ವೀಡಿಯೊ | ನಾಗರಿಕ ಸಂಪರ್ಕವೇ ಇಲ್ಲದ, ಕಣ್ಣಿಗೇ ಕಾಣಿಸಿಕೊಳ್ಳದ ವಿಶ್ವದ ಅತಿದೊಡ್ಡ ಬುಡಕಟ್ಟು ಜನಾಂಗದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸ್ಥಳೀಯ ಹಕ್ಕುಗಳ ಲಾಭರಹಿತ ಸಂಸ್ಥೆ ಸರ್ವೈವಲ್ ಇಂಟರ್‌ನ್ಯಾಷನಲ್‌ ನಿಂದ ಪಡೆದ ಗಮನಾರ್ಹವಾದ ಅಪರೂಪದ ಚಿತ್ರಗಳು ಮತ್ತು ವೀಡಿಯೊಗಳು ಈವರೆಗೆ ನಾಗರಿಕ ಸಂಪರ್ಕಕ್ಕೇ ಬಾರದ ಸ್ಥಳೀಯ ಬುಡಕಟ್ಟು ಜನಾಂಗದ ದೈನಂದಿನ ದಿನಚರಿಯನ್ನು ತೋರಿಸುತ್ತವೆ, ಇದು ಮರ ಕಟಾವ್‌ ಮಾಡುವ ಪ್ರದೇಶಕ್ಕೆ “ಅಪಾಯಕಾರಿಯಾಗಿ ಹತ್ತಿರದಲ್ಲಿದೆ” ಎಂದು ವರದಿ ಹೇಳಿದೆ. ಪೆರುವಿನ ಮಾಶ್ಕೊ ಪಿರೊ ಬುಡಕಟ್ಟು 50 ಕ್ಕೂ ಹೆಚ್ಚು … Continued

ಟ್ರಂಪ್ ಮೇಲೆ ಗುಂಡು ಹಾರಿಸುವ ಕ್ಷಣದ ಮೊದಲು ಛಾವಣಿ ಮೇಲೆ ʼಶೂಟರ್ʼ ನೋಡಿ ಭದ್ರತಾ ಅಧಿಕಾರಿಗಳಿಗೆ ಎಚ್ಚರಿಸಿದ ಜನರು ; ವೀಡಿಯೊ ವೈರಲ್‌

ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಮೇಲೆ ಗುಂಡು ಹಾರಿಸಿದ ಶಂಕಿತ ವ್ಯಕ್ತಿಯನ್ನು ಗುಂಡಿನ ದಾಳಿಗೆ ಕೇವಲ ಎರಡು ನಿಮಿಷಗಳ ಮೊದಲು ಕಾನೂನು ಜಾರಿ ಸಂಸ್ಥೆ ಸಿಬ್ಬಂದಿಗೆ ಜನರು ತೋರಿಸುತ್ತಿರುವ ವೀಡಿಯೊವಿಂದು ಹೊರಹೊಮ್ಮಿದೆ. ಜನರು ಕಾನೂನು ಜಾರಿ ಸಂಸ್ಥೆಗೆ ಆತನ ಬಗ್ಗೆ ಎಚ್ಚರಿಕೆ ನೀಡುತ್ತಿರುವುದನ್ನು ನೋಡುಗರು ತೆಗೆದ ವೀಡಿಯೊ ತೋರಿಸುತ್ತದೆ. ಆಫಿಸರ್‌ … Continued

ಶಾಲೆಯಲ್ಲಿ ಗಣಿತದಲ್ಲಿ ನಿಪುಣ ವಿದ್ಯಾರ್ಥಿ, $500 ಬಹುಮಾನ ಗೆದ್ದಿದ್ದ ಟ್ರಂಪ್ ಮೇಲೆ ಗುಂಡು ಹಾರಿಸಿದ ಥಾಮಸ್ ಕ್ರೂಕ್ಸ್….

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶನಿವಾರ ಪ್ರಚಾರ ರ್ಯಾಲಿಯಲ್ಲಿ ಹತ್ಯೆಗೈಯಲು ಯತ್ನಿಸಿದ ಶಂಕಿತ ಆರೋಪಿ ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್,  ಎಂದು ಎಫ್‌ಬಿಐ ಗುರುತಿಸಿದೆ. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಟ್ರಂಪ್ ಮಾತನಾಡುತ್ತಿದ್ದ ವೇದಿಕೆಯತ್ತ ಗುಂಡು ಹಾರಿಸಿದ ನಂತರ ಶಂಕಿತನನ್ನು ಸಿಕ್ರೆಟ್‌ ಸರ್ವಿಸ್‌ ಕೆಲವೇ ಸೆಕೆಂಡುಗಳಲ್ಲಿ ಗುಂಡಿಕ್ಕಿ ಕೊಂದಿದೆ. 100 … Continued

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಮೇಲೆ ಗುಂಡಿನ ದಾಳಿ; ಶಂಕಿತನ ಗುರುತು ಪತ್ತೆ : ಟ್ರಂಪ್‌ ಮೊದಲ ಪ್ರತಿಕ್ರಿಯೆ

ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತನೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಯತ್ನದ ಶಂಕಿತ ಶೂಟರ್ ಎಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಗುರುತಿಸಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಪ್ರಚಾರ ಸಭೆಯೊಂದರಲ್ಲಿ 20 ವರ್ಷದ ಕ್ರೂಕ್ಸ್ ಅವರು 78 ವರ್ಷದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್‌ … Continued

ವೀಡಿಯೊ…| ರ್‍ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಮೇಲೆ ಗುಂಡಿನ ದಾಳಿ

ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಶನಿವಾರ (ಸ್ಥಳೀಯ ಕಾಲಮಾನ) ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಅವರ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದ ನಂತರ ಗಾಯಗೊಂಡಿದ್ದಾರೆ. ಘಟನೆಯ ನಂತರ ಭದ್ರತಾ ಸಿಬ್ಬಂದಿ ಅವರನ್ನು ವೇದಿಕೆಯಿಂದ ಹೊರಗೆ ಕರೆದೊಯ್ಯುವಾಗ ಅವರ ಮುಖದ ಮೇಲೆ ರಕ್ತ ಕಂಡುಬಂದಿದೆ. ಟ್ರಂಪ್‌ ಅವರು “ಉತ್ತಮ” … Continued

ʼಶ್ರೀಮಂತʼರನ್ನು ಮದುವೆಯಾಗುವುದು ಹೇಗೆಂದು ʼಮಹಿಳೆʼಯರಿಗೆ ಕಲಿಸುವ ಈ ‘ಇನ್ಫ್ಲುಯೆನ್ಸರ್‌’ ವರ್ಷದ ಗಳಿಕೆ ₹ 163 ಕೋಟಿ…!

ಶ್ರೀಮಂತ ಪುರುಷರನ್ನು ಹೇಗೆ ಮದುವೆಯಾಗಬೇಕೆಂದು ಮಹಿಳೆಯರಿಗೆ ಕಲಿಸುವ ಚೀನಾದ ವಿವಾದಾತ್ಮಕ ಲವ್ ಗುರು, ವರ್ಷಕ್ಕೆ 142 ಮಿಲಿಯನ್ ಯುವಾನ್ (ಅಂದಾಜು ₹ 163 ಕೋಟಿ) ಗಳಿಸುತ್ತಾರೆ ಎಂದು ವರದಿಯಾಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪ್ರಭಾವಿ ಮಹಿಳೆಯ ನಿಜವಾದ ಹೆಸರು ಲೆ ಚುವಾಂಕ್, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಂಬಂಧ ಮತ್ತು ಆರ್ಥಿಕ ಸಲಹೆಗಳನ್ನು … Continued

ಚೊಚ್ಚಲ ವಿಂಬಲ್ಡನ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಬಾರ್ಬೊರಾ ಕ್ರೆಜ್ಸಿಕೋವಾ

ಲಂಡನ್‌: ಅಂತಿಮ ಸರ್ವ್‌ನಲ್ಲಿ ಅದ್ಭುತ ವಿಂಬಲ್ಡನ್ ಗೆಲುವಿನ ಮುದ್ರೆಯೊತ್ತಿದ ಬಾರ್ಬೊರಾ ಕ್ರೆಜ್‌ಸಿಕೋವಾ ತಮ್ಮ ಮೊದಲ ವಿಂಬಲ್ಡನ್‌ ಗ್ರ್ಯಾಂಡ್‌ ಸ್ಯ್ಲಾಮ್‌ ಪ್ರಶಸ್ತಿಗೆ ಭಾಜನರಾದರು. ಕ್ರೆಜ್‌ಸಿಕೋವಾ ತಮ್ಮ ಎದುರಾಳಿ ಜಾಸ್ಮಿನ್ ಪಾವೊಲಿನಿ ಅವರನ್ನು 6-2, 2-6, 6-4 ಸೆಟ್‌ಗಳಿಂದ ಸೋಲಿಸಿ ತನ್ನ ಚೊಚ್ಚಲ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. 2021 ರ ರೋಲ್ಯಾಂಡ್ ಗ್ಯಾರೋಸ್ ನಲ್ಲಿ ಫ್ರೆಂಚ್ ಓಪನ್ … Continued

ವೀಡಿಯೊ..| ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿ ಅತ್ಯದ್ಭುತ ದೃಶ್ಯಗಳನ್ನು ಸೆರೆ ಹಿಡಿದ ಚೀನಾದ ಡ್ರೋನ್‌…ವೀಕ್ಷಿಸಿ

ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸಿದ ಡ್ರೋನ್‌ ವಿಶ್ವದ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್‌ ಮೇಲೆ ಹಾರಾಟ ನಡೆಸಿದೆ. ಡ್ರೋನ್‌ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೆರೆ ಹಿಡಿದ ದೃಶ್ಯಗಳು ಈಗ ವೈರಲ್‌ ಆಗಿದೆ. ಡ್ರೋನ್ ತಯಾರಕರಾದ ಡಿಜೆಐ ಹಾಗೂ 8KRAW ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಸಾಧನಕ್ಕೆ ಡಿಜೆಐ ಮೇವಿಕ್ 3 ಡ್ರೋನ್ ಎಂದು ಹೆಸರಿಡಲಾಗಿದೆ. ನಾಲ್ಕು ನಿಮಿಷಗಳ ಈ … Continued

2100ರ ಹೊತ್ತಿಗೆ ಭಾರತದ ಜನಸಂಖ್ಯೆಯಲ್ಲಿ ಕುಸಿತ, ಆದ್ರೂ ಚೀನಾಕ್ಕಿಂತ 2.5 ಪಟ್ಟು ಹೆಚ್ಚು…! ಭಾರತದ ಜನಸಂಖ್ಯೆ ಎಷ್ಟಾಗಲಿದೆ ಗೊತ್ತಾ..?

ವಿಶ್ವಸಂಸ್ಥೆ: ಭಾರತದ ಜನಸಂಖ್ಯೆಯು 2060ರ ದಶಕದ ಆರಂಭದಲ್ಲಿ ಸುಮಾರು 170 ಶತಕೋಟಿಗೆ ಏರುತ್ತದೆ ಮತ್ತು ನಂತರ ಶೇಕಡಾ 12 ರಷ್ಟು ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ, ಆದರೆ ದೇಶವು ಶತಮಾನದುದ್ದಕ್ಕೂ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿಯೇ ಇರುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ಗುರುವಾರ ಬಿಡುಗಡೆಯಾದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2024 ವರದಿಯು, ಮುಂಬರುವ 50-60 … Continued

ಕೆಲಸ ಒತ್ತಡಕ್ಕೆ ಬಳಲಿ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿತೇ ʼರೊಬೊಟ್‌ʼ..? : ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ…!

ಸಿಯೋಲ್: ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ಸಿವಿಲ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದ ರೊಬೊಟ್‌ ಒಂದು ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಇದು ಆತ್ಮಹತ್ಯೆ ಮಾಡಿಕೊಂಡಿದೆಯೇ ಎಂದು ತಿಳಿಯುವ ಬಗ್ಗೆ ಅಲ್ಲಿನ ಆಡಳಿತ ತನಿಖೆಗೆ ಆದೇಶಿಸಿದೆ. ಅಚ್ಚರಿಯ ಘಟನೆಯಲ್ಲಿ ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ಗಾಗಿ ಕೆಲಸ ಮಾಡುತ್ತಿದ್ದ ʼಸಿವಿಲ್ ಸರ್ವೆಂಟ್ … Continued