ಸಾಕ್ಷ್ಯ ನಾಶಕ್ಕೆ 2 ಮೊಬೈಲ್‌ ಫೋನ್‌ ನಾಶಪಡಿಸಿದ್ದಾಗಿ ಒಪ್ಪಿಕೊಂಡ ಮನೀಶ ಸಿಸೋಡಿಯಾ : ಸಿಬಿಐ

ನವದೆಹಲಿ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಆಪಾದಿತ ದೆಹಲಿ ಮದ್ಯ ನೀತಿ ಹಗರಣದಲ್ಲಿ ಜೈಲಿನಲ್ಲಿದ್ದು, ಡಿಜಿಟಲ್ ಸಾಕ್ಷ್ಯ ನಾಶಪಡಿಸಲು ಎರಡು ಮೊಬೈಲ್ ಫೋನ್‌ಗಳನ್ನು ನಾಶಪಡಿಸಿರುವುದಾಗಿ ಕೇಂದ್ರೀಯ ತನಿಖಾ ದಳದ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯೊಂದು ತಿಳಿಸಿದೆ. ಪ್ರಕರಣದಲ್ಲಿ ನಂಬರ್ ಒನ್ ಆರೋಪಿಯಾಗಿರುವ ಸಿಸೋಡಿಯಾ, ಆಮ್ ಆದ್ಮಿಗೆ ವಿತ್ತೀಯ ಲಾಭಕ್ಕಾಗಿ ಕೆಲವು … Continued

ಚಲಾವಣೆಯಿಂದ 2,000 ರೂ. ನೋಟುಗಳನ್ನು ಹಿಂಪಡೆದ ಆರ್‌ಬಿಐ : ಇದು ಹೇಗೆ ಪರಿಣಾಮ ಬೀರುತ್ತದೆ..?

2,000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಹೇಳಿದೆ. ತಕ್ಷಣವೇ ಜಾರಿಗೆ ಬರುವಂತೆ 2,000 ರೂಪಾಯಿ ನೋಟುಗಳನ್ನು ವಿತರಿಸದಂತೆ ಬ್ಯಾಂಕ್‌ಗಳಿಗೆ ಸಲಹೆ -ಸೂಚನೆ ನೀಡಲಾಗಿದ್ದರೂ, ಹಿಂಪಡೆಯುವಿಕೆಯನ್ನು “ಸಮಯಕ್ಕೆ ಅನುಗುಣವಾಗಿ” ಮತ್ತು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವುದರಿಂದ ನಾಗರಿಕರು ಚಿಂತಿಸಬೇಕಾಗಿಲ್ಲ. ಪತ್ರಿಕಾ ಪ್ರಕಟಣೆಯಲ್ಲಿ, ಪ್ರಸ್ತುತ ಚಲಾವಣೆಯಲ್ಲಿರುವ 2,000 … Continued

ಹಿಂಡೆನ್‌ಬರ್ಗ್ ಆರೋಪದಲ್ಲಿ ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್ ನೀಡಿದ ಸುಪ್ರೀಂ ಕೋರ್ಟ್‌ ಸಮಿತಿ : ದರ ತಿರುಚಿರುವಿಕೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದ ಸಮಿತಿ

ನವದೆಹಲಿ: ಅದಾನಿ ಸಮೂಹವು ಅಕ್ರಮ ಕೈವಾಡದ ಮೂಲಕ ಷೇರು ದರ ತಿರುಚಿರುವ ಮತ್ತು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಷೇರು ನಿಯಂತ್ರಣ ಮಂಡಳಿ – ಸೆಬಿ ಪ್ರಮಾದ ಎಸಗಿರುವುದು ಕಂಡು ಬಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ಅವರ … Continued

2,000 ರೂ. ನೋಟುಗಳನ್ನು ಹಿಂಪಡೆದ ಆರ್ ಬಿಐ: ಸೆ.30ರ ವರೆಗೆ ಬ್ಯಾಂಕ್ ಗಳಲ್ಲಿ ನೋಟು ಬದಲಾವಣೆಗೆ ಅವಕಾಶ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ₹2,000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ. ಆದಾಗ್ಯೂ, ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧ ಟೆಂಡರ್ ಆಗಿರುತ್ತವೆ. ಮೇ 23, 2023 ರಿಂದ ಯಾವುದೇ ಬ್ಯಾಂಕ್‌ನಲ್ಲಿ ₹2000 ಬ್ಯಾಂಕ್‌ನೋಟುಗಳನ್ನು ಇತರ ಮುಖಬೆಲೆಯ ಬ್ಯಾಂಕ್‌ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು. ಅವುಗಳನ್ನು 2023ರ ಸೆಪ್ಟೆಂಬರ್ … Continued

ಮುಂದಿನ ವಿಚಾರಣೆ ವರೆಗೆ ಜ್ಞಾನವಾಪಿ ಮಸೀದಿಯೊಳಗಿನ ʼಶಿವಲಿಂಗʼದ ರಚನೆಯ ಕಾರ್ಬನ್ ಡೇಟಿಂಗಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : ವಾರಾಣಸಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾದ ಶಿವಲಿಂಗದ ರೀತಿಯ ಆಕೃತಿಯನ್ನು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಕಾರ್ಬನ್ ಡೇಟಿಂಗ್‌ ಸಹಿತ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಅಲಹಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ. ಮುಂದಿನ ವಿಚಾರಣೆಯವರೆಗೆ  ಶಿವಲಿಂಗದ ರೀತಿಯ ಆಕೃತಿಯ ವೈಜ್ಞಾನಿಕ ಸಮೀಕ್ಷೆ ನಡೆಸದಂತೆ ಭಾರತೀಯ ಪುರಾತತ್ವ ಇಲಾಖೆಗೆ … Continued

ತನ್ನ ವಿರುದ್ಧದ ಸಿಬಿಐ ಎಫ್‌ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸಮೀರ ವಾಂಖೆಡೆ

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೂ 2021ರಲ್ಲಿ ಕಾರ್ಡೆಲಿಯಾ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ಸಂಬಂಧಿಸಿದಂತೆ 25 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿರುದ್ಧ … Continued

ಜನಸಂಖ್ಯೆಯ ಹೊರೆ ತಗ್ಗಿಸಲು ದೇಶದಲ್ಲಿ 8 ಹೊಸ ನಗರಗಳ ಸ್ಥಾಪನೆಗೆ ಕೇಂದ್ರದ ಚಿಂತನೆ

ನವದೆಹಲಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ನಗರ ಕೇಂದ್ರಗಳ ಮೇಲಿನ ಜನಸಂಖ್ಯೆಯ ಹೊರೆ ತಗ್ಗಿಸಲು ಎಂಟು ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯು ಪರಿಗಣನೆಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. 15ನೇ ಹಣಕಾಸು ಆಯೋಗವು ತನ್ನ ವರದಿಯೊಂದರಲ್ಲಿ ಹೊಸ ನಗರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸು ಮಾಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ … Continued

ಸುಪ್ರೀಂ ಕೋರ್ಟ್ ಇಬ್ಬರು ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ

ನವದೆಹಲಿ: ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಶಾಂತಕುಮಾರ ಮಿಶ್ರಾ ಮತ್ತು ಹಿರಿಯ ವಕೀಲ ಕಲ್ಪತಿ ವೆಂಕಟರಾಮನ್ ವಿಶ್ವನಾಥನ್ ಅವರು ಇಂದು, ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಪ್ರಮಾಣ ವಚನ ಬೋಧಿಸಿದರು. ಮೂವರು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್, ಜಸ್ಟಿಸ್ ಅಜಯ್ … Continued

ಮಾರ್ಚ್‌ ತ್ರೈಮಾಸಿಕದಲ್ಲಿ ಸ್ಟೇಟ್‌ ಬ್ಯಾಂಕ್‌ ಲಾಭದಲ್ಲಿ ಶೇ.83ರಷ್ಟು ಜಿಗಿತ : ₹16,694 ಕೋಟಿ ನಿವ್ವಳ ಲಾಭ

ನವದೆಹಲಿ: 2022-23ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ 83ರಷ್ಟು ಜಿಗಿತ ಕಂಡು ₹16,694.51 ಕೋಟಿಗೆ ತಲುಪಿದೆ ಎಂದು ಎಸ್‌ಬಿಐ ಗುರುವಾರ ವರದಿ ಮಾಡಿದೆ. 2021-22 ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭವು ₹9,113.53 ಕೋಟಿಗಳಷ್ಟಿತ್ತು. 2022-23 ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ, ಬ್ಯಾಂಕ್‌ನ ಬಡ್ಡಿ … Continued

ಕ್ಷುಲ್ಲಕ ಕಾರಣಕ್ಕೆ ಮದುವೆ ವೇಳೆ ವಿಷ ಕುಡಿದ ಜೋಡಿ; ವರ ಸಾವು, ವಧು ಗಂಭೀರ

ಇಂದೋರ್‌: ಬಹಳ ವರ್ಷಗಳ ಕಾಯುವಿಕೆ ನಂತರ ವಿವಾಹ ಆಗುತ್ತಿರುವುದಕ್ಕೆ ನವ ಜೋಡಿಯೊಂದು ತಾಳಿ ಕಟ್ಟುವ ಮುನ್ನವೇ ಹಸೆಮಣೆ ಮೇಲೆ ವಿಷ ಸೇವಿಸಿರುವ ಘಟನೆ ಮಧ್ಯಪ್ರದೇಶ ಇಂದೋರ್‌ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವಿಷ ಸೇವನೆಯಿಂದ 21 ವರ್ಷದ ವರ ಮೃತಪಟ್ಟಿದ್ದು, 20 ವರ್ಷದ ವಧುವಿನ ಸ್ಥಿತಿ ಗಂಭೀರವಾಗಿದೆ. ಘಟನೆ ಮೇ 16 ರಂದು ನಡೆದಿದೆ. ಮಧ್ಯಪ್ರದೇಶ ಇಂದೋರಿನಲ್ಲಿ … Continued