ಕುಮಟಾ ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಯಶಸ್ವಿಯಾದ ಕೋವಿಡ್ ಲಸಿಕಾ ಅಭಿಯಾನ

ಕುಮಟಾ; ಉತ್ತರ ಕನ್ನಡ ಜಿಲ್ಲೆ  ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಒಟ್ಟು ೨೦೬ ಜನರಿಗೆ ಎರಡನೆ ಡೋಸ್ ಕೋವಿಡ್ ಲಸಿಕೆ ನೀಡಲಾಯಿತು. ಕಾಲೇಜಿನ ೧೮ ವರ್ಷ ಮೇಲ್ಪಟ್ಟ ಪದವಿ, ಬಿ.ಬಿ.ಎ ಮತ್ತು ಎಂ.ಕಾಮ್‌ ವಿದ್ಯಾರ್ಥಿಗಳು ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಮಾತನಾಡಿ, ಲಸಿಕೆ ಪಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳು … Continued

ಉತ್ತರ ಕನ್ನಡ ಜಿಲ್ಲೆ ಅತಿವೃಷ್ಟಿ-ಪ್ರವಾಹಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ: ದೇಶಪಾಂಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಅಪಾರ ಪ್ರಮಾಣದಲ್ಲಿ ಆಸ್ತಿ,ಬೆಳೆಗಳು, ಮನೆಗಳು ಮತ್ತು ಜೀವ ಹಾನಿಯಾಗಿದ್ದರೂ ಸರ್ಕಾರ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅತಿವೃಷ್ಠಿಯಲ್ಲಿ ಹಾನಿಗೊಳಗಾದ ತಾಲೂಕಿನ ಹಲವು ಭಾಗಗಳಿಗೆ ಭೇಟಿ ನೀಡಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪ ದಿನಗಳಿಂದ ಹಾನಿಗೊಳಗಾದ … Continued

ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಆಯ್ಕೆ: ರೂಪಾಲಿ ಸಂತಸ

ಕಾರವಾರ: ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿರುವುದು ಅತೀವ ಸಂತಸವಾಗಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ನಾಯ್ಕ ಪ್ರತಿಕ್ರಿಯಿಸಿದ್ದಾರೆ. ಮಾನ್ಯ ಬೊಮ್ಮಾಯಿ ಅವರು ಸರ್ವಾನುಮತದಿಂದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿರುವುದು ಹರ್ಷದಾಯಕ ಸಂಗತಿ. ರೈತರು, ಬಡವರು, ಹಿಂದುಳಿದವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿರುವ ಮಾನ್ಯ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿಪರ … Continued

ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶಿವರಾಮ ಹೆಬ್ಬಾರ ಅಭಿನಂದನೆ

ಕಾರವಾರ: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಪಕ್ಷದ ಹಿರಿಯ ನಾಯಕರು ಹಾಗೂ ಆತ್ಮೀಯರಾದ ಬಸವರಾಜ ಬೊಮ್ಮಾಯಿ ಅವರಿಗೆ ಶಿವರಾಮ ಹೆಬ್ಬಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹೋರಾಟ ಮೂಲಕವಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿ ದಶಕಗಳ ಕಾಲ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನುಭವಿ ರಾಜಕಾರಣಿ ಬಸವರಾಜ ಬೊಮ್ಮಾಯಿ ಅವರಿಗೆ ಕನ್ನಡ ನಾಡಿನ ಮುಖ್ಯಮಂತ್ರಿ ಸ್ಥಾನ ಲಭಿಸಿರುವುದು … Continued

ಮಾಣಿ ಹೊಳೆಯಲ್ಲಿ ಮನೆಯೊಟ್ಟಿಗೆ ಕೊಚ್ಚಿ ಹೋದ ಬದುಕು

ಸಿದ್ದಾಪುರ : ತಾಲೂಕಿನ ಕಾಸಸೂರು ಸಮೀಪದ ಹಸರಗೋಡ ಗ್ರಾಮ ಪಂಚಾಯ ವ್ಯಾಪ್ತಿಯ ಕರ್ಜಗಿ ಗ್ರಾಮದ ನಿವಾಸಿ ಮಹಾಬಲೇಶ್ವರ ಗೌಡ ಎಂಬವರ ಮನೆ ಮಾಣಿಹೊಳೆ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ನೀರಿನ ವೇಗಕ್ಕೆ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ಮನೆಯ ಅಸ್ತಿಪಂಜರ ಮಾತ್ರ ಉಳಿದಿದೆ. ಈಗ ಮನೆ ಕಳೆದುಕೊಂಡ ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ. ಬಡ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ … Continued

ಕುಮಟಾ; ೧೫ ಕ್ಕೂ ಹೆಚ್ಚು ಮನೆ ಸಂಪೂರ್ಣ ಕುಸಿತ, ೬೦೦ ಜನರ ಸ್ಥಳಾಂತರ, ಎನ್.ಡಿಆರ್ ಎಫ್ ತಂಡ ಆಗಮನ

ಕುಮಟಾ: ಶಿರಸಿ -ಸಿದ್ದಾಪುರದಲ್ಲಿ ಸುರಿದ ಮಳೆ ಕರಾವಳಿಯಲ್ಲಿ ಪ್ರವಾಹದ ಭೀಕರತೆ ಸೃಷ್ಟಿಸಿದೆ. ಹೇಚ್ಚುತ್ತಿರುವ ನದಿ ನೀರಿನ ನೀರಿನ ಮಟ್ಟದಿಂದ ಜನರನ್ನು ರಕ್ಷಿಸುವುದೇ ತಾಲೂಕಾಡಳಿಕ್ಕೆ ಹರಸಾಹಸವಾಗಿದೆ. ಸುಮಾರು ೫೦೦ಕ್ಕೂ ಹೆಚ್ಚುಮನೆಗಳು ಜಲಾವೃತಗೊಂಡಿದೆ. ಹೊಲನಗದ್ದೆ, ಹೀಣಿ, ದಿವಗಿ, ಮಿರ್ಜಾನ, ಹೆಗಡೆ, ಐಗಳಕೂರ್ವೆ ಇತ್ಯಾದಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು ೨೮ಕ್ಕೂ ಹೆಚ್ಚು ನೆಮ್ಮದಿ ಕೇಂದ್ರವನ್ನು ತೆರೆಯಲಾಗಿದೆ. ೧೫ ಮನೆಗಳು ಕುಸಿದು … Continued

ಶಿರಸಿ ತಾಲೂಕಿನಲ್ಲಿ ದಾಖಲೆಯ 24 ಸೆಂಮೀ ಮಳೆ, ಉಕ್ಕಿದ ನದಿಗಳು, ತೋಟ-ಗದ್ದೆಗಳು ಜಲಾವೃತ

ಶಿರಸಿ: ಕಳೆದ ಇಪ್ಪತ್ನಾಲ್ಕು ತಾಸುಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 24 ಸೆಂಮೀ. ಮಳೆ ಸುರಿದಿದೆ. ನದಿ, ಕೊಳ್ಳಗಳು ಭರ್ತಿಯಾಗಿದ್ದು ಹಲವೆಡೆ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಮಾರಿಗದ್ದೆ, ಸರಕುಳಿ, ಮಾದ್ನಕಳ ಸೇತುವೆಗಳ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಪಟ್ಟಣಹೊಳೆ, ಕೆಂಗ್ರೆ ಹೊಳೆಯೂ ಉಕ್ಕಿ ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. … Continued

ಪರ್ತಗಾಳಿ ವಿದ್ಯಾಧಿರಾಜ ಶ್ರೀಗಳು ಅವತಾರ ಪುರುಷರಾಗಿದ್ದರು, ಕಾಲ್ನಡಿಗೆಯಲ್ಲಿ ೩೭೦ ಕಿಮೀ ನಡೆದು ಅಸಾಧ್ಯ ಗಂಡಕಿಯಾತ್ರೆ ಮಾಡಿದ್ದರು..

ಕುಮಟಾ; ಗುರುವಾರ ಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಬಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ್ ಮಾತನಾಡಿ, ಶ್ರೀಗಳು ಅವತಾರ ಪುರುಷರಾಗಿದ್ದರು. ಭಾರತೀಯ ಧರ್ಮ-ಸಂಸ್ಕೃತಿಯ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದಾರೆ. ಧರ್ಮಗ್ರಂಥಗಳಲ್ಲಿ ಆಳವಾದ … Continued

ದ್ವಿತೀಯ ಪಿಯುಸಿ: ಡಾ.ಬಾಳಿಗಾ ವಾಣಿಜ್ಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪದವಿಪೂರ್ವ ವಿಭಾಗದ ೧೧೦ ವಿದ್ಯಾರ್ಥಿಗಳಲ್ಲಿ ೧೨ ಡಿಸ್ಟಿಂಗಶ್‌ನ್ ೬೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ೩೧ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣ ರಾಗಿದ್ದಾರೆ. ಕಾರ್ತಿಕ ಹೆಗಡೆ ಸಾರಂಗ ಮತ್ತು ಚೇತನಾ ದತ್ತಾತ್ರಯ ಭಟ್ಟ ಎಲ್ಲ ವಿಷಯಗಳಲ್ಲಿಯೂ ನೂರೂ ಅಂಕ ಗಳಿಸಿ ೬೦೦ ಅಂಕ ಗಳಿಸಿದ್ದಾರೆ.ಪ್ರಜ್ಞಾ ಹೆಗಡೆ ೫೭೯ ಅಂಕ ಹಾಗೂ ಮಿಥುನ ನಾಯಕ … Continued

ಹಾಲಕ್ಕಿ ಸಮುದಾಯ ಭವನ ಲೋಕಾರ್ಪಣೆ

ಕುಮಟಾ : ತಾಲ್ಲೂಕಿನ ದೀವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘ ವತಿಯಿಂದ ಆಯೋಜಿಸಲಾಗಿದ್ದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದ ಲೋಕಾರ್ಪಣೆ ಮತ್ತು ಗುರುವಂದನಾ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ , ಸಚಿವರಾದ ಶಿವರಾಮ್ ಹೆಬ್ಬಾರ್ … Continued