೩ ಕ್ಷೇತ್ರಗಳಿಗೆ ಉಪಚುನಾವಣೆ: ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ದಿನಾಂಕ ಪ್ರಕಟ

ಬೆಂಗಳೂರು : ಮೂರು ಕ್ಷೇತ್ರಗಳ ಉಪಚುನಾವಣೆ ಸಮರಕ್ಕೆ ಕಾಂಗ್ರೆಸ್‌ ಸಜ್ಜಾಗಿದೆ.ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಈಗ ನಾಮಪತ್ರ ಸಲ್ಲಿಸುವ ದಿನಾಂಕಗಳನ್ನೂ ನಿಗದಿ ಮಾಡಲಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಮಾರ್ಚ್.29ರಂದು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಉಪಸ್ಥಿತರಿರುವರು ಎಂದು ಹೇಳಲಾಗಿದೆ. ರಾಯಚೂರು … Continued

ಸಿಡಿ ಮಹಿಳೆ ಸಿದ್ದರಾಮಯ್ಯ- ಡಿಕೆಶಿ ಬಳಿ ರಕ್ಷಣೆ ಕೋರಿರುವ ಮಾಹಿತಿ ಇಲ್ಲ: ಬೊಮ್ಮಾಯಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಪ್ರಕರಣದ ಸಿಡಿ ಮಹಿಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಳಿ ರಕ್ಷಣೆ ಕೋರಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಆ ಬಗ್ಗೆ ಅವರಿಂದಲೇ ಮಾಹಿತಿ ಪಡೆಯಿರಿ ಎಂದು ಗೃಹ ,  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. . … Continued

ಕರ್ನಾಟಕದಲ್ಲಿ ಎರಡೂವರೆ ಸಾವಿರ ದಾಟಿದ ಏಕದಿನದ ಕೊರೊನಾ ಸೋಂಕು…! ಬೆಂಗಳೂರಲ್ಲಿ ಎಚ್ಚರಿಕೆ ಗಂಟೆ…!!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು ಕಳೆದ 24 ಗಂಟೆಯಲ್ಲಿ (ಗುರುವಾರ) 2,523 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,78,478ಕ್ಕೆ ಏರಿಕೆಯಾಗಿದೆ. ಹಾಗೂ ಒಟ್ಟು ಸಾವಿನ ಸಂಖ್ಯೆ 12,471ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿಯೇ … Continued

ಕಲಬುರಗಿ-ಮಂಬೈ ವಿಮಾನ ಹಾರಾಟ ಆರಂಭ

ಕಲಬುರಗಿ:ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕಲ್ಯಾಣ ‌ಕರ್ನಾಟಕದ ಪ್ರಮುಖ ‌ನಗರ ಕಲಬುರಗಿ ‌ಮಧ್ಯೆ ಅಲಯನ್ಸ್ ಏರ್ ಸಂಸ್ಥೆಯ ನೇರ ವಿಮಾನ ‌ಸಂಚಾರ ಗುರುವಾರದಿಂದ ಆರಂಭವಾಯಿತು. ಮುಂಬೈನಿಂದ ಹೊರಟ ಮೊದಲ ವಿಮಾನ ಬೆಳಿಗ್ಗೆ 9.07ಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಎಂಟು ಜನ ಪ್ರಯಾಣಿಕರು ಬಂದರು. 9.40ಕ್ಕೆ ಇಲ್ಲಿಂದ ಹೊರಟ ವಿಮಾನದಲ್ಲಿ 22 ಪ್ರಯಾಣಿಕರು ತೆರಳಿದರು. ಮಹಾರಾಷ್ಟ್ರದಲ್ಲಿ … Continued

ಕೊರೊನಾ ಸೋಂಕು ಹೆಚ್ಚಳ: ಬೆಂಗಳೂರಲ್ಲಿ ಸೋಂಕಿತರ ಕೈಗೆ ಮತ್ತೆ ಸೀಲ್‌…!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸೋಂಕು ದೃಢಪಟ್ಟಿರುವ ಎಲ್ಲರಿಗೂ ಸೀಲ್ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ‌ ಹೆಚ್ಚುತ್ತಿರುವ ಕೋವಿಡ್ ಹರಡುವಿಕೆಯನ್ನ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಚಿವರು ಸಮಾಲೋಚನಾ ಸಭೆ ನಡೆಸಿದ ಬಳಿಕ ಮಾತನಾಡಿದಅವರು, ’20 … Continued

ಹುಬ್ಬಳ್ಳಿ-ಧಾರವಾಡ ಮಾಜಿ ಮಹಾಪೌರ ಸುಧೀರ ಸರಾಫ ವಿಧಿವಶ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಭಾರತೀಯ ಜನತಾ ಪಕ್ಷದ ಮುಖಂಡರಾದ ಸುಧೀರ ಸರಾಫ (೫೪) ಗುರುವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಲೆಕ್ಟ್ರಿಕಲ್‌ ಎಂಜಿನೀಯರಿಂಗ್‌ ಡಿಪ್ಲೋಮಾ ಮುಗಿಸಿದ್ದ ಸುಧೀರ ಸರಾಫ, ೧೯೮೮ರಲ್ಲಿ ಬಿಜೆಪಿ ಸೇರಿದ್ದರು. ಮುಂದೆ ಬಿಜೆಪಿ ಹುಬ್ಬಳ್ಳಿ-ಧಾರವಾಡ … Continued

ಆ ಹೆಣ್ಣು ಮಗಳು ಯಾರದ್ದೋ ಕುತಂತ್ರಕ್ಕೆ ಸಿಲುಕಿದ್ದಾಳೆ: ಎಚ್‌ಡಿಕೆ

ಬಸವ ಕಲ್ಯಾಣ: ಯುವತಿ ಯಾರದ್ದೋ ಕುತಂತ್ರಕ್ಕೆ ಸಿಲುಕಿ ಬಲವಂತವಾಗಿ ವಿಡಿಯೋ ಬಿಡುಗಡೆ ಮಾಡುತ್ತಿದ್ದಾಳೆ. ನೀವು ಯಾರದೋ ಬಲವಂತಕ್ಕೆ ಒಳಗಾಗಿ ಗುಪ್ತವಾಗಿ ವಿಡಿಯೋ ಮಾಡಿ ಹೇಳಿಕೆಗಳನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ಹೊರ ಬನ್ನಿ ಎಂದು ನಾನು ಆ ಹೆಣ್ಣು ಮಗಳಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಸವ ಕಲ್ಯಾಣದಲ್ಲಿ ಸಿಡಿ … Continued

ಇಂಥ ಹತ್ತು ಸಿಡಿ ಬಿಡುಗಡೆ ಮಾಡಿದರೂ ಎದುರಿಸಲು ಸಿದ್ಧ:ರಮೇಶ ಜಾರಕಿಹೊಳಿ

ಬೆಂಗಳೂರು: ಒಂದಲ್ಲ ಇನ್ನೂ ಇಂಥ ಹತ್ತು ಸಿಡಿ ಬಿಡುಗಡೆ ಮಾಡಿದರೂ ಎದುರಿಸಲು ಸಿದ್ಧ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಷಡ್ಯಂತ್ರದ ಆರೋಪದಿಂದ ಮುಕ್ತನಾಗಿ ಹೊರಗೆ ಬರುತ್ತೇನೆ ಎಂಬ ವಿಶ್ವಾಸವಿದೆ  ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಳಿಯೂ ಮಹತ್ವದ ಸಾಕ್ಷ್ಯಗಳಿವೆ. ಅದನ್ನು ಬಿಡುಗಡೆ ಮಾಡಿದರೆ ಎಲ್ಲರೂ ಶಾಕ್ … Continued

ಸಿಡಿ ಹಗರಣ: ಈಗ ಮತ್ತೊಂದು ಸಿಡಿ ಬಿಡುಗಡೆ ಮಾಡಿದ ಯುವತಿ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಯದ್ದು ಎನ್ನಲಾದ ಮತ್ತೊಂದು ವಿಡಿಯೋ ಹೊರಗೆ ಬಂದಿದೆ. ನನ್ನ ತಂದೆ-ತಾಯಿ ಸ್ವ ಇಚ್ಛೆಯಿಂದ ಪೊಲೀಸ್ ದೂರು ನೀಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಅವರಿಗೆ ಗೊತ್ತಿದೆ. ಹಾಗಾಗಿ ಅವರು ಸ್ವಇಚ್ಛೆಯಿಂದ ದೂರು ನೀಡಲು ಸಾಧ್ಯವೇ ಇಲ್ಲ ಎಂದು ಅವಳಿ ಈ ವಿಡೊಯೋದಲ್ಲಿ ಹೇಳಿದ್ದಾಳೆ. … Continued

ಕರ್ನಾಟಕಕ್ಕೆ ಬಂತು ೪ ಲಕ್ಷ ಲಸಿಕೆ, ಇನ್ನೂ ಬರಲಿದೆ ೧೨ಲಕ್ಷ

ಬೆಂಗಳೂರು : ಬುಧವಾರ ತಡರಾತ್ರಿ ರಾಜ್ಯಕ್ಕೆ 4 ಲಕ್ಷ ಡೋಸ್ ಕೊರೊನಾ ಲಸಿಕೆ ಬಂದಿದೆ, ಈ ವಾರದೊಳಗೆ ಇನ್ನೂ 12 ಲಕ್ಷ ಡೋಸ್ ಲಸಿಕೆ ಬರಲಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಉಂಟಾಗದಂತೆ ಕ್ರಮ ಕೈಗೊಂಡಿದ್ದು,ಎಲ್ಲ ಅರ್ಹ ನಾಗರೀಕರು ಕೂಡಲೇ ನೋಂದಣಿ ಮಾಡಿ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ ಮನವಿ … Continued