ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್‌ ಪಡೆದ ನಂತರ ನನ್ನ ದೃಷ್ಟಿ ಮರಳಿ ಬಂತು…ಹೀಗೆ ಹೇಳಿಕೊಂಡ ಮಹಾರಾಷ್ಟ್ರದ ವೃದ್ಧೆ..!

ವಾಶಿಮ್: ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನ ಭಾರತದಾದ್ಯಂತ ಸಂಪೂರ್ಣ ಜಾರಿಯಲ್ಲಿದೆ, ಮತ್ತು ಎಲ್ಲಾ ನಾಗರಿಕರಿಗೆ ಮಾರಕ ವೈರಸ್ ಅನ್ನು ಸೋಲಿಸಲು ಲಸಿಕೆಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.ಕೋವಿಡ್‌-19 ಲಸಿಕೆ ನೀಡಿದ ನಂತರ ಜ್ವರ ಅಥವಾ ದೇಹದ ನೋವಿನಂತಹ ಕೆಲವು ಅಡ್ಡಪರಿಣಾಮಗಳನ್ನು ಅನುಭವಿಸುವುದು ಸಾಮಾನ್ಯವೆಂದು ಪರಿಗಣಿಸಲಾಗಿದ್ದರೂ, ಒಬ್ಬ ಮಹಿಳೆ ಡೋಸ್‌ ತೆಗೆದುಕೊಂಡ ನಂತರ ಅದ್ಭುತವಾದದ್ದನ್ನು ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಝೀ ನ್ಯೂಸ್ … Continued

ಗೋವಿನ ಸಗಣಿಯಿಂದ ಪೇಂಟ್ ತಯಾರಿಕೆ..! : ದೇಶದ ಮೊದಲ ಘಟಕ ಕಾರ್ಯಾರಂಭ..!!

ನವದೆಹಲಿ: ಮಾನವನಿಗೆ ಹಾನಿಯುಂಟು ಮಾಡುವ ರಾಸಯನಿಕಗಳಿದ ಸಿದ್ಧವಾಗುತ್ತಿರುವ ಬಣ್ಣಗಳ ಮಧ್ಯೆ ಸಗಣಿಯಿಂದ ಪೇಂಟ್ ತಯಾರಿಸುವ ಭಾರತದ ಮೊದಲ ಹಾಗೂ ಏಕೈಕ ಖಾದಿ ಪ್ರಾಕೃತಿಕ ಪೇಂಟ್ ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕ ಮಂಗಳವಾರ ಜೈಪುರದಲ್ಲಿ ಕಾರ್ಯಾರಂಭಗೊಂಡಿದೆ. ಖಾದಿ ಪ್ರಾಕೃತಿಕ ಪೇಂಟ್ ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ … Continued

8 ತಿಂಗಳ ನಂತರ ಜೂನ್‌ನಲ್ಲಿ 1 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾದ ಜಿಎಸ್‌ಟಿ ಆದಾಯ ಸಂಗ್ರಹ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಜೂನ್‌ನಲ್ಲಿ ಎಂಟು ತಿಂಗಳಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳಿಗಿಂತ ಕಡಿಮೆಯಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಜೂನ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 92,849 ಕೋಟಿ ರೂ.ಗಳಾಗಿವೆ. ಇದರಲ್ಲಿ ಸಿಜಿಎಸ್‌ಟಿ 16,424 ಕೋಟಿ ರೂ., ಎಸ್‌ಜಿಎಸ್‌ಟಿ 20,397 … Continued

ಭಾರತ, ಇತರ ದೇಶಗಳ ಪ್ರಯಾಣಿಕರ ಮೇಲಿನ ನಿಷೇಧ ತೆಗೆದ ಜರ್ಮನಿ

ನವದೆಹಲಿ: ಕೋವಿಡ್ -19 ರ ಡೆಲ್ಟಾ ರೂಪಾಂತರದಿಂದ ಕೊರೊನಾ ಉಲ್ಬಣ ಕಂಡ ಬ್ರಿಟನ್‌, ಭಾರತ ಮತ್ತು ಇತರ ಮೂರು ದೇಶಗಳ ಹೆಚ್ಚಿನ ಪ್ರಯಾಣಿಕರ ಮೇಲಿನ ನಿಷೇಧವನ್ನು ತೆಗೆದುಹಾಕುವುದಾಗಿ ಜರ್ಮನಿಯ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಜವಾಬ್ದಾರಿಯುತ ಜರ್ಮನ್ ಫೆಡರಲ್ ಸರ್ಕಾರಿ ಸಂಸ್ಥೆ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್, ಭಾರತ, ನೇಪಾಳ, ರಷ್ಯಾ, … Continued

ಈ ವಾರದಲ್ಲಿಯೇ ಮೋದಿ ಸಚಿವ ಸಂಪುಟ ವಿಸ್ತರಣೆ, 20 ಹೊಸ ಮುಖಗಳಿಗೆ ಮಣೆ..?

ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ 20 ಹೊಸ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಹೇಳಾಗುತ್ತಿದೆ ಹಾಗೂ ಜುಲೈ 8 ರಂದು ವಿಸ್ತರಣೆಯಾಗುವ ಸಾಧ್ಯತೆಯಿದೆ ಅಥವಾ  ಈ ವಾರ ನಡೆಯಬಹುದು,ಎಂದು ಹೇಳಾಗುತ್ತಿದ್ದರೂ ಕೆಲವರು ಸಂಸತ್ತಿನ ಅಧಿವೇಶನದ ನಂತರವೂ ನಡೆಯಬಹುದು ಎಂದು ವಿಶ್ಲೇಷಿಸುತ್ತಿದ್ದಾರೆ. ಏತನ್ಮಧ್ಯೆ, ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ … Continued

ಥಾವರ್‌ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲ

ನವದೆಹಲಿ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಪತ್ರಿಕಾ ಪ್ರಕಟಣೆ ಜುಲೈ 6 ರಂದು ತಿಳಿಸಿದೆ. ಕೇಂದ್ರ ಸಚಿವ ಥಾವರ್‌ಚಂದ್ ಗೆಹ್ಲೋಟ್‌ ಅವರನ್ನು ಮಂಗಳವಾರ ಕರ್ನಾಟಕ ರಾಜ್ಯಪಾಲರನ್ನಾಗಿ ಮತ್ತು ಮಂಗುಭಾಯ್ ಛಗನ್‌ಭಾಯ್ ಪಟೇಲ್ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. … Continued

ಮತ್ತೊಂದು ಸವಾಲು..ಕೋವಿಡ್‌-19ರಿಂದ ಬದುಕುಳಿದವರಲ್ಲಿ ಕಂಡುಬಂದ ಅವಾಸ್ಕುಲರ್ ನೆಕ್ರೋಸಿಸ್ (ಮೂಳೆ ಸಾವು)ರೋಗ ಹಾಗೆಂದರೇನು..?

ಕೋವಿಡ್‌-19 ಸಾಂಕ್ರಾಮಿಕ ರೋಗದ ಅಡಿಯಲ್ಲಿ ಜಗತ್ತು ತತ್ತರಿಸುತ್ತಿದ್ದಂತೆಯೇ, ಏಪ್ರಿಲ್-ಮೇ ತಿಂಗಳಲ್ಲಿ ಮಾರಣಾಂತಿಕ ಎರಡನೇ ಅಲೆಯಿಂದಾಗಿ ಭಾರತವು ಹಾನಿಗೊಳಗಾಯಿತು, ಇದು ವೈದ್ಯಕೀಯ ತುರ್ತುಸ್ಥಿತಿ ಮತ್ತು ಸಾವುಗಳಿಗೂ ಕಾರಣವಾಯಿತು. ಈ ಎಲ್ಲಾ ವಿಪರ್ಯಾಸಗಳ ವಿರುದ್ಧ ಹೋರಾಡಿದರೂ ನಂತರದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಬೇರೆಬೇರೆ ಕಾಯಿಲೆಗಲು, ಮಾನಸಿಕ ಖಿನ್ನತೆಗಳು ಕಾಣಿಸಿಕೊಳ್ಳಲು ಆರಂಭಸಿದವು. ದೇಶವು ಮೊಕೊರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಎಂಬ ಹೆಸರಿನಿಂದ … Continued

ಭಾರತದಲ್ಲಿ ಮತ್ತಷ್ಟು ಕುಸಿದ ಕೋವಿಡ್‌ ದೈನಂದಿನ ಸೋಂಕು.. ಇದು 111 ದಿನಗಳಲ್ಲಿ ಅತಿ ಕಡಿಮೆ

ನವದೆಹಲಿ:ಭಾರತವು ಮಂಗಳವಾರ 34,703 ತಾಜಾ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು 111 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಪ್ರಕರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡ 51,864 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದ ಸಕ್ರಿಯ ಪ್ರಕರಣಗಳು 4,64,357 ಕ್ಕೆ ಇಳಿದಿವೆ. ಕಳೆದ 24 ಗಂಟೆಗಳಲ್ಲಿ ಭಾರತವು ದೇಶದಲ್ಲಿ 553 ಸಾವುಗಳನ್ನು ದಾಖಲಿಸಿದೆ. ಗರಿಷ್ಠ ಪ್ರಕರಣಗಳನ್ನು … Continued

ಮೋದಿಗೆ 2,600 ಕೆಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ ಹಸೀನಾ

ಢಾಕಾ: ಸ್ನೇಹದ ಗುರುತಾಗಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ 2600 ಕೆಜಿ ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. 260 ಪೆಟ್ಟಿಗೆಯನ್ನು ಸಾಗಿಸುತ್ತಿರುವ ಟ್ರಕ್ ಶನಿವಾರ ಮಧ್ಯಾಹ್ನ ಬಾಂಗ್ಲಾದೇಶ-ಭಾರತದ ಗಡಿಯನ್ನು ದಾಟಿತು ಎಂದು ಡೈಲಿ ಸ್ಟಾರ್ ನ್ಯೂಸ್ ಪೇಪರ್ ವರದಿ ಮಾಡಿದೆ. ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧದ … Continued

ಸಿಬಿಎಸ್ಇ 2021-22ರ ಹೊಸ ಯೋಜನೆ ಘೋಷಣೆ.. ಎರಡು ಭಾಗಗಳಾಗಿ ಶೈಕ್ಷಣಿಕ ವರ್ಷ ವಿಂಗಡಣೆ

ನವದೆಹಲಿ: ಸಿಬಿಎಸ್ಇ ಸೋಮವಾರ 2021-22ರ ಹೊಸ ಯೋಜನೆಯನ್ನು ಪ್ರಕಟಿಸಿದೆ, ಇದರಲ್ಲಿ ಶೈಕ್ಷಣಿಕ ವರ್ಷವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು ಮತ್ತು ಪ್ರತಿ ಅವಧಿಯಲ್ಲಿ ಸುಮಾರು 50% ಪಠ್ಯಕ್ರಮವನ್ನು ಹೊಂದಿರುತ್ತದೆ. ಮೊದಲ ಅವಧಿಯ ಪರೀಕ್ಷೆ ನವೆಂಬರ್‌ನಲ್ಲಿ ನಡೆಯಲಿದೆ. ಶೈಕ್ಷಣಿಕ ಅಧಿವೇಶನದ ಕೊನೆಯಲ್ಲಿ 10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ನಡೆಸುವ ಪರೀಕ್ಷೆಯನ್ನು ಹೊಂದುವ ಸಂಭವನೀಯತೆಯನ್ನು ಹೆಚ್ಚಿಸಲು ಈ … Continued