ತೆಲಂಗಾಣದಲ್ಲಿ ಒಂದು ಗಂಟೆಯಲ್ಲಿ 10 ಲಕ್ಷ ಸಸಿ ನೆಟ್ಟರು..ಹೊಸ ವಿಶ್ವ ದಾಖಲೆ..!

ಹೈದರಾಬಾದ್: ತೆಲಂಗಾಣದಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್ ಅಂಗವಾಗಿ ಭಾನುವಾರ ಒಂದು ಗಂಟೆಯಲ್ಲಿ ಸುಮಾರು 10 ಲಕ್ಷ ಸಸಿಗಳನ್ನು ನೆಡಲಾಗಿದ್ದು, ವಿಶ್ವದ ಎಲ್ಲೆಡೆಯೂ ಇಂತಹ ಅತಿದೊಡ್ಡ ಪ್ಲಾಂಟೇಶನ್ ಅಭಿಯಾನ ಹೊಸ ದಾಖಲೆ ನಿರ್ಮಿಸಿದೆ. ಆದಿಲಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಾಜ್ಯಸಭಾ ಸಂಸದ ಜೆ.ಸಂತೋಷಕುಮಾರ್ ನೇತೃತ್ವದ ಕಾರ್ಯಕ್ರಮವು ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ಸ್‌ಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಹಿಂದೆ … Continued

ಕೋವಿಡ್ ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧ 8 ಪಟ್ಟು ಕಡಿಮೆ ಪರಿಣಾಮಕಾರಿ: ಸರ್ ಗಂಗಾರಾಮ್ ಆಸ್ಪತ್ರೆ ಅಧ್ಯಯನ

ನವದೆಹಲಿ: SARS-CoV-2 ನ ಡೆಲ್ಟಾ ರೂಪಾಂತರವು ಲಸಿಕೆ-ಹೊರಹೊಮ್ಮಿದ ಪ್ರತಿಕಾಯಗಳಿಗೆ ಎಂಟು ಪಟ್ಟು ಕಡಿಮೆ ಸಂವೇದನೆಯನ್ನು ತೋರಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ವುಹಾನ್ ರೂಪಾಂತರಕ್ಕೆ ಹೋಲಿಸಿದರೆ ಕೋವಿಡ್ -19 ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧ ಎಂಟು ಪಟ್ಟು ಕಡಿಮೆ ಪರಿಣಾಮಕಾರಿ ಎಂದು ಅದು ಹೇಳಿದೆ. ಕೊರೊನಾ ವೈರಸ್‌ನ ಬಿ .1.617.2 ಅಥವಾ ಡೆಲ್ಟಾ ರೂಪಾಂತರವನ್ನು ಈಗಾಗಲೇ … Continued

ಮೇಕೆದಾಟು ಅಣೆಕಟ್ಟು: ಕೇಂದ್ರ ಜಲಶಕ್ತಿ ಸಚಿವರ ಭೇಟಿ ಮಾಡಲಿರುವ ತಮಿಳನಾಡು ಮಂತ್ರಿ

ಚೆನ್ನೈ: ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲು ತಮಿಳುನಾಡಿನ ಜಲಸಂಪನ್ಮೂಲ ಸಚಿವ ಎಸ್.ದುರೈಮುರುಗನ್ ಸೋಮವಾರ ನವದೆಹಲಿಗೆ ತೆರಳಿದ್ದಾರೆ. ಜುಲೈ 6ರ ಮಂಗಳವಾರ ದುರೈಮುರುಗನ್ ಸಚಿವರನ್ನು ಭೇಟಿ ಮಾಡಲಿದ್ದಾರೆ. ಇದು ನದಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಭೀತಿಯಿಂದ ಅಂತಾರಾಜ್ಯ ಗಡಿಯ ಬಳಿಯಿರುವ ಕಾವೇರಿ ನದಿಗೆ … Continued

ಐಟಿ ಕಾಯ್ದೆ ರದ್ದುಪಡಿಸಿದ ಸೆಕ್ಷನ್ 66ಎ ಅಡಿ ಈಗಲೂ ಪ್ರಕರಣ ದಾಖಲು:ಅಚ್ಚರಿ-ಆಘಾತ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ: ಕೋರ್ಟ್ ರದ್ದುಪಡಿಸಿದ ಸೆಕ್ಷನ್ 66ಎ ಐಟಿ ಕಾಯ್ದೆಯಡಿ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಅಚ್ಚರಿ ಹಾಗೂ ಆಘಾತ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ 2015ರಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ರದ್ದುಗೊಳಿಸಿದ್ದ ಐಟಿ ಕಾಯಿದೆಯ ಸೆಕ್ಷನ್ 66ಎ ಅನ್ವಯ ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸುವ ಪದ್ಧತಿ ಮುಂದುವರಿಸಿರುವುದಕ್ಕೆ ಸೋಮವಾರ ಸುಪ್ರೀಂಕೋರ್ಟ್ ಸೋಮವಾರ ತೀವ್ರ ಅಸಮಾಧಾನ ಮತ್ತು … Continued

ಶೀಘ್ರದಲ್ಲೇ ಎಲ್ಲ ದೇಶಗಳಲ್ಲಿಯೂ ‘ಕೋವಿನ್ ಪ್ಲಾಟ್ ಫಾರಂ ಲಭ್ಯ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕೋವಿಡ್‌ ಲಸಿಕೆ ಅಭಿಯಾನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಿದದ ಕೋವಿನ್ ಪ್ಲಾಟ್ ಫಾರಂ ಅನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಶೀಘ್ರದಲ್ಲಿಯೇ ಇದು ಎಲ್ಲ ರಾಷ್ಟ್ರಗಳಲ್ಲಿಯೂ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಅದರ ಪರಿಣಿತಿ ಮತ್ತು ಸಂಪನ್ಮೂಲವನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ಅವರುಹೇಳಿದರು. ವಿಡಿಯೋ ಕಾನ್ಫರೆನ್ಸ್ … Continued

ಗೋಮತಿ ರಿವರ್ ಫ್ರಂಟ್ ಯೋಜನೆ ಅಕ್ರಮ: ಸಿಬಿಐನಿಂದ 2ನೇ ಎಫ್ಐಆರ್, 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ

ನವದೆಹಲಿ; ಉತ್ತರ ಪ್ರದೇಶದ ಹಿಂದಿನ ಅಖಿಲೇಶ್ ಯಾದವ್ ಸರ್ಕಾರವು ಪ್ರಾರಂಭಿಸಿದ ಗೋಮತಿ ರಿವರ್ ಫ್ರಂಟ್ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ಸೋಮವಾರ ಎರಡನೇ ಎಫ್ಐಆರ್ ದಾಖಲಿಸಿದೆ. ಉತ್ತರ ಮತ್ತು ಇತರೆಡೆ 40 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಸರ್ಕಾರಿ ಇಲಾಖೆಗಳ 16 (ಸೇವೆಯಲ್ಲಿರುವ ಮತ್ತು ನಿವೃತ್ತ) ಎಂಜಿನಿಯರ್‌ಗಳು ಸೇರಿದಂತೆ 189 ಆರೋಪಿಗಳನ್ನು ಏಜೆನ್ಸಿಯು ಬಂಧಿಸಿದೆ. ಮತ್ತು … Continued

2022ರ ಪರೀಕ್ಷೆಗೆ 10, 12ನೇ ತರಗತಿ ಪಠ್ಯಕ್ರಮ ಕಡಿಮೆ ಮಾಡಿದ ಸಿಐಎಸ್‌ಸಿಇ

ನವದೆಹಲಿ: ಮುಂದಿನ ಸಾಲಿಗೆ ಐಸಿಎಸ್‌ಇ 10 ಮತ್ತು ಐಎಸ್‌ಸಿ 12 ನೇ ವಾರ್ಷಿಕ ಪರೀಕ್ಷೆಗಳ ಪಠ್ಯಕ್ರಮವನ್ನು ಕಡಿತಗೊಳಿಸುವುದಾಗಿ ಸಿಐಎಸ್‌ಸಿಇ ಪ್ರಕಟಿಸಿದೆ. ಮಂಡಳಿಯು ಐಸಿಎಸ್‌ಇ ಮತ್ತು ಐಎಸ್‌ಸಿ 2022 ಪರೀಕ್ಷೆಗಳಿಗೆ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ಪಠ್ಯಕ್ರಮವನ್ನು ಕಡಿಮೆ ಮಾಡಿದೆ. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) 2022ರ ಪರೀಕ್ಷೆಗಳಿಗೆ 10ನೇ ತರಗತಿ … Continued

ಎಲ್ಗರ್ ಪರಿಷದ್​ ಪ್ರಕರಣ: ಹೋರಾಟಗಾರ ಫಾದರ್​ ಸ್ಟಾನ್​ ಸ್ವಾಮಿ ನಿಧನ

ಮುಂಬೈ: ಕಎಲ್ಗಾರ್ ಪರಿಷದ್ ಕಾರ್ಯಕ್ರಮ ಹಾಗೂ ನಂತರದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಫಾದರ್ ಸ್ಟ್ಯಾನ್ ಸ್ವಾಮಿ ಸೋಮವಾರ (ಜುಲೈ 5) ನಿಧನರಾಗಿದ್ದಾರೆ. ಬಾಂಬೆ ಹೈ ಕೋರ್ಟ್​ ಅವರ ಜಾಮೀನು ಅರ್ಜಿಯ ವಿಚಾರಣೆಗೆಂದು ಕೈಗೆತೆಗೆದುಕೊಂಡಾಗ ಅವರ ನಿಧನದ ಮಾಹಿತಿಯನ್ನು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 84 ವರ್ಷದ ಸ್ಟಾನ್ ಸ್ವಾಮಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಭಾನುವಾರ … Continued

ಕೆಆರ್​ಎಸ್ ಡ್ಯಾಂ ಗೇಟಿಗೆ ಸುಮಲತಾರ ಮಲಗಿಸಬೇಕು :ಹೆಚ್​ಡಿಕೆ, ಮಹಿಳೆಯರ ಬಗ್ಗೆ ತುಚ್ಛ ಮಾತಿನಿಂದ ಅವರ ಮನಸ್ಥಿತಿ ಪ್ರದರ್ಶನ: ಸುಮಲತಾ ತಿರುಗೇಟು

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಮಧ್ಯೆ ಮತ್ತೆ ವಾಗ್ಯುದ್ಧ ನಡೆದಿದೆ. ಕೆಆರ್​ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಧ್ವನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಷ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗದಾಳಿ ನಡೆಸಿದ್ದಾರೆ, ಇದಕ್ಕೆ ಸುಮಲತಾ ತಿರುಗೇಟು ನೀಡಿದ್ದಾರೆ. . ಕೆಆರ್​ಎಸ್ ಡ್ಯಾಮ್ ಬಿರುಕು ಬಿಟ್ಟಿದೆ … Continued

ಪ್ರಣಬ್ ಮುಖರ್ಜಿ ಪುತ್ರ ಅಭಜೀತ್‌ ಮುಖರ್ಜಿ ಇಂದು ಟಿಎಂಸಿಗೆ ಸೇರ್ಪಡೆ..?

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಕಾಂಗ್ರೆಸ್ ಸಂಸದರಾಗಿರುವ ದಿವಂಗತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಲು ಸಜ್ಜಾಗಿದ್ದಾರೆ. ಜಂಗೀಪುರದ ಮಾಜಿ ಕಾಂಗ್ರೆಸ್ ಸಂಸದ ಟಿಎಂಸಿ ನಾಯಕತ್ವದೊಂದಿಗೆ ಕಳೆದ ಕೆಲವು ವಾರಗಳಿಂದ ಮಾತುಕತೆ ನಡೆಸುತ್ತಿದ್ದಾರೆ. ಅಭಿಜಿತ್ ಮುಖರ್ಜಿ ಅವರು ಕಳೆದ ತಿಂಗಳು ಕೋಲ್ಕತ್ತಾದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು … Continued