ಅಮೆರಿಕ ನಾಸಾದ ಅತ್ಯುತ್ತಮ ಪ್ರಶಸ್ತಿ ಫ್ಯೂಚರ್​ ಇನ್​ವೆಸ್ಟಿಗೇಟರ್​ ಪ್ರಶಸ್ತಿಗೆ ಆಯ್ಕೆಯಾದ ಉತ್ತರ ಕನ್ನಡದ ದಿನೇಶ ಹೆಗಡೆ

ಶಿರಸಿ : ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ಸಸಿಗುಳಿಯ ಈಗ ಅಮೆರಿಕದ ಹಂಟ್ಸ್‌ವಿಲ್ಲೆಯಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ವಸಂತ ಹೆಗಡೆ ನಾಸಾ (NASA) ಫ್ಯೂಚರ್​ ಇನ್​ವೆಸ್ಟಿಗೇಟರ್​ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಸಾಧನೆ ಮಾಡಿ ಭಾರತದ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ವಿಜ್ಞಾನದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ಹೆಗಡೆ ಅವರು ಕ್ಯಾಥರೀನ್ ಡೇವಿಡ್ಸನ್ … Continued

ಸೆ.13ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ:ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 24ರ ವರೆಗೆ ವಿಧಾನಮಂಡಲ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ಅವರು ತಿಳಿಸಿದರು. ನೂತನ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿಧಾನಮಂಡಲ … Continued

ಧಾರವಾಡ: ಜೆಎಸ್ಎಸ್ ಐಟಿಐ ನಲ್ಲಿ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ಆಗಸ್ಟ್‌ ೨೬ರಂದು ಬೆಳಿಗ್ಗೆ ೧೦ಗಂಟೆಗೆ ಉತ್ತರ ಪ್ರದೇಶದ ಯುಫ್ಲೆಕ್ಸ್‌ ಕಂಪನಿಯವರು ಧಾರವಾಡದಲ್ಲಿ ನೂತನವಾಗಿ ಪ್ರಾರಂಭಿಸಿದ ಕೈಗಾರಿಕೆಗೆ ಟೆಕ್ನಿಕಲ್ ಟ್ರೈನೀ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ೨೦೧೮, ೨೦೧೯, ೨೦೨೦ ಹಾಗೂ ೨೦೨೧ ರಲ್ಲಿ ಐಟಿಐ ಫಿಟ್ಟರ್, ಇಲೆಕ್ಟ್ರಿಕಲ್, ಟರ್ನರ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್, ಮಶಿನಿಷ್ಟ್‌ … Continued

ಕಾರು-ಬೈಕ್‌ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು

ಗೋಕಾಕ :ಗೋಕಾಕ ಸಮೀಪದ ಲೋಳಸೂರ ಬ್ಯಾಳಿ ಬಸವನ ದೇವಸ್ಥಾನದ ಬಳಿ ಸ್ವಿಫ್ಟ್ ಕಾರು 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಮೃತರನ್ನು ಗೋಪಾಲ ಮುತ್ನಾಳ(36), ರಾಮಣ್ಣ ಮಗ್ಗೆಪ್ಪಗೋಳ(40), ನೀಲವ್ವ ತಳವಾರ(44) ಎಂದು ಗುರುತಿಸಲಾಗಿದೆ. ಇವರು ಹುಣಶ್ಯಾಳ ಗ್ರಾಮದವರು.ಮೃತ ಗೋಪಾಲ, ರಾಮಣ್ಣ ಇಬ್ಬರೂ ಪಿ.ಜಿ ಹುಣಶ್ಯಾಳ … Continued

ಮತ್ತೊಂದು ಅಮಾನವೀಯ ಘಟನೆ: ಅಕ್ರಮವಾಗಿ 100 ಆಕಳು ಕರುಗಳ ಸಾಗಿಸುತ್ತಿದ್ದ ವಾಹನ ಪಲ್ಟಿ, 50 ಕರುಗಳು ಸಾವು..!

ಹಾಸನ: ಬಾಯಿ, ಕಾಲಿಗೆ ಹಗ್ಗ ಕಟ್ಟಿ ಪುಟ್ಟ ಗೂಡ್ಸ್ ವಾಹನದಲ್ಲಿ 100 ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅಪಘಾತವಾಗಿ 50 ಮೂಕ ಪ್ರಾಣಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ, ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ರಾತ್ರಿ ನಡೆದಿದೆ. 38 ಮಂಗಗಳ ಮಾರಣಹೋಮ‌ ಮಾಸುವ ಮುನ್ನವೇ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವುದು ಸಾರ್ವಜನಿಕರ … Continued

ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕದಂದು ಉಚಿತ ಪ್ರಯಾಣ ಕಲ್ಪಿಸಿದ ಸಾರಿಗೆ ಸಂಸ್ಥೆ

ಹುಬ್ಬಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಿದೆ. 19.08.2021 ರಿಂದ 03.09.2021ರ ವರೆಗೆ ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದ ವರೆಗೆ … Continued

ಮಹತ್ವದ ಸುದ್ದಿ.. ಪಿಯುಸಿ ತರಗತಿಗಳ ಆರಂಭಕ್ಕೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಕ್ಕೆ ರಾಜ್ಯ ಸರ್ಕಾರವ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಶೇಕಡಾ 2ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಕಾಲೇಜು ತೆರೆಯಲು ಸೂಚನೆ ನೀಡಲಾಗಿದ್ದು, ಏಕಕಾಲದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ನಡೆಸಲಾಗುವುದು ಎಂದು ಸರ್ಕರ ಹೇಳಿದೆ. ವಾರದ ಮೊದಲ 3 ದಿನ ಶೇಕಡಾ 50ರಷ್ಟು … Continued

ನಾಡಬಂದೂಕು ಸಿಡಿಸಿ ಸ್ವಾಗತ ಕೋರಿಲ್ಲ : ಸಚಿವ ಭಗವಂತ ಖೂಬಾ ಸ್ಪಷ್ಟನೆ

ಯಾದಗಿರಿ : ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ‘ಎಫ್‌ಐಆರ್‌ ದಾಖಲಾಗಿದೆ . ಈ ಘಟನೆ ಕುರಿತು ಕೇಂದ್ರ ಸಚಿವ ಭಗವಂತ ಖೂಬಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತನಗೆ ನಾಡಬಂದೂಕು ಸಿಡಿಸಿ ಸ್ವಾಗತ ಕೋರಿಲ್ಲ, ಅಲ್ಲಿ ನಾಡ ಬಂದೂಕು ಇರಲಿಲ್ಲ. ಪಟಾಕಿ ಪುಡಿ ಹಾಕಿ … Continued

ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ: ಮನೆಮನೆ ಪ್ರಚಾರಕ್ಕೆ ಕೇವಲ ಐದು ಜನರಿಗೆ ಮಾತ್ರ ಅವಕಾಶ

ಧಾರವಾಡ: ಪ್ರಸ್ತುತ ಘೋಷಣೆಯಾಗಿರುವ ಹುಬ್ಬಳ್ಳಿ-ಧಾರವಾಡ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರಕ್ಕೆ ಮಾರ್ಗಸೂಚಿಗಳನ್ನು ನೀಡಿ ರಾಜ್ಯ ಚುನಾವಣಾ ಆಯೋಗವು ಬುಧವಾರ ಆದೇಶ ಹೊರಡಿಸಿದೆ. ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಸೂಚನೆ ಪಾಲಿಸಬೇಕು ಎಂದು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಚುನಾವಣಾ … Continued

ಕುಮಟಾ: ಬಾಡ ಸಮುದ್ರದಲ್ಲಿ ನಾಪತ್ತೆಯಾಗಿದ್ದವ ಎರಡು ದಿನಗಳ ಬಳಿಕ ಶವವಾಗಿ ಪತ್ತೆ

ಕುಮಟಾ; ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡದ ಹುಬ್ಬಣ್ಣಗೆರೆ ಅರಬ್ಬಿ ಸಮುದ್ರ ತೀರದಲ್ಲಿ ಸೋಮವಾರ ನಾಪತ್ತೆಯಾಗಿದ್ದ ಬುಧವಾರ ಯುವಕನ ಶವ ಪತ್ತೆಯಾಗಿದೆ. ಸೋಮವಾರ ಈಜಾಡಲು ಸಮುದ್ರಕ್ಕೆ ಇಳಿದಿದು ಕಾಣೆಯಾಗಿದ್ದ ದಾವಣಗೆರೆಯ ಇಂಜಿನಿಯರಿಂಗ್ ವಿದ್ಯಾರ್ಥಿ ರೇಣುಕಾಪ್ರಸಾದ (೨೩)ಎಂದು ಗುರುತಿಸಲಾಗಿದೆ. ಸೋಮವಾರ ಪ್ರವಾಸಕ್ಕೆ ಬಂದಿದ್ದ ರೇಣುಕಾ ಪ್ರಸಾದ ಮತ್ತು ಮೇಘಾ ಎಂಬವರು ಬಾಡದ ಸಮುದ್ರ ತೀರದಲ್ಲಿ ಈಜಿಗೆಂದು … Continued