ಕರ್ನಾಟಕ ಬಜೆಟ್‌-2022-23: ಕೃಷಿ ವಲಯಕ್ಕೆ 33,700 ಕೋಟಿ ರೂ. ಅನುದಾನ, ರಿಯಾಯ್ತಿ ಬಡ್ಡಿಯಲ್ಲಿ 33 ಲಕ್ಷ ರೈತರಿಗೆ ಸಾಲ ಸೌಲಭ್ಯ

ಬೆಂಗಳೂರು: ಪ್ರಸಕ್ತ ರಾಜ್ಯ ಬಜೆಟ್​ನಲ್ಲಿ ಕೃಷಿ ವಲಯಕ್ಕೆ 33,700 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ‘ರೈತಶಕ್ತಿ’ ಎಂಬ ಹೊಸ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಸಮಗ್ರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. 33 ಲಕ್ಷ ರೈತರಿಗೆ ಕೃಷಿ ಸಾಲ ಸೌಲಭ್ಯ ವಿಸ್ತರಣೆ, ಬೆಳಗಾವಿ, ಬಳ್ಳಾರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ ಪ್ರಸ್ತಾಪ, … Continued

ಕರ್ನಾಟಕ ಬಜೆಟ್‌ 2022 -23: ಈ ಬಾರಿ ಯಾವುದೇ ತೆರಿಗೆಯಲ್ಲಿ ಹೆಚ್ಚಳವಿಲ್ಲ-ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕ ರೋಗದ ಕಾರಣ ಆರ್ಥಿಕ ಬೆಳವಣಿಗೆ ಕುಂಠೀತವಾದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳದ ಹೆಚ್ಚಳವಾಗಬಹುದು ಎಂಬ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಬಸವರಾಜ ಬೊಮ್ಮಾಯಿ ಗುಡ್ ನ್ಯೂಸ್ ನೀಡಿದ್ದು, ಈ ಬಾರಿ ಯಾವುದೇ ತೆರಿಗೆ ಹೆಚ್ಚಳವಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಕರ್ನಾಟಕ ಬಜೆಟ್ 2022-23 ಮಂಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ತೆರಿಗೆ ಹೆಚ್ಚಳ ಮಾಡುವುದಿಲ್ಲ … Continued

ಉಕ್ರೇನ್‌-ರಷ್ಯಾ ಸಂಘರ್ಷದ ಮಧ್ಯೆ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾತುಗಳು ಚಾಲ್ತಿಗೆ: ವಿಶ್ವದ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರಗಳು- ಯಾವ ದೇಶಗಳ ಬಳಿ ಏನೇನಿವೆ-ಎಷ್ಟೆಷ್ಟಿವೆ..?

ಅಮೆರಿಕ ನೇತೃತ್ವದ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ಸೇರಲು ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಫೆಬ್ರವರಿ 24 ರಂದು ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿದಾಗಿನಿಂದಲೂ, ಜಗತ್ತು ಕನಿಷ್ಠ ಎರಡು ಬಾರಿ ಭಯಾನಕ ನ್ಯೂಕ್ಲಿಯರ್‌ ಬಾಂಬ್‌-ಪದವನ್ನು ಕೇಳಿದೆ. ಮೂರನೇ ಮಹಾಯುದ್ಧವು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಒಳಗೊಂಡಿರುತ್ತದೆ ಮತ್ತು ವಿನಾಶಕಾರಿಯಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವ … Continued

ಭಾರೀ ಸ್ಫೋಟದಿಂದ 3 ಅಂತಸ್ತಿನ ಕಟ್ಟಡ ನೆಲಸಮ: ಐವರ ಸಾವು, 8 ಮಂದಿಗೆ ಗಾಯ

ಭಾಗಲ್ಪುರ : ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿದ ನಂತರ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ. ಪೊಲೀಸ್‌ ತಂಡ ಮತ್ತು ತುರ್ತು ಸೇವೆಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಪ್ರಾರಂಭಿಸಿದವು. ಕುಸಿದ ಕಟ್ಟಡದ ಅವಶೇಷಗಳಡಿ ಹತ್ತರಿಂದ … Continued

ಯುರೋಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ, ಬೆಂಕಿ ಕಾಣಿಸಿಕೊಂಡ ವೀಡಿಯೊ ಹಂಚಿಕೊಂಡ ಉಕ್ರೇನ್ ಅಧ್ಯಕ್ಷ, ವಿಶ್ವಸಂಸ್ಥೆ ತುರ್ತು ಸಭೆ

ನವದೆಹಲಿ: ರಷ್ಯಾವು ಉಕ್ರೇನ್‌ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಉಕ್ರೇನ್‌ನ ಪ್ರಮುಖ ಪರಮಾಣು ಸ್ಥಾವರದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದೆ. ಯೂಕ್ರೇನ್​ನಲ್ಲಿರುವ ಯುರೋಪ್​ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ಶೆಲ್​ ದಾಳಿ ನಡೆಸಿರುವುದಾಗಿ ಹತ್ತಿರದ ಪಟ್ಟಣದ ಮೇಯರ್ ತಿಳಿಸಿದ್ದಾರೆ. ಅಣುಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಬ್ರಿಟನ್‌​ ವಿಶ್ವಸಂಸ್ಥೆ … Continued

ಉಕ್ರೇನ್‌ನ ಕೀವ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟಿನಿಂದ ಗಾಯ, ಆಸ್ಪತ್ರೆಗೆ ದಾಖಲು

ಕೀವ್‌: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಇನ್ನೊಬ್ಬ ಭಾರತೀಯ ವಿದ್ಯಾರ್ಥಿಯನ್ನು ಸ್ಥಳಾಂತರ ಮಾಡುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಲಾಗಿದ್ದು, ತಕ್ಷಣವೇ ಮಧ್ಯದಲ್ಲಿ ಹಿಂತಿರುಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡ ಕೆಲವೇ ದಿನಗಳಲ್ಲಿ ಇದು ಸಂಭವಿಸಿದೆ. ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಅನುಕೂಲವಾಗಲು ಪೋಲೆಂಡ್‌ನಲ್ಲಿರುವ ನಾಗರಿಕ ವಿಮಾನಯಾನ ರಾಜ್ಯ … Continued

ಯುಎನ್‌ಜಿಎಯಲ್ಲಿ ಮತದಾನದಿಂದ ದೂರ ಉಳಿಯುವ ಸರ್ಕಾರದ ನಿಲುವಿಗೆ ಪ್ರತಿಪಕ್ಷಗಳ ಬೆಂಬಲ: ಮೂಲಗಳು

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಮತದಾನದಿಂದ ದೂರ ಉಳಿಯುವ ಕೇಂದ್ರ ಸರ್ಕಾರದ ನಿಲುವನ್ನು ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ. ವಿದೇಶಾಂಗ ವ್ಯವಹಾರಗಳ ಸಂಸತ್ತಿನ ಸಮಾಲೋಚನಾ ಸಮಿತಿಯು ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸಭೆ ನಡೆಸಿದ ನಂತರ ಈ ಮಾಹಿತಿ ಬಂದಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ನಡುವೆ ವಿದೇಶಾಂಗ … Continued

ಉಕ್ರೇನ್-ರಷ್ಯಾ ಯುದ್ಧ :ಉಕ್ರೇನ್‌ನಿಂದ ಸ್ಥಳಾಂತರಗೊಳ್ಳುವಾಗ ವಿಮಾನಗಳಲ್ಲಿ ಸಾಕು ಪ್ರಾಣಿಗಳನ್ನೂ ಕರೆತಂದ ವಿದ್ಯಾರ್ಥಿಗಳು..!

ನವದೆಹಲಿ: ಉಕ್ರೇನ್‌ನ ನೆರೆಯ ದೇಶಗಳಿಂದ ಹಿಂಡನ್ ವಾಯುನೆಲೆಗೆ ಗುರುವಾರ ಬೆಳಿಗ್ಗೆ ಆಗಮಿಸಿದ ಭಾರತೀಯ ವಾಯುಪಡೆಯ ಸ್ಥಳಾಂತರಿಸುವ ವಿಮಾನಗಳಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಸಾಕು ನಾಯಿಗಳು ಮತ್ತು ಬೆಕ್ಕುಗಳನ್ನು ಕರೆತಂದಿದ್ದಾರೆ. ಇಲ್ಲಿ ಬಂದಿಳಿದ ಐಎಎಫ್‌ನ ನಾಲ್ಕು ವಿಮಾನಗಳಲ್ಲಿ ಒಂದರಲ್ಲಿ ಪುಣೆಯ ವಿದ್ಯಾರ್ಥಿನಿ ಯುಕ್ತಾ ತನ್ನ ಏಳು ತಿಂಗಳ ಸೈಬೀರಿಯನ್ ಹಸ್ಕಿ ನಾಯಿ ಮರಿ ನೀಲಾಳನ್ನು ಕರೆತಂದಿದ್ದಾಳೆ. ನೀಲಾ … Continued

ಉಕ್ರೇನ್ -ರಷ್ಯಾ ಯುದ್ಧ: ಉಕ್ರೇನ್‌ನಲ್ಲಿ ಇನ್ನೂ ಕೆಟ್ಟದ್ದು ಸಂಭವಿಸಲಿದೆ-ಪುತಿನ್ ಜೊತೆ ಮಾತುಕತೆ ನಂತರ ಫ್ರಾನ್ಸ್‌ ಅಧ್ಯಕ್ಷರ ಹೇಳಿಕೆ

ಪ್ಯಾರಿಸ್‌: ಉಕ್ರೇನ್ ವಿರುದ್ಧ ರಷ್ಯಾದ ಯುದ್ಧ ಮುಂದುವರೆದಿದೆ. ಏತನ್ಮಧ್ಯೆ, ಇಂದು, ಗುರುವಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಉಭಯ ನಾಯಕರ ನಡುವೆ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಯಿತು. ಇದಾದ ನಂತರ ಮ್ಯಾಕ್ರನ್, “ಪುತಿನ್ ಇಡೀ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಬಯಸುತ್ತಾರೆ. ಉಕ್ರೇನ್‌ನಲ್ಲಿ … Continued

ನನ್ನ ಮುಂದೆ ಒಬ್ಬ ಹುಡುಗಿಯನ್ನು ಒದ್ದರು, ಅವಳು ಮೂರ್ಛೆ ಹೋದಳು… ಅವರು ನಮ್ಮನ್ನೂ ಹೊಡೆಯುತ್ತಿದ್ದರು: ಉಕ್ರೇನಿಯನ್ ಸೈನಿಕರ ಬಗ್ಗೆ ಭಾರತೀಯ ವಿದ್ಯಾರ್ಥಿಗಳ ಆರೋಪ

ಜೈಪುರ: ಯುದ್ಧ ಪೀಡಿತ ಉಕ್ರೇನ್‌ ದೇಶದ ರೊಮೇನಿಯಾದೊಂದಿಗಿನ ಗಡಿಯಲ್ಲಿ ಉಕ್ರೇನ್ ಸೈನಿಕರು ಭಾರತೀಯರನ್ನು ಥಳಿಸಿ ಅಶ್ರುವಾಯು ಶೆಲ್‌ಗಳನ್ನು ಹಾರಿಸುವುದರೊಂದಿಗೆ ಪರಿಸ್ಥಿತಿ ಭಯಾನಕವಾಗಿದೆ ಎಂದು ಉಕ್ರೇನ್‌ನಿಂದ ಇಲ್ಲಿಗೆ ಹಿಂತಿರುಗಿದ ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ. ರಷ್ಯಾದ ತೀವ್ರವಾದ ಸೇನಾ ದಾಳಿಯ ನಡುವೆ ಯುದ್ಧ ಪೀಡಿತ ರಾಷ್ಟ್ರದಿಂದ ಪಲಾಯನ ಮಾಡಿದ ನಂತರ ಇಲ್ಲಿಗೆ ಆಗಮಿಸಿದ ಎಂಟು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿರುವ ಭಾರತೀಯ … Continued