ತಮಿಳುನಾಡಿನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು, ಕೊಲೆ-ಆತ್ಮಹತ್ಯೆ ಎಂದು ಪೊಲೀಸರ ಶಂಕೆ

ಚೆನ್ನೈ: ತಮಿಳುನಾಡಿನ ಪೆರುಂಗುಡಿಯಲ್ಲಿ ಹನ್ನೊಂದು ವರ್ಷ ಮತ್ತು ಒಂದು ವರ್ಷದ ಮಗು ಸೇರಿದಂತೆ ನಾಲ್ಕು ಜನರ ಕುಟುಂಬವು ಅವರ ಮನೆಯೊಳಗೆ ಶವವಾಗಿ ಪತ್ತೆಯಾಗಿದೆ. ಮಣಿಕಂದನ್ ಎಂದು ಗುರುತಿಸಲಾದ ವ್ಯಕ್ತಿ ರಾಮಪುರಂನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು 35 ವರ್ಷದ ತಾರಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳು. 36ರ ಹರೆಯದ ವ್ಯಕ್ತಿ ಸಿಟ್ಟಿನಿಂದ … Continued

15ರಿಂದ 18 ವರ್ಷ ವಯಸ್ಸಿನ ಕೋವಿಡ್ ಲಸಿಕೆಗಾಗಿ ಕೋವಿನ್‌ನಲ್ಲಿ 6.80 ಲಕ್ಷಕ್ಕೂ ಹೆಚ್ಚು ನೋಂದಣಿಗಳು

ನವದೆಹಲಿ: ಭಾರತವು ಇಂದಿನಿಂದ (ಸೋಮವಾರದಿಂದ) ಕೋವಿಡ್-19 ವಿರುದ್ಧ 15 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ಸಜ್ಜಾಗುತ್ತಿದೆ. CoWIN ಪ್ಲಾಟ್‌ಫಾರ್ಮ್ ಭಾನುವಾರ ರಾತ್ರಿ 9 ಗಂಟೆಯವರೆಗೆ 15 ರಿಂದ 18 ವರ್ಷದೊಳಗಿನ 6,79,064 ಹದಿಹರೆಯದವರು ತಮ್ಮ ಕೋವಿಡ್ -19 ಲಸಿಕೆಗಾಗಿ CoWIN ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಅಪ್ಲಿಕೇಶನ್‌ನಲ್ಲಿನ ಡೇಟಾ ತೋರಿಸಿದೆ. ಲಸಿಕೆಗಳ ಮಿಶ್ರಣವನ್ನು ತಪ್ಪಿಸಲು … Continued

ಮಹಾರಾಷ್ಟ್ರದಲ್ಲಿ ಹೊಸದಾಗಿ 11,877 ಕೊರೊನಾ ಸೋಂಕು ದಾಖಲು, ಆರು ತಿಂಗಳಲ್ಲೇ ಅತಿಹೆಚ್ಚು ಒಂದು ದಿನದ ಜಿಗಿತ..!

ಮುಂಬೈ: ಕಳೆದ ಆರು ತಿಂಗಳಲ್ಲಿ ಕೋವಿಡ್‌-19 ಪ್ರಕರಣಗಳಲ್ಲಿ ಅತಿ ಹೆಚ್ಚು ಒಂದು ದಿನದ ಜಿಗಿತದಲ್ಲಿ, ಮಹಾರಾಷ್ಟ್ರವು ಭಾನುವಾರ 11,877 ಸೋಂಕುಗಳನ್ನು ವರದಿ ಮಾಡಿದೆ, ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 42,024 ಕ್ಕೆ ಏರಿದೆ. ಆದಾಗ್ಯೂ, ಕೆಲವು ದಿನಗಳ ಹಿಂದೆ ದೈನಂದಿನ ಸರಾಸರಿ 20 ಕ್ಕೆ ಹೋಲಿಸಿದರೆ ಕೇವಲ ಒಂಬತ್ತು ಸಾವುಗಳು ವರದಿಯಾಗಿದ್ದು ಸಾವುನೋವುಗಳ ಸಂಖ್ಯೆ ಕಡಿಮೆಯಾಗಿದೆ. … Continued

ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸು 21ಕ್ಕೆ ಹೆಚ್ಚಿಸುವ ಮಸೂದೆ ಪರಿಶೀಲಿಸಲು ನಿಯೋಜಿತ ಸಂಸದೀಯ ಸಮಿತಿಯಲ್ಲಿ 30 ಪುರುಷರು, ಏಕೈಕ ಮಹಿಳೆ..!

ನವದೆಹಲಿ: ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸನ್ನು 21ಕ್ಕೆ ಏರಿಸುವ ಮಸೂದೆಯನ್ನು ಪರಿಶೀಲಿಸಲು ನಿಯೋಜಿಸಲಾದ 31 ಸದಸ್ಯರ ಸಂಸದೀಯ ಸಮಿತಿಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ ಏಕೈಕ ಮಹಿಳೆಯಾಗಿದ್ದಾರೆ…! ಚಳಿಗಾಲದ ಅಧಿವೇಶನದಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದನ್ನು ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿಗೆ … Continued

ಬಿಹಾರದ ಪಾಟ್ನಾದಲ್ಲಿ 8ನೇ ತರಗತಿ ವರೆಗಿನ ಶಾಲೆಗಳು ಜನವರಿ 8ರ ವರೆಗೆ ಬಂದ್‌… ಆದ್ರೆ ಕೊರೊನಾ ಕಾರಣದಿಂದ ಅಲ್ಲ..

ಪಾಟ್ನಾ: ಬಿಹಾರದಲ್ಲಿ ತೀವ್ರ ಚಳಿಯ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿ 8ನೇ ತರಗತಿಯ ವರೆಗಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಜನವರಿ 8 ರ ವರೆಗೆ ಬಂದ್‌ ಮಾಡುವುದಾಗಿ ಬಿಹಾರ ಸರ್ಕಾರ ಭಾನುವಾರ ಪ್ರಕಟಿಸಿದೆ. 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹದಿಹರೆಯದವರಿಗೆ ಲಸಿಕೆಯನ್ನು ನಿಗದಿಪಡಿಸುವ ಒಂದು ದಿನದ ಮೊದಲು ಬಂದಿದ್ದು, 9 ಮತ್ತು ಮೇಲ್ಪಟ್ಟ ತರಗತಿಗಳಿಗೆ … Continued

ಕೊರೊನಾ ಹೆಚ್ಚಳ: ಸುಪ್ರೀಂಕೋರ್ಟಿನಲ್ಲಿ 2 ವಾರಗಳ ವರೆಗೆ ಭೌತಿಕ ವಿಚಾರಣೆ ಸ್ಥಗಿತ, ಜನವರಿ 3ರಿಂದ ವರ್ಚುವಲ್ ಮೋಡ್‌ನಲ್ಲಿ ವಿಚಾರಣೆ

ನವದೆಹಲಿ: ಹೆಚ್ಚುತ್ತಿರುವ ಕೋವಿಡ್‌-19 ಪ್ರಕರಣಗಳು ಮತ್ತು ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಬಗ್ಗೆ ಕಾಳಜಿ ಗಮನದಲ್ಲಿಟ್ಟುಕೊಂಡು ಜನವರಿ 3ರಿಂದ ಎರಡು ವಾರಗಳ ವರೆಗೆ ವರ್ಚುವಲ್ ನಲ್ಲಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಕಳೆದ ವರ್ಷ ಅಕ್ಟೋಬರ್‌ನಿಂದ ಪ್ರಕರಣಗಳ ಭೌತಿಕ ವಿಚಾರಣೆಯನ್ನು ಪುನರಾರಂಭಿಸಿತ್ತು. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಾರ್ಚ್ 2020ರಿಂದ ಉನ್ನತ ನ್ಯಾಯಾಲಯವು ವೀಡಿಯೊ … Continued

ಕೊರೊನಾ ಹೆಚ್ಚಳ: ಪಶ್ಚಿ ಬಂಗಾಳದಲ್ಲಿ ಶಾಲಾ-ಕಾಲೇಜುಗಳು ಬಂದ್‌..ಸರ್ಕಾರಿ ಕಚೇರಿಯಲ್ಲಿ ಶೇ.50% ಹಾಜರಾತಿಯಲ್ಲಿ ಕೆಲಸ

ಕೋಲ್ಕತ್ತಾ: ಕೊರೊನಾ ವೈರಸ್‌ನ ಮೂರನೇ ಅಲೆ ಉಲ್ಬಣದ ಬೆದರಿಕೆಯ ಮಧ್ಯೆ, ರಾಜ್ಯದಲ್ಲಿ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಭಾನುವಾರ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ನಾಳೆಯಿಂದ (ಸೋಮವಾರದಿಂದ) ಪಶ್ಚಿಮ ಬಂಗಾಳದಲ್ಲಿ ಎಲ್ಲ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಸ್ಪಾಗಳು, ಸಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು, ಮೃಗಾಲಯಗಳು ಮತ್ತು ಉದ್ಯಾನವನಗಳು ಮುಚ್ಚಲಿವೆ. ರಾತ್ರಿ … Continued

ಸುಲ್ಲಿ ಡೀಲ್ಸ್ 2.0? | ಗಿಟ್‌ಹಬ್‌ ಆ್ಯಪ್ ‘ಬುಲ್ಲಿ ಬಾಯಿ’ಯಲ್ಲಿ 100+ ಮುಸ್ಲಿಂ ಮಹಿಳೆಯರ ‘ಹರಾಜು’; ಕೇಂದ್ರ, ಪೊಲೀಸ್ ಇಲಾಖೆಯಿಂದ ತನಿಖೆ

ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಗಿಟ್‌ಹಬ್‌ನಲ್ಲಿ 100 ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರನ್ನು ಸುಲ್ಲಿ ಡೀಲ್ಸ್’ ಹೆಸರಿನಲ್ಲಿ ‘ಹರಾಜು’ ಮಾಡಿದ ಆರು ತಿಂಗಳ ನಂತರ, ಅದೇ ವೇದಿಕೆಯಲ್ಲಿ ‘ಬುಲ್ಲಿ ಬಾಯಿ’ ಎಂಬ ಇದೇ ರೀತಿಯ ಎರಡನೇ ಅಪ್ಲಿಕೇಶನ್ ಕಾಣಿಸಿಕೊಂಡಿದೆ. ಶುಕ್ರವಾರ ಟ್ವಿಟರ್‌ ನಲ್ಲಿ, ಅನೇಕ ಮುಸ್ಲಿಂ ಮಹಿಳೆಯರು ಗಿಟ್‌ಹಬ್‌ನಲ್ಲಿ ತಮ್ಮ ಸಾಮಾಜಿಕ ಮಾಧ್ಯಮದ ಫೋಟೋಗಳನ್ನು ಹಂಚಿಕೊಂಡಿರುವ … Continued

ಹೊಸ ವರ್ಷದಂದು 9 ಮಹಿಳಾ ನಕ್ಸಲರೂ ಸೇರಿ 44 ನಕ್ಸಲರ ಶರಣಾಗತಿ

ಸುಕ್ಮಾ(ಛತ್ತೀಸ್​ಗಡ): ಹೊಸ ವರ್ಷದ ಮೊದಲ ದಿನವೇ ಸುಕ್ಮಾ ಪೊಲೀಸರ ಮುಂದೆ ಸುಮಾರು 44 ನಕ್ಸಲರು ಶರಣಾಗತರಾಗಿದ್ದಾರೆ. ಇದರಲ್ಲಿ 9 ಮಹಿಳಾ ನಕ್ಸಲರೂ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಕ್ಸಲ್ ನಿರ್ಮೂಲನಾ ಕಾರ್ಯಕ್ರಮವಾದ ಪೂನಾ ನಾರ್ಕೋಮ್ ಅಭಿಯಾನವನ್ನು ಸುಕ್ಮಾ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಈ ಅಭಿಯಾನದಡಿ ಸುಕ್ಮಾ ಪೊಲೀಸರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲರನ್ನು ಮುಖ್ಯ ವಾಹಿನಿಗೆ … Continued

ಹೊಸ ವರ್ಷಾಚರಣೆಗೆ ಮೇಕೆ ಕದ್ದುತಂದು ಬಾಡೂಟ ಮಾಡಿದ ಎಎಸ್‌ಐ ಸಸ್ಪೆಂಡ್‌..!

ಬಲಂಗೀರ್: ಪೊಲೀಸ್ ಠಾಣೆಯಲ್ಲಿ ಹೊಸ ವರ್ಷದ ಮುನ್ನಾದಿನದ ಹಬ್ಬದಂದು ಗ್ರಾಮಸ್ಥರ ಮೇಕೆ ಕದ್ದುತಂದು ಮಟನ್‌ ಪಾರ್ಟಿ ಮಾಡಿ ತಿಂದ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಶುಕ್ರವಾರ ಸಂಜೆ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆಯ ಸಿಬ್ಬಂದಿ ಹೊಸ ವರ್ಷದ ಸಂಭ್ರಮಾಚರಣೆಗೆ ಔತಣಕೂಟವನ್ನು ಯೋಜಿಸುತ್ತಿದ್ದಾಗ, ಕಾಂಪೌಂಡ್‌ ಬಳಿ ದಾರಿ ತಪ್ಪಿ ಬಂದ ಮೇಕೆ ಸುಲಭವಾಗಿ … Continued