ಮತದಾರರ ಮಾಹಿತಿ ಕಳುವು ಪ್ರಕರಣ : ಚಿಲುಮೆ ಮುಖ್ಯಸ್ಥ ಅರೆಸ್ಟ್, ಪೊಲೀಸರಿಂದ ತೀವ್ರ ವಿಚಾರಣೆ

ಬೆಂಗಳೂರು: ಮತದಾರರ ಮಾಹಿತಿ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ಸಂಸ್ಥಾಪಕರಾದ ರವಿಕುಮಾರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಅದರಲ್ಲಿ ರವಿಕುಮಾರ ಅವರ ಸಹೋದರ ಎಂದು ಹೇಳಲಾದ ಕೆಂಪೃ ಗೌಡ ಸಹ ಸೇರಿದ್ದಾರೆ. ಈಗ ಪ್ರಮುಖ ಆರೋಪಿ ರವಿಕುಮಾರ ಅವರನ್ನು ಬಂಧಿಸುವಲ್ಲಿ ಹಲಸೂರು ಗೇಟ್ … Continued

ಮಂಗಳೂರು ಸ್ಫೋಟದ ಆರೋಪಿಗೆ ಕೊಯಮತ್ತೂರು ನಂಟು: ಪ್ರಮುಖ ಆರೋಪಿ ಕೊಯಮತ್ತೂರಿನಲ್ಲಿ ತಂಗಿದ್ದ, ಅಲ್ಲಿ ಸಿಮ್ ಕಾರ್ಡ್ ಖರೀದಿಸಿದ್ದ…!

ಚೆನ್ನೈ: ಕರ್ನಾಟಕದ ಮಂಗಳೂರಿನಲ್ಲಿ ಶನಿವಾರ ನಡೆದ ಆಟೋ ರಿಕ್ಷಾ ಸ್ಫೋಟದ ಪ್ರಾಥಮಿಕ ತನಿಖೆಯಿಂದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಶಾರಿಕ್ ಸೆಪ್ಟೆಂಬರ್‌ನಲ್ಲಿ ಪಶ್ಚಿಮ ತಮಿಳುನಾಡಿನ ಕೊಯಮತ್ತೂರಿನಲ್ಲಿ ತಂಗಿದ್ದ ಮತ್ತು ಮೊಬೈಲ್ ಫೋನ್ ಸಿಮ್ ಕಾರ್ಡ್ ಅಲ್ಲಿ ಖರೀದಿಸಿದ್ದ ಎಂದು ತಿಳಿದುಬಂದಿದೆ. ಕಳೆದ ತಿಂಗಳಷ್ಟೇ, ಕೊಯಮತ್ತೂರಿನ ದೇವಸ್ಥಾನವೊಂದರ ಬಳಿ ಶಂಕಿತ ಭಯೋತ್ಪಾದಕ ಜಮೀಶಾ ಮುಬಿನ್ ಕಾರು … Continued

ಆನೆ ದಾಳಿಗೆ ಮಹಿಳೆ ಸಾವು

ಚಿಕ್ಕಮಗಳೂರು: ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ನಡೆದಿದೆ. ಮೃತ ಮಹಿಳೆಯರನ್ನು ಹುಲ್ಲೆಮನೆ ಗ್ರಾಮದ ಶೋಭಾ (45) ಎಂದು ಗುರುತಿಸಲಾಗಿದೆ. ಶೋಭಾ ಭಾನುವಾರ ತನ್ನ ಪತಿ ಸತೀಶ್‍ಗೌಡ ಅವರೊಂದಿಗೆ ಅಡಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದರು. ಇವರ ಜೊತೆಗೆ … Continued

ನಾಳೆ ಮಾಜಿ ಶಾಸಕ ಯು.ಬಿ ಬಣಕಾರ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು : ಬಿಜೆಪಿಗೆ ‘ಗುಡ್ ಬೈ’ ಹೇಳಿರುವ ಮಾಜಿ ಶಾಸಕ ಯು.ಬಿ ಬಣಕಾರ ಅವರು ಸೋಮವಾರ ನವೆಂಬರ್‌ 21ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆ ಸನಿಹ ಬರುತ್ತಿದ್ದಂತೆಯೇ ಬಿಜೆಪಿ ತೊರೆದ ಶಾಕ್ ನೀಡಿದ್ದ ಯು ಬಿ.ಬಣಕಾರ ಅವರು ಸೋಮವಾರ ಕಾಂಗ್ರೆಸ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್‌ ಪಕ್ಷವು ಯು,ಬಿ ಬಣಕಾರ ಅವರನ್ನು … Continued

ಧಾರವಾಡ: ಹೆಸರಾಂತ ವಿದ್ವಾಂಸ ಪಂ. ಜಯತೀರ್ಥ ಆಚಾರ್ಯ ಮಳಗಿ ನಿಧನ

ಧಾರವಾಡ: ವಿದ್ವಾಂಸ ಪಂಡಿತ ಜಯತೀರ್ಥಾಚಾರ್ಯ ಮಳಗಿ ಅವರು ಇಂದು, ಭಾನುವಾರ ನಿಧನರಾದರು. ಅವರಿಗೆ 73  ವರ್ಷ ವಯಸ್ಸಾಗಿತ್ತು. ಮೃತರು ಒಬ್ಬ ಮಗ, ಒಬ್ಬ ಮಗಳು, ಬಂಧು ಬಳಗ ಹಾಗೂ ಅಪಾರ ಶಿಷ್ಯವರ್ಗ, ಬಂಧಗಳನ್ನು ಅಗಲಿದ್ದಾರೆ. ಪಂಡಿತ ಜಯತೀರ್ಥಾಚಾರ್ಯ ವಾಸುದೇವಾಚಾರ್ಯ ಮಳಗಿ ಅವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ವೇದವ್ಯಾಸ ಅನೇಕ ಗ್ರಂಥಗಳ ಕರ್ತೃವಾಗಿ, ಧಾರ್ಮಿಕ ಪತ್ರಿಕೆಗಳ … Continued

ರಾಜ್ಯದ ಈ ಜಿಲ್ಲೆಗಳಲ್ಲಿ ನವೆಂಬರ್‌ 22ರಿಂದ ಮತ್ತೆ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮತ್ತೆ ಉಂಟಾಗಿರುವ ವಾಯುಭಾರ ಕುಸಿತದಿಂದ ನವೆಂಬರ್‌ 22ರಿಂದ ರಾಜ್ಯದಲ್ಲಿ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ. ಉತ್ತರ ಕನ್ನಡ,ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಬೆಳಗಾವಿ, ವಿಜಯಪುರ ಹಾಗೂ ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನವೆಂಬರ್‌ 22ರಿಂದ … Continued

ಮಂಗಳೂರು ಸ್ಫೋಟ ಪ್ರಕರಣ: ಆಟೋ ಪ್ರಯಾಣಿಕನ ಬಳಿ ಸಿಕ್ಕಿದ್ದು ತುಮಕೂರಿನ ರೈಲ್ವೆ ಸಿಬ್ಬಂದಿ ಹೆಸರಿನ ನಕಲಿ ಆಧಾರ ಕಾರ್ಡ್‌

ಮಂಗಳೂರು : ಮಂಗಳೂರು ಆಟೋ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆಟೋ ಸ್ಫೋಟದ ವೇಳೆ ಸಿಕ್ಕಿದ ಪ್ರಯಾಣಿಕನದ್ದು ಎನ್ನಲಾದ ಆಧಾರಕಾರ್ಡ್ ಕೂಡ ನಕಲಿಯಾಗಿದ್ದು, ಇದು ತುಮಕೂರಿನಲ್ಲಿ ಕೆಲಸ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಹೆಸರಲ್ಲಿದೆ ಎಂಬುದು ಗೊತ್ತಾಗಿದೆ. ಆಟೋದಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಆಧಾರ್ ಕಾರ್ಡ್​​ನಲ್ಲಿದ್ದ ಮೂಲ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆ … Continued

ಮಂಗಳೂರು ಆಟೊ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮಂಗಳೂರು ಆಟೋ ಸ್ಫೋಟ ಉಗ್ರರ ಕೃತ್ಯ ಎಂದ ಡಿಜಿಪಿ ಪ್ರವೀಣ್ ಸೂದ್

ಮಂಗಳೂರು: ಮಂಗಳೂರಿನ ನಾಗುರಿ ಬಳಿ ಶನಿವಾರ ಸಂಜೆ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ತಿರುವು ಪಡೆದುಕೊಂಡಿದ್ದು, ಇದೊಂದು ಭಯೋತ್ಪಾದನೆಯ ಕೃತ್ಯವಾಗಿದೆ ಎಂದು ಡಿಜಿಪಿ ಪ್ರವೀಣ ಸೂದ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ. ದಾಳಿಯ ಸಂಚು ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಾಗಿ ಸಂಭವಿಸಿದ್ದಲ್ಲ. ಗಂಭೀರ ಹಾನಿಯನ್ನು ಉಂಟುಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದನೆಯ ಕೃತ್ಯವಾಗಿದೆ. ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಇದರ ಬಗ್ಗೆ … Continued

ಮತದಾರರ ಮಾಹಿತಿ ಸಂಗ್ರಹಣೆಯಲ್ಲಿ ಮಾಹಿತಿ ಕಳುವು ಆರೋಪ: ಚಿಲುಮೆ ಸಂಸ್ಥೆ ನಿರ್ದೇಶಕನ ಬಂಧನ

ಬೆಂಗಳೂರು: ಮತದಾರರ ಮಾಹಿತಿ ಸಂಗ್ರಹಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆರೋಪಿತ ಅಕ್ರಮದ ತನಿಖೆ ಚುರುಕುಗೊಳಿಸಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು, ಚಿಲುಮೆ ಸಂಸ್ಥೆಯ ನಿರ್ದೇಶಕ ಎನ್ನಲಾದ ಕೆಂಪೇಗೌಡ ಎಂಬಾತನನ್ನು ಬಂಧಿಸಿದ್ದಾರೆ. ಕೆಂಪೇಗೌಡ, ಸಂಸ್ಥೆಯ ಆರ್ಥಿಕ ವ್ಯವಹಾರ ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದ್ದು, ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ ಸಹೋದರ ಎನ್ನಲಾಗಿದೆ. ಪ್ರಾಥಮಿಕ ಸಾಕ್ಷ್ಯಾಧಾರಗಳು ಲಭ್ಯವಾದ … Continued

ಮಂಗಳೂರು: ರಿಕ್ಷಾದಲ್ಲಿ ನಿಗೂಢ ಬೆಂಕಿ ಅವಘಡ-ಇಬ್ಬರಿಗೆ ಗಾಯ

ಮಂಗಳೂರು: ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ನಾಗುರಿಯಲ್ಲಿ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟದ ರೀತಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರಿಗೆ ಗಾಯಗಳಾಗಿವೆ. ಆಟೋದಲ್ಲಿ ನಿಗೂಢ ರೀತಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟ ಸಂಭವಿಸಿದೆಯೇ ಎಂಬುದು ದೃಢಪಡಬೇಕಿದೆ. ಘಟನೆಯಲ್ಲಿ ಪ್ರಯಾಣಿಕ ಮತ್ತು ಆಟೋ ರಿಕ್ಷಾ ಚಾಲಕನಿಗೆ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆಟೋ ಒಳಭಾಗ ಸುಟ್ಟು ಹೋಗಿದೆ … Continued