ಕರ್ನಾಟಕದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಶೇ.11ರಷ್ಟು ಕೊರತೆ..!

ಬೆಂಗಳೂರು: ರಾಜ್ಯದಲ್ಲಿ ಜೂನ್ 1ರಿಂದ ನಿನ್ನೆಯವರೆಗೆ (ಜುಲೈ 6ರ ವರೆಗೆ) ನೈರುತ್ಯ ಮುಂಗಾರಿನಲ್ಲಿ ಶೇ.11ರಷ್ಟು ಕೊರತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಈ ಬಾರಿಯ ಮುಂಗಾರು ಮಳೆ ವಾಡಿಕೆ ಪ್ರಮಾಣದಷ್ಟು ರಾಜ್ಯದಲ್ಲಿ ಆಗಿಲ್ಲ. ವಾಡಿಕೆಗಿಂತ ಶೇ.11ರಷ್ಟು ಮಳೆ ಕೊರತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ … Continued

ಸಿಡಿ ಪ್ರಕರಣ: ತನಿಖೆ ಮುಕ್ತಾಯ,ಅಂತಿಮ ತನಿಖಾ ವರದಿ ಸಿದ್ಧ ಎಂದ ಎಸ್‌ಐಟಿ

ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಮುಕ್ತಾಯವಾಗಿದ್ದು, ಅಂತಿಮ ತನಿಖಾ ವರದಿ ಸಿದ್ಧವಿದೆ ಎಂದು ಹೈಕೋರ್ಟ್​ಗೆ ಎಸ್‌ಐಟಿ ಮಂಗಳವಾರ ಮಾಹಿತಿ ನೀಡಿದೆ. ಯುವತಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ದಾಖಲೆಗಳ ಇಂಗ್ಲಿಷ್ ಅನುವಾದ ಸಲ್ಲಿಸದ ಹಿನ್ನೆಲೆಯಲ್ಲಿ ಇಂಗ್ಲಿಷ್ ಅನುವಾದ ಸಲ್ಲಿಸಲು ಯುವತಿ ಪರ ವಕೀಲರಿಗೆ ಸೂಚನೆ ನೀಡಿದ್ದು, ಜುಲೈ … Continued

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ, ಜುಲೈ 15, 17ರಂದು ಅಣಕು ಪರೀಕ್ಷೆ: ಸಚಿವ ಸುರೇಶಕುಮಾರ್

ಬೆಂಗಳೂರು: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಲಸಿಕೆ ಪಡೆಯುವುದರೊಂದಿಗೆ ಪರೀಕ್ಷೆ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ … Continued

ಕುಮಟಾ; ಬಾಡ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯ ಮಣಿಗಾರ ಮಹಾಬಲೇಶ್ವರ ಹೆಗಡೆ ನಿಧನ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ಮಣಿಗಾರರಾಗಿದ್ದ ಮಹಾಬಲೇಶ್ವರ ಹೆಗಡೆ (೯೨)ಮಂಗಳವಾರ ರಾತ್ರಿ ನಿಧನರಾದರು. ಸೂಮಾರು ೭೦ ವರ್ಷಗಳ ಕಾಲ ಶ್ರೀದೇವಾಲಯದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.ಕೃಷಿಕರು ಆಗಿದ್ದ ಹೆಗಡೆ ತಮ್ಮ ೯೨ ರ ಇಳಿವಯಸ್ಸಿನಲ್ಲೂ ಭತ್ತ ಇತ್ಯಾದಿ ಕೃಷಿಯಲ್ಲಿ ನಿರತರಾಗಿದ್ದರು.ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ … Continued

ಕರ್ನಾಟಕದಲ್ಲಿ ಮಂಗಳವಾರ ದೈನಂದಿನ ಪ್ರಕರಣ ಮತ್ತೆ ಏರಿಕೆ..!

ಬೆಂಗಳೂರು:ಕರ್ನಾಟಕದಲ್ಲಿ ಮಂಗಳವಾರ ಕಳೆದ 24 ಗಂಟೆಗಳಲ್ಲಿ 3104 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 28,59,595ಕ್ಕೆ ಏರಿಕೆಯಾಗಿದೆ. 4992 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 2784030ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮಂಗಳವಾರ 92 ಮಂದಿ ಮೃತಪಟ್ಟಿದ್ದು, ಈವರೆಗಿನ ಒಟ್ಟಾರೆ ಮೃತರ ಸಂಖ್ಯೆ 35526ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ … Continued

ಚಾಮರಾಜನಗರ ಆಮ್ಲಜನಕ ದುರಂತ: ಮೃತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಹೈ ಕೋರ್ಟ್​ ಸೂಚನೆ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2ರಂದು ನಡೆದಿದ್ದ ಆಮ್ಲಜನಕ ದುರಂತ ಪ್ರಕರಣದಲ್ಲಿ ಮೃತಪಟ್ಟ 13 ಮೃತರಿಗೆ 5 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಆಮ್ಲಜನಕ ದುರಂತದಿಂದ 24 ಮಂದಿ ಮೃತಪಟ್ಟಿದ್ದರು. ಆಮ್ಲಜನಕ ಕೊರತೆಯಿಂದ ಬೆಳಗ್ಗೆ ರಾತ್ರಿ 13 ಜನರು ಮೃತಪಟ್ಟಿದ್ದು. ಇವರ 13 ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ನಂತರ … Continued

ನಮ್ಮ ಮೆಟ್ರೊಗೆ ಜಗಜ್ಯೋತಿ ಬಸವೇಶ್ವರರ ಹೆಸರಿಡಿ:ಸಿಎಂಗೆ ಮನವಿ

posted in: ರಾಜ್ಯ | 0

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೊಗೆ ವಿಶ್ವಗುರು ಶ್ರೀಜಗಜ್ಯೋತಿ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಾಕ್ಷ ಡಾ.ಶರಣಪ್ಪ ಎಂ.ಕೊಟಗಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ವಿಶ್ವಗುರು ಶ್ರೀಜಗಜ್ಯೋತಿ ಬಸವೇಶ್ವರರು ೧೨ನೇ ಶತಮಾನದಲ್ಲಿಯೇ ಅನುಭವಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವದ ಅರಿವು ಮೂಡಿಸಿ ಈಗಿನ ಸಂವಿಧಾನದ ಕಲ್ಪನೆಯನ್ನು … Continued

ಜುಲೈ 8ಕ್ಕೆ ಕೇಂದ್ರ ಸಂಪುಟ ವಿಸ್ತರಣೆ ಸಾಧ್ಯತೆ : ಅದೃಷ್ಟ ಕರ್ನಾಟಕದ ಇಬ್ಬರಿಗೋ ಮೂವರಿಗೋ..?

posted in: ರಾಜ್ಯ | 0

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬಂದಿದ್ದು, ಭಾರೀ ಕುತೂಹಲ ಕೆರಳಿಸಿರುವ ಕೇಂದ್ರ ಸಚಿವ ಸಂಪುಟ ಪುನಾರಚನೆ ಜುಲೈ 8 ರಂದು ಬೆಳಿಗ್ಗೆ 10-30ಕ್ಕೆ ನಡೆಯಲಿದೆ. ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಪುನರಚನೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಕರ್ನಾಟಕಕ್ಕೆ ಎರಡು ಅಥವಾಮೂವರು ಸಂಸದರಿಗೆ … Continued

ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ:ಸವದಿ

posted in: ರಾಜ್ಯ | 0

ಮೈಸೂರು: ರಾಜ್ಯದಲ್ಲಿ ಆವರಿಸಿರುವ ಕೊರೋನಾ, ಲಾಕಡೌನ್ ಹಾಗೂ ಸಾರಿಗೆ ಇಲಾಖೆ ನೌಕಕರ ಮುಷ್ಕರದಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಆದರೂ   ಕೆ.ಎಸ್.ಆರ್.ಟಿ ಸಿ. ಬಸ ಪ್ರಯಾಣ ದರವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ   ಲಕ್ಷ್ಮಣ್ ಸವದಿ ಹೇಳಿದ್ದಾರೆ. ಮೈಸೂರಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಕೊರೊನಾದಿಂದ ಸಾರಿಗೆ … Continued

ಹನಿ ನೀರಾವರಿಯಿಂದ ಶೇಂಗಾ ಬೆಳೆ: ಬಂಪರ್ ಫಸಲು ನಿರೀಕ್ಷೆಯಲ್ಲಿ ರೈತ

posted in: ರಾಜ್ಯ | 0

ಪಾವಗಡ: ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ವಿವಿಧ ಬೆಳೆಗಳನ್ನು ಬಳೆಯುವುದು ಸಾಮಾನ್ಯ ಆದರೆ, ಹನಿ ನೀರಾವರಿ ಬೇಸಾಯದಡಿ ಶೇಂಗಾ ಬೆಳೆಯನ್ನು ಬೆಳೆಯಬಹುದು ಎಂಬುದನ್ನು ರಾಜ್ಯ ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿಯ ಪ್ರಗತಿಪರ ರೈತ ಹೆಂಜಾರಪ್ಪ ಸಾಬೀತು ಮಾಡಿದ್ದಾರೆ. ಮಳೆಯ ಕೊರತೆಯಿಂದಾಗಿ ಮತ್ತು ನಿರಂತರ ಬೆಳೆ ನಷ್ಟಕ್ಕೆ ಒಳಗಾಗುತ್ತಿರುವ ರೈತರು ಕೃಷಿಯಲ್ಲಿನ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ … Continued