ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ ಅಪಘಾತ..!

ಚೆನ್ನೈ:ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಅಪಘಾತಕ್ಕೀಡಾದವರ ಮೃತದೇಹಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನದ ಒಂದು ಭಾಗವಾದ ಆಂಬ್ಯುಲೆನ್ಸ್ ಮತ್ತು ಪೊಲೀಸ್ ವ್ಯಾನ್ ವೆಲ್ಲಿಂಗ್ಟನ್‌ನಿಂದ ತಮಿಳುನಾಡಿನ ಸೂಲೂರಿಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಯಿತು. ಬುಧವಾರ ಮಧ್ಯಾಹ್ನ ಕೂನೂರು ಬಳಿ ಐಎಎಫ್ ಹೆಲಿಕಾಪ್ಟರ್ ಪತನಗೊಂಡ ದುರಂತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 … Continued

15 ತಿಂಗಳ ನಿರಂತರ ಪ್ರತಿಭಟನೆ ಕೊನೆಗೊಳಿಸಲು ರೈತ ಸಂಘಟನೆಗಳ ನಿರ್ಧಾರ, ಶನಿವಾರ ದೆಹಲಿ ಗಡಿಗಳ ಪ್ರತಿಭಟನಾ ಸ್ಥಳ ತೆರವು

ನವದೆಹಲಿ: ಕೃಷಿ ಕಾನೂನುಗಳು (ಈಗ ರದ್ದಾದ) ಮತ್ತು ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನಾತ್ಮಕ ಖಾತರಿ ಸೇರಿದಂತೆ ಇತರ ವಿಷಯಗಳ ವಿರುದ್ಧ 15 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 11, ಶನಿವಾರದಂದು ತಮ್ಮ ಪ್ರತಿಭಟನೆ ಕೊನೆಗೊಳಿಸಿ ಮನೆಗೆ ಹಿಂದಿರುಗುವುದಾಗಿ ಘೋಷಿಸಿದ್ದಾರೆ. ರೈತ ಸಂಘಗಳು ಇಂದು ಸಂಜೆ 5:30 ಕ್ಕೆ ಫತೇಹ್ ಅರ್ದಾಸ್ (ವಿಜಯ ಪ್ರಾರ್ಥನೆ) … Continued

ಗಾಯಗೊಂಡಿದ್ದ ವ್ಯಕ್ತಿ ನೀರು ಕೇಳಿದ್ದರು, ಬಿಪಿನ್ ರಾವತ್ ಎಂದು ನಂತ್ರ ಗೊತ್ತಾಯ್ತು : ಕುನೂರ್‌ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಹಾಯಕ್ಕೆ ಬಂದ ಸ್ಥಳೀಯ

ಕುನೂರು: ಕುನೂರ್ ಸಮೀಪ ಬುಧವಾರ (ಡಿಸೆಂಬರ್‌ 8) ಸಂಭವಿಸಿದ ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಎಇಎಸ್‌) ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಟೀ ಎಸ್ಟೇಟ್ ಪ್ರದೇಶದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದ್ದು ಸ್ಥಳೀಯರು ತಮಗೆ ಏಕಾಏಕಿ ಭಾರಿ ಸದ್ದು ಕೇಳಿಸಿದೆ ಹಾಗೂ ದಟ್ಟವಾದ ಹೊಗೆ ಆವರಿಸಿದ್ದು ಕಂಡುಬಂದಿದೆ ಎಂದು ಹೇಳಿದ್ದಾರೆ. … Continued

ಐಎಎಫ್ ಶೋಧ ತಂಡದಿಂದ ಪತನಗೊಂಡ ಹೆಲಿಕಾಪ್ಟರ್‌ ಬ್ಯ್ಲಾಕ್‍ ಬಾಕ್ಸ್ ​ಕೊನೆಗೂ ಪತ್ತೆ:ಇದರಲ್ಲಿ ತಿಳಿಯಲಿದೆ ದುರಂತಕ್ಕೆ ಕಾರಣ

ನವದೆಹಲಿ: ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಫ್ಲೈಟ್​ ರೆಕಾರ್ಡರ್​ ಎಂದು ಕರೆಯುವ ಬ್ಯ್ಲಾಕ್‍ ಬಾಕ್ಸ್​ ಕೊನೆಗೂ ಪತ್ತೆಯಾಗಿದೆ. ಹೆಲಿಕಾಪ್ಟರ್​ ಪತನವಾಗುವುದಕ್ಕೂ ಮೊದಲು ಏನಾಯಿತು ಎಂಬುದು ಇದರಿಂದ ಗೊತ್ತಾಗಲಿದೆ. ಸೇನಾ ಸಿಬ್ಬಂದಿ ಪಡೆ ಮುಖ್ಯಸ್ಥ (ಸಿಡಿಎಸ್‌)​ ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಎಂಐ 17ವಿ5 ಸೇನಾ ಹೆಲಿಕಾಪ್ಟರ್​​ ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಪತನವಾಗಿ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ … Continued

ದೆಹಲಿ: ರೋಹಿಣಿ ನ್ಯಾಯಾಲಯದಲ್ಲಿ ಸ್ಫೋಟ, ಓರ್ವನಿಗೆ ಗಾಯ; ಕಲಾಪ ಸ್ಥಗಿತ

ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಸಣ್ಣ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆರಂಭಿಕ ತನಿಖೆಯಲ್ಲಿ ಲ್ಯಾಪ್‌ಟಾಪ್‌ನ ಬ್ಯಾಟರಿ ಸ್ಫೋಟದ ಸಾಧ್ಯತೆಯನ್ನು ಸೂಚಿಸಿದ್ದರೂ, ಸ್ಫೋಟಕ್ಕೆ ನಿಜವಾದ ಕಾರಣ ಟಿಫಿನ್ ಬಾಂಬ್ ಎಂದು ಈಗ ಮೂಲಗಳು ಹೇಳುತ್ತವೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ. ಲಭ್ಯವಿರುವ ವಿವರಗಳ ಪ್ರಕಾರ, ನ್ಯಾಯಾಲಯದ ಕೊಠಡಿ … Continued

ಮಿಲಿಟರಿ ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದ ವರುಣ್‌ ಸಿಂಗ್‌ ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ

ಚೆನ್ನೈ: ಮಿಲಿಟರಿ ಹೆಲಿಕ್ಯಾಪ್ಟರ್‌ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ. ವರುಣ್‌ ಸಿಂಗ್‌ ಅವರ ಪರಿಸ್ಥಿತಿ ಗಂಭೀರವಾಗಿದೆ, ಆದರೂ ಸ್ಥಿರವಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದರೆ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಿಂದ, ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಗೆ ಹೆಚ್ಚಿನ … Continued

ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತಕ್ಕೂ ಮೊದಲಿನ ಕೊನೆಯ ಕ್ಷಣಗಳು ವಿಡಿಯೊದಲ್ಲಿ ಸೆರೆ | ವೀಕ್ಷಿಸಿ

ನವದೆಹಲಿ: ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿದ್ದು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಸ್ಥಳಕ್ಕೆ ಮೊದಲು ಧಾವಿಸಿದ ಸ್ಥಳೀಯರು ದುರಂತ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. “ನಾನು ಮೊದಲು ದೊಡ್ಡ ಶಬ್ದ ಕೇಳಿದೆ, ಏನಾಯಿತು ಎಂದು … Continued

ಭಾರತದಲ್ಲಿ 9,419 ಹೊಸ ಕೋವಿಡ್-19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 11.6% ಹೆಚ್ಚು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 9,419 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಇದು ನಿನ್ನೆಗಿಂತ 11.6% ಹೆಚ್ಚಾಗಿದೆ. ಇದು ಒಟ್ಟು ಕೋವಿಡ್‌ ಸೋಂಕನ್ನು 3,46,66,241 ಕ್ಕೆ ಒಯ್ದಿದೆ. ಭಾರತದ ಚೇತರಿಕೆಯ ಪ್ರಮಾಣವು ಈಗ 98.36% ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 8,251 ರೋಗಿಗಳು ಚೇತರಿಸಿಕೊಂಡಿದ್ದಾರೆ, ಇದು ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ … Continued

ಓಮಿಕ್ರಾನ್ ಸೋಂಕಿತರಿಗೆ ನಿರ್ದಿಷ್ಟ ಕೋವಿಡ್ ಚಿಕಿತ್ಸಾ ಸೌಕರ್ಯ ಇರುವಲ್ಲೇ ಚಿಕಿತ್ಸೆ ನೀಡಿ: ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ನವದೆಹಲಿ: ದೇಶದ ಕೆಲವೆಡೆ ಕೊರೊನಾ ರೂಪಾಂತರಿ ತಳಿಯಾದ ಓಮಿಕ್ರಾನ್ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚನೆಯೊಂದನ್ನು ನೀಡಿದೆ. ಓಮಿಕ್ರಾನ್ ಸೋಂಕಿತರನ್ನು ನಿರ್ದಿಷ್ಟ ಕೋವಿಡ್ ಚಿಕಿತ್ಸಾ ಸೌಕರ್ಯ ಇರುವ ಹಾಗೂ ಕ್ವಾರಂಟೈನ್ ಮಾಡಲು ವ್ಯವಸ್ಥೆ ಇರುವಲ್ಲಿಯೇ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಓಮಿಕ್ರಾನ್ ವೇಗವಾಗಿ ಹರಡುವುದರಿಂದ ಚಿಕಿತ್ಸೆ ಸಂದರ್ಭದಲ್ಲಿ ಆರೋಗ್ಯ … Continued

ಶುಕ್ರವಾರ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ, ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ

ನವದೆಹಲಿ: ತಮಿಳುನಾಡಿನ ಕುನೂರ್​​ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್​ ರಾವತ್ ಅಂತ್ಯಕ್ರಿಯೆ ನಾಡಿದ್ದು ಶುಕ್ರವಾರ(ಡಿಸೆಂಬರ್ 10) ದೆಹಲಿ ಕಂಟೋನ್ಮೆಂಟ್‌ ಪ್ರದೇಶದಲ್ಲಿ ನಡೆಯಲಿದೆ. ನಾಳೆ, ಗುರುವಾರ (ಡಿಸೆಂಬರ್ 9) ಸಂಜೆ ಬಿಪಿನ್‌ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥಿವ ಶರೀರವನ್ನು ದೆಹಲಿಗೆ ಒಯ್ಯಲಾಗುತ್ತದೆ. ನಾಡಿದ್ದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರ … Continued