ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಆರ್ ಆದೇಶ ಹೊರಡಿಸಿದ್ದು, 2021-22 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ 18,000 ಅತಿಥಿ ಶಿಕ್ಷಕರನ್ನು … Continued

ಸಾಗರ: ಬಾಳೆಹಳ್ಳಿಯಲ್ಲಿ ಮನೆಯಂಗಳಕ್ಕೇ ಬಂದ ಭಾರೀ ಗಾತ್ರದ ಕಾಡುಕೋಣ..ವಿಡಿಯೊದಲ್ಲಿ ಸೆರೆ…

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿ ಸಮೀಪದ ಬಾಳೆಹಳ್ಳಿಯಲ್ಲಿ ಮನೆ ಅಂಗಳಕ್ಕೇ ಕಾಡುಕೋಣ ಬಂದಿತ್ತು. ಬಾಳೆಹಳ್ಳಿಯ ರವೀಂದ್ರಮೂರ್ತಿ ಅವರ ಅವರ ಮನೆ ಅಂಗಳಕ್ಕೆ ಗುರುವಾರ ಬೆಳ್ಳಂಬೆಳಿಗ್ಗೆ ಕಾಡೆಮ್ಮೆಗಳ ಗುಂಪು ಕಾಣಿಸಿಕೊಂಡಿವೆ. ಒಂದು ಗುಂಪು ಮೊದಲು ಕಾಣಿಸಿಕೊಂಡರೆ ಸ್ವಲ್ಪ ಹೊತ್ತಿನ ನಂತರ ಭಾರೀ ಗಾತ್ರದ ಮತ್ತೊಂದು ಕಾಡುಕೋಣ ಕಾಣಸಿಕೊಂಡಿದೆ. ಮನೆಯವರು ಚಿಕ್ಕಮಕ್ಕಳೊಂದಿಗೆ ಅಂಗಳದಲ್ಲಿ ಕುಳಿತಿದ್ದಾಗ ಈ … Continued

ಕರ್ನಾಟಕದಲ್ಲಿ ನವೆಂಬರ್‌ 8ರ ವರೆಗೆ ಭಾರೀ ಮಳೆ ಸಾಧ್ಯತೆ :ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ನವೆಂಬರ್‌ 8ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ ಮುಂದಿನ ಮೂರು ದಿನ ಮಳೆಯ ಆರ್ಭಟ ಇರಲಿದೆ. ವಿಸೇಷವಾಗಿ ಕೇರಳ, ಲಕ್ಷದ್ವೀಪ ಹಾಗೂ ಕರ್ನಾಟಕದಲ್ಲಿ … Continued

ರಾಜ್ಯ ಸರ್ಕಾರಿ ನೌಕರರು ಸಕ್ರಮ ಪ್ರಾಧಿಕಾರಕ್ಕೆ ಸಲ್ಲಿಸದೆ ಖರೀದಿಸಿದ ಸ್ಥಿರಾಸ್ತಿ, ಚರಾಸ್ತಿ ಮಾಹಿತಿ 2 ತಿಂಗಳೊಳಗೆ ಸಲ್ಲಿಸಲು ಸೂಚನೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ತಮ್ಮ ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಸಕ್ರಮ ಪ್ರಾಧಿಕಾರಕ್ಕೆ ಸಲ್ಲಿಸದೆ ಖರೀದಿಸಿದ ಸ್ಥಿರಾಸ್ತಿ, ಚರಾಸ್ತಿಯ ವ್ಯವಹಾರಗಳನ್ನು ಎರಡು ತಿಂಗಳೊಳಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರತ್ನ ವಿ. ಪಾಟೀಲ್ ಅವರು … Continued

ಶಿವಮೊಗ್ಗ: ಬೈಕ್- ಸಾರಿಗೆ ಬಸ್‌ ಡಿಕ್ಕಿ, ಇಬ್ಬರು ಸವಾರರು ಸ್ಥಳದಲ್ಲೇ ಸಾವು

ಶಿವಮೊಗ್ಗ: ಜಿಲ್ಲೆಯ ನಂದಿನ ಡೈರಿ ಬಳಿಯಲ್ಲಿ ಸಾರಿಗೆ ಸಂಸ್ಥೆ ಬಸ್‌ ಹಾಗೂ ಬೈಕ್ ಮಧ್ಯೆ ಡಿಕ್ಕಿಯಾಗಿ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ ಮೃತರನ್ನು ಮಂಜುನಾಥ್ (28) ಮತ್ತು ಅಂತೋನಿ (35) ಎಂದು ಗುರುತಿಸಲಾಗಿದೆ. ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ … Continued

ಸ್ವರ್ಗದಲ್ಲಿ ಅಪ್ಪ, ಅಮ್ಮನೊಂದಿಗೆ ಪುನೀತ್: ಫೋಟೋಗಳು ಭಾರೀ ವೈರಲ್.. ಕಲಾವಿದನ ಕಲ್ಪನೆಗೆ ಪ್ರಶಂಸೆ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಒಂದು ವಾರ ಕಳೆದಿದೆ. ಆದರೆ ಕಲಾವಿದರ ಕಣ್ಣಲ್ಲಿ, ಕೈಗಳಲ್ಲಿ ಅಪ್ಪು ಇನ್ನೂ ಜೀವಂತವಾಗಿದ್ದಾರೆ. ಈಗ ಕಲಾವಿದ ಕರಣ ಆಚಾರ್ಯ ಬಿಡಿಸಿದ ಚಿತ್ರಗಳು ಈಗ ಅಪ್ಪು ಅಭಿಮಾನಿಗಳನ್ನು ಸೆಳೆದಿದೆ. ಇಹಲೋಕ ತ್ಯಜಿಸಿರುವ ಅಪ್ಪು ತಮ್ಮ ತಂದೆ ಡಾ.ರಾಜಕುಮಾರ ಹಾಗೂ ತಾಯಿ ಪಾರ್ವತಮ್ಮ ಅವರೊಂದಿಗೆ … Continued

ದಾವಣಗೆರೆ ಸಕ್ಕರೆ ಕಾರ್ಖಾನೆಯಲ್ಲಿ ಪಿಲ್ಲರ್ ಕುಸಿದು ಮೂವರು ಕಟ್ಟಡ ಕಾರ್ಮಿಕರ ಸಾವು, 12 ಜನರಿಗೆ ಗಾಯ

ದಾವಣಗೆರೆ: ದಾವಣಗೆರೆಯ ಸಕ್ಕರೆ ಕಾರ್ಖಾನೆಯಲ್ಲಿ ದುರಂತವೊಂದು ಸಂಭವಿಸಿದ್ದು, ಪಿಲ್ಲರ್ ಕುಸಿದ ಪರಿಣಾಮ 3 ಕಟ್ಟಡ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾವಣಗೆರೆ ನಗರದ ಕುಕ್ಕವಾಡ ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಘಟಕದ ಪಿಲ್ಲರ್ ಕುಸಿದು ಮೂರು ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೃತರನ್ನು ಕೊಪ್ಪಳ ಮತ್ತು ರಾಯಚೂರು ಮೂಲದ ಮಾನಪ್ಪ(32), ಬಸ್ಸಪ್ಪ(32), … Continued

ಅನಾಮಧೇಯ ಪತ್ರ ಪರಿಗಣಿಸದಂತೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಅನಾಮಧೇಯ ಪತ್ರಗಳಿಗೆ ರಾಜ್ಯ ಸರ್ಕಾರ ಮಾನ್ಯತೆ ನೀಡದಿರಲು ನಿರ್ಧರಿಸಿದೆ. ಇನ್ಮುಂದೆ ಮೂಗರ್ಜಿಗಳಿಗೆ ಮಾನ್ಯತೆ ಇಲ್ಲ ಆದೇಶದಲ್ಲಿ ಸೂಚನೆ ನೀಡಿದ್ದು, ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಪರಿಗಣಿಸದಂತೆ ಸುತ್ತೋಲೆಯಲ್ಲಿ ಸೂಚಿಸಿದೆ. ಈ ಕುರಿತು ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದು, … Continued

ಸಹಾಯಕ ಪ್ರಾಧ್ಯಾಪಕ ಹುದ್ದೆೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆೆಗಳ ನೇರ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿಯನ್ನು ನ. 20ರ ವರೆಗೆ ವಿಸ್ತರಿಸಲಾಗಿದ್ದು, ಶುಲ್ಕ ಪಾವತಿ ಅವಧಿಯನ್ನು ನ. 30ರ ವರೆಗೆ ವಿಸ್ತರಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ನ.6ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ನ.2ರಂದು ಕೆ-ಸೆಟ್ ಪರೀಕ್ಷೆ … Continued

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿ ಎರಡು ವರ್ಷ ಹೆಚ್ಚಿಸಲು ಒತ್ತಾಯಿಸಿ ಸಿಎಂಗೆ ಪತ್ರ ಬರೆದ ಸಭಾಪತಿ ಹೊರಟ್ಟಿ

ಹುಬ್ಬಳ್ಳಿ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆಪತ್ರ ಬರೆದಿರುವ ಅವರು, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸರ್ಕಾರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯಲ್ಲಿ ಅರ್ಜಿ … Continued