ಉಕ್ರೇನ್‌ನಲ್ಲಿ “ರಷ್ಯಾದ ಆಕ್ರಮಣ ಖಂಡಿಸುವ ವಿಶ್ವಸಂಸ್ಥೆ ನಿರ್ಣಯದ ಮತದಾನದಿಂದ ದೂರ ಉಳಿದ ಭಾರತ

ನವದೆಹಲಿ: ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣವನ್ನು ಬಲವಾಗಿ ಖಂಡಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯಕ್ಕೆ ಮತದಾನದ ವೇಳೆ ಭಾರತ ಬುಧವಾರ ಮತ್ತೆ ಗೈರಾಗಿದೆ. ಮಾಸ್ಕೋ ಮತ್ತು ಕೀವ್‌ ನಡುವಿನ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ನಿರ್ಣಯಗಳ ಕುರಿತು ವಿಶ್ವ ಸಂಸ್ಥೆಯಲ್ಲಿ ಒಂದು ವಾರದೊಳಗೆ ದೇಶವು ಮೂರನೇ ಬಾರಿಗೆ ಗೈರುಹಾಜರಾಗಿದೆ. 193-ಸದಸ್ಯರ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯು ತನ್ನ ಅಂತರಾಷ್ಟ್ರೀಯವಾಗಿ … Continued

ರಷ್ಯಾ ಅಧ್ಯಕ್ಷ ಪುತಿನ್ ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ; ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಜೊತೆ ಎರಡನೇ ಬಾರಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಮತ್ತು ಯುದ್ಧ ಪೀಡಿತ ಉಕ್ರೇನ್‌ನಿಂದ ವಿಶೇಷವಾಗಿ ಅದರ ಖಾರ್ಕಿವ್ ನಗರದಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಚರ್ಚಿಸಿದ್ದಾರೆ. ಉಭಯ ನಾಯಕರು ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು, ವಿಶೇಷವಾಗಿ ಖಾರ್ಕಿವ್ ನಗರದಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳು … Continued

ನಡೆದುಕೊಂಡಾದ್ರೂ ಹೋಗಿ.. ಯಾವುದೇ ಪರಿಸ್ಥಿತಿಯಲ್ಲೂ ಖಾರ್ಕಿವ್‌ನಿಂದ ತಕ್ಷಣವೇ ಹೊರಡಿ: ತನ್ನ ನಾಗರಿಕರಿಗೆ ಸೂಚಿಸಿದ ಉಕ್ರೇನಿನ ಭಾರತದ ರಾಯಭಾರ ಕಚೇರಿ

ನವದೆಹಲಿ: ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದ ಮೇಲೆ ರಷ್ಯಾ ತನ್ನ ಮಾರಕ ಬಾಂಬ್ ದಾಳಿಯನ್ನು ಮುಂದುವರೆಸುತ್ತಿರುವುದರಿಂದ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯಾವುದೇ ಪರಿಸ್ಥಿತಿಯಲ್ಲೂ” ತಕ್ಷಣವೇ ಖಾರ್ಕಿವ್ ನಗರ ತೊರೆಯುವಂತೆ ಎಲ್ಲಾ ಭಾರತೀಯರಿಗೂ ಸೂಚನೆ ನೀಡಿದೆ. ಟ್ವೀಟ್‌ಗಳ ಸರಣಿಯಲ್ಲಿ, ಇಂದಿನ ದಿನದ ಭಾರತದ ಎರಡನೇ ಸಲಹೆ ಬಂದಿದೆ: “ಖಾರ್ಕಿವ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ತುರ್ತು ಸಲಹೆ. … Continued

ಉಕ್ರೇನ್‌ನಿಂದ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸುರಕ್ಷಾ ಕಾರಿಡಾರ್‌ ಸ್ಥಾಪನೆ, ಕರ್ನಾಟಕದ ವಿದ್ಯಾರ್ಥಿಯ ಸಾವಿನ ತನಿಖೆ: ರಷ್ಯಾ ರಾಯಭಾರಿ

ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷ ವಲಯದಿಂದ ಪಾರಾಗಲು ಭಾರತೀಯ ಪ್ರಜೆಗಳಿಗೆ ಸುರಕ್ಷಿತ ಮಾರ್ಗವನ್ನು ನೀಡಲಾಗುವುದು ಎಂದು ರಷ್ಯಾದ ರಾಯಭಾರಿ-ನಿಯೋಜಿತ ಡೆನಿಸ್ ಅಲಿಪೋವ್ ಬುಧವಾರ ಭರವಸೆ ನೀಡಿದ್ದಾರೆ. ಮಂಗಳವಾರ ಖಾರ್ಕಿವ್‌ನಲ್ಲಿ ನಿಧನರಾದ ಭಾರತೀಯ ವಿದ್ಯಾರ್ಥಿ ನವೀನ್‌ಗೆ ಸಂತಾಪ ಸೂಚಿಸುವ ಮೂಲಕ ಡೆನಿಸ್ ಅಲಿಪೋವ್ ತಮ್ಮ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಿದರು. ನವೀನ್ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಷ್ಯಾ ರಾಯಭಾರಿ … Continued

ನವಾಬ್ ಮಲಿಕ್ ಹೇಬಿಯಸ್ ಕಾರ್ಪಸ್ ಅರ್ಜಿ: ಇಡಿ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್

ಮುಂಬೈ: ತನ್ನ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ತಕ್ಷಣ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಬಾಂಬೆ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯದ (ಇಡಿ) ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಎಸ್‌ಬಿ ಶುಕ್ರೆ ಮತ್ತು ಜಿಎ ಸನಪ್ ಅವರ … Continued

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಭಾರತದ ಎರಡನೇ ವಿದ್ಯಾರ್ಥಿ ಸಾವು

ನವದೆಹಲಿ: ರಷ್ಯಾದ ಸೇನೆಯ ಆಕ್ರಮಣದ ನಂತರ ಯುದ್ಧ ನಡೆಯುತ್ತಿರುವ ಉಕ್ರೇನ್‌ನಲ್ಲಿ ಬುಧವಾರ ಪಂಜಾಬ್‌ನ ಬರ್ನಾಲಾದ ಭಾರತೀಯ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದಾನೆ. ಚಂದನ್ ಜಿಂದಾಲ್ (22) ಉಕ್ರೇನ್‌ನ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಲಭ್ಯವಿರುವ ವರದಿಗಳ ಪ್ರಕಾರ, ಜಿಂದಾಲ್ ಪಾರ್ಶ್ವವಾಯುವಿಗೆ ಒಳಗಾದರು. ಅವರು ಸ್ವಲ್ಪ ಸಮಯ ಆಸ್ಪತ್ರೆಯಲ್ಲಿದ್ದರು. ನಂತರ ವಿನ್ನಿಟ್ಸಿಯಾ (ಕೈವ್ಸ್ಕಾ ಸ್ಟ್ರೀಟ್ … Continued

24 ಗಂಟೆಗಳಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ 1,377 ಭಾರತೀಯರ ಸ್ಥಳಾಂತರ, ಕೀವ್‌ನಲ್ಲಿ ಭಾರತದ ಯಾರೂ ಉಳಿದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಯುದ್ಧಪೀಡಿತ ಉಕ್ರೇನ್‍ನಿಂದ ಭಾರತವು ತನ್ನ 1,377 ನಾಗರಿಕರನ್ನು ಸ್ಥಳಾಂತರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು, ಬುಧವಾರ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪೋಲೆಂಡ್‍ನಿಂದ ಮೊದಲ ವಿಮಾನ ಸೇರಿದಂತೆ ಆರು ವಿಮಾನಗಳು ಈಗ ಭಾರತಕ್ಕೆ ಹೊರಟಿವೆ. ಉಕ್ರೇನಿಂದ 1377 ಭಾರತೀಯ ಪ್ರಜೆಗಳನ್ನು ವಾಪಸ್ ಕರೆದೊಯ್ದಿದ್ದಾರೆ ಎಂದು ಜೈಶಂಕರ್ ಟ್ವೀಟ್ … Continued

ಉಕ್ರೇನ್-ರಷ್ಯಾ ಯುದ್ಧ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಪಾರು ಮಾಡಲು ರಷ್ಯಾದಿಂದ ಸಹಾಯ ?!

  ನವದೆಹಲಿ: ಕಳೆದ ಏಳು ದಿನಗಳಿಂದ ರಷ್ಯಾ-ಉಕ್ರೇನ್ ಕದನ ಜೋರಾಗಿದೆ. ಆದರೆ ಈ ಯುದ್ಧದ ಹೊಡೆತ ಉಕ್ರೇನ್‌ನಲ್ಲಿರುವ ಭಾರತೀಯರ ಮೇಲೆ ಬೀಳುತ್ತಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳಿರುವ ಹಲವು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯರನ್ನು ಸುರಕ್ಷಿತವಾಗಿ ಹೊರತರಲು ಭಾರತ ಆಪರೇಷನ್ ಗಂಗಾ ಆರಂಭಿಸಿದೆ. ಉಕ್ರೇನ್ ಯುದ್ಧದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಲವು … Continued

ಮಲಯಾಳಂ ಸುದ್ದಿ ವಾಹಿನಿ ಪ್ರಸಾರದ ಮೇಲಿನ ಕೇಂದ್ರದ ನಿಷೇಧ ಎತ್ತಿಹಿಡಿದ ಆದೇಶದ ವಿರುದ್ಧ ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್

ಕೊಚ್ಚಿ: ಪರವಾನಿಗೆಯನ್ನು ನವೀಕರಿಸದೆ ಪ್ರಸಾರ ನಿಲ್ಲಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದ ಏಕ ನ್ಯಾಯಾಧೀಶರ ಆದೇಶದ ವಿರುದ್ಧ ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಮಾಡಿದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ಪೀಠವು ಸಹ ಚಾನೆಲ್ಲಿನ ಮೇಲ್ಮನವಿಗಳನ್ನು ತಿರಸ್ಕರಿಸಿದೆ. ಚಾನೆಲ್‌ನ ಕೆಲವು ಉದ್ಯೋಗಿಗಳು, … Continued

ಉಕ್ರೇನ್‌ನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನಿ ವಿದ್ಯಾರ್ಥಿಗಳಿಂದ ಭಾರತದ ಧ್ವಜ ಬಳಕೆ, ‘ಭಾರತ್ ಮಾತಾ ಕೀ ಜೈ’ ಘೋಷಣೆ… ವೀಡಿಯೊ ವೈರಲ್.. ವೀಕ್ಷಿಸಿ

ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ಯುದ್ಧ ಪೀಡಿತ ವಲಯದಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನಿ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸದೇ ಇದ್ದುದಕ್ಕಾಗಿ ವಾಗ್ದಾಳಿ ಎದುರಿಸುತ್ತಿದ್ದರೆ, ಬಿಕ್ಕಟ್ಟಿನಿಂದ ಪಾರಾಗಲು ಪಾಕಿಸ್ತಾನಿ ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಬಳಸುತ್ತಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ- ತಮ್ಮ ವಾಹನದ ಮೇಲೆ ತಮ್ಮ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರೆ ಭಾರತೀಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ರಷ್ಯನ್ನರು ನೀಡಿದ್ದರಿಂದ … Continued