ಜುಲೈನಿಂದ ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ; ನೆಟ್‌, ಸೆಟ್‌, ಸ್ಲೆಟ್‌ ಮುಖ್ಯ ಮಾನದಂಡಗಳು: ಯುಜಿಸಿ

ನವದೆಹಲಿ: ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET), ರಾಜ್ಯ ಅರ್ಹತಾ ಪರೀಕ್ಷೆ (SET) ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (SLET) ಕನಿಷ್ಠ ಮಾನದಂಡವಾಗಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಪ್ರಕಟಿಸಿದೆ. . ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಗಳ … Continued

ಪೆಟ್ರೋಲ್ ಲೀಟರಿಗೆ ₹ 15 ಇಳಿಕೆ ಆಗಲಿದೆ..ಒಂದು ವೇಳೆ… : ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ನವದೆಹಲಿ : ಪೆಟ್ರೋಲ್‌ ದುಬಾರಿಯಾಗಿರುವ ಸಂದರ್ಭದಲ್ಲೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ 15 ರೂಪಾಯಿಗೆ ಲೀಟರ್‌ ಪೆಟ್ರೋಲ್‌ ಸಿಗುವ ದಿನ ದೂರ ಇಲ್ಲ ಎಂಬ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹ 15 ಕ್ಕೆ ಇಳಿಸುವ ವಿನೂತನ ಪ್ರಸ್ತಾಪ ಮಾಡಿದ್ದಾರೆ. ರಾಜಸ್ಥಾನದ ಪ್ರತಾಪಗಢದಲ್ಲಿ … Continued

ಪ್ರಜ್ಞೆ ಇಲ್ಲದೆ ಬಿದ್ದಿದ್ದ ನಾಗರಹಾವಿಗೆ ನೀರು ಕುಡಿಸಿ ಜೀವ ಉಳಿಸಿದ ಪರಿಸರ ಕಾರ್ಯಕರ್ತ | ವೀಕ್ಷಿಸಿ

ಪರಿಸರ ಹೋರಾಟಗಾರನ ಸಹಾನುಭೂತಿ ಮತ್ತು ಧೈರ್ಯಶಾಲಿ ಕಾರ್ಯವು ನಾಗರಹಾವಿಗೆ ಮರುಜೀವ ನೀಡಿದೆ. ಸತ್ತಂತೆ ನಿತ್ರಾಣವಾಗಿ ಜೀವವಿಲ್ಲದಂತೆ ಬಿದ್ದಿದ್ದ ನಾಗರಹಾವಿಗೆ ನೀರು ಕುಡಿಸಿ ಮತ್ತೆ ನಾಹರಹಾವು ಮೊದಲಿನ ಚಟುಚಟಿಕೆಗೆ ಬರಳುವಂತೆ ಮಾಡಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುಚೋಪರೂರಿನಲ್ಲಿ ನಡೆದಿದೆ. ಸೆರೆಹಿಡಿಯಲಾದ ವೀಡಿಯೊ ಅಂತರ್ಜಾಲದಲ್ಲಿ ಭಾರೀ ವೈರಲ್‌ ಆಗಿದೆ. ವೀಡಿಯೊದಲ್ಲಿ, ಪರಿಸರ ಕಾರ್ಯಕರ್ತ ನಾಗರಹಾವಿಗೆ ಬಾಟಲಿಯಿಂದ ನೀರು … Continued

ಕಾರು ಅಪಘಾತ: ಕ್ರಿಕೆಟಿಗ ಪ್ರವೀಣಕುಮಾರ, ಪುತ್ರ ಪ್ರಾಣಾಪಾಯದಿಂದ ಪಾರು

ಮೀರತ್ : ಭಾರತದ ಮಾಜಿ ಕ್ರಿಕೆಟಿಗ ಪ್ರವೀಣಕುಮಾರ ಮತ್ತು ಅವರ ಮಗ ಪ್ರಯಾಣಿಸುತ್ತಿದ್ದ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಭಾರತ ತಂಡದ ಮಾಜಿ ವೇಗದ ಬೌಲರ್, ಉತ್ತರ ಪ್ರದೇಶದ ಮುಲ್ತಾನ್ ನಗರದ ನಿವಾಸಿಯಾಗಿದ್ದು, ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮಗನೊಂದಿಗೆ ಪಾಂಡವ … Continued

ಬೆಲೆ ಗಗನಕ್ಕೆ : ಪಡಿತರ ಅಂಗಡಿಗಳ ಮೂಲಕ ಅರ್ಧ ಬೆಲೆಗೆ ಟೊಮೆಟೊ ಮಾರಾಟ ಆರಂಭಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ಏರಿಕೆಯಾಗುತ್ತಿರುವ ಬೆಲೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮಳಿಗೆಗಳ ಮೂಲಕ ಟೊಮೆಟೊಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. 82 ಪಿಡಿಎಸ್ ಅಂಗಡಿಗಳಲ್ಲಿ ಟೊಮೆಟೊ ಕೆಜಿಗೆ 60 ರೂ.ಗಳಂತೆ ಮಾರಾಟ ಮಾಡುತ್ತಿದೆ. ತಮಿಳುನಾಡು ರಾಜ್ಯಾದ್ಯಂತ ಸದ್ಯ ಟೊಮೇಟೊ ಕೆಜಿಗೆ 120-140 ರೂ.ಗಳಿಗೆ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ತಮಿಳುನಾಡು … Continued

ವೀಡಿಯೊ | ಭಾರೀ ಮಳೆಗೆ ಭೂಕುಸಿತದ ವೇಳೆ ಬೃಹತ್ ಬಂಡೆ ಅಪ್ಪಳಿಸಿ ಕಾರುಗಳು ಪುಡಿಪುಡಿ : ಇಬ್ಬರು ಸಾವು, ಮೂವರಿಗೆ ಗಾಯ

ಕೊಹಿಮಾ-ದಿಮಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ಬೃಹತ್ ಬಂಡೆಗಳು ಉರುಳಿ ಮೂರು ಕಾರುಗಳನ್ನು ಜಖಂಗೊಳಿಸಿವೆ. ಪೊಲೀಸ್ ಚೆಕ್‌ಪೋಸ್ಟ್ ಬಳಿಯ ಚುಮೌಕೆಡಿಮಾದಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯ ವೈರಲ್ ವೀಡಿಯೊದಲ್ಲಿ ಬೃಹತ್ ಬಂಡೆಯು ಒಂದರ ನಂತರ ಒಂದರಂತೆ ಎರಡು ಕಾರುಗಳಿಗೆ ಅಪ್ಪಳಿಸುವುದನ್ನು ತೋರಿಸುತ್ತದೆ. … Continued

ಅಜಿತ ಪವಾರ್‌ Vs ಶರದ್‌ ಪವಾರ್‌ : ಇಂದು ಎನ್‌ ಸಿಪಿಯಲ್ಲಿ ಎರಡು ಪ್ರತ್ಯೇಕ ಸಭೆ, ಎರಡು ಬಣದಿಂದಲೂ ವಿಪ್‌ ಜಾರಿ…

ಮುಂಬೈ: ಶರದ್ ಪವಾರ್ ಮತ್ತು ಅವರ ಅಣ್ಣನ ಮಗ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಪ್ರತಿಸ್ಪರ್ಧಿ ಬಣಗಳ ರಾಜಕೀಯ ಮೇಲಾಟ ಮುಂದುವರಿದಿದ್ದು ಇಂದು, ಬುಧವಾರ ಮುಂಬೈನಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಹಾಗೂ ಇಬ್ಬರೂ ತಮ್ಮ ತಮ್ಮ ಬಣಗಳಿಗೆ ಇಬ್ಬರು ಮುಖ್ಯ ಸಚೇತಕರನ್ನು ನೇಮಿಸಿದ್ದಾರೆ. ಶರದ್ ಪವಾರ್ ಬಣ ದಕ್ಷಿಣ ಮುಂಬೈನ ವೈ.ಬಿ. … Continued

ಅಮೆರಿಕದಲ್ಲಿ ಚಿತ್ರೀಕರಣದ ವೇಳೆ ನಟ ಶಾರುಖ್ ಖಾನಗೆ ಗಾಯ

ಬಾಲಿವುಡ್‌ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಶೂಟಿಂಗ್ ವೇಳೆ ಮೂಗಿಗೆ ಗಾಯ ಮಾಡಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಶೂಟಿಂಗ್ ವೇಳೆ ಖಾನ್ ಅವರ ಮೂಗಿಗೆ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ತಸ್ರಾವ ನಿಲ್ಲಿಸಲು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು ಎಂದು ಎಕಾನಾಮಿಕ್‌ ಟೈಮ್ಸ್‌ ವರದಿ … Continued

ಏಕರೂಪ ನಾಗರಿಕ ಸಂಹಿತೆ ಕಾರ್ಯಗತ ಮಾಡುವ ಸಮಯ : ಉಪರಾಷ್ಟ್ರಪತಿ ಜಗದೀಪ ಧನಕರ್

ಗುವಾಹತಿ: ಮಂಗಳವಾರ ನಡೆದ ಐಐಟಿ ಗುವಾಹಟಿಯ 25ನೇ ಘಟಿಕೋತ್ಸವದಲ್ಲಿ ಉಪಾಧ್ಯಕ್ಷ ಜಗದೀಪ ಧನಕರ್ ಅವರು ಏಕರೂಪ ನಾಗರಿಕ ಸಂಹಿತೆ (UCC) ಕಾರ್ಯಗತ ಮಾಡಲು ಕರೆ ನೀಡಿದ್ದಾರೆ. ಏಕರೂಪ ನಾಗರಿಕ ಸಂಹಿತೆ (UCC) ಕಾರ್ಯಗತಗೊಳಿಸುವಲ್ಲಿ ಯಾವುದೇ ವಿಳಂಬವು ರಾಷ್ಟ್ರದ ಮೌಲ್ಯಗಳಿಗೆ ಹಾನಿಕಾರಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಸಂವಿಧಾನದ 44 ನೇ ವಿಧಿಯು ದೇಶಾದ್ಯಂತ ಎಲ್ಲಾ ನಾಗರಿಕರಿಗೆ … Continued

ಎಲ್ಲವೂ ಪ್ರೀತಿಗಾಗಿ…: ಭಾರತದ ತನ್ನ ಪ್ರೇಮಿಯ ಬಳಿ ಬರಲು ಜಾಗ ಮಾರಾಟ, ಒಳಬರುವ ದಾರಿಗಾಗಿ ಯೂಟ್ಯೂಬಿನಲ್ಲಿ ಹುಡುಕಾಟ ನಡೆಸಿದ್ದ ಪಾಕ್ ಮಹಿಳೆ…!

ನವದೆಹಲಿ: ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಗ್ರೇಟರ್ ನೋಯ್ಡಾ ನಿವಾಸಿಯೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಮಹಿಳೆ ಭಾರತಕ್ಕೆ ಬರಲು ತನ್ನ ಭೂಮಿಯನ್ನು 12 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ ಮತ್ತು ಭಾರತಕ್ಕೆ ಪ್ರವೇಶಿಸುವ ಮಾರ್ಗಗಳನ್ನು ಯೂಟ್ಯೂಬ್‌ನಲ್ಲಿ ಹುಡುಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸೀಮಾ ಗುಲಾಮ್ ಹೈದರ್, 27, ಮೂಲತಃ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಿಂಡ್ ಹಜಾನಾ ಗ್ರಾಮದ ನಿವಾಸಿಯಾಗಿದ್ದು, … Continued