12 ಕೋಟಿ ರೂ.ಗಳ ಕೇರಳ ಸರ್ಕಾರದ ಲಾಟರಿ ಗೆದ್ದ ಆಟೋ ಚಾಲಕ..!

ಕೊಚ್ಚಿ: ತೀವ್ರ ಊಹಾಪೋಹಗಳ ನಂತರ, ಕೇರಳದ ಎರ್ನಾಕುಲಂ ಜಿಲ್ಲೆಯ 58 ವರ್ಷದ ಆಟೋ ರಿಕ್ಷಾ ಚಾಲಕನನ್ನು ಕೇರಳ ಸರ್ಕಾರದ 12 ಕೋಟಿ ರೂಪಾಯಿಗಳ ತಿರುವೊಣಂ ಬಂಪರ್ ಲಾಟರಿಯನ್ನು ವಿಜೇತ ಎಂದು ಘೋಷಿಸಲಾಯಿತು. ಕೊಚ್ಚಿಯ ಮರಡು ನಿವಾಸಿ ಜಯಪಾಲನ್ ಪಿ. ಆರ್, ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಬಹುಮಾನ ವಿಜೇತ ಟಿಕೆಟ್ಟಿನ ಮೂಲ ಪ್ರತಿಯನ್ನು ಸಲ್ಲಿಸಿದ ನಂತರ ಲಾಟರಿಯ … Continued

ಶರದ್ ಪವಾರ್ ಗೆ ಬ್ಯಾಕ್‌ ಸ್ಟ್ಯಾಬರ್‌ ಎಂದ ಶಿವಸೇನೆ ನಾಯಕ; ಅಘಾಡಿ ಸರ್ಕಾರದ ಬಿರುಕು ಮತ್ತಷ್ಟು ಬಯಲಿಗೆ

ಮುಂಬೈ: ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಯ ಮಹಾರಾಷ್ಟ್ರದ ಮಹಾ ವಿಕಾಸ ಅಘಡಿ ಸರ್ಕಾರದಲ್ಲಿ‌ (Maha Vikas Aghadi ( government ) ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಈಗ ಮತ್ತೊಂದು ಹೇಳಿಕೆ ಹೊರಬಿದ್ದಿದೆ. ಮಾಜಿ ಕೇಂದ್ರ ಸಚಿವ ಮತ್ತು ಶಿವಸೇನಾ ನಾಯಕ ಅನಂತ್ ಗೀತೆ Anant Geete) ಅವರ ಹೇಳಿಕೆ ಮಹಾರಾಷ್ಟ್ರದ ಎಂವಿಎ ಸರ್ಕಾರದಲ್ಲಿ … Continued

ಭಾರತದಲ್ಲಿ 26,115 ಹೊಸ ಪ್ರಕರಣಗಳು ದಾಖಲು; ಸಕ್ರಿಯ ಪ್ರಕರಣಗಳು 6 ತಿಂಗಳಲ್ಲೇ ಕಡಿಮೆ

ನವದೆಹಲಿ; ಕೊರೊನಾ ವೈರಸ್ಸಿನ 26,115 ಹೊಸ ಪ್ರಕರಣಗಳನ್ನು ಭಾರತ ದಾಖಲಿಸಿದ್ದು, ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದಾಗಿ 252 ಸಾವುಗಳು ಸಂಭವಿಸಿವೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 34,469 ಚೇತರಿಕೆಗಳನ್ನು ಕಂಡಿದೆ, ಒಟ್ಟು ಚೇತರಿಕೆಯ ದರವು ಸುಮಾರು 97.75 ಶೇಕಡಾ ಮತ್ತು ಒಟ್ಟು ಚೇತರಿಕೆ 3,27,49,574 … Continued

ಮಹಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವಿನ ಪ್ರಕರಣ: ಶಿಷ್ಯ ಆನಂದ ಗಿರಿ, ಮತ್ತಿಬ್ಬರು ಪೊಲೀಸ್ ವಶಕ್ಕೆ

ನವದೆಹಲಿ: ಅಖಿಲ್ ಭಾರತೀಯ ಅಖಾರ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಂತ್ ನರೇಂದ್ರ ಗಿರಿ (Mahant Narendra Giri) ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಅವರ ಶಿಷ್ಯ ಆನಂದ್ ಗಿರಿ ಮತ್ತು ಇತರ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅಖಿಲ ಭಾರತೀಯ ಅಖಾರ ಪರಿಷತ್ ಮುಖ್ಯಸ್ಥ ಮಹಂತ್ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಬೇಡ … Continued

ಅನಿಲ್ ದೇಶಮುಖ್ ಪ್ರಕರಣ: 17 ಕೋಟಿ ರೂ.ಗಳ ಗುಪ್ತ ಆದಾಯ ಪತ್ತೆ ಮಾಡಿದ ಆದಾಯ ತೆರಿಗೆ ಇಲಾಖೆ

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಯು 17 ಕೋಟಿ ರೂ.ಗಳಷ್ಟು ಆದಾಯವನ್ನು ಮರೆಮಾಚಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ ಹೇಳಿವೆ ಎಂದು ವರದಿ ತಿಳಿಸಿದೆ. ನಾಗಪುರ ಮೂಲದ ಟ್ರಸ್ಟ್‌ನಲ್ಲಿ ಮೂರು … Continued

ಭಾರತವು ಹೆಚ್ಚುವರಿ ಕೋವಿಡ್‌-19 ಲಸಿಕೆಗಳ ರಫ್ತು ಅಕ್ಟೋಬರ್‌ನಿಂದ ಪುನರಾರಂಭ

ನವದೆಹಲಿ: ಭಾರತವು ಮುಂದಿನ ತಿಂಗಳು ‘ಲಸಿಕೆ ಮೈತ್ರಿ ‘(Vaccine Maitri’) ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಕೋವಿಡ್ -19 ಲಸಿಕೆಗಳ ರಫ್ತನ್ನು ಪುನರಾರಂಭಿಸಲಿದೆ ಮತ್ತು ಕೋವಾಕ್ಸ್ ಜಾಗತಿಕ ಪೂಲ್‌ಗೆ (COVAX global pool) ತನ್ನ ಬದ್ಧತೆಯನ್ನು ಪೂರೈಸಲಿದೆ, ಆದರೆ ತನ್ನದೇ ನಾಗರಿಕರಿಗೆ ಲಸಿಕೆ ಹಾಕುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ … Continued

ಯೆಸ್ ಬ್ಯಾಂಕ್ ಹಗರಣ: ರಾಣಾ ಕಪೂರ್ ಪತ್ನಿ, ಪುತ್ರಿಯರಿಗೆ ಜಾಮೀನು ನಿರಾಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ

ಮುಂಬೈ: ದಿವಾನ್ ಹೌಸಿಂಗ್ ಫೈನಾನ್ಶಿಯಲ್ ಲಿಮಿಟೆಡ್ (DHFL) ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ ಮತ್ತು ಪುತ್ರಿಯರಾದ ರಾಧಾ ಕಪೂರ್ ಮತ್ತು ರೋಶಿನಿ ಕಪೂರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಈ ಕುರಿತು ವರದಿ ಮಾಡಿರುವ ಬಾರ್‌ ಎಂಡ್‌ … Continued

ಪಶ್ಚಿಮ ಬಂಗಾಳದ ಅಧ್ಯಕ್ಷರಾಗಿ ಸುಕಾಂತ ಮಜುಂದಾರ್, ರಾಷ್ಟ್ರೀಯ ಉಪಾಧ್ಯಕ್ಷರಾಗಿ ದಿಲೀಪ್‌ ಘೋಷ ನೇಮಕ ಮಾಡಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಕ್ಷ ಸೋಮವಾರ ಸುಕಾಂತ ಮಜುಂದಾರ್ ಅವರನ್ನು ಪಶ್ಚಿಮ ಬಂಗಾಳ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದು, ದಿಲೀಪ್ ಘೋಷ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಡಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ. ನೇಮಕಾತಿಯ ನಂತರ, ದಿಲೀಪ್ ಘೋಷ್ ಅವರು ಸುಕಾಂತ ಮಜುಮ್ದಾರ್ ಅವರನ್ನು … Continued

ಇದೇ 24ರಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ – ಪ್ರಧಾನಿ ಮೋದಿ ಭೇಟಿ

ವಾಷಿಂಗ್ಟನ್:ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ 24 ರಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿ ಮಾಡಲಿದ್ದಾರೆ. ಸಭೆಯಲ್ಲಿ, ಉಭಯ ದೇಶಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಲಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗಿನ ಸಭೆಗೆ ಮುನ್ನ ಪ್ರಧಾನಿ ಮೋದಿ ಶ್ವೇತ … Continued

ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಪ್ರಯಾಗರಾಜ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ನವದೆಹಲಿ: ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿರುವ ಬಘಂಬರಿ ಮಠದಲ್ಲಿ ಮಹಂತ್ ನರೇಂದ್ರ ಗಿರಿ ಅವರ ಶವ ಪತ್ತೆಯಾಗಿದೆ. ಆರಂಭಿಕ ವರದಿಗಳ ಪ್ರಕಾರ, ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ, ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿದೆ ಮತ್ತು ಅದನ್ನು ಮುರಿಯಬೇಕಾಯಿತು. … Continued