ಇನ್ಫೋಸಿಸ್​ಗೆ ಎರಡನೇ ತ್ರೈಮಾಸಿಕದಲ್ಲಿ 5421 ಕೋಟಿ ರೂ. ಲಾಭ; 15 ರೂ.ಗಳ ಡಿವಿಡೆಂಡ್ ಘೋಷಣೆ

ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಐ.ಟಿ. (ಮಾಹಿತಿ ತಂತ್ರಜ್ಞಾನ) ಸೇವಾ ಕಂಪೆನಿಯಾದ ಇನ್ಫೋಸಿಸ್ 2021ರ ಜುಲೈನಿಂದ ಸೆಪ್ಟೆಂಬರ್​ ತನಕದ ತ್ರೈಮಾಸಿಕ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, 5,421 ಕೋಟಿ ರೂ.ಗಳ ಕ್ರೋಡೀಕೃತ ಲಾಭವನ್ನು ವರದಿ ಮಾಡಿದೆ. ಜೂನ್ ತ್ರೈಮಾಸಿಕದಲ್ಲಿ ಬಂದಿದ್ದ 5,195 ಕೋಟಿ ರೂ.ಗಳ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ 4.4ರಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ … Continued

ಆರ್ಯನ್​ ಖಾನ್​ಗೆ ನಿರಾಸೆ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಮುಂಬೈ: ರೇವ್ಸ್​ ಪಾರ್ಟಿ ಮಾಡಿ ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಾರುಖ್​ ಖಾನ್​ ಪುತ್ರ ಆರ್ಯನ್‌ ಖಾನ್ ಜಾಮೀನು ಅರ್ಜಿ ಕುರಿತು ಇಂದು (ಬುಧವಾರ) ವಿಚಾರಣೆ ನಡೆಸಿದ ವಿಶೇಷ ಎನ್​ಡಿಪಿಎಸ್​ ನ್ಯಾಯಾಲಯ ಗುರುವಾರಕ್ಕೆ (ಅ.14) ಮುಂದೂಡಿದೆ. ಅಲ್ಲಿಯವರೆಗೂ ಆರ್ಯನ್​ ಖಾನ್​ ಜೈಲಿನಲ್ಲಿ ದಿನ ಕಳೆಯಬೇಕಿದೆ. ಅಕ್ಟೋಬರ್ 3ರಿಂದ ಆರ್ಯನ್​ ವಿಚಾರಣೆ ನಡೆಸಿಲ್ಲಮ್ಯಾಜಿಸ್ಟ್ರೇಟ್ ಕೋರ್ಟ್​​​ನಲ್ಲಿ ಜಾಮೀನು ಅರ್ಜಿ … Continued

ನವರಾತ್ರಿಯ ಸಮಯದಲ್ಲಿ ಒಡಿಶಾದಲ್ಲಿ 2 ತಲೆ, 3 ಕಣ್ಣುಗಳುಳ್ಳ ಕರುವಿನ ಜನನ, ದುರ್ಗಾ ಅವತಾರ ಎಂದು ಪೂಜೆ, ವೀಕ್ಷಿಸಿ

ನಬರಂಗಪುರ್ (ಒಡಿಶಾ): ನವರಾತ್ರಿಯ ಹಬ್ಬದಲ್ಲಿ ಒರಿಸ್ಸಾದ ನಬರಂಗಪುರ್ ಜಿಲ್ಲೆಯಲ್ಲಿ ಎರಡು ತಲೆ ಮತ್ತು ಮೂರು ಕಣ್ಣುಗಳೊಂದಿಗೆ ಆಕಳ ಕರು ಜನಿಸಿದೆ. ಈಗ ಆ ಕರುವನ್ನು ದುರ್ಗಾದೇವಿಯ ಅವತಾರವೆಂದು ಪೂಜಿಸಲಾಗುತ್ತದೆ. ನಬರಂಪುರ ಜಿಲ್ಲೆಯ ಕುಮುಲಿ ಪಂಚಾಯತ್‌ನ ಬಿಜಾಪುರ ಗ್ರಾಮದ ಧನಿರಾಮ್ ಎಂಬ ರೈತನ ಮನೆಯ ಹಸು ಎರಡು ತಲೆ ಮತ್ತು ಮೂರು ಕಣ್ಣುಗಗಳುಳ್ಳ ಕರು ಜನಿಸಿದೆ. ಧನಿರಾಮ್ … Continued

ಹಾವಿನಿಂದ ಕಚ್ಚಿಸಿ ಹೆಂಡತಿ ಕೊಲೆ ಪ್ರಕರಣ; ಅಪರಾಧಿ​ಗೆ ಎರಡು ಜೀವಾವಧಿ ಶಿಕ್ಷೆ ಪ್ರಕಟ..!

ತಿರುವನಂತಪುರಂ: ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ತೀರ್ಪು ಇದೀಗ ಹೊರಬಿದ್ದಿದ್ದು, ಆರೋಪಿ ಸೂರಜ್ ಕುಮಾರ್​ಗೆ ಎರಡು ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ. ಹಾಗೇ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೇರಳದ ಕೊಲ್ಲಂನ ಅಡಿಷನಲ್ ಸೆಷನ್ಸ್ ಕೋರ್ಟ್ ಇಂದು (ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಷದ ಹಾವಿನಿಂದ ಕಚ್ಚಿಸಿ ಪತ್ನಿ ಉತ್ರಾಳನ್ನು ಕೊಂದಿದ್ದ ಗಂಡ … Continued

ಭಾರತದಲ್ಲಿ 15,823 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 15,823 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಇದು ದೇಶವು ಹಿಂದಿನ ದಿನಕ್ಕಿಂತ 10.5 % ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಗೆ ಬುಧವಾರ ತಿಳಿಸಿದೆ. ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣ 3,40,01,743 ಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ ಒಟ್ಟು 226 … Continued

ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಮಹಾತ್ಮ ಗಾಂಧೀಜಿ: ರಾಜನಾಥ್‌ ಸಿಂಗ್‌

ನವದೆಹಲಿ: ವೀರ ಸಾರ್ವಕರ್‌ ಅಂಡಮಾನ್‌ ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್‌ ಅವರಿಗೆ ಹೇಳಿದ್ದು ಮಹಾತ್ಮ ಗಾಂಧೀಜಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಪಾದಿಸಿದ್ದಾರೆ. ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಾರ್ವಕರ್‌ ಕುರಿತ ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ ಎಂಬ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಾವರು, “ಸಾವರ್ಕರ್‌ಗೆ ಬ್ರಿಟಿಷರ ಮುಂದೆ ಕ್ಷಮಾದಾನ … Continued

ಅಫ್ಘಾನ್ ಪ್ರದೇಶ ಭಯೋತ್ಪಾದನೆಗೆ ಬಳಕೆಯಾಗದಂತೆ ಖಚಿತಪಡಿಸಿಕೊಳ್ಳಿ: ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕರೆ

ನವದೆಹಲಿ: ಅಫ್ಘಾನಿಸ್ತಾನದ ಬಗ್ಗೆ ನಡೆದ ಜಿ 20 ವಿಶೇಷ ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಫಘಾನ್ ಪ್ರದೇಶವು ಪ್ರಾದೇಶಿಕವಾಗಿ ಅಥವಾ ಜಾಗತಿಕವಾಗಿ ಭಯೋತ್ಪಾದನೆಯ ಮೂಲವಾಗದಂತೆ ನೋಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ ವಹಿಸಿದ್ದರು, ಅವರು ಮಂಗಳವಾರ ಗ್ರೂಪ್ 20 ಪ್ರಮುಖ ಆರ್ಥಿಕತೆಗಳ ವಿಶೇಷ ಶೃಂಗಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ … Continued

2-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್’ ತುರ್ತು ಬಳಕೆಗೆ ಡಿಜಿಸಿಐ ಇನ್ನೂ ಅನುಮೋದಿಸಿಲ್ಲ ಸಚಿವೆ ಡಾ. ಭಾರತಿ ಪವಾರ್

ನವದೆಹಲಿ: ಕೋವಾಕ್ಸಿನ್ ಕೋವಿಡ್-19 ಲಸಿಕೆ 2-18 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಡಿಜಿಸಿಐ ಇನ್ನೂ ಅನುಮೋದನೆ ನೀಡಿಲ್ಲ. ಇನ್ನೂ ಅದರ ಮೌಲ್ಯಮಾಪನ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ ಪವಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿ ಮಾಹಿತಿ ನೀಡಿರುವ ಅವರು, ಭಾರತ್ ಬಯೋಟೆಕ್ ನ … Continued

ತತ್ಕಾಲ್ ಟ್ರಾಕ್ಟರ್ ಸಾಲ: ರೈತರಿಗೆ ಒಳ್ಳೆಯ ಸುದ್ದಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ

ನವದೆಹಲಿ : ರೈತರ ಸಂಕಷ್ಟ ಬಗೆಹರಿಹಾರಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಮುಂದಾಗಿದೆ.‌ ಕೃಷಿ ಕಾರ್ಯಕ್ಕಾಗಿ ಬಾಡಿಗೆ ಟ್ರ್ಯಾಕ್ಟರ್ ಪಡೆದು ಬೇಸತ್ತು ಹೊಸ ಟ್ರ್ಯಾಕ್ಟರ್ ಖರೀದಿಗೆ ಯೋಜಿಸುತ್ತಿರುವ ರೈತರಿಗೆ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಟ್ರ್ಯಾಕ್ಟರ್‌ ಖರೀದಿ ಆಸೆಯಿದ್ದು, ಹಣದ ಕೊರತೆಯಾದರೆ ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ರೈತರಿಗಾಗಿ … Continued

ಮನೆಯಲ್ಲಿ ಆರು ಜನ ಇದ್ದರೂ ಈ ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಒಂದು ಮತ..!

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಕೇವಲ ಒಂದೇ ಒಂದಉ ಮತ ಪಡೆದಿರುವುದೇ ಸಾಕ್ಷಿಯಾಗಿದೆ. ಕುಟುಂಬದಲ್ಲಿ ಆರು ಸದಸ್ಯರಿದ್ದರೂ ತನ್ನದೇ ಒಂದು ಮತ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ ಕೊಯಮತ್ತೂರು ಜಿಲ್ಲಾ ಸ್ಥಳೀಯ … Continued