ಯೆಮೆನ್‌ ರಾಜಧಾನಿಯಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 78 ಜನರು ಸಾವು, ಹಲವರಿಗೆ ಗಾಯ

ಸನಾ (ಯೆಮೆನ್‌): ಬುಧವಾರ ತಡರಾತ್ರಿ ಯೆಮೆನ್‌ನ ರಾಜಧಾನಿಯಲ್ಲಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮವೊಂದರಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಕನಿಷ್ಠ 78 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಹೌತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೌತಿ ನಡೆಸುತ್ತಿರುವ ಆಂತರಿಕ ಸಚಿವಾಲಯದ ಪ್ರಕಾರ, ಸನಾ ಮಧ್ಯಭಾಗದಲ್ಲಿರುವ ಓಲ್ಡ್ ಸಿಟಿಯಲ್ಲಿ ವ್ಯಾಪಾರಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಬಡವರು ಜಮಾಯಿಸಿದಾಗ … Continued

ಅರೆರೇ…ಚೌಕಾಕಾರದಲ್ಲಿದೆ ಈ ಸೈಕಲ್ ಚಕ್ರ….! ಆದ್ರೂ ರಸ್ತೆ ಮೇಲೆ ಸರಾಗವಾಗಿ ಓಡುತ್ತದೆ ಈ ಸೈಕಲ್‌ | ವೀಕ್ಷಿಸಿ

ಸಾಮಾನ್ಯವಾಗಿ ವಾಹನಗಳ ಚಕ್ರ ವೃತ್ತಾಕಾರ (ಗೋಳಾಕಾರ) ಆಗಿರುವುದನ್ನು ನೋಡಿದ್ದೇವೆ. ಚಕ್ರ ಸ್ವಲ್ಪ ಬೆಂಡ್ ಆದರೂ ವಾಹನ ಮುಂದೆ ಚಲಿಸಲು ಕಷ್ಟವಾಗುತ್ತದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ವೃತ್ತಾಕಾರದಲ್ಲಿರುವ ಬದಲು ಚೌಕಾಕಾರದಲ್ಲಿದೆ. ಆದರೂ ಸೈಕಲ್‌ ಸರಾಗವಾಗಿ ರಸ್ತೆ ಮೇಲೆ ಓಡುತ್ತದೆ. ಚೌಕಾಕಾರದ ಚಕ್ರಗಳನ್ನು ಹೊಂದಿರುವ ಈ ಬೈಸಿಕಲ್‌ ವೀಡಿಯೊ ಈಗ ಇಂಟರ್ನೆಟ್ಟಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಭೌತಶಾಸ್ತ್ರ ಮತ್ತು … Continued

ಸುಡಾನ್‌ನಲ್ಲಿ ಸೇನೆ-ಅರೆಸೇನಾಪಡೆ ನಡುವಿನ ಘರ್ಷಣೆ: ಸುಮಾರು 200 ಜನರು ಸಾವು, 1800 ಮಂದಿಗೆ ಗಾಯ

ಖಾರ್ಟೌಮ್: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾಪಡೆಗಳ ನಡುವಿನ ಹೋರಾಟದಲ್ಲಿ ಸುಮಾರು 200 ಜನರು ಸಾವಿಗೀಡಾಗಿದ್ದಾರೆ ಮತ್ತು 1,800 ಮಂದಿ ಗಾಯಗೊಂಡಿದ್ದಾರೆ.ಮೂರು ದಿನಗಳ ನಗರ ಯುದ್ಧದ ನಂತರ ಸೋಮವಾರ ಆಸ್ಪತ್ರೆಗಳು ಹಾನಿಗೊಳಗಾಗಿವೆ ಮತ್ತು ವೈದ್ಯಕೀಯ ಸರಬರಾಜು ಮತ್ತು ಆಹಾರದ ಕೊರತೆ ಉಂಟಾಗಿದೆ. 2021 ರ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಇಬ್ಬರು ಜನರಲ್‌ಗಳಾದ ಸುಡಾನ್‌ನ ಸೇನಾ ಮುಖ್ಯಸ್ಥ ಅಬ್ದೆಲ್ … Continued

ಈವರೆಗಿನ ಅತ್ಯಂತ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ: ಇತಿಹಾಸ ನಿರ್ಮಿಸಲಿದೆಯೇ ಎಲಾನ್ ಮಸ್ಕ್‌ ನ ಸ್ಪೇಸ್ ಎಕ್ಸ್ ಕಂಪನಿ…?

ಟೆಕ್ಸಾಸ್: ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲಾದ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ರಾಕೆಟ್ ಉಡಾವಣೆ ಯಶಸ್ವಿಯಾದರೆ ಇದು ಬಾಹ್ಯಾಕಾಶ ಇತಿಹಾಸದಲ್ಲೇ ಈವರೆಗೆ ಉಡಾವಣೆಯಾದ ರಾಕೆಟ್‌ಗಳಲ್ಲೇ ಬೃಹತ್ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ಸ್ಟಾರ್ ಶಿಪ್ ಎಂಬ ಹೆಸರಿನ … Continued

ಸೇತುವೆಯ ಮೇಲೆ ವಿಶಿಷ್ಟ ಪಟ್ಟಣ ನಿರ್ಮಿಸಿದ ಚೀನಾ | ವೀಕ್ಷಿಸಿ

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರ ಟ್ವೀಟ್‌ಗಳು ಆನ್‌ಲೈನ್‌ನಲ್ಲಿ ಹೆಚ್ಚಿನ ಗಮನ ಸೆಳೆಯುತ್ತವೆ. ಈ ವೇಳೆ ಅವರು ಚೀನಾದ ಚಾಂಗ್‌ಕಿಂಗ್‌ ಎಂಬಲ್ಲಿ ಸೇತುವೆಯ ಮೇಲೆ ನಿರ್ಮಿಸಲಾದ ವರ್ಣರಂಜಿತ ಟೌನ್‌ಶಿಪ್‌ನ ಆಕರ್ಷಕ ವೀಡಿಯೊ ಹಂಚಿಕೊಂಡಿದ್ದಾರೆ. ”ಇಲ್ಲಿ ವಾಸಿಸುವುದನ್ನು ಕಲ್ಪಿಸಿಕೊಳ್ಳಿ…..” ಎಂದು ಆರ್‌ಪಿಜಿ (RPG)ಎಂಟರ್‌ಪ್ರೈಸಸ್‌ ಅಧ್ಯಕ್ಷ ಹರ್ಷ ಗೋಯೆಂಕಾ ವೀಡಿಯೊವನ್ನು ಹಂಚಿಕೊಳ್ಳುವಾಗ … Continued

230 ಅಡಿ ಆಳದ ಗುಹೆಯಲ್ಲಿ 500 ದಿನಗಳನ್ನು ಒಬ್ಬಂಟಿಯಾಗಿ ಕಳೆದ ಸ್ಪೇನ್‌ ಮಹಿಳೆ | ವೀಕ್ಷಿಸಿ

ಸ್ಪೇನ್ ಮಹಿಳೆಯೊಬ್ಬಳು ಸುಮಾರು 230 ಅಡಿ ಆಳದ ಗುಹೆಯಲ್ಲಿ 500 ದಿನಗಳ ಕಾಲ ಒಬ್ಬಂಟಿಯಾಗಿ ಕಳೆಯುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ ಸ್ಪೇನ್‌ನ 50 ವರ್ಷದ ಮಹಿಳಾ ಪರ್ವತಾರೋಹಿ ಈ ಸಾಧನೆ ಮಾಡಿದ್ದಾರೆ. ಬಿಟ್ರೀಜ್ ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ 230 ಅಡಿ ಆಳದ ಗುಹೆಯಲ್ಲಿ 500 ದಿನಗಳ ಕಾಲ ಒಬ್ಬರೇ … Continued

ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಭಾಷಣ ಸ್ಥಳದಲ್ಲಿ ಸ್ಫೋಟ

ಶನಿವಾರ ವಕಯಾಮಾ ನಗರದಲ್ಲಿ ಭಾಷಣ ಪ್ರಾರಂಭಿಸುವ ಮುನ್ನ ಪೈಪ್ ಬಾಂಬ್ ಎಸೆದ ನಂತರ ಮತ್ತು ದೊಡ್ಡ ಸ್ಫೋಟದ ಶಬ್ದ ಕೇಳಿದ ನಂತರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಾರ್ವಜನಿಕ ಪ್ರಸಾರಕ NHK ಪ್ರಕಾರ, ಸ್ಥಳದಲ್ಲಿ ಸ್ಫೋಟದ ರೀತಿಯ ಧ್ವನಿ ಇತ್ತು. ಘಟನೆ ನಡೆದ ಸ್ಥಳದಲ್ಲಿ … Continued

25 ವರ್ಷಗಳಷ್ಟು ಹಳೆಯ ಒಂದು ಜೊತೆ ಬೂಟು 18 ಕೋಟಿ ರೂ.ಗಳಿಗೆ ಮಾರಾಟ…! ಏನಿದರ ವಿಶೇಷತೆ ..?

ನವದೆಹಲಿ: ಮನೆ, ಐಷಾರಾಮಿ ಕಾರು ಅಥವಾ ಚಿನ್ನದ ವಸ್ತುವನ್ನು ಹರಾಜಿನಲ್ಲಿ ಕೋಟಿಗಟ್ಟಲೆ ಹಣ ಕೊಟ್ಟು ಖರೀದಿ ಮಾಡಿದ್ದರ ಬಗ್ಗೆ ಕೇಳಿದ್ದೇವೆ. ಆದರೆ ಒಂದು ಜೊತೆ ಶೂ ಕೋಟಿಗಟ್ಟಲೆ ಹಣಕ್ಕೆ ಮಾರಾಟವಾಗಿದ್ದನ್ನು ಕೇಳಿದ್ದೀರಾ..? ಇಲ್ಲೊಂದು ಜೊತೆ ಶೂ ಸುಮಾರು 18 ಕೋಟಿ ರೂಪಾಯಿಗೆ (2.2 ಮಿಲಿಯನ್ ಡಾಲರ್) ಹರಾಜಾಗಿದೆ…! ಅದು ಕೂಡ ಇದು 25 ವರ್ಷಗಳಷ್ಟು ಹಳೆಯ … Continued

ತನ್ನ 40ನೇ ವಯಸ್ಸಿಗೆ 44 ಮಕ್ಕಳಿಗೆ ಜನ್ಮ ನೀಡಿದ ಈ ಮಹಾತಾಯಿ…!

ಮರಿಯಮ್ ನಬಟಾಂಜಿ ಎಂಬ ಮಹಿಳೆ ತನ್ನ ಮೊದಲ ಅವಳಿ ಮಕ್ಕಳಿಗೆ ತಾಯಿಯಾದಾಗ ಕೇವಲ 13 ವರ್ಷ ವಯಸ್ಸಿನವಳು. ಅವಳು 36 ವರ್ಷಕ್ಕೆ ಕಾಲಿಡುವ ಹೊತ್ತಿಗೆ, ಮರಿಯಮ್ 42 ಮಕ್ಕಳಿಗೆ ಜನ್ಮ ನೀಡಿದ್ದಳು; ಮತ್ತು 40 ನೇ ವಯಸ್ಸಿನಲ್ಲಿ, ಅವಳು 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ…! ಆದರೆ ಈಗ, ತನ್ನ ಪತಿ ಈ ದೈತ್ಯ ಕುಟುಂಬ ಬಿಟ್ಟು … Continued

ಅಮೆರಿಕದ ಕೆಂಟುಕಿ ಬ್ಯಾಂಕಿನಲ್ಲಿ ಗುಂಡಿನ ದಾಳಿ: 4 ಸಾವು, 8 ಮಂದಿಗೆ ಗಾಯ

ಕೆಂಟುಕಿಯ ಲೂಯಿಸ್‌ವಿಲ್ಲೆ ಡೌನ್‌ಟೌನ್‌ನಲ್ಲಿ ಬ್ಯಾಂಕ್ ಗುರಿಯಾಗಿಸಿಕೊಂಡು ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಪೊಲೀಸರು ಹೇಳಿದ್ದಾರೆ. ಗುಂಡು ಹಾರಿಸಿದವನನ್ನು ಮಾಜಿ ಉದ್ಯೋಗಿ ಎಂದು ಶಂಕಿಸಲಾಗಿದೆ. ಆತನೂ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ ರಾಜ್ಯದ ಅತಿದೊಡ್ಡ ನಗರವಾದ ಲೂಯಿಸ್‌ವಿಲ್ಲೆಯಲ್ಲಿರುವ ಓಲ್ಡ್ ನ್ಯಾಷನಲ್ ಬ್ಯಾಂಕ್‌ನಲ್ಲಿ … Continued