ಅತ್ಯಾಚಾರ ಆರೋಪಿ ಪ್ರಕರಣ; ನಾವು ಹೇಳಿದ್ದೇ ಬೇರೆ, ವರದಿಯಾಗಿದ್ದೇ ಬೇರೆ-ತಪ್ಪು ವರದಿಗೆ ಸುಪ್ರೀಂ ಕೋರ್ಟ್ ಅಸಮಾಧಾನ‌

ನವದೆಹಲಿ: ಮಹಿಳೆಯರ ಬಗ್ಗೆ ತಮಗೆ ಅತ್ಯಂತ ಹೆಚ್ಚಿನ ಗೌರವವಿದೆ ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರನ್ನು ಒಳಗೊಂಡ ಪೀಠ, ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ವಾರದ ವಿಚಾರಣೆಯೊಂದನ್ನು ‘ಸಂಪೂರ್ಣ ತಪ್ಪಾಗಿ ವರದಿ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಅತ್ಯಾಚಾರ ಸಂತ್ರಸ್ತೆಯನ್ನು ನೀವು ಮದುವೆಯಾಗುತ್ತೀರಾ ಎಂದು ನಾವು ಆರೋಪಿಯನ್ನು ಆರೋಪಿ ನೀಡಿದ … Continued

ರಾಜ್ಯ ಬಜೆಟ್: ಕೃಷಿ ಪೂರಕ ಚಟುವಟಿಕೆಗಳಿಗೆ ೩೧೦೨೮ ಕೋಟಿ ರೂ. ಅನುದಾನ

ಬೆಂಗಳೂರು: ೨೦೨೧-೨೨ನೇ ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಸರ್ಕಾರ ೩೧,೦೨೮ ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಅಲ್ಲದೆ, ಸಾವಯವ ಕೃಷಿ ಉತ್ತೇಜನಕ್ಕೆ ೫೦೦ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆ ಇಟ್ಟಂಗಿಹಾಳ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಆಹಾರ … Continued

ಎಲ್‌ಐಸಿ ಮೂಲ ಬಂಡವಾಳ 25,000 ಸಾವಿರ ಕೋಟಿ ರೂ.ಗೆ ಹೆಚ್ಚಿಸಲು ನಿರ್ಧಾರ

ನವ ದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಮೂಲ ಬಂಡವಾಳವನ್ನು 25,000 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯೊಂದನ್ನು ಕೇಂದ್ರ ಸಿದ್ಧಪಡಿಸಿದೆ. ಈ ಮೂಲಕ, ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ವನ್ನು ಐಪಿಒ ಕಂಪನಿಯನ್ನಾಗಿಸಿ ಬಂಡವಾಳ ಹಿಂತೆಗೆತಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ ಎಲ್‌ಐಸಿ ಷೇರುಗಳು ಮಾರಾಟ ಆರಂಭವಾದಾಗಿನಿಂದ ಮುಂದಿನ ಐದು ವರ್ಷಗಳವರೆಗೆ ಕಂಪನಿಯ ಶೇ. … Continued

ವರವರ ರಾವ್‌ ಮುಂಬೈಆಸ್ಪತ್ರೆಯಿಂದ ಬಿಡುಗಡೆ

ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಕವಿ-ಕಾರ್ಯಕರ್ತ ವರವರ ರಾವ್ ಅವರನ್ನು ಇಲ್ಲಿನ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 22 ರಂದು ಬಾಂಬೆ ಹೈಕೋರ್ಟ್ ವೈದ್ಯಕೀಯ ಆಧಾರದ ಮೇಲೆ ಆರು ತಿಂಗಳ ಕಾಲ ಮಧ್ಯಂತರ ಜಾಮೀನು ಪಡೆದ 82 ವರ್ಷದ ವರವರ ರಾವ್‌ ಅವರನ್ನು ಶನಿವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಿಂದ … Continued

ಅಯೋಧ್ಯೆ ಶ್ರೀರಾಮ ದೇಗುಲಕ್ಕೆ ೨೫೦೦ ಕೋಟಿ ರೂ. ಸಂಗ್ರಹ

ಜನವರಿ 14 ರಂದು ಅಯೋಧ್ಯೆಯ ಶ್ರೀರಾಮ ದೇವಸ್ಥಾನಕ್ಕಾಗಿ ಜನಸಮೂಹ ಧನಸಹಾಯ ಅಭಿಯಾನ ಪ್ರಾರಂಭಿಸಿದ ಶ್ರೀ ರಾಮ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಫೆಬ್ರವರಿ 27 ರಂದು ಅಭಿಯಾನ ಮುಗಿಯುವ ಹೊತ್ತಿಗೆ ಈ ಯೋಜನೆಗೆ 1,100 ಕೋಟಿ ರೂ. ಸಂಗ್ರಹದ ನಿರೀಕ್ಷೆ ಇಟ್ಟಿತ್ತು. ಆದರೆ ೪೪ ದಿನಗಳ ಅಭಿಯಾನದಲ್ಲಿ 2,500 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ ಎಂದು ವಿಶ್ವ … Continued

ಗುರುದ್ವಾರ ಬಾಂಗ್ಲಾ ಸಾಹಿಬ್ ಒಳಗೆ ‘ಭಾರತದ ಅತಿದೊಡ್ಡ’ ಡಯಾಲಿಸಿಸ್ ಸೌಲಭ್ಯ ಆರಂಭ

ನವ ದೆಹಲಿ: ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಇಲ್ಲಿನ ಗುರುದ್ವಾರ ಬಾಂಗ್ಲಾ ಸಾಹಿಬ್ ಸಂಕೀರ್ಣದಲ್ಲಿ “ಭಾರತದ ಅತಿದೊಡ್ಡ” ಕಿಡ್ನಿ ಡಯಾಲಿಸಿಸ್ ಸೌಲಭ್ಯ ಪ್ರಾರಂಭಿಸಿದೆ. ಗುರು ಹರ್ಕಿಶನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಕಿಡ್ನಿ ಡಯಾಲಿಸಿಸ್ ಆಸ್ಪತ್ರೆ 101 ರೋಗಿಗಳಿಗೆ ಏಕಕಾಲದಲ್ಲಿ ಡಯಾಲಿಸಿಸ್ ಸೌಲಭ್ಯ ನೀಡಲಿದ್ದು, ಇದು ಪ್ರತಿದಿನ 500 ರೋಗಿಗಳಿಗೆ … Continued

ಮಹಾರಾಷ್ಟ್ರ: ಮೂರು ತಿಂಗಳ ನಂತರ ಮತ್ತೆ 11 ಸಾವಿರ ದಾಟಿದ ಪ್ರತಿದಿನದ ಕೊರೋನಾ ಸೋಂಕಿತರ ಸಂಖ್ಯೆ..!

ಮುಂಬೈ: ಮೂರು ತಿಂಗಳ ಅಂತರದ ನಂತರ ಮಹಾರಾಷ್ಟ್ರದಲ್ಲಿ ಭಾನುವಾರ ಕಳೆದ ೨೪ ತಾಸಿನಲ್ಲಿ ಪ್ರತಿದಿನದ 11,000ಕ್ಕೂ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳನ್ನು ದಾಖಲು ಮಾಡಿದೆ. ರಾಜ್ಯಾದ್ಯಂತ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದ್ದು, ರಾಜ್ಯವು ಭಾನುವಾರ 11,141 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಶನಿವಾರಕ್ಕಿಂತ (10,187) ಸುಮಾರು ಒಂದು ಸಾವಿರದಷ್ಟು ಹೆಚ್ಚಾಗಿದೆ. 38 … Continued

ತಮಿಳುನಾಡಿನಲ್ಲಿ ಒಂದು ಸಾವಿರ ಕೋಟಿ ರೂ.ಕಪ್ಪು ಹಣ ಪತ್ತೆ

ನವ ದೆಹಲಿ: ತಮಿಳುನಾಡಿನ ಚಿನ್ನದ ವ್ಯಾಪಾರಿಗಳು 1 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಕಪ್ಪು ಹಣ ವ್ಯವಹಾರ ನಡೆಸಿರುವುದನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಾ.4ರಂದು ಐಟಿ ಅಧಿಕಾರಿಗಳು ಚೆನ್ನೈ , ಮುಂಬೈ, ಕೊಯಮತ್ತೂರು, ಮಧುರೈ, ತಿರುಚಿನಾಪಳ್ಳಿ, ತ್ರಿಶೂರ್, ನೆಲ್ಲೂರು ಸೇರಿದಂತೆ 27ಕ್ಕೂ ಹೆಚ್ಚು ಚಿನ್ನದ ಮಳಿಗೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ … Continued

ನಾನು ನಾಗರ ಹಾವು, ಕಚ್ಚಿದ್ರೆ ನೀವು ಇರೋಲ್ಲ: ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ ಹೇಳಿಕೆ‌

ಕೊಲ್ಕತ್ತಾ: .ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ತೆರಳಲು ಕೇವಲ ಮೂರು ವಾರಗಳ ಮೊದಲು ಭಾನುವಾರ ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಗ್ರೌಂಡ್ ಸಮಾವೇಶದಲ್ಲಿ ಖ್ಯಾತ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ದಿಲೀಪ್ ಘೋಷ್ ಇತರರು ಅವರನ್ನು … Continued

ಮತ್ತೊಬ್ಬ ಪ್ರತಿಭಟನಾ ನಿರತ ರೈತ ಆತ್ಮಹತ್ಯೆಗೆ ಶರಣು

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ನೂರು ದಿನ ದಾಟಿದ ಬೆನ್ನಲ್ಲೇ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿಕ್ರಿ-ಬಹದ್ದೂರ್‌ಗ ಗಡಿಯಲ್ಲಿ ಭಾನುವಾರ ಹರಿಯಾಣದ ಹಿಸಾರ್ ಜಿಲ್ಲೆಯ ರೈತ ರಾಜ್ಬೀರ್ (55) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಕೃಷಿ ಕಾಯ್ದೆ ಹೋರಾಟದಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನೊಂದ ಮತ್ತೊಬ್ಬ ರೈತ … Continued