ನಂದಿಗ್ರಾಮ ಸಭೆಯಲ್ಲಿ ಹಿಂದೂ ಮಂತ್ರ ಜಪಿಸಿದ ಮಮತಾ ಬ್ಯಾನರ್ಜಿ..!

ನಂದಿಗ್ರಾಮ್‌ನ ಟಿಎಂಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಹಲವಾರು ಹಿಂದೂ ಮಂತ್ರಗಳನ್ನು 10 ನಿಮಿಷಗಳ ಕಾಲ ಪಠಿಸಿದರು. “ನಾನು ಪ್ರತಿದಿನ ಹೊರಹೋಗುವ ಮೊದಲು ಚಂಡಿಪಾಥ್‌ ಮಠಣ ಮಾಡುತ್ತೇನೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು, ಬಿಜೆಪಿ ತನ್ನ ಹಿಂದೂ ಕಾರ್ಡ್ ಅನ್ನು ನನ್ನೊಂದಿಗೆ ಆಡಬಾರದು “ಎಂದು ಮಮತಾ ಬ್ಯಾನರ್ಜಿ ಹೇಳಿದರು.“ನಾನು ಕೂಡ ಹಿಂದೂ. ನನ್ನೊಂದಿಗೆ ಹಿಂದೂ … Continued

ರಾಜಕೀಯ ಪ್ರವೇಶ: ಆ ಸಮಯ ಬಂದಾಗ ಹೇಳುತ್ತೇನೆ ಎಂದ ಸೌರವ ಗಂಗೂಲಿ

ಸೋಮವಾರ, ಭಾರತದ ಮಾಜಿ ಕ್ರಿಕೆಟ್‌ ನಾಯಕ ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಜಕೀಯಕ್ಕೆ ಸೇರುವ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಚುನಾವಣೆ ಸಂದರ್ಭದಲ್ಲಿ ಕ್ರಿಕೆಟಿಗ ಸೌರವ್ ಗಂಗೂಲಿ ಬಿಜೆಪಿಗೆ ಸೇರುತ್ತಾರೋ ಇಲ್ಲವೋ ಎಂಬ ಬಗ್ಗೆ ಭಾರಿ ಊಹಾಪೋಹಗಳಿವೆ. ರಿಪಬ್ಲಿಕ್ ಬಾಂಗ್ಲಾದ ಅರ್ನಾಬ್ ಗೋಸ್ವಾಮಿ ಅವರೊಂದಿಗಿನ ಸಂದರ್ಶನದಲ್ಲಿ, ಸೌರವ್ ಅವರು … Continued

ಉತ್ತರಾಖಂಡದ ಸಿಎಂ ಸ್ಥಾನಕ್ಕೆ ರಾವತ್‌ ರಾಜೀನಾಮೆ

ಡೆಹರಾಡೂನ್: ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಉಲ್ಬಣಿಸಿದ್ದು, ವಿಧಾನಸಭೆ ಚುನಾವಣೆಗೆ ವರ್ಷವಷ್ಟೇ ಬಾಕಿ ಉಳಿದಿರುವಾಗ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ಹೈಕಮಾಂಡ್‌ ಸೂಚನೆ ಮೇರೆಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ತಮ್ಮ … Continued

ಭಾರತ-ಬಾಂಗ್ಲಾದೇಶದ ನಡುವಿನ ಮೈತ್ರಿ ಸೇತು ಉದ್ಘಾಟಿಸಿದ ಮೋದಿ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ‘ಮೈತ್ರಿ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು. “ಬಾಂಗ್ಲಾದೇಶ ಸಂಪರ್ಕವು ಭಾರತದ ಈಶಾನ್ಯ ಪ್ರದೇಶಕ್ಕೆ ಬೆಳೆಯುತ್ತದೆ. ಮತ್ತು ಭಾರತ ಮತ್ತು ಬಾಂಗ್ಲಾದೇಶದ ವ್ಯಾಪಾರಕ್ಕೂ ಬಹಳ ಮುಖ್ಯ. ಇದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಹೊಸ ವ್ಯಾಪಾರ ಕಾರಿಡಾರ್ ಆಗಿದೆ” ಎಂದು ಮೋದಿ ಹೇಳಿದರು. ತ್ರಿಪುರ ಮತ್ತು ಬಾಂಗ್ಲಾದೇಶದ ಭಾರತದ … Continued

ಎಐಎಡಿಎಂಕೆ ಮೈತ್ರಿ ಕೂಟ ತೊರೆದ ನಟ ವಿಜಯಕಾಂತ ಪಕ್ಷ ಡಿಎಂಡಿಕೆ

ಡಿಎಂಡಿಕೆ ಪಕ್ಷವು ಎಐಎಡಿಎಂಕೆ ಮೈತ್ರಿಕೂಟವನ್ನು ತೊರೆಯಲು ನಿರ್ಧರಿಸಿದೆ ಎಂದು ಎಂಡಿಎಂಕೆ ಮುಖ್ಯಸ್ಥ ವಿಜಯಕಾಂತ ಹೇಳಿದ್ದಾರೆ. ಮಂಗಳವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷವು ಎಐಎಡಿಎಂಕೆ ಜೊತೆ ಮೂರು ಸಲ ಮಾತುಕತೆ ನಡೆಸಿತು. ಎಐಎಡಿಎಂಕೆ ತಾವು ಕೇಳಿದ ಸಂಖ್ಯೆಯಷ್ಟು ಸೀಟುಗಳನ್ನು ನೀಡಲು ನಿರಾಕರಿಸಿತು ಹಾಗೂ ಮಾತುಕತೆಗಳು ಅಪೇಕ್ಷಿತ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದ ಚುನಾವಣೆ: ಆಯೋಗದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌

  ನವ ದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ನ್ಯಾಯವಾದಿ ಮನೋಹರ್ ಲಾಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠವು ಮಂಗಳವಾರ … Continued

ಬಾಲಿವುಡ್‌ ನಟ ರಣಬೀರ್ ಕಪೂರ್‌ಗೆ ಕೊರೊನಾ

ನವ ದೆಹಲಿ:ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ನಟ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಮಂಗಳವಾರ ಇನ್ ಸ್ಟಾಗ್ರಾಂ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಮಗ ರಣಬೀರ್ ಕಪೂರ್‌ ಅವರಿಗೂ ಕೊರೋನಾ ಪಾಸಿಟಿವ್ ಎಂಬುದು ಈಗ ದೃಢಪಟ್ಟಿದೆ. ಮನೆಯಲ್ಲೇ ಕ್ವಾರಂಟೈನ್ ಆಗಿರುವ ಅವರು, ವೈದ್ಯರ ಸಲಹೆಯ … Continued

ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಜಂಟಿಯಾಗಿ ನಾಸಾ-ಇಸ್ರೋ ಅಭಿವೃದ್ಧಿ

ಬೆಂಗಳೂರು: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಜೊತೆ ಇಸ್ರೋ ಜಂಟಿ ಭೂ ವೀಕ್ಷಣಾ ಉಪಗ್ರಹ ಕಾರ್ಯಾಚರಣೆಗಾಗಿ ಅತಿ ಹೆಚ್ಚು ರೆಸಲ್ಯೂಶನ್ ಹೊಂದಿರುವ ಚಿತ್ರಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಅಭಿವೃದ್ಧಿಪಡಿಸಿದೆ. ನಾಸಾ-ಇಸ್ರೋ ಎಸ್ಎಆರ್ (ನಿಸಾರ್) ಭೂಮಿಯ ವೀಕ್ಷಣೆಗಾಗಿ ಡ್ಯುಯಲ್-ಫ್ರೀಕ್ವೆನ್ಸಿ ಎಲ್ ಮತ್ತು ಎಸ್-ಬ್ಯಾಂಡ್ ಎಸ್ಎಆರ್ ಜಂಟಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿವೆ. “ನಮ್ಮ ಗ್ರಹದ ಮೇಲ್ಮೈಯಲ್ಲಿ … Continued

“ಇತನಾ ಗುಸ್ಸಾ ಕ್ಯೋಂ, ದೀದಿ?: ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಹಾಡು

ಇತನಾ ಗುಸ್ಸಾ ಕ್ಯೋಂ, ದೀದಿ?(ಇಷ್ಟೊಂದು ಕೋಪ ಏಕೆ, ದೀದಿ), ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಹೊಸ ಪ್ರಚಾರದ ಜಾಹೀರಾತು. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮನ್ನು ‘ರಾವಣ’, ‘ರಾಕ್ಷಸ’, ದೈತ್ಯ ಮತ್ತು ‘ಗೂಂಡಾ’ ಎಂದು ಕರೆದಿದ್ದಕ್ಕೆ ಕೊಲ್ಕತ್ತಾದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಇತನಾ ಗುಸ್ಸಾ ಕ್ಯೋಂ ದೀದಿ (ಇಷ್ಟೊಂದು ಕೋಪ … Continued

ಜೆಇಇ-ಮೇನ್ಸ್‌ ಫಲಿತಾಂಶ ಪ್ರಕಟ: ಆರು ವಿದ್ಯಾರ್ಥಿಗಳಿಗೆ ನೂರಕ್ಕೆ ೧೦೦ ಅಂಕ…!

ಸ್ಪರ್ಧಾತ್ಮಕ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್ಸ್‌ ಫಲಿತಾಂಶವನ್ನು ಸೋಮವಾರ ಪ್ರಟಿಸಲಾಗಿದ್ದು, ಆರು ಅಭ್ಯರ್ಥಿಗಳು ನೂರಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ, ನೂರಕ್ಕೆ ನೂರು ಅಂಕ ಪಡೆದಿ ವಿದ್ಯಾರ್ಥಿಗಳು ದೆಹಲಿಯ ಪ್ರವರ್ ಕಟಾರಿಯಾ ಮತ್ತು ರಂಜಿಮ್ ಪ್ರಬಲ್ ದಾಸ್, ಚಂಡೀಗಡದ ಗುರಮೃತ್ ಸಿಂಗ್, ರಾಜಸ್ಥಾನದ ಸಾಕೇತ್ ಝಾ, ಮಹಾರಾಷ್ಟ್ರದ ಸಿದ್ಧಾಂತ್ ಮುಖರ್ಜಿ ಮತ್ತು ಗುಜರಾತ್‌ನ ಅನಂತ್ ಕೃಷ್ಣ ಕಿಡಂಬಿ. … Continued