ಮೋದಿ 2.0 ಕ್ಯಾಬಿನೆಟ್: ಹೊಸ -ಹಳೆಯ 43 ಮಂತ್ರಿಗಳಿಂದ ಇಂದು ಪ್ರಮಾಣ ವಚನ ಸ್ವೀಕಾರ..?!

ನವದೆಹಲಿ: ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಕನಿಷ್ಠ 43 ಮಂತ್ರಿಗಳನ್ನು ಬುಧವಾರ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. 2019 ರ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಜನಾದೇಶವನ್ನು ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಅಡಿಯಲ್ಲಿ ಕೇಂದ್ರ ಸಚಿವ ಸಂಪುಟದ ಮೊದಲ ಪುನರ್ರಚನೆಯಾಗಿದೆ. ಹೊಸ ಕೇಂದ್ರ ಸಚಿವ ಸಂಪುಟವು … Continued

ಡಿ.ವಿ.ಸದಾನಂದ ಗೌಡ ಸೇರಿ ನಾಲ್ವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ: ಕರಂದ್ಲಾಜೆ, ನಾರಾಯಣಸ್ವಾಮಿ ಸಂಪುಟಕ್ಕೆ ಸೇರ್ಪಡೆ..?

ನವದೆಹಲಿ: ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್​ ನಿಶಾಂಕ್​ ಹಾಗೂ ಸಂತೋಷ ಗಂಗ್ವಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಹಿನ್ನೆಲೆಯಲ್ಲಿ ಇವರಿಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್‌ ಅವರು ತಾವು … Continued

ಕೇಂದ್ರ ಸಚಿವ ಸಂಪುಟ ಪುನರ್ರಚನೆ ಮೊದಲು ಸಚಿವ ಸ್ಥಾನಕ್ಕೆ ಸಂತೋಷ್ ಗಂಗ್ವಾರ್ ರಾಜೀನಾಮೆ

ನವದೆಹಲಿ:ಕೇಂದ್ರದ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ಇಂದು ಸಂಜೆ (ಬುಧವಾರ ಸಂಜೆ) ನಡೆಯಲಿರುವ ನಿಗದಿತ ಕ್ಯಾಬಿನೆಟ್ ಪುನರ್ರಚನೆಗೆ ಮುಂಚಿತವಾಗಿ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಹುದ್ದೆಯಲ್ಲಿದ್ದ ಗಂಗ್ವಾರ್ ಅವರು ಇಂದು ಮುಂಜಾನೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಕಾರ್ಮಿಕ ಸಚಿವ … Continued

ಇಂದು ಸಂಜೆ 6ಕ್ಕೆ ಪ್ರಧಾನಿ ಮೋದಿ ಸಂಪುಟ ಪುನರ್ರಚನೆ: ಅತ್ಯಂತ ಕಿರಿಯ ಕ್ಯಾಬಿನೆಟ್‌ ಸಾಧ್ಯತೆ.. ದಲಿತ, ಒಬಿಸಿ, ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯದ ನಿರೀಕ್ಷೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ಸಂಪುಟ ಪುನರ್ರಚನೆ ಅಂತಿಮವಾಗಿದ್ದು, ಈ ಬಾರಿಯ ಕ್ಯಾಬಿನೆಟ್​ನಲ್ಲಿ ಒಬಿಸಿ, ಎಸ್‌ಸಿ – ಎಸ್‌ಟಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯ ರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಅತ್ಯಂತ ಕಿರಿಯರಿಗೆ, ಯುವಕರಿಗೆ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಇಂದು ಸಂಜೆ 6 ಗಂಟೆಗೆ ಪ್ರಕಟವಾಗಲಿರುವ ಹೊಸ ಕ್ಯಾಬಿನೆಟ್‌ನಲ್ಲಿ … Continued

ದೆಹಲಿ ಮನೆಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿ ಕಿಟ್ಟಿ ಕೊಲೆ

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಆರ್.ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನ್ನು ಕಳೆದ ರಾತ್ರಿ ದೆಹಲಿಯ ನಿವಾಸದಲ್ಲಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಪೊಲೀಸ್ ವರದಿಗಳ ಪ್ರಕಾರ, 67 ವರ್ಷದ ಕಿಟ್ಟಿ ಅವರು ದಿಂಬಿನಿಂದ ಉಸಿರುಗಟ್ಟಿಸಿದ ಕಾರಣ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ದೆಹಲಿಯ ವಸಂತ್ ಕುಂಜ್ ನಿವಾಸದಲ್ಲಿ ಕಿಟ್ಟಿ ಕುಮಾರಮಂಗಲಂ ಅವರು ಶವವಾಗಿ ಪತ್ತೆಯಾಗಿದ್ದಾರೆ. … Continued

ಅಪ್ರತಿಮ ಬಾಲಿವುಡ್‌ ನಟ ದಿಲೀಪ್ ಕುಮಾರ್ ಮುಂಬೈನಲ್ಲಿ ನಿಧನ

ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್‌ ನಟ ದಿಲೀಪ್ ಕುಮಾರ್ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.. ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಶ್ವಾಸಕೋಶಶಾಸ್ತ್ರಜ್ಞ ಡಾ.ಜಲೀಲ್ ಪಾರ್ಕರ್ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರಾದ ದಿಲೀಪ್ ಕುಮಾರ್ ಅವರನ್ನು ಕಳೆದ ವಾರ ಮುಂಬೈ … Continued

ಪಿಡಿಪಿ,ಎಎನ್‌ಸಿ ಹೊರತುಪಡಿಸಿ, ಎಲ್ಲ ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳಿಂದ ಡಿಲಿಮಿಟೇಶನ್ ಆಯೋಗದ ಆಹ್ವಾನ ಸ್ವೀಕಾರ

ಜಮ್ಮು: ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಹೊರತುಪಡಿಸಿ, ಇತರ ಎಲ್ಲ ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳು ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಡಿಲಿಮಿಟೇಶನ್ ಆಯೋಗದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಅದು ನಾಲ್ಕು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ … Continued

ಸಹಕಾರದಿಂದ ಸಮೃದ್ಧಿ: ಮೋದಿ ಸರ್ಕಾರದಿಂದ ಹೊಸ ಸಹಕಾರ ಸಚಿವಾಲಯ ರಚನೆ

ನವದೆಹಲಿ: ಕೇಂದ್ರ ಸರ್ಕಾರವು ಹೊಸದೃಷ್ಟಿಕೋನ ಹೊಂದಿದ ‘ಸಹಕಾರದಿಂದ ಸಮೃದ್ಧಿ’ ಎಂಬ ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ-ನಿರುಪಣೆಗೆ ಚೌಕಟ್ಟು ಒದಗಿಸಲಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಈ ಸಹಕಾರಿ ಸಚಿವಾಲಯವು ಸಹಕಾರಿ ಚಳವಳಿಯಲ್ಲಿ ತೊಡಗಿರುವ ಜನರಿಗೆ ನೆರವಾಗುವುದಕ್ಕೆ ಸಹಕಾರಿಯಾಗಲಿದೆ. … Continued

ತಮಿಳುನಾಡಿನ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳದಿರಲು ಕೇಂದ್ರದ ಭರವಸೆ: ತಮಿಳುನಾಡು ಸಚಿವ

ನವದೆಹಲಿ:ತಮಿಳುನಾಡಿನ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಮತ್ತು ಪೆನ್ನಿಯಾರ್ ಜಲಾನಯನ ಪ್ರದೇಶದ ಮಾರ್ಕಂಡೇಯ ನದಿಯ ಮೇಲಿರುವ ಅಣೆಕಟ್ಟಿನ ಬಗ್ಗೆ ತನಿಖೆ ನಡೆಸಲು ನ್ಯಾಯಮಂಡಳಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ತಿಳಿಸಿದ್ದಾರೆ. ಕೇಂದ್ರ ಸಚಿವರೊಂದಿಗಿನ … Continued

ಮಹತ್ವದ ಸುದ್ದಿ.. ಜೆಇಇ ಮೇನ್‌ -2021 ಪರೀಕ್ಷೆ ವೇಳಾಪಟ್ಟಿ ಪ್ರಕಟ

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆ-2021 ದಿನಾಂಕ ಪ್ರಕಟವಾಗಿದ್ದು, ಜುಲೈ 20ರಿಂದ ಜುಲೈ 25ರ ವರೆಗೆ ಹಾಗೂ ಜುಲೈ 27ರಿಂದ ಆಗಸ್ಟ್​​ 2ರ ವರೆಗೆ ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ. ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ನಮೂನೆಗಳು ಮಂಗಳವಾರದಿಂದಲೇ (ಜುಲೈ 6) … Continued