ಬಾಡಿಗೆದಾರ-ಮಾಲೀಕರ ವಿವಾದ ಬಗೆಹರಿಸಲು ಕರ್ನಾಟಕದಲ್ಲಿ ಮಾದರಿ ಟೆನೆನ್ಸಿ ಕಾಯ್ದೆ ಅಳವಡಿಸಿಕೊಳ್ಳಲು ಚಿಂತನೆ

ಬೆಂಗಳೂರು: ಬಾಡಿಗೆದಾರ-ಮಾಲೀಕರ ವಿವಾದಗಳನ್ನು ಕೊನೆಗೊಳಿಸಲು ಮತ್ತು ಬಾಡಿಗೆ ವಸತಿ ವಲಯವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾದರಿ ಬಾಡಿಗೆ ಕಾಯ್ದೆಯನ್ನು ಅಳವಡಿಸಿಕೊಳ್ಳಲು ಕರ್ನಾಟಕ ಚಿಂತನೆ ನಡೆಸಿದೆ. ರಾಜ್ಯ ಕಂದಾಯ ಸಚಿವ ಆರ್.ಅಶೋಕ ಅವರು ಗುರುವಾರ ಸುದ್ದಿಗಾರರೊಂದಿಗಿನ ಸಂವಾದದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಕಂದಾಯ ಇಲಾಖೆ ಯೋಜನೆಗಳ ಪರಿಶೀಲನೆಯ ನಂತರ, ಸುದ್ದಿಗಾರರೊಂದಿಗೆಮಾತನಾಡಿದ ಅವರು, ರಾಜ್ಯ ಸರ್ಕಾರವು … Continued

ಜಲಜೀವನ ಮಿಷನ್ ಅನ್ವಯ ಕರ್ನಾಟಕಕ್ಕೆ 5,009 ಕೋಟಿ ರೂ.

posted in: ರಾಜ್ಯ | 0

ಹೊಸದಿಲ್ಲಿ: ಪ್ರತಿ ಮನೆಗೂ ಶುದ್ಧ  ನಲ್ಲಿ  ನೀರು ಒದಗಿಸುವ ಪ್ರಧಾನಿ ಮೋದಿಯವರ ಆಶಯ ಕಾರ್ಯರೂಪಕ್ಕೆ ತರುವ ಜಲ ಜೀವನ್ ಮಿಷನ್ ಅನ್ವಯ ಕೇಂದ್ರ ಸರ್ಕಾರವು ೨೦೨೧-೨೨ರ ಸಾಲಿಗೆ ಕರ್ನಾಟಕಕ್ಕೆ ೫,೦೦೮.೭೯ ಕೋಟಿ ರೂ. ಅನುದಾನ ಹೆಚ್ಚಿಸಿದೆ. ೨೦೨೦-೨೧ರಲ್ಲಿ ಈ ಹಣ ೧,೧೮೯.೪೦ ಕೋಟಿ ರೂ. ಆಗಿತ್ತು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು … Continued

ಅಪರೂಪದ ಗಂಭೀರ ಕಾಯಿಲೆ ‘ಡುಷೆನ್ ಮಸ್ಕ್ಯುಲರ್‌ಡಿಸ್ಟ್ರೋಫಿ’: ೮ ವರ್ಷದ ಬಾಲಕನ ಚಿಕಿತ್ಸೆಗೆ ಬೇಕಿದೆ ನೆರವು

ಧಾರವಾಡ: ವಿದ್ವತ್ ವಿಶ್ವನಾಥ ಕಂಚೀಬೈಲು ಎಂಬ ೮ ವರ್ಷದ ಬಾಲಕ ‘ಡುಷೆನ್ ಮಸ್ಕ್ಯುಲರ್‌ಡಿಸ್ಟ್ರೋಫಿ’ (Duchene Muscular Dystrophy) ಎಂಬ ಅಪರೂಪದ, ಗಂಭೀರಕಾಯಿಲೆಯಿಂದ ಬಳಲುತ್ತಿದ್ದಾನೆ. ಮಾಂಸಖಂಡಗಳು ಸಂಕುಚಿತಗೊಂಡು, ಕ್ರಮೇಣ ನಡೆದಾಡಲಾಗದೇ ನೆಲಕ್ಕೊರಗಿ ಸಾವು-ಬದುಕಿನ ನಡುವೆ ಹೋರಾಡಬೇಕಾದ ರೋಗ ಇದು. ಮಹಾರಾಷ್ಟ್ರದ ನವೀ ಮುಂಬೈನಲ್ಲಿರುವ ತಜ್ಞ ವೈದ್ಯಡಾ.ಪ್ರದೀಪ್ ಮಹಾಜನ್‌ ಅವರು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ‘ಸ್ಟೆಮ್‌ ಸೆಲ್ಸ್‌ ಥೆರಪಿ’ಅವಶ್ಯಕತೆ … Continued

ರಾಜ್ಯ ಸರ್ಕಾರದಿಂದ ಕೊರೊನಾನಿಂದ ಮೃತಪಟ್ಟ ರೈತರ ಡಿಸಿಸಿ, ಅಪೆಕ್ಸ್ ಬ್ಯಾಂಕ್ ಸಾಲಮನ್ನಾ

ಬೆಂಗಳೂರು: ಕೋವಿಡ್‌-19 ಗೆ ಬಲಿಯಾದ ರೈತರು ಜಿಲ್ಲಾ ಕ್ರೆಡಿಟ್ ಕೋ-ಆಪರೇಟಿವ್ (ಡಿಸಿಸಿ) ಮತ್ತು ಅಪೆಕ್ಸ್ ಬ್ಯಾಂಕುಗಳಿಂದ ಪಡೆದ ಸಾಲವನ್ನು ರಾಜ್ಯ ಸರ್ಕಾರವು ಮನ್ನಾ ಮಾಡುತ್ತಿದೆ ಎಂದು ಕರ್ನಾಟಕ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಗುರುವಾರ ಹೇಳಿದ್ದಾರೆ. ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. ಲಾಭದಾಯಕವಾಗಿರುವ ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕುಗಳ … Continued

ವಸತಿ ಯೋಜನೆಗಳಡಿ 9 ಲಕ್ಷ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆ ನಿರ್ಮಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಮನೆಗಳಲ್ಲಿ … Continued

ಕರ್ನಾಟಕದಲ್ಲಿ ಕೋವಿಡ್‌ ಸಕಾರಾತ್ಮಕ ದರ ಇಳಿಮುಖ

ಬೆಂಗಳೂರು: ಕೊರೊನಾ ಸೋಂಕು ಸಾವಿನ ಸಂಖ್ಯೆ ರಾಜ್ಯದಲ್ಲಿ ಗುರುವಾರ ನಿನ್ನೆಗಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ ಗುರುವಾರ ಹೊಸದಾಗಿ 2,530 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 62 ಮಂದಿ ಮೃತಪಟ್ಟಿದ್ದಾರೆ. ಇದೇವೇಳೆ 3,344 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,64,868 ಮಂದಿಗೆ ಏರಿಕೆಯಾಗಿದೆ.ಇ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 27,90453 ಕ್ಕೆ ಹೆಚ್ಚಳವಾಗಿದೆ .ಒಟ್ಟು … Continued

ನಟ ದುನಿಯಾ ವಿಜಯ್ ತಾಯಿ ವಿಧಿವಶ

posted in: ರಾಜ್ಯ | 0

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಇಂದು ವಿಧಿವಶರಾಗಿದ್ದಾರೆ. ಈ ಕುರಿತು ನಟ ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದ್ದ ಕಾರಣದಿಂದ ಮನೆಯಲ್ಲಿಯೇ ಚಿಕಿತ್ಸೆಗಾಗಿ ದುನಿಯಾ ವಿಜಯ್ ವ್ಯವಸ್ಥೆ ಮಾಡಿದ್ದರು. ಕಳೆದ 23 ದಿನದಿಂದ ವೈದ್ಯರು ಮನೆಗೆ ಆಗಮಿಸಿ … Continued

ಆಸ್ತಿಕರ ವಿನಾಯಿತಿಗೆ ನಗರಾಭಿವೃದ್ಧಿ ಸಚಿವರಿಂದ ಭರವಸೆ

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ಪೆರಿಕ್ಕರ್ ಸುಂದರ ಅಧ್ಯಕ್ಷತೆಯಲ್ಲಿ ಗುರುವಾರ ಕೈಗಾರಿಕೋಧ್ಯಮಿಗಳ ಮತ್ತು ಎಪಿಎಂಸಿ ವರ್ತಕರ ಆಸ್ತಿಗಳ ತೆರಿಗೆ ಕುರಿತು ಸಭೆ ನಡೆಯಿತು, ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ನೇತೃತ್ವದಲ್ಲಿ ನೇತೃತ್ವದಲ್ಲಿ ಆಸ್ತಿ ತೆರಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ ಅವರಿಗೆ ಮನವಿ … Continued

ಮಹಿಳಾ ಸಬಲೀಕರಣ, ಸಮಗ್ರ ಭಾರತದ ಅಭಿವೃದ್ಧಿ ನನ್ನ ಗುರಿ

posted in: ರಾಜ್ಯ | 0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವ ಮೂಲಕ ರಾಜಕೀಯದಲ್ಲಿನ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದು ಮಹಿಳೆಯರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ … Continued

ತಾಪಂ-ಜಿಪಂ ಮೀಸಲಾತಿ ನಿಗದಿಗೆ ಸಚಿವ ಈಶ್ವರಪ್ಪ ಅಸಮಾಧಾನ

ಕಲಬುರಗಿ: ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಪ್ರತಿನಿಧಿಯಾಗಿ ಇದು ನನ್ನ ವಯಕ್ತಿಕ ಅಭಿಪ್ರಾಯವೇ ಹೊರತು ಸಚಿವನಾಗಿ ಅಲ್ಲ ಎಂದು ಹೇಳಿದ್ದಾರೆ. ಡಿಸೆಂಬರ್ ವರೆಗೆ ಚುನಾವಣೆ ಮುಂದೂಡಬೇಕೆಂದು ಸರ್ಕಾರ ರಾಜ್ಯ … Continued