ಭಾರತದ ಕೋವಿಡ್ ಪ್ರಕರಣಗಳು ಮೇ 4-8 ರ ವರೆಗೆ ದೈನಂದಿನ 4.4 ಲಕ್ಷಕ್ಕೆ ತಲುಪಬಹುದು ಎಂದ ಐಐಟಿ ವಿಜ್ಞಾನಿಗಳ ಪರಿಷ್ಕೃತ ಅಧ್ಯಯನ ವರದಿ

ನವ ದೆಹಲಿ: ಭಾರತದಲ್ಲಿ ನಡೆಯುತ್ತಿರುವ ಎರಡನೇ ಕೋವಿಡ್‌-19 ಎರಡನೇ ಅಲೆಯ ಸಕ್ರಿಯ ಪ್ರಕರಣಗಳು ಮೇ 14-18ರ ನಡುವೆ 38-48 ಲಕ್ಷಕ್ಕೆ ಏರಬಹುದು ಮತ್ತು ದೈನಂದಿನ ಹೊಸ ಸೋಂಕುಗಳು ಮೇ 4-8 ರ ವರೆಗೆ 4.4 ಲಕ್ಷಕ್ಕೆ ತಲುಪಬಹುದು ಎಂದು ಗಣಿತದ ಮಾದರಿ ಆಧರಿಸಿ ಐಐಟಿ ವಿಜ್ಞಾನಿಗಳು ಪರಷ್ಕೃತ ಅಂದಾಜು ತಯಾರಿಸಿದ್ದಾರೆ. ಭಾರತ ಸೋಮವಾರ ಒಂದೇ ದಿನದ … Continued

ವಾಟ್ಸಪ್‌ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್

ಮುಂಬೈ : ಬಾಂಬೆ ಹೈಕೋರ್ಟ್‌ನ ನಾಗ್ಪುರ ನ್ಯಾಯಪೀಠವು ಇತ್ತೀಚೆಗೆ ವಾಟ್ಸಾಪ್ ಗ್ರೂಪ್ ಅಡ್ಮಿನ್‌ ಅನು ಗುಂಪಿನ ಸದಸ್ಯರೊಬ್ಬರು ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯಕ್ಕೆ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಒಂದು ವಾಟ್ಸಪ್‌ ಗ್ರೂಪ್​ನ ಅಡ್ಮಿನ್ ಆಗಿದ್ದ 33 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಗುಂಪಿನ ಸದಸ್ಯನೊಬ್ಬ ಮಹಿಳೆಯೊಬ್ಬರನ್ನು ಕುರಿತು ಅಶ್ಲೀಲ ಪೋಸ್ಟ್​ಗಳನ್ನು ಮಾಡಿದ್ದ ಎನ್ನಲಾಗಿದೆ. ಇದೇ … Continued

ನಮ್ಮಲ್ಲಿ ಸಾಕಷ್ಟು ಆಮ್ಲಜನಕ ಲಭ್ಯ, ಆಸ್ಪತ್ರೆಗಳಿಗೆ ಸಾಗಿಸುವುದು ಸವಾಲು: ಕೊರತೆ ವರದಿಗಳ ಮಧ್ಯೆ ಸರ್ಕಾರದ ಹೇಳಿಕೆ

ನವ ದೆಹಲಿ: ಖರೀದಿ ಅಥವಾ ನೇಮಕಾತಿ ಆಧಾರದ ಮೇಲೆ ಭಾರತವು ವಿದೇಶದಿಂದ ಆಮ್ಲಜನಕ ಟ್ಯಾಂಕರ್‌ಗಳನ್ನು ಆದೇಶಿಸುತ್ತಿದೆ ಎಂದು ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಭಾರತದಲ್ಲಿ ಸಾಕಷ್ಟು ವೈದ್ಯಕೀಯ ಆಮ್ಲಜನಕ ಲಭ್ಯವಿದೆ, ಅದನ್ನು ಆಸ್ಪತ್ರೆಗಳಿಗೆ ಸಾಗಿಸುವುದು ಸವಾಲು. ನೈಜ-ಸಮಯದ ಟ್ರ್ಯಾಕಿಂಗ್ ಬಳಸಿ, ನಾವು ಆಮ್ಲಜನಕ ಟ್ಯಾಂಕರ್‌ಗಳ ಚಲನೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ” ಎಂದು ಗೃಹ ಸಚಿವಾಲಯದ ಹೆಚ್ಚುವರಿ … Continued

ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು: ಕೋವಿಡ್‌ ಉಲ್ಬಣಕ್ಕೆ ಚುನಾವಣಾ ಆಯೋಗಕ್ಕೆ ಮದ್ರಾಸ್ ಹೈಕೋರ್ಟ್‌ ತರಾಟೆ

ಚೆನ್ನೈ: ತಮ್ಮ ರಾಜಕೀಯ ಜಾಥಾಗಳಲ್ಲಿ ಕೋವಿಡ್ -19 ಮಾರ್ಗಸೂಚಿಗಳನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿದ (ಉಲ್ಲಂಘಿಸಿದ) ರಾಜಕೀಯ ಪಕ್ಷಗಳನ್ನು ತಡೆಯದಿದ್ದಕ್ಕಾಗಿ  ಚುನಾವಣಾ ಆಯೋಗದ (ಇಸಿಐ) ಕ್ರಮ ಖಂಡಿಸಿದ ಮದ್ರಾಸ್ ಹೈಕೋರ್ಟ್ ಸೋಮವಾರ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಉಲ್ಬಣಕ್ಕೆ “ಚುನಾವಣಾ ಆಯೋಗ ಕಾರಣವಾಗಿದೆ ಎಂದು ಹೇಳಿದೆ. ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್ ಅನ್ನು ಮತದಾನ ಮಂಡಳಿಯು ರೂಪಿಸದಿದ್ದರೆ … Continued

ಕೋವಿಡ್ ರೋಗಿಗಳಿಗೆ ಚಿಕಿತ್ಸೆ: ಮೊಲ್ನುಪಿರವಿರ್ ಮಾತ್ರೆ 3ನೇ ಹಂತದ ಪ್ರಾಯೋಗಿಕ ಬಳಕೆಗೆ ಅರ್ಜಿ

ಹೈದರಾಬಾದ್‌: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ‘ಮೊಲ್ನುಪಿರವಿರ್‌ ಮಾತ್ರೆಗಳನ್ನು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಅನುಮೋದನೆಗಾಗಿ ನ್ಯಾಟ್ಕೊ ಫಾರ್ಮಾ ಲಿಮಿಟೆಡ್ ಕಂಪನಿ ಕೇಂದ್ರೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ(ಸಿಡಿಎಸ್‌ಸಿಒ) ಅರ್ಜಿ ಸಲ್ಲಿಸಿದೆ. ಅಮೆರಿಕದ ಔಷಧ ಕಂಪನಿ ಮೆರ್ಕ್‌ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪಿಟಿಕ್ಸ್ ಜತೆಯಾಗಿ ಅಭಿವೃದ್ಧಿಪಡಿಸಿರುವ ಮೊಲ್ನುಪಿರವಿರ್‌ (ಎಂಕೆ -4482) ಮಾತ್ರೆಗಳನ್ನು ಎರಡು ಹಂತಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ರೋಗಿಗಳ … Continued

ಕೋವಿಡ್ 19 ರ ವಿರುದ್ಧ ಹೋರಾಟದಲ್ಲಿ ಕುಟುಂಬ ಬೆಂಬಲಿಸಲು ಐಪಿಎಲ್‌ನಿಂದ ಹೊರಬಂದ ಸ್ಪಿನ್‌ ಮಾಂತ್ರಿಕ ಆರ್ ಅಶ್ವಿನ್

ಡೆಲ್ಹಿ ಕ್ಯಾಪಿಟಲ್ಸ್ ಸ್ಪಿನ್ನರ್ ಹಾಗೂ ಭಾರತದ ಕ್ರಿಕೆಟ್‌ ತಂಡದ ಆಟಗಾರ ಆರ್‌. ಅಶ್ವಿನ್ ಐಪಿಎಲ್ 2021 ರಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಮತ್ತು COVID-19 ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬದೊಂದಿಗೆ ಇರಲು ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಸದ್ಯ ನಿರ್ಗಮಿಸುವುದಾಗಿ ಹೇಳಿದ್ದಾರೆ. ಭಾನುವಾರ ತನ್ನ ಊರಾದ ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ಅಶ್ವಿನ್, ಟಿ- … Continued

ಕೋವಿಡ್ -19 ಹೋರಾಟದಲ್ಲಿ ಭಾರತಕ್ಕೆ ಬೆಂಬಲದ ಭರಸವೆ ನೀಡಿದ ಗೂಗಲ್ ಸಿಇಒ ಸುಂದರ್ ಪಿಚೈ

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕೋವಿಡ್ -19 ರ ಎರಡನೇ ಅಲೆಯ ವಿರುದ್ಧದ ಭಾರತದ ಯುದ್ಧದಲ್ಲಿ ಬೆಂಬಲ ನೀಡುವ ವಾಗ್ದಾನ ಮಾಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಅನ್ನು ಉದ್ದೇಶಿಸಿ ತೂಫಾನ್’ (ಚಂಡಮಾರುತ) ಎಂದು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟು ಅನಾಹುತಕಾರಿಯಾಗಿದೆ. … Continued

ಭಾರತದಲ್ಲಿ ಸತತ ಐದನೇ ದಿನವೂ 3 ಲಕ್ಷ ದಾಟಿದ ಕೊರೊನಾ ಹೊಸ ಸೋಂಕು..ಇಳಿಯದ ಸಾವಿನ ಸಂಖ್ಯೆ

ನವ ದೆಹಲಿ: ಸೋಮವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಭಾರತವು 3.52 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟು ಸೋಂಕುಗಳನ್ನು 1.73 ಕೋಟಿಗೆ ತಲುಪಿದೆ. ಈ ಪೈಕಿ ಪ್ರಸ್ತುತ 28 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿದ್ದರೆ, 1.43 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,812 ಹೊಸ … Continued

ಸ್ಟಾಕ್ ಇಲ್ಲ.. ಮೇ 1ರಂದು ಎಲ್ಲರಿಗೂ ಲಸಿಕೆ ಆರಂಭಿಸಲು ಸಾಧ್ಯವಿಲ್ಲ ಎಂದ ಕಾಂಗ್ರೆಸ್‌ ಆಡಳಿತದ ನಾಲ್ಕು ರಾಜ್ಯಗಳು

ನವ ದೆಹಲಿ: ಲಸಿಕೆಗಳನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತೆರೆಯುವ ಐದು ದಿನಗಳ ಮೊದಲು, ಪ್ರತಿಪಕ್ಷ ಆಡಳಿತ ನಡೆಸುತ್ತಿರುವ ನಾಲ್ಕು ರಾಜ್ಯಗಳು  ಸಾಕಷ್ಟು ಲಸಿಕೆಗಳನ್ನು ಹೊಂದಿರದ ಕಾರಣ ಮೇ 1 ರಂದು ಲಸಿಕೆ ಆರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಭಾನುವಾರ ಹೇಳಿವೆ. ಮೇ 15ರ ವರೆಗೆ ಮೊದಲು ಕೋವಿಶೀಲ್ಡ್‌ ಡೋಸೇಜ್ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು … Continued

ಭಾರತದ ಕೋವಿಡ್‌ ಪರಿಸ್ಥಿತಿಯಿಂದ ನಾನು ಎದೆಗುಂದಿದ್ದೇನೆ’: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ತರಂಗದಿಂದಾಗಿ ಭಾರತದ ಪ್ರಸ್ತುತ ಪರಿಸ್ಥಿತಿಯೊಂದಿಗೆ ಎದೆಗುಂದಿದ್ದೇನೆ ಎಂದು ಹೇಳಿದ್ದಾರೆ. ಭಾರತದ ಪ್ರಸ್ತುತ ಪರಿಸ್ಥಿತಿಯಿಂದ ನಾನು ಎದೆಗುಂದಿದ್ದೇನೆ. ಅಮೆರಿಕ ಸರ್ಕಾರವು ಸಹಾಯ ಮಾಡಲು ಸಜ್ಜುಗೊಳಿಸುತ್ತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಸತ್ಯ ನಾಡೆಲ್ಲಾ ಟ್ವೀಟ್ ಮಾಡಿದ್ದಾರೆ. ಪರಿಹಾರ ಪ್ರಯತ್ನಗಳಿಗೆ ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ … Continued