ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಮ್ಲಜನಕ ಬೆಡ್‌ ಖಾಲಿ ಇಲ್ಲ ಎಂಬ ಫಲಕ..!

ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ತವರು ಶಿವಮೊಗ್ಗದಲ್ಲಿ ಈಗ ಆಮ್ಲಜನಕ ಬೆಡ್‌ಗಳಿಗೆ ಕೊರತೆ ಉಂಟಾಗಿದೆ. ಇದನ್ನು ಪುಷ್ಟೀಕರಿಸುವಂತೆ ಶಿವಮೊಗ್ಗ ಜಿಲ್ಲಾಸ್ಪತ್ರೆ (ಮೆಗ್ಗಾನ್‌) ಮುಂಭಾಗ ‘ಆಮ್ಲಜನಕ ಬೆಡ್ ಇಲ್ಲ’ ಎಂದು ಫಲಕ ಹಾಕಲಾಗಿದೆ. ಈಗ ಉಸಿರಾಟದ ಸಮಸ್ಯೆ ಮತ್ತು ಆಮ್ಲಜನಕದ ತುರ್ತು ಅಗತ್ಯವಿರುವ ಕೋವಿಡ್ ಸೋಂಕಿತರಿಗೆ ಜಿಲ್ಲೆಯಲ್ಲಿ ಬೆಡ್ ಸಿಗದಂತಾಗಿದೆ. ಆದರೆ ಜಿಲ್ಲಾಡಳಿತ ಆಕ್ಸಿಜನ್ ಪ್ರಮಾಣಕ್ಕೆ ತಕ್ಕಂತೆ ಬೆಡ್‌ಗಳನ್ನು … Continued

ಕರ್ನಾಟಕದಲ್ಲಿಯೂ ಲಾಕಡೌನ್‌..?: ಸುಳಿವು ನೀಡಿದ ಸಚಿವ ಸುಧಾಕರ ಹೇಳಿಕೆ

ಬೆಂಗಳೂರು: ಜನತಾ ಕರ್ಫ್ಯೂ ಇವರೆಗೆ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಸಂಪೂರ್ಣ ಲಾಕ್‍ಡೌನ್ ಜಾರಿ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಲಾಕ್‍ಡೌನ್‍ನಿಂದ ನಿರೀಕ್ಷಿತ ಪ್ರಯೋಜನವಾಗಿಲ್ಲ. ಹೀಗಾಗಿ ಪೂರ್ಣ ಲಾಕ್‍ಡೌನ್ ಮಾಡಬೇಕಾಗಿ ಬರಬಹುದು ಎಂದು ಅವರು ಹೇಳಿದ್ದಾರೆ. ಮೇ 12ರಂದು ಜನತಾ ಲಾಕ್‍ಡೌನ್ ಅವಧಿ ಮುಗಿಯಲಿದೆ. ನಂತರ … Continued

ಜೈನ್‌ ಸಮಾಜದ ಗಣ್ಯ ಛಗನಲಾಲ್‌ ಜೈನ್‌ ನಿಧನ

ಹುಬ್ಬಳ್ಳಿ: ನಗರದ ಜೈನ್‌ ಸಮಾಜದ ಪ್ರಮುಖರಾದ ಕೇಶ್ವಾಪುರ ನಿವಾಸಿ ಛಗನ್‌ಲಾಲ್‌ ಎ. ಜೈನ್‌ ಬುಧವಾರ ಸಂಜೆ ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.ಅಧ್ಯಾತ್ಮ ಸಾಧಕರಾಗಿದ್ದ ಅವರು ಎರಡು ಬಾರಿ ಸತತ ನಲವತ್ತು ದಿವಸಗಳ ಉಪವಾಸ ವ್ರತ (ಮಾಸಕ್‌ಮನ್‌) ಮಾಡಿದ್ದರು. ಅಷ್ಟೇ ಅಲ್ಲದೆ ನಲವತ್ತು ಸಲ ಹನ್ನೊಂದು ದಿವಸಗಳ ಉಪವಾಸ ವ್ರತ ಕೈಗೊಂಡಿದ್ದರು. ನಗರದ ಶಾಂತಿನಿಕೇತನ ಶಾಲೆಯ … Continued

ಮಹತ್ವದ ನಿರ್ಧಾರ.. ರಾಜ್ಯಾದ್ಯಂತ ಇರುವ ಕೋವಿಡ್ ಖಾಲಿ ಬೆಡ್ಗಳ ಬಗ್ಗೆ ಪ್ರತಿದಿನ ಬುಲೆಟಿನ್ ಬಿಡುಗಡೆ

ಬೆಂಗಳೂರು: ಪ್ರತಿದಿನ ಹೆಲ್ತ್ ಬುಲೆಟಿನ್ ಮಾದರಿಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಒಟ್ಟು ಬೆಡ್ ಗಳ ಕುರಿತು ಬುಲೆಟಿನ್ ಪ್ರಕಟಿಸುವುದಾಗಿ ಗೃಹ,  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ಆರೋಗ್ಯಸೌಧ ದಲ್ಲಿ ಇರುವ  ಕರ್ನಾಟಕ ವಾರ್ ರೂಮಿಗೆ (ಬೆಂಗಳೂರು … Continued

ಬೆಡ್ ಬ್ಲಾಕಿಂಗ್ ದಂಧೆಗೆ ಕಡಿವಾಣಕ್ಕೆ ಸಾಫ್ಟವೇರ್‌ ಸುಧಾರಣೆ

ಬೆಂಗಳೂರು: ಬೆಡ್ ಬ್ಲಾಕಿಂಗ್‍ಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾಫ್ಟವೇರ್‌ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬಳಕೆ ಮಾಡುತ್ತಿರುವ ಸಾಫ್ಟವೇರ್‌ ಹಿಂದಿನ ವರ್ಷದ್ದು ಹೀಗಾಗಿ ಸಾಫ್ಟವೇರ್‌ ಸುಧಾರಣೆಗಾಗಿ ಒಂದು ತಾಂತ್ರಿಕ ಸಮಿತಿ ರಚಿಸಲಾಗಿದೆ. ಸಮಿತಿ ಬುಧವಾರವೇ ವರದಿ ನೀಡಲಿದ್ದು, ವರದಿಯನ್ನಾಧರಿಸಿ ತಂತ್ರಾಂಶ … Continued

ಕರ್ನಾಟಕದಲ್ಲಿ ಅರ್ಧಶತಕ ಬಾರಿಸಿದ ಕೊರೊನಾ ಏಕದಿನದ ಸೋಂಕು..!

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ 50,112 ಪ್ರಕರಣಗಳೊಂದಿಗೆ ಕರ್ನಾಟಕವು ಒಂದೇ ದಿನದಲ್ಲಿ 50,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿ ದಾಖಲೆ ಮಾಡಿದೆ. ಇದು ಒಟ್ಟು ಪ್ರಕರಣಗಳನ್ನು ಅನ್ನು 17,41,046 ಕ್ಕೆ ಒಯ್ದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 346 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆಯೂ … Continued

ಪಿಪಿಇ ಕಿಟ್ ಧರಿಸಿ ಕೋವಿಡ್ ಸೋಂಕಿತರ ಮಧ್ಯೆ ಓಡಾಡಿ ಆರೋಗ್ಯ ವಿಚಾರಿಸಿದ ಸಚಿವರು..!

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್, ವೈಯಕ್ತಿಕ ಆರೋಗ್ಯ ಲೆಕ್ಕಿಸದೇ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು. ವ್ಯವಸ್ಥೆಯನ್ನು ಖುದ್ದಾಗಿ ಪರಾಮರ್ಶಿಸಿದ ಸಚಿವರು ಯಾವುದೇ ಸಮಸ್ಯೆಗಳಾಗದ ರೀತಿಯಲ್ಲಿ ಕೆಲಸ‌ ಮಾಡಬೇಕೆಂದು ಸೂಚನೆ ನೀಡಿದರು. ಬುಧವಾರ 167 ಕೋವಿಡ್ ಸೋಂಕಿತರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್ … Continued

ಕರ್ನಾಟಕದ ಪ್ರತಿ ತಾಲೂಕಿಗೊಂದು ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ನಿರ್ಧಾರ

ಬೆಂಗಳೂರು: ರಾಜ್ಯದ ಪ್ರತಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ.  ವಸತಿ ಶಾಲೆಯಲ್ಲಿ ತಾತ್ಕಾಲಿಕ ಕೇರ್ ಸೆಂಟರ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. … Continued

ಚಾಮರಾಜನಗರ ಆಸ್ಪತ್ರೆ ದುರಂತದ ತನಿಖೆ ಆಯೋಗ ನೇಮಕ: ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ

ಬೆಂಗಳೂರು : ಚಾಮರಾಜ ನಗರ ಆಸ್ಪತ್ರೆ ದುರಂತ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ‌ಆದೇಶ ನೀಡಿದೆ. ಹೈಕೋರ್ಟ್ ‌ನಿವೃತ್ತ ನ್ಯಾಮೂರ್ತಿ ಬಿ.ಎ.ಪಾಟೀಲ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ಸರಕಾರ ಆದೇಶ ಹೊರಡಿಸಿದೆ. ಚಾಮರಾಜನಗರದ ಘಟನೆಯ ತನಿಖೆಗೆ ‌ ಒಂದು ತಿಂಗಳು ಗಡವು ನೀಡಲಾಗಿದ್ದು ಮೈಸೂರಿನಲ್ಲೇ ಕಚೇರಿ ತೆರೆದು ತನಿಖೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. … Continued

ಬೆಡ್‌ ಬ್ಲಾಕಿಂಗ್‌ ದಂಧೆ ಬಯಲು.. ಬೆಂಗಳೂರಿನ ಆಸ್ಪತ್ರೆಗಳಲ್ಲಿ 3.21 ಸಾವಿರಕ್ಕೂ ಹೆಚ್ಚು ಬೆಡ್‌ಗಳು ಈಗ ಖಾಲಿ..!

ಬೆಂಗಳೂರು : ಬೆಂಗಳೂರಿನಲ್ಲಿ ಕೋವಿಡ್‌ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣ ಬಯಲಾಗುತ್ತಿದ್ದಂತೆಯೇ ಬುಧವಾರ ಬೆಂಗಳೂರಿನಲ್ಲಿ 3 ಸಾವಿರಕ್ಕಿಂತ ಅಧಿಕ ಬೆಡ್​ಗಳು ಖಾಲಿ ಇರುವುದಾಗಿ ವೆಬ್​ಸೈಟ್​ ತೋರಿಸುತ್ತಿದೆ…! ಮಂಗಳವಾರದ ನಗರದ ಆಸ್ಪತ್ರೆಗಳಲ್ಲಿ ಬೆಡ್​ ಲಭ್ಯತೆಯ ಬಗ್ಗೆ ವೆಬ್​ಸೈಟ್​ಗಳಲ್ಲಿ ಕೆಲವೇ ಸಂಖ್ಯೆ ತೋರಿಸುತ್ತಿತ್ತು ಎಂದು ವರದಿಯಾಗಿತ್ತು. ಯಾವಾಗ ಆಸ್ಪತ್ರೆಗಳಲ್ಲಿನ ಬೆಡ್‌ಗಳನ್ನು ಆನ್‌ಲೈನ್‌ನಲ್ಲಿ ಬ್ಲಾಕ್‌ ಮಾಡಿ ಹಣ ಕೇಳಿದಷ್ಟು ಹಣ … Continued