ಕ್ಲೌಡ್ ಕಂಪ್ಯೂಟಿಂಗ್ ಸೇರಿ ಈ ವರ್ಷದಿಂದ 8 ಹೊಸ ಡಿಪ್ಲೊಮಾ ಕೋರ್ಸುಗಳು ಆರಂಭ

ಬೆಂಗಳೂರು: ಈ ಶತಮಾನದ ಬೇಡಿಕೆಗೆ ಅನುಗುಣವಾಗಿ ಎಂಟು ಹೊಸ ಡಿಪ್ಲೋಮಾ ಕೋರ್ಸ್‍ಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೊದಲ ಬಾರಿಗೆ ಸರ್ಕಾರಿ ಪಾಲಿಟೆಕ್ನಿಕ್‍ಗೆ ಹೊಸ ಲೋಗೊ ಬಿಡುಗಡೆ ಮಾಡಿ ಮಾತನಾಡಿದರು. ಡಿಪ್ಲೊಮಾದಲ್ಲಿ ಹಾಲಿ 33 ಕೋರ್ಸ್‍ಗಳಿವೆ. ಇವುಗಳ ಜೊತೆಗೆ ಕ್ಲೌಡ್ ಕಂಪ್ಯೂಟಿಂಗ್,ಆಟೋಮೇಷನ್ ಅಂಡ್ ರೋಬೋಟಿಕ್ಸ್, … Continued

ಸೆ.30ರೊಳಗೆ 2ಎ ಮೀಸಲಾತಿ ಘೋಷಿಸದಿದ್ದರೆ ಅ 1ರಿಂದ ಧರಣಿ: ಜಯಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ ಮುಂದಿನ ಸೆ.30ರ ಒಳಗೆ 2ಎ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಅ.1ರಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನೂತನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಹಿಂದೆ ಧರಣಿ ವೇಳೆ ಗೃಹಸಚಿವರಾಗಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ 3 ಬಾರಿ ಗೆಲ್ಲಲು ನಮ್ಮ ಸಮಾಜ … Continued

ತಾರತಮ್ಯ ಮಾಡ್ತಾರೆ ಎಂದು ಆರೋಪಿಸಿ ತಮ್ಮದೇ ಸರ್ಕಾರದ ವಿರುದ್ಧ ವಿಧಾನಸೌಧದ ಮುಂದೆ ಧರಣಿ ಕುಳಿತ ಬಿಜೆಪಿ ಶಾಸಕ..!

ಬೆಂಗಳೂರು: ಮೂಡಿಗೆರೆ ತಾಲೂಕನ್ನು ಅತಿವೃಷ್ಟಿಯ ಪಟ್ಟಿಗೆ ಸೇರಿಸದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ತಮ್ಮದೇ ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ವಿದ್ಯಮಾನ ನಡೆದಿದೆ. ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲಿ ಬೆಲೆ ಸಿಗುತ್ತಿಲ್ಲ. ಮೀಸಲು ಕ್ಷೇತ್ರ ಎನ್ನುವ ಕಾರಣಕ್ಕೊ ಏನೋ ನನ್ನ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ. ನಮ್ಮ … Continued

ಸಿಎಂ ಬೊಮ್ಮಾಯಿಗೆ ಮತ್ತೊಮ್ಮೆ ದೇವೇಗೌಡರಿಂದ ಅಭಯ: ಬಿಎಸ್‌ವೈ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಿ ಎಂದು ಸಲಹೆ

ನವದೆಹಲಿ: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಪ್ರಧಾನಿ ದೇವೇ ಗೌಡ ಅವರು ಅಭಯ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್​ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು, ಬಿಜೆಪಿಯ ವಿದ್ಯಮಾನಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಗೊಂದಲ ನಿವಾರಿಸಲು ಬೊಮ್ಮಾಯಿ ಸಮರ್ಥರಿದ್ದಾರೆ. ಅವರ ಕಟುಂಬಕ್ಕೂ ನಮಗೂ ಮೊದಲಿನಿಂದಲೂ ಪರಿಚಯ ಇದೆ. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ … Continued

ಕರ್ನಾಟಕದಲ್ಲಿ ಕಳೆದ ದಶಕದಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡ 71% ಬಾವಿಗಳು

ಮೈಸೂರು: ಕೇಂದ್ರೀಯ ಅಂತರ್ಜಲ ಮಂಡಳಿಯ (CGWB) ಜ್ಞಾನದ ಆಧಾರದ ಮೇಲೆ ಕಳೆದ ಒಂದು ದಶಕದಲ್ಲಿ, ರಾಜ್ಯದೊಳಗಿನ 71% ಬಾವಿಗಳು ನೀರಿನ ಮಟ್ಟದಲ್ಲಿ ಏರಿಕೆಯನ್ನು ವರದಿ ಮಾಡಿವೆ. ಕರ್ನಾಟಕದಲ್ಲಿ, ಅಂತರ್ಜಲ ನಿರ್ದೇಶನಾಲಯವು ಪ್ರತಿ ತಿಂಗಳು ನೀರಿನ ಮಟ್ಟವನ್ನು ವಿಶ್ಲೇಷಿಸುತ್ತದೆ. ಈ ನಿರ್ಣಯವು ನವೆಂಬರ್ 2010 ಮತ್ತು ನವೆಂಬರ್ 2020 ರ ನಡುವಿನ ಮಧ್ಯಂತರಕ್ಕೆ ಸಂಬಂಧಿಸಿದೆ. ವಿಶ್ಲೇಷಿಸಿದ 1,316 … Continued

ಖಾತೆ ಕ್ಯಾತೆ ನಂತರ ಸಿಎಂ ಬೊಮ್ಮಾಯಿಗೆ ಈಗ ಮಹಾನಗರ ಪಾಲಿಕೆಗಳ ಚುನಾವಣೆಯ ಲಿಟ್ಮಸ್‌ ಟೆಸ್ಟ್

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಸವಾಲು ಎದುರಾಗಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಪುಟ ರಚನೆಯಾಗಿ ಖಾತೆಗಾಗಿ ಕೆಲವು ಸಚಿವರ ಖ್ಯಾತೆ, ನಂತರ ಸಮಾಧಾನ ಇವೆಲ್ಲ ವಿದ್ಯಮಾನಗಳ ನಡುವೆಯೇ ಬುಧವಾರ ಚುನಾವಣಾ ಆಯೋಗವು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಸೆಪ್ಟೆಂಬರ್‌ 3ರಂದು ಚುನಾವಣೆ … Continued

ಟ್ವಟರಿನಲ್ಲಿ ಫಾಲೋವರ್ಸ್‌: ಮಾಜಿ ಸಿಎಂ ಯಡಿಯೂರಪ್ಪ ದಾಖಲೆ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಫ್ಯಾನ್ ಫಾಲೋವಿಂಗ್‌ ಹೊಂದಿರುವ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾಖಲೆ ಮಾಡಿದ್ದಾರೆ. ಅವರು ಟ್ವಟರಿನಲ್ಲಿ ಬರೋಬ್ಬರಿ 10 ಲಕ್ಷ ಹಿಂಬಾಲಕರನ್ನು ಹೊಂದಿರುವ ರಾಜ್ಯದ ಮೊದಲ ರಾಜಕಾರಣಿ ಎಂದು ದಾಖಲೆ ನಿರ್ಮಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರೂ ಅವರನ್ನು ಟ್ವಿಟರ್ ಖಾತೆಯಲ್ಲಿ ಹಿಂಬಾಲಿಸುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಫಾಲೋವರ್ಸ್ … Continued

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಅಂಗಳದಲ್ಲಿ ನಿಲ್ಲಿಸಿದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಬೆಂಕಿ ಹಚ್ಚಿದ್ದಾರೆ. ಬುಧವಾರ ರಾತ್ರಿ ಒಂದೂವರೆ ಸುಮಾರಿಗೆ ಈ ಘಟನೆ ನಡೆದಿದ್ದು, ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಯ ಅಂಗಳದೊಳಗೆ ಈ ಕಾರುಗಳನ್ನ ನಿಲ್ಲಿಸಿದ್ದ ಕಾರುಗಳಿಗೆ … Continued

ಭಯೋತ್ಪಾದಕ ಚಟುವಟಿಕೆ ಎದುರಿಸಲು ಬೆಂಗಳೂರು ವಿಶೇಷ ತರಬೇತಿ ಪಡೆದ ಸ್ವಾಟ್ ತಂಡ ರೆಡಿ

ಬೆಂಗಳೂರು:ಕರ್ನಾಟಕ ಪೊಲೀಸರು ರಾಜ್ಯದ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ಪರಿಶೀಲಿಸಲು ಬೆಂಗಳೂರಿನಲ್ಲಿ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರ ತಂಡ (Special Weapon and Tactics Team (SWAT)) ರಚಿಸಿದ್ದಾರೆ. ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು SWAT ತಂಡವು ತುರ್ತು ಪರಿಸ್ಥಿತಿಗಳು, ವಿಶೇಷ ಕರ್ತವ್ಯಗಳು, ಭಯೋತ್ಪಾದಕ ಮತ್ತು ನಕ್ಸಲ್ ಚಟುವಟಿಕೆಗಳು, ಸಮಾಜವಿರೋಧಿ ಚಟುವಟಿಕೆಗಳು, ರಾಜ್ಯ ಮತ್ತು … Continued

ಆ.13 ರಂದು ವಿಧಾನ ಪರಿಷತ್ತಿನ ಐವರು ಸದಸ್ಯರ ಸಮಿತಿ ಸಭೆ

ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆಗೊಂಡಿರುವ ಅನುದಾನ ಬಿಡುಗಡೆ ಕುರಿತು ವಿಧಾನ ಪರಿಷತ್ತಿನ ಐದು ಜನ ಸದಸ್ಯರ ಸಮಿತಿ ಸಭೆ ಸಭಾಪತಿ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ಆ.13 ರಂದು (ಶುಕ್ರವಾರ) ನಡೆಯಲಿದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರ ಸಭೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ … Continued