ಉತ್ತರ ಭಾರತದ ಹಲವೆಡೆ ಭೂಕಂಪನ

ನವ ದೆಹಲಿ: ಜಮ್ಮು ಕಾಶ್ಮೀರ, ಪಂಜಾಬ್ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶುಕ್ರವಾರ ಸಂಜೆ ಭೂಕಂಪನ ಉಂಟಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್‌ಸಿಎಸ್) ಯ ಆರಂಭಿಕ ವರದಿಗಳು ಪಂಜಾಬ್‌ನ ಅಮೃತಸರದಲ್ಲಿ 6.1 ತೀವ್ರತೆಯ ಭೂಕಂಪನವಾಗಿದೆ ಎಂದು ಸೂಚಿಸಿದೆ. ತಜಕಿಸ್ತಾನದಲ್ಲಿ ರಿಕ್ಟರ್‌ ಪ್ರಮಾಣದಲ್ಲಿ 6.3 ತೀವ್ರತೆಯನ್ನು ಬೈಕಂಪನ ರಾತ್ರಿ … Continued

ಚಂದಾ ಕೊಚ್ಚರ್‌ಗೆ ಜಾಮೀನು

ಮುಂಬೈ: ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್‌ ಅವರಿಗೆ ಶುಕ್ರವಾರ ಹಾನ್ಯಾಯಾಲಯ ಜಾಮೀನು ನೀಡಿದೆ. ಇವರು ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಹಾಜರಾದರು. ಜನವರಿ 30ರಂದು ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾದ ನಂತರ ನ್ಯಾಯಾಲಯವು ಚಂದಾ ಕೊಚ್ಚರ್, … Continued

ಆದೇಶಕ್ಕೆ ಮಣಿದ ಟ್ವಿಟ್ಟರ್‌, ಸರ್ಕಾರದ ಸೂಚಿಸಿದ ಶೇ.೯೭ ಖಾತೆಗಳು ಬಂದ್‌

ನವ ದೆಹಲಿ: ರೈತರ ಪ್ರತಿಭಟನೆಯ ಸುತ್ತ ಪ್ರಚೋದನಕಾರಿ ವಿಷಯ ಮತ್ತು ತಪ್ಪು ಮಾಹಿತಿಗಾಗಿ ಐಟಿ ಸಚಿವಾಲಯ ಪಟ್ಟಿ ಮಾಡಿದ ಶೇಕಡಾ 97ಕ್ಕೂ ಹೆಚ್ಚು ಖಾತೆಗಳು ಮತ್ತು ಪೋಸ್ಟ್‌ಗಳನ್ನು ಟ್ವಿಟರ್ ನಿರ್ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಸಂಜೆ ಟ್ವಿಟರ್ ಪ್ರತಿನಿಧಿಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ನಡುವಿನ ಸಭೆಯ ನಂತರ ಅಮೆರಿಕ ಮೂಲದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ … Continued

ಬಂಗಾಳದಲ್ಲಿ ಲೋಕಜನಶಕ್ತಿ ೨೯೪ ಕ್ಷೇತ್ರಗಳಲ್ಲೂ ಸ್ಪರ್ಧೆ

ಕೋಲ್ಕತಾ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ಆಯಾಮವನ್ನು ಸೇರಿಸುತ್ತಾ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಎಲ್ಲಾ 294 ವಿಧಾನಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಕ ಜನಶಕ್ತಿ ಪಕ್ಷದ ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷರಾದ ಮೀರಾ ಚಕ್ರವರ್ತಿ, “ಕೆಳ ಮಧ್ಯಮ ವರ್ಗದ ಜನರ” ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಯಾವಾಗಲೂ … Continued

ಪಂಜಾಬ್ ಮಾಜಿ ಸಿಎಂ ಹತ್ಯೆ ಪ್ರಕರಣ; 6 ವಾರ  ವಿಚಾರಣೆ ಮುಂದೂಡಿಕೆ

ನವದೆಹಲಿ: ಪಂಜಾಬ್‌ ಮಾಜಿ ಸಿಎಂ ಬಿಯಾಂತ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಬಲವಂತ್‌ ಎಸ್‌. ರಾಜೊನಾಗೆ ವಿಧಿಸಿರುವ ಗಲ್ಲು ಶಿಕ್ಷೆ ಪುನರ್‌ಪರಿಶೀಲಿಸುವುದು ರಾಷ್ಟ್ರಪತಿ ಅವರ ಪರಿಗಣನೆಯಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುಪ್ರಿಂಕೋರ್ಟ್‌ಗೆ ತಿಳಿಸಿದ್ದು, ಖಾಲಿಸ್ತಾನ ವಿಷಯಕ್ಕೆ ಸಂಬಂಧಿಸಿದಂತೆ ಬಿಯಾಂತ್‌ ಸಿಂಗ್‌ ಅವರನ್ನು ಹತ್ಯೆ ಮಾಡಲಾಗಿದ್ದು, ಅ‍ಪರಾಧಿ … Continued

ಸರ್ಕಾರ ಬಿಜೆಪಿ ಐಟಿ ಸೆಲ್‌, ಪಿಎಂಒ ಟ್ವಿಟ್ಟರ್‌ಗಳನ್ನು ಪರಿಶೀಲಿಸುತ್ತದೆಯೇ..? ಸರ್ಕಾರ-ಟ್ವಿಟ್ಟರ್‌ ತಿಕ್ಕಾಟದ ಮಧ್ಯೆ ಪಕ್ಷದ ವಿರುದ್ಧದ ನಿಲುವು ತಳೆದ ಡಾ.ಸ್ವಾಮಿ

  ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕೇಂದ್ರ ಸರ್ಕಾರ ಹಾಗೂ ಟ್ವಿಟ್ಟರ್‌ ನಡುವಿನ ತಿಕ್ಕಾಟ ಮುಂದುವರಿದ್ದಿದ್ದು, ಟ್ವಿಟ್ಟರ್‌ ಶೀಘ್ರದಲ್ಲೇ ದಂಡನಾತ್ಮಕ ಕ್ರಮ ಎದುರಿಸುವುದು ನಿಚ್ಚಳವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಸ್ವಪಕ್ಷ ಬಿಜೆಪಿ ಮೇಲೆಯೇ ಈ ವಿಷಯದಲ್ಲಿ ವ್ಯಂಗ್ಯವಾಡಿದ್ದಾರೆ. ಎಲ್ಲರ ಸಮಸ್ಯಾತ್ಮಕ … Continued

ಕ್ರೈಸ್ತ, ಇಸ್ಲಾಮಿಗೆ ಮತಾಂತರವಾದ ದಲಿತರಿಗೆ ಮೀಸಲು ಸೌಲಭ್ಯವಿಲ್ಲ

ನವದೆಹಲಿ: ಕ್ರೈಸ್ತ, ಇಸ್ಲಾಮ್ ಧರ್ಮಗಳಿಗೆ ಮತಾಂತರವಾಗುವ ದಲಿತರು ಮೀಸಲು ಕ್ಷೇತ್ರಗಳಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ ಹಾಗೂ ಅಂತಹ ದಲಿತರಿಗೆ ಮೀಸಲಾತಿಯಡಿಯಲ್ಲಿ ಯಾವ ಸೌಲಭ್ಯವೂ ಸಿಗುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಹಿಂದೂ, ಸಿಖ್, … Continued

ದಿನೇಶ ತ್ರಿವೇದಿ ಬಿಜೆಪಿಗೆ ಬಂದರೆ ಸ್ವಾಗತ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ದಿನೇಶ ತ್ರಿವೇದಿ ಶುಕ್ರವಾರ ರಾಜ್ಯಸಭೆಯಲ್ಲಿ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಅವರು ಬಯಸಿದರೆ ತಮ್ಮ ಪಕ್ಷಕ್ಕೆ ಬರಬಹುದು ಎಂದು ಬಿಜೆಪಿ ಹೇಳಿದೆ. ದಿನೇಶ್ ತ್ರಿವೇದಿ ರಾಜೀನಾಮೆ ಬಗ್ಗೆ ಸುದಿಗಾರರ ಜೊತೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ , ದಿನೇಶ ತ್ರಿವೇದಿ ಅವರು ಇಷ್ಟವಿದ್ದರೆ ಬಿಜೆಪಿಗೆ … Continued

ಫೆ.೧೪ರಿಂದ ಮೂರು ರಾಜ್ಯಗಳ ಮಹಾಪಂಚಾಯತ್‌ನಲ್ಲಿ ಟಿಕಾಯಿತ್‌ ಭಾಗಿ

ಘಾಜಿಯಾಬಾದ್: ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನುಗಳ ಜಾರಿ ವಿರುದ್ಧ ಮೂರು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಮತ್ತಷ್ಟು ಬೆಂಬಲ ಪಡೆಯಲು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯಿತ್‌ ಈಗ ದೇಶಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಅವರು ಹರಿಯಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಆಯೋಜಿಸಿರುವ ಏಳು ‘ಮಹಾಪಂಚಾಯತ್’ ಸಭೆಗಳಲ್ಲಿ ಭಾಗವಹಿಸಲಿದ್ದು. ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿಭಟನೆಯ ಭಾಗವಾಗಿ … Continued

ತಮಿಳುನಾಡಿನಲ್ಲಿ ಪಟಾಕಿ ಘಟಕ ಸ್ಫೋಟ:೧೩ ಸಾವು, ೨೨ ಜನರಿಗೆ ಗಾಯ

ಚೆನ್ನೈ: ತಮಿಳುನಾಡಿನಲ್ಲಿ ಪಟಾಕಿ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ 13 ಮಂದಿ ಮೃತಪಟ್ಟಿದ್ದು, 22 ಮಂದಿಗೆ ಗಾಯಗಳಾಗಿವೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ವೆಂಬಕೊಟ್ಟೈ ನ ಕೊಟ್ಟೈಪಾಟಿಯಲ್ಲಿರುವ ಅಚಂಕುಲಂ ಈ ಅವಘಡ ನಡೆದಿದ್ದು, ಮೃತಪಟ್ಟವರ 11 ಮಂದಿಯ ಪೈಕಿ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ ಇಬ್ಬರನ್ನು ಸಟ್ಟೂರ್‌ ಆಸ್ಪತ್ರೆಗೆ ಸೇರಿಸಲಾಯಿತಾದರೂ ಗಂಭೀರ ಗಾಯಗಳಾಗಿದ್ದ ಾವರು ಚಿಕಿತ್ಸೆ … Continued