ವೀಡಿಯೊ…| ವೇಗವಾಗಿ ಓಡುವುದರಲ್ಲಿ ತನ್ನದೇ ಹಿಂದಿನ ದಾಖಲೆ ಮುರಿದ ಚೀನಾದ ʼಮ್ಯಾಗ್ನೆಟಿಕ್ ರೈಲುʼ : ಇದರ ವೇಗ ವಿಮಾನದ ವೇಗಕ್ಕೆ ಸಮವಂತೆ…!

ನವದೆಹಲಿ: ತನ್ನ ಹೊಸ ಮ್ಯಾಗ್ನೆಟಿಕ್ ಲೆವಿಟೇಟೆಡ್ (ಹೆಚ್ಚಿನ ವೇಗದ ರೈಲು ತಂತ್ರಜ್ಞಾನ) ರೈಲು ಕಡಿಮೆ ನಿರ್ವಾತ ಟ್ಯೂಬ್‌ನಲ್ಲಿ ನಡೆದ ಪರೀಕ್ಷೆಯ ಸಮಯದಲ್ಲಿ ಗಂಟೆಗೆ 623 ಕಿಲೋಮೀಟರ್ (ಗಂಟೆಗೆ 387 ಮೈಲುಗಳು) ವೇಗದಲ್ಲಿ ಓಡುವ ಮೂಲಕ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ ಎಂದು ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಷನ್ (CASIC) ಸಂಸ್ಥೆ ಹೇಳಿಕೊಂಡಿದೆ. ಸೌತ್ … Continued

ವೀಡಿಯೊ..! ‘ಬಾಲ್ ಆಫ್ ದಿ ಸೆಂಚುರಿ’ ; ಚೆಂಡಿನ ಸ್ಪಿನ್ನಿಗೆ ಬ್ಯಾಟರ್ ಕಕ್ಕಾಬಿಕ್ಕಿ : ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಕುವೈತ್‌ನ ಕೆಸಿಸಿ (KCC) T20 ಚಾಲೆಂಜರ್ಸ್ ಕಪ್ 2024ರಲ್ಲಿ ಕುವೈತ್ ನ್ಯಾಷನಲ್ಸ್ ಮತ್ತು ಎಸ್‌ಬಿಎಸ್‌ ಸಿಸಿ (SBS CC) ನಡುವಿನ ಪಂದ್ಯದ ಸಮಯದಲ್ಲಿ ಸ್ಪಿನ್ನರ್‌ ಎಸೆದ ಎಸೆತವು ಅದ್ಭುತ ಎಸೆತವಾಗಿ ಪರಿಣಮಿಸಿದ್ದು, ಬ್ಯಾಟರ್‌ ಕಕ್ಕಾಬಿಕ್ಕಿಯಾಗಿದ್ದಾನೆ. ಈ ಎಸೆತ ವೈರಲ್ ಆಗಿದ್ದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಹೊಸ ‘ಶತಮಾನದ ಚೆಂಡು’ ಎಂದು ಬಣ್ಣಿಸಿದ್ದಾರೆ. ಬೌಲರ್‌ … Continued

ವೀಡಿಯೊ..| ಆಘಾತಕಾರಿ ಘಟನೆ ; ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವು

ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಇಂಡೋನೇಷ್ಯಾದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾನೆ. ಇಂಡೋನೇಷ್ಯಾದ 2 FLO FC ಬಂಡಂಗ್ ಮತ್ತು FBI ಸುಬಾಂಗ್ ನಡುವಿನ ಫುಟ್ಬಾಲ್ ಪಂದ್ಯದ … Continued

39ನೇ ವರ್ಷಕ್ಕೆ 19 ಮಕ್ಕಳಿಗೆ ಜನ್ಮ ನೀಡಿದ ಈ ಮಹಾತಾಯಿ…! ಈಗ 20ನೇ ಮಗುವಿಗೆ ಗರ್ಭಿಣಿ ; ಈ ಮಕ್ಕಳನ್ನು ಸಾಕುವುದು ಸರ್ಕಾರವಂತೆ..!!

19 ಮಕ್ಕಳಿಗೆ ತಾಯಿಯಾಗಿರುವ 39 ವರ್ಷದ ಕೊಲಂಬಿಯಾದ ಮಹಿಳೆ ತನ್ನ 20 ನೇ ಮಗುವನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ. ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ, ಮಾರ್ಥಾ ಎಂಬ ಮಹಿಳೆ ತನ್ನ ಕುಟುಂಬವನ್ನು ಇನ್ನೂ ವಿಸ್ತಾರವಾಗಬಕು ಎಂದು ತನ್ನ ಇಚ್ಛೆ ವ್ಯಕ್ತಪಡಿಸಿದ್ದಾಳೆ. ಅವಳು ತಾಯ್ತನ ಲಾಭದಾಯಕ ಉದ್ಯಮವಾಗಿ ನೋಡುತ್ತಾಳೆ. ಕೊಲಂಬಿಯಾದ ಮೆಡೆಲಿನ್‌ನ ನಿವಾಸಿ ಮಾರ್ಥಾ, ತನ್ನ ಪ್ರತಿಯೊಂದು ಮಕ್ಕಳಿಗೆ … Continued

ಪಾಕಿಸ್ತಾನ ಚುನಾವಣೆ: ಸಮ್ಮಿಶ್ರ ಸರ್ಕಾರ ರಚನೆಗೆ ಇತರ ಪಕ್ಷಗಳನ್ನು ಆಹ್ವಾನಿಸಿದ ನವಾಜ್ ಷರೀಫ್

ಇಸ್ಲಾಮಾಬಾದ್‌ : ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದರೂ ಮಾಜಿ ಪ್ರಧಾನಿ ನವಾಜ್ ಷರೀಫ್ ಶುಕ್ರವಾರ (ಫೆಬ್ರವರಿ 9) ತಮ್ಮ ಪಿಎಂಎಲ್-ಎನ್ ಪಕ್ಷವು ದೇಶದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗದ ಪ್ರಕಾರ, 224 ಕ್ಷೇತ್ರಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಸ್ವತಂತ್ರರು 92 ಸ್ಥಾನಗಳನ್ನು, ಪಿಎಂಎಲ್-ಎನ್ 63, … Continued

ಪಾಕಿಸ್ತಾನದ ಚುನಾವಣೆ : ಮತದಾನಕ್ಕೆ ಒಂದು ದಿನ ಮೊದಲು ಅಭ್ಯರ್ಥಿಗಳ ಚುನಾವಣಾ ಕಚೇರಿ ಬಳಿ ಸ್ಫೋಟ ; 22 ಮಂದಿ ಸಾವು

ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನ್‌ನಲ್ಲಿ ಚುನಾವಣಾ ಅಭ್ಯರ್ಥಿಗಳ ಕಚೇರಿಯ ಬಳಿ ಎರಡು ಸ್ಫೋಟಗಳು ಸಂಭವಿಸಿದ್ದು, 22 ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮತ್ತು ಗುರುವಾರದ ಚುನಾವಣೆಯ ಮುನ್ನಾದಿನ ಈ ಸ್ಫೋಟ ಸಂಭವಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ದಾಳಿಗಳು ಮತ್ತು ಆರ್ಥಿಕ ಬಿಕ್ಕಟ್ಟು ಮತ್ತು ಪರಮಾಣು-ಶಸ್ತ್ರಸಜ್ಜಿತ ದೇಶವನ್ನು ಬೆದರಿಸುವ ಇತರ ಸಮಸ್ಯೆಗಳ … Continued

ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಬಹುದೊಡ್ಡ ವಂಚನೆ : ನಕಲಿ ʼಸಿಎಫ್‌ಒ’ನಿಂದ ವೀಡಿಯೊ ಕರೆ ಮೂಲಕ ಕಂಪನಿಗೆ 200 ಕೋಟಿ ರೂ. ಪಂಗನಾಮ ; ಮೋಸದಾಟ ಹೇಗಾಯ್ತು? ವಿವರ ಇಲ್ಲಿದೆ

ಬಹುರಾಷ್ಟ್ರೀಯ ಕಂಪನಿಯ ಹಾಂಗ್ ಕಾಂಗ್ ಶಾಖೆಯು $25.6 ಮಿಲಿಯನ್ (200 ಕೋಟಿ ರೂ.) ಕಳೆದುಕೊಂಡಿದೆ. ವಂಚಕರು ಡೀಪ್‌ಫೇಕ್ ತಂತ್ರಜ್ಞಾನ ಬಳಸಿಕೊಂಡು ವೀಡಿಯೊ ಕಾನ್ಫರೆನ್ಸ್ ಕರೆಯಲ್ಲಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ (CFO) ಎಂದು ಪೋಸ್ ನೀಡಿ ಹಣ ವರ್ಗಾವಣೆಗೆ ಆದೇಶಿಸಿ ಹಣ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋಸಹೋದ ಉದ್ಯೋಗಿ ಹೊರತುಪಡಿಸಿ ವೀಡಿಯೊ ಕಾನ್ಫರೆನ್ಸ್ … Continued

ಬ್ರಿಟನ್‌ ರಾಜ ಚಾರ್ಲ್ಸ್‌ಗೆ ಕ್ಯಾನ್ಸರ್ ಇರುವುದು ಪತ್ತೆ: ಬಕಿಂಗ್‌ಹ್ಯಾಮ್ ಅರಮನೆಯಲ್ಲೇ ಚಿಕಿತ್ಸೆ

ಲಂಡನ್ : ಬ್ರಿಟನ್ ರಾಜ ಚಾರ್ಲ್ಸ್ -3 (King Charles III) ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಕಿಂಗ್‌ ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ. 75 ವರ್ಷದ ರಾಜ ಚಾರ್ಲ್ಸ್ -3 ಅವರಿಗೆ ಯಾವ ಕ್ಯಾನ್ಸರ್ ಇದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾದ ಕ್ಯಾನ್ಸರ್ … Continued

ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಆಸ್ಟ್ರೇಲಿಯಾದ ಸೆನೆಟರ್ ವರುಣ ಘೋಷ್

ಕ್ಯಾನ್‌ಬೆರಾ: ಬ್ಯಾರಿಸ್ಟರ್ ವರುಣ ಘೋಷ್ (೩೮) ಅವರು ಮಂಗಳವಾರ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಸಂಸತ್ತಿನ ಮೊದಲ ಭಾರತ ಸಂಜಾತ ಸದಸ್ಯರಾಗಿದ್ದಾರೆ. ಲೆಜಿಸ್ಲೇಟಿವ್ ಅಸೆಂಬ್ಲಿ ಮತ್ತು ಲೆಜಿಸ್ಲೇಟಿವ್ ಕೌನ್ಸಿಲ್ ವರುಣ ಘೋಷ್ ಅವರನ್ನು ಫೆಡರಲ್ ಸಂಸತ್ತಿನ ಸೆನೆಟ್‌ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಆಯ್ಕೆ ಮಾಡಿದ ನಂತರ ಪಶ್ಚಿಮ ಆಸ್ಟ್ರೇಲಿಯಾದ ಅವರನ್ನು ಹೊಸ ಸೆನೆಟರ್ ಆಗಿ … Continued

ವೀಡಿಯೊ..| 700 ಕೋಟಿ ರೂ.ವೆಚ್ಚದಲ್ಲಿ ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಾಲಯ ಫೆ.14 ರಂದು ಉದ್ಘಾಟನೆ : ದೇವಾಲಯದ ಅದ್ಭುತ ಕೆತ್ತನೆ-ವೈಶಿಷ್ಟ್ಯಗಳ ಮಾಹಿತಿ..

700 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ವಿಸ್ತಾರವಾದ ಹಿಂದೂ ದೇವಾಲಯ, ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS)ಯ 108-ಅಡಿ ಎತ್ತರದ ಹಿಂದೂ ಮಂದಿರವು ಅಬುಧಾಬಿಯ ಹೊರಭಾಗದಲ್ಲಿರುವ ರಾಜಧಾನಿಯ ಅಬು ಮುರೇಖಾ ಪ್ರದೇಶದಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ. ಇದು ಯುನೈಟೆಡ್ ಅರಬ್ ಎಮಿರೇಟ್ಸ್‌ಮತ್ತು ಪಶ್ಚಿಮ ಏಷ್ಯಾದಲ್ಲಿ ನಿರ್ಮಿಸಿದ ಮೊದಲ ಕಲ್ಲಿನ ಹಿಂದೂ ದೇವಾಲಯವಾಗಿದೆ. BAPS ಗ್ಲೋಬಲ್ … Continued