ಗದಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭ: ಕಳಪೆ ಬಿತ್ತನೆ ಬೀಜ ಮಾರಾಟವಾಗದಂತೆ ಕ್ರಮಕ್ಕೆ ಸೂಚನೆ  

ಗದಗ : ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು ರೈತರಿಗೆ ಬಿತ್ತನೆಗೆ ಅಗತ್ಯವಿರುವ ಬೀಜ ಗೊಬ್ಬರ ಕಳಪೆ ಪೂರೈಕೆಯಾಗದಂತೆ ಕೃಷಿ ಇಲಾಖಾಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು. ನರಗುಂದದ ಗೃಹ ಕಚೇರಿಯಿಂದ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ … Continued

ಲಾಕ್ಡೌನ್ ವಿಸ್ತರಣೆ ಬಗ್ಗೆ ಜೂನ್ 5ರಂದು ನಿರ್ಧಾರ, ಕೋವಿಡ್ 3ನೇ ಅಲೆ ಎದುರಿಸಲು 24 ಸಾವಿರ ಆಮ್ಲಜನಕ ಬೆಡ್

ರಟ್ಟಿಹಳ್ಳಿ – (ಹಾವೇರಿ):ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್  ವಿಸ್ತರಣೆಯ ಕುರಿತು ಜೂನ್ 5 ರಂದು ನಿಗದಿಯಾಗಿರುವ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ ಬಳಿಕ … Continued

ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ: ಜೂನ್ 10ರಂದು ಕರವೇ ಪ್ರತಿಭಟನೆ

ಬೆಂಗಳೂರು: ಕೋವಿಡ್ ಎರಡನೇ ಅಲೆಗೆ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ವಿಫಲವಾಗಿದೆ ಎಂದು ಆರೋಪಿಸಿ, ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ ಎಂದು ಆಗ್ರಹಿಸಿ ಜೂನ್ 10ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಜನ್ಮದಿನವೂ ಆಗಿರುವ … Continued

ಯಡಿಯೂರಪ್ಪನವರೇ ನನ್ನ ಚಡ್ಡಿ ಹರಿದಿದೆ, ಯಾರ ಬಳಿ ಹೇಳೋಣ ನಮ್ ಪ್ರಾಬ್ಲಂ: ವೈರಲ್‌ ಆಯ್ತು ಸಿಎಂಗೆ ಬರೆದ ಪತ್ರ..!

ಮೈಸೂರು: ಚಡ್ಡಿ ಹರಿದಿದೆ, ಬಟ್ಟೆ‌ ಅಂಗಡಿ ತೆರೆಯಿರಿ.. ಹೀಗೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನ್ಯಾಯಾಂಗ ಇಲಾಖೆ ನಿವೃತ್ತ ಅಧಿಕಾರಿ ಕೊ.ಸು.ನರಸಿಂಹ ಮೂರ್ತಿ ಅವರುಬರೆದ ಪತ್ರ ಈಗ ವೈರಲ್‌ ಆಗಿದೆ. ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ. ಪತ್ರದಲ್ಲಿ ಏನೂ … Continued

ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಪ್ರಮುಖ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಬೆಂಗಳೂರು:ರಾಮಮೂರ್ತಿ ನಗರದಲ್ಲಿ ಬಾಂಗ್ಲಾದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಮಾಡಿದ್ದ ಪ್ರಮುಖ ಆರೋಪಿ ಶೂಬೂಜ್ (30) ಮೇಲೆ ಇಂದು (ಬುಧವಾರ) ಬೆಳ್ಳಂಬೆಳಗ್ಗೆ ಬೆಂಗಳೂರು ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಅತ್ಯಾಚಾರಿ ಶೂಬೂಜ್ ಕಾಲಿಗೆ ಗುಂಡು ಹಾರಿಸಲಾಗಿದ್ದು, ನಂತರ ಬಂಧಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಬುಧವಾರ) ಬೆಳಗ್ಗೆ 6.40ಕ್ಕೆ ಬೆಂಗಳೂರಿನ ಅವಲಹಳ್ಳಿಯ ರಾಂಪುರ … Continued

ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ, ಲಾಕ್‌ಡೌನ್‌ ಮುಂದುವರಿಕೆಯೋ ಇಲ್ಲವೋ ನಿರ್ಧಾರ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಆದರೂ ಕೋವಿಡ್‌ ಪಾಸಿಟಿವಿಟಿ ದರ ಶೇ.10ಕ್ಕಿಂತ ಕಡಿಮೆಯಾಗಿಲ್ಲ. ಕೋವಿಡ್‌ ಕುರಿತಾದ ತಾಂತ್ರಿಕ ಸಲಹಾ ಸಮಿತಿಯು ಲಾಕ್‌ಡೌನ್‌ ಮುಂದುವರಿಸಲು ಶಿಫಾರಸು ಮಾಡಿದೆ. ಈ ಕಾರಣದಿಂದ ರಾಜ್ಯದಲ್ಲಿ ಲಾಕ್‌ಡೌನ್ ಕುರಿತು ಚರ್ಚಿಸಲು ಇಂದು (ಬುಧವಾರ) ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು … Continued

ಮೂರನೇ ಅಲೆಗೆ ಸಿದ್ಧತೆ: ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಸ್ಥಾಪನೆ

ಬೆಂಗಳೂರು: ಕೋವಿಡ್ ಮೂರನೇ ಅಲೆಗೆ ಮುನ್ನೆಚ್ಚರಿಕೆಯಾಗಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು,ಆಮ್ಲಜನಕ ಘಟಕಗಳನ್ನು ಪ್ರತಿ ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಆರಂಭಿಸಲಾಗುತ್ತಿದೆ. ಎಲ್ಲ … Continued

ಕಾಪು ದಾಸ್ತಾನು ಅಡಿ ಸಂಗ್ರಹವಿರುವ ಡಿಎಪಿ ರಸಗೊಬ್ಬರದ ಪ್ರತಿಚೀಲಕ್ಕೆ.1200  ರೂ. ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ 

ಧಾರವಾಡ: ಕಾಪು ದಾಸ್ತಾನು ಅಡಿ ಸಂಗ್ರಹವಿರುವ ಡಿಎಪಿ ರಸಗೊಬ್ಬರಕ್ಕೆ  ಪ್ರತಿ ಚೀಲಕ್ಕೆ 1200 ರೂ.ಗಳನ್ನು ನಿಗದಿಸಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾಪು ದಾಸ್ತಾನು ಅಡಿ ಕೆಎಸ್.ಸಿ.ಎಮ್.ಎಫ್ ದಲ್ಲಿ ಸಂಗ್ರಹವಿದ್ದ 1960 ಟನ್ ಡಿ.ಎ.ಪಿ. ಗೊಬ್ಬರವು ಪ್ರತಿ ಚೀಲಕ್ಕೆ 1450 ರೂ.ಗಳ ದರ ನಿಗದಿಪಡಿಸಲಾಗಿತ್ತು. ಈ ಕುರಿತು ಧಾರವಾಡ ಜಿಲ್ಲಾಡಳಿತ  ಪ್ರಸ್ತಾವನೆ ಸಲ್ಲಿಸಿ, ರೈತರ … Continued

ಲಸಿಕೆ ಮತ್ತು ಔಷಧಿಗಳ ಸಾರ್ವತ್ರಿಕ ಲಭ್ಯತೆ (ಯುಎವಿಎಂ) ಸ್ವದೇಶಿ ಜಾಗರಣ ಮಂಚ್‌ನಿಂದ ಸಾಮೂಹಿಕ ಜಾಗೃತಿ ಅಭಿಯಾನ

ವಿಶ್ವದ ಜನಸಂಖ್ಯೆಯ ಬಹುಪಾಲು ಜನರು ಇಂದು ಕೊರೊನಾ ಸೋಂಕಿನ ಭಯದಿಂದ ಬಳಲುತ್ತಿದ್ದಾರೆ . ಈ ಕೊರೋನಾ ಕಾಲದಲ್ಲಿ ನಮ್ಮ ಅರಿವಿಗೆ ಬಂದ ಸತ್ಯ : ಎಲ್ಲರೂ ಸುರಕ್ಷಿತರಾಗಿರದ ಹೊರತು ಯಾರೂ ಸುರಕ್ಷಿತರಲ್ಲ ಎಂಬುದು . ಜಗತ್ತಿನ 780 ಕೋಟಿ ಜನರಲ್ಲಿ 80 ಕೋಟಿ ಮಕ್ಕಳನ್ನು ಹೊರತುಪಡಿಸಿ , 700 ಕೋಟಿ ಜನಕ್ಕೆ ಏಕಕಾಲದಲ್ಲಿ ಲಸಿಕೆ ಹಾಕುವುದರಿಂದ … Continued

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 3 ಟನ್ ಆಕ್ಸಿಜನ್, 10 ಕಾನ್ಸಂಟ್ರೇಟರ್‌ ಜಿಲ್ಲಾಡಳಿತಕ್ಕೆ ಹಸ್ತಾಂತರ

ಯಾದಗಿರಿ : ಯಾದಗಿರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ  (ಯೋಜನೆ) ವತಿಯಿಂದ ಜಿಲ್ಲಾಡಳಿತಕ್ಕೆ 3 ಟನ್ ಗಳ ಲಿಕ್ವಿಡ್ ಆಕ್ಸಿಜನ್ ಹಾಗೂ 10 ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದ  ಡಾ. ರಾಗಪ್ರಿಯಾ. ಆರ್. ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಾದಗಿರಿ ಜಿಲ್ಲಾ ನಿರ್ದೇಶಕ ಕಮಲಾಕ್ಷ ಅವರು  ಹಸ್ತಾಂತರಿಸಿದರು. ಈ … Continued