಅಮೆರಿಕ ಹಾಗೂ ಐರ್ಲಂಡ್‌ ತಂಡಗಳು ತಲಾ ಒಂದು ಪಾಯಿಂಟ್‌ … Continued

‘ನಮಸ್ತೆʼ ಈಗ ಜಾಗತಿಕ : ಜಿ7 ನಾಯಕರನ್ನು ಭಾರತೀಯ ಸಂಪ್ರದಾಯ ʼನಮಸ್ತೆʼ ಮೂಲಕ ಸ್ವಾಗತಿಸಿದ ಇಟಲಿ ಪ್ರಧಾನಿ | ವೀಡಿಯೊ ವೈರಲ್‌

ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಜಿ7 ಶೃಂಗಸಭೆಗೆ ಆಗಮಿಸಿದ ಜಾಗತಿಕ ನಾಯಕರನ್ನು ಕೈ ಮುಗಿದು ನಮಸ್ಕರಿಸುವ ಮೂಲಕ ಸ್ವಾಗತಿಸಿರುವುದು ಎಲ್ಲ ಗಮನ ಸೆಳೆದಿದೆ. ಮೆಲೋನಿ ಅವರು ವಿವಿಧ ದೇಶದ ನಾಯಕರಿಗೆ ನಮಸ್ತೆ ಮಾಡುವ ಮೂಲಕ ಸ್ವಾಗತಿಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಟಲಿಯು ಈ ವರ್ಷದ G7 ಶೃಂಗಸಭೆಯನ್ನು ಆಯೋಜಿಸುತ್ತಿದ್ದು, ಜೂನ್ 13-15ರ … Continued

ಟಿ20 ವಿಶ್ವಕಪ್ 2024 : ರೋಚಕ ಪಂದ್ಯದಲ್ಲಿ ಅಮೆರಿಕಕ್ಕೆ 5 ರನ್‌ ದಂಡ, ಸುಲಭವಾಯ್ತು ಭಾರತ ಗೆಲುವು..! ಅದು ಹೇಗೆ.. ಏನಿದು ನಿಯಮ..?

ಭಾರತ ತಂಡವು ಸತತ ಮೂರು ಗೆಲುವಿನೊಂದಿಗೆ ಟಿ20 ವಿಶ್ವಕಪ್ 2024 ಪಂದ್ಯಾವಳಿಯಲ್ಲಿ ಸೂಪರ್​-8ರ ಹಂತಕ್ಕೆ ಪ್ರವೇಶಿಸಿದೆ. ರೋಹಿತ್​ ಶರ್ಮಾ ನಾಯಕತ್ವದ ಭಾರತದ ತಂಡವು ಅಮೆರಿಕ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ದಾಖಲಿಸಿದ ನಂತರ ಸೂಪರ್​-8 ಹಂತಕ್ಕೆ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಮೆರಿಕ ಮಾಡಿದ ತಪ್ಪಿನಿಂದಾಗಿ ಪೆನಾಲ್ಟಿ ರೂಪದಲ್ಲಿ ಭಾರತದ ತಂಡಕ್ಕೆ … Continued

2024ರಲ್ಲಿ ವಿಶ್ವದ ಟಾಪ್‌ 10 ಅತ್ಯಮೂಲ್ಯ ʼಬ್ರ್ಯಾಂಡ್‌ʼಗಳ ಪಟ್ಟಿ ಬಿಡುಗಡೆ : ಅಗ್ರಸ್ಥಾನದಲ್ಲಿ ಆಪಲ್ ಕಂಪನಿ…

ಹೊಸ ವರದಿಯ ಪ್ರಕಾರ ಆಪಲ್ ಕಂಪನಿಯು ವಿಶ್ವದ ಅತ್ಯಮೂಲ್ಯ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ರ್ಯಾಂಡ್ ಗಳಿಗೆ ನೀಡಲಾದ ಶ್ರೇಯಾಂಕಗಳು ಒಟ್ಟು 532 ವಿಭಾಗಗಳಲ್ಲಿ 21,000 ಬ್ರ್ಯಾಂಡ್‌ಗಳ ಬಗ್ಗೆ 43 ಲಕ್ಷಗಳಿಗಿಂತಲೂ ಹೆಚ್ಚು ಜನರು ನೀಡಿದ ಪ್ರತಿಕ್ರಿಯೆಗಳನ್ನು ಆಧರಿಸಿವೆ. ಈ ಪಟ್ಟಿಯು ನಾವೀನ್ಯತೆ, ಮಾರುಕಟ್ಟೆ ಉಪಸ್ಥಿತಿ ಮತ್ತು ಗ್ರಾಹಕರ ನಂಬಿಕೆಯಲ್ಲಿ ಮುನ್ನಡೆಸುವ ಕಂಪನಿಗಳನ್ನು ಗುರುತಿಸುತ್ತದೆ. ಇದು ಅನುಕ್ರಮವಾಗಿ … Continued

ಕುವೈತ್‌ ಕಟ್ಟಡದಲ್ಲಿ ಅಗ್ನಿ ಅವಘಡ ; ಭಾರತೀಯರು ಸೇರಿ 41 ಮಂದಿ ಸಾವು

ಕುವೈತ್ : ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ಅನಾಹುತದಲ್ಲಿ ಕನಿಷ್ಠ 41 ಜನರು ಸಾವಿಗೀಡಾಗಿದ್ದಾರೆ ಎಂದು ದೇಶದ ಸರ್ಕಾರಿ ಮಾಧ್ಯಮವು ಬುಧವಾರ ವರದಿ ಮಾಡಿದೆ. ವರದಿಗಳ ಪ್ರಕಾರ, ದುರಂತ ಘಟನೆಯಲ್ಲಿ ಹಲವಾರು ಭಾರತೀಯರು ಸಹ ಮೃತಪಟ್ಟಿದ್ದಾರೆ. ಸ್ಥಳೀಯ ಮಾಧ್ಯಮಗಳು ಈ ಕಟ್ಟಡವು ಹೆಚ್ಚಿನ ಮಲಯಾಳಂ ಜನಸಂಖ್ಯೆಯನ್ನು ಹೊಂದಿದೆ ಎಂದು ವರದಿ ಮಾಡಿದೆ. … Continued

ವೀಡಿಯೊ: ಒಳನುಗ್ಗಿ ಹಮಾಸ್‌ ವಶದಲ್ಲಿದ್ದ ಮೂವರು ಒತ್ತೆಯಾಳುಗಳನ್ನು ರಕ್ಷಿಸಿದ ಕ್ಷಣದ ವೀಡಿಯೊ ಬಿಡುಗಡೆ ಮಾಡಿದ ಇಸ್ರೇಲ್

ಇಸ್ರೇಲಿ ಮಿಲಿಟರಿ ವಾರಾಂತ್ಯದಲ್ಲಿ “ಸಂಕೀರ್ಣ ಹಗಲಿನ ಕಾರ್ಯಾಚರಣೆ”ಯಲ್ಲಿ ಗಾಜಾದಲ್ಲಿ ಹಮಾಸ್ ಸೆರೆಯಿಂದ ನಾಲ್ಕು ಒತ್ತೆಯಾಳುಗಳನ್ನು ಪಾರು ಮಾಡಿದ್ದಾರೆ. ನಾಲ್ವರು ಒತ್ತೆಯಾಳುಗಳಲ್ಲಿ ಮೂವರನ್ನು – ಅಲ್ಮೋಗ್ ಮೀರ್ ಜಾನ್, ಆಂಡ್ರೆ ಕೊಜ್ಲೋವ್ ಮತ್ತು ಶ್ಲೋಮಿ ಝಿವ್ ಅವರನ್ನು ರಕ್ಷಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಹಮಾಸ್‌ನಿಂದ ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಾರ್ಟ್‌ಮೆಂಟ್‌ಗೆ ಇಸ್ರೇಲಿ … Continued