ಮುಂಬೈನಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಭಾರೀ ಹೆಚ್ಚಳದ ನಂತರ ಹೈ ಅಲರ್ಟ್ ಆಗಿರಲು, ಪರೀಕ್ಷೆ ಹೆಚ್ಚಳಕ್ಕೆ ಬಿಎಂಸಿ ಅಧಿಕಾರಿಗಳಿಗೆ ಸೂಚನೆ

ಮುಂಬೈ: ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (BMC) ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಅವರು ಬುಧವಾರದಂದು ನಾಗರಿಕ ಅಧಿಕಾರಿಗಳಿಗೆ ಕೊರೊನಾ ವೈರಸ್ ಪರೀಕ್ಷೆಯನ್ನು ಸಮರೋಪಾದಿಯಲ್ಲಿ ಮೇಲೆ ತಕ್ಷಣವೇ ಹೆಚ್ಚಿಸುವಂತೆ ಮತ್ತು ಕಳೆದ ಕೆಲವು ವಾರಗಳಿಂದ ನಗರದಲ್ಲಿ ತಾಜಾ ಕೋವಿಡ್-19 ಪ್ರಕರಣಗಳಲ್ಲಿ “ಅಗಾಧ” ಏರಿಕೆಯ ಹಿನ್ನೆಲೆಯಲ್ಲಿ ಜಂಬೋ ಫೀಲ್ಡ್ ಆಸ್ಪತ್ರೆಗಳ ಸಿಬ್ಬಂದಿಯನ್ನು ಜಾಗೃತ ಸ್ಥಿತಿಯಲ್ಲಿರುವಂತೆ ಸೂಚಿಸಿದ್ದಾರೆ. ಮುಂಬೈನಲ್ಲಿ ಪ್ರತಿದಿನ … Continued

ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದಿದ್ದಕ್ಕೆ 7 ಬಾರಿ ಗುಂಡೇಟು ತಿಂದರೂ ಬದುಕುಳಿದ ಅಧಿಕಾರಿ ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆ…!

ಲಕ್ನೋ: 2009ರಲ್ಲಿ ಉತ್ತರ ಪ್ರದೇಶದಲ್ಲಿ ಮುಜಾಫರ್‌ನಗರದಲ್ಲಿ ಸಮಾಜ ಕಲ್ಯಾಣ ಅಧಿಕಾರಿಯಾಗಿ ನೇಮಕಗೊಂಡಾಗ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದಿದ್ದಕ್ಕೆ ಮಾಫಿಯಾದಿಂದ ಏಳು ಬಾರಿ ಗುಂಡೇಟು ತಿಂದ ಅಧಿಕಾರಿ ರಿಂಕು ಸಿಂಗ್ ರಹೀ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, 683ನೇ ರ್ಯಾಂಕ್ ಪಡೆದಿದ್ದಾರೆ. ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಅಧಿಕಾರಿ ರಿಂಕು ಸಿಂಗ್ ರಹೀ ಅವರ ಮೇಲೆ … Continued

ಅಯೋಧ್ಯೆ, ಮಥುರಾ ದೇವಾಲಯಗಳ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶದ ಸರ್ಕಾರ

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆ ಮತ್ತು ಮಥುರಾದಲ್ಲಿನ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಅಯೋಧ್ಯೆಯ ರಾಮಮಂದಿರ ಮತ್ತು ಮಥುರಾದ ಕೃಷ್ಣ ಜನ್ಮಭೂಮಿಯ ಸಮೀಪವಿರುವ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಅಯೋಧ್ಯೆಯಲ್ಲಿ ಮದ್ಯದಂಗಡಿ ಮಾಲೀಕರ ಪರವಾನಗಿಯನ್ನೂ ಸರ್ಕಾರ ರದ್ದುಗೊಳಿಸಿದೆ. ಈ … Continued

ಪಶ್ಚಿಮ ಬಂಗಾಳದ ಪ್ರೇಮಿ ಭೇಟಿಯಾಗಲು ಗಂಟೆಗಟ್ಟಲೆ ನದಿಯಲ್ಲಿ ಈಜಿ, ಹುಲಿಗಳಿರುವ ಕಾಡಿನಲ್ಲಿ ಒಬ್ಬಳೇ ಬಂದ ಬಾಂಗ್ಲಾದೇಶದ ಯುವತಿ…! ಮದುವೆಯಾಯ್ತು..ಬಂಧನವೂ ಆಯ್ತು..!

ಕೋಲ್ಕತ್ತಾ: ಪ್ರೇಯಸಿಯೊಬ್ಬಳು ಆನ್‌ಲೈನ್‌ನಲ್ಲಿ ಪರಿಚಯವಾದ ನಂತರ ಪ್ರಿಯಕರನಾದ ವ್ಯಕ್ತಿಯನ್ನು ಭೇಟಿಯಾಗಲು ಜೀವದ ಹಂಗು ತೊರೆದು ನದಿಯನ್ನು ಒಂದು ಗಂಟೆ ಈಜಿ ಹಲಿಯಿರುವ ಅಭಯಾರಣ್ಯದಲ್ಲಿ ಒಬ್ಬಳೇ ನಡೆದು ಬಾಂಗ್ಲಾದೇಶದಿಂದ ಭಾರತದ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾಳೆ. ಆದರೆ ಅವಳಿಗೆ ಪ್ರೇಮಿ ಸಿಕ್ಕಿ ಅವರಿಬ್ಬರು ದೇವಸ್ಥಾನದಲ್ಲಿ ಮದುವೆಯಾದರೂ ಈಗ ಅವಳನ್ನು ಬಂಧಿಸಲಾಗಿದೆ…! 22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದ ಪಶ್ಚಿಮ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಇಡಿಯಿಂದ ಸಮನ್ಸ್

ನವದೆಹಲಿ: ಕಾಂಗ್ರೆಸ್ ಪಕ್ಷದ ಒಡೆತನದ ಮತ್ತು ನಡೆಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ನಿರ್ವಹಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಸಮನ್ಸ್ ನೀಡಿದೆ. 2013ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ಕ್ರಿಮಿನಲ್ … Continued

ಜನ್ಮತಃ ಕಣ್ಣುಕಾಣದ ದೆಹಲಿಯ ಶಾಲಾ ಶಿಕ್ಷಕಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 48ನೇ ರ‍್ಯಾಂಕ್….!

ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಯಲ್ಲಿ ಇತಿಹಾಸವನ್ನು ಕಲಿಸುವ ಆಯುಷಿ, 2021 ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 48ನೇ ರ‍್ಯಾಂಕ್ ಗಳಿಸಿದ್ದಾರೆ, ಅದರ ಫಲಿತಾಂಶಗಳನ್ನು ಸೋಮವಾರ ಕೇಂದ್ರ ಸಾರ್ವಜನಿಕ ಸೇವಾ ಆಯೋಗವು ಪ್ರಕಟಿಸಿದೆ. ಜನ್ಮತಃ ಕುರುಡಿಯಾದ 29 ವರ್ಷದ ಶಿಕ್ಷಕಿ ತನ್ನ ಅಂಗವೈಕಲ್ಯದ ಸವಾಲುಗಳು ಮೆಟ್ಟಿನಿಂತು ಈ ಸಾಧನೆ ಮಾಡಿದ್ದಾರೆ. ರಾಣಿ ಖೇರಾ ನಿವಾಸಿಯಾಗಿರುವ ಆಯುಷಿ ಶಿಕ್ಷಿಯಾಗಿ … Continued

ಜೀವಂತ ಹಾವುಗಳ ಮಾಲೆಗಳನ್ನೇ ಬದಲಾಯಿಸಿಕೊಂಡ ವಧು-ವರರು….! ವೀಡಿಯೊ ವೈರಲ್‌, ಬೆಚ್ಚಿಬಿದ್ದ ಇಂಟರ್ನೆಟ್ | ವೀಕ್ಷಿಸಿ

ಈ ಹಿಂದೆ ಹಲವಾರು ಹಾವಿನ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿವೆ. adr ಗಾತ್ರ ಅಥವಾ ಪ್ರಕಾರವನ್ನು ಲೆಕ್ಕಿಸದೆ ಹಾವುಗಳೊಂದಿಗಿನ ಯಾವುದೇ ಸಂವಹನವು ಅಪಾಯಕಾರಿ. ಆಕಸ್ಮಿಕವಾಗಿ ಹಾವುಗಳ ಸಂಪರ್ಕಕ್ಕೆ ಬಂದಾಗ ಹೆಚ್ಚಿನ ವ್ಯಕ್ತಿಗಳು ಭಯಭೀತರಾಗುತ್ತಾರೆ. ಆದಾಗ್ಯೂ, ಇಂಟರ್ನೆಟ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ವಿಚಿತ್ರ ಸಂಪ್ರದಾಯದ ಈ ಹಳೆಯ ವೀಡಿಯೊ ಎಲ್ಲಾ ವಿಲಕ್ಷಣ ಮಿತಿಗಳನ್ನು ದಾಟಿದೆ. ವಧು-ವರರು … Continued

ವಾಣಿಜ್ಯ ಬಳಕೆಯ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (OMC) ಇಂದಿನಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ ಪಿಜಿ (LPG) ಸಿಲಿಂಡರ್‌ನ ಬೆಲೆಯನ್ನು ಸುಮಾರು ₹135 ರೂ.ಗಳಷ್ಟು ಕಡಿತಗೊಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ 2355.50 ರೂ.ಗಳಿದ್ದ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈಗ ₹2219.00 ರೂ.ಗಳಿಗೆ ಇಳಿದಿದೆ. ಮುಂಬೈನಲ್ಲಿ, ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ … Continued

ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡಿದ ಸ್ವಲ್ಪ ಸಮಯದ ನಂತರ ಗಾಯಕ ಕೆಕೆ ಹಠಾತ್‌ ನಿಧನ

ಕೋಲ್ಕತ್ತಾ: ಸಂಗೀತ ಕಾರ್ಯಕ್ರಮಕ್ಕಾಗಿ ಕೋಲ್ಕತ್ತಾದಲ್ಲಿದ್ದ ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು ಮಂಗಳವಾರ (ಮೇ 31) ಸಂಜೆ ಹಠಾತ್‌ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಸಂಗೀತ ಕಾರ್ಯಕ್ರಮದ ನಂತರ ಹಿನ್ನೆಲೆಯಲ್ಲಿ ಗಾಯಕ ಕುಸಿದು ಬಿದ್ದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ರಾತ್ರಿ 10 ಗಂಟೆ ಸುಮಾರಿಗೆ ಅವರನ್ನು ಕೋಲ್ಕತ್ತಾದ ಸಿಎಂಆರ್‌ಐ … Continued

ಶೀಘ್ರವೇ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರಲಾಗುವುದು: ಕೇಂದ್ರ ಸಚಿವ

ರಾಯ್‌ಪುರ: ಜನಸಂಖ್ಯೆ ನಿಯಂತ್ರಣಕ್ಕೆ ಶೀಘ್ರದಲ್ಲೇ ಕಾನೂನನ್ನು ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮಂಗಳವಾರ ಹೇಳಿದ್ದಾರೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವರು ಬರೋಂಡಾದ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಗರೀಬ್ ಕಲ್ಯಾಣ್ ಸಮ್ಮೇಳನ’ದಲ್ಲಿ ಭಾಗವಹಿಸಲು ರಾಯ್‌ಪುರಕ್ಕೆ ಬಂದಿದ್ದರು. ಜನಸಂಖ್ಯೆ ನಿಯಂತ್ರಣ ಕಾನೂನು ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ … Continued