ಸಾಲಸೋಲ ಮಾಡಿ ಓದಿಸಿ ಹೆಂಡ್ತಿನ ಅಧಿಕಾರಿಯಾಗಿಸಿದ ಪತಿ, ಈಗ ಆಕೆಗೆ ಬೇರೆ ಅಧಿಕಾರಿ ಜೊತೆ ಪ್ರೀತಿ, ವಿಚ್ಛೇದನ ನೀಡುವಂತೆ ಬೆದರಿಕೆ

ಉತ್ತರ ಪ್ರದೇಶ (ಯುಪಿ) ಪಂಚಾಯತ್ ರಾಜ್ ಇಲಾಖೆಯ ಕ್ಲಾಸ್ 4 ಉದ್ಯೋಗಿಯೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಧುಮನ್‌ಗಂಜ್ ಪೊಲೀಸ್ ಠಾಣೆ, ಪ್ರಯಾಗ್‌ರಾಜ್ ಮತ್ತು ಗೃಹರಕ್ಷಕ ದಳದ ಪ್ರಧಾನ ಕಚೇರಿಗಳಿಗೆ ವಿಶಿಷ್ಟವಾದ ದೂರು ನೀಡಿದ್ದಾರೆ. ತಮ್ಮ ಪತ್ನಿಯಾದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಆಕೆಯ ಆಪಾದಿತ ಪ್ರೇಮಿಯಾದ ಉತ್ತರ ಪ್ರದೇಶ್ ಹೋಮ್ … Continued

ಉತ್ತರ ಹಿಂದೂ ಮಹಾಸಾಗರದಲ್ಲಿ 1977ರ ನಂತರ ಬಿಪೋರ್‌ ಜಾಯ್ ಚಂಡಮಾರುತದ ಜೀವಿತಾವಧಿಯೇ ಅತ್ಯಂತ ದೀರ್ಘ

ನವದೆಹಲಿ : ಈ ತಿಂಗಳ ಆರಂಭದಲ್ಲಿ ಗುಜರಾತ್‌ನಲ್ಲಿ ವಿನಾಶಕ್ಕೆ ಕಾರಣವಾದ ಬಿಪೋರ್‌ ಜೋಯ್ ಚಂಡಮಾರುತವು 1977ರ ನಂತರ ಉತ್ತರ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಅತಿ ಹೆಚ್ಚು ದೀರ್ಘಾವಧಿಯ ಚಂಡಮಾರುತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹೇಳಿದೆ. ಈ ವರ್ಷ ಅರಬ್ಬಿ ಸಮುದ್ರದ ಮೇಲಿನ ಮೊದಲ ಚಂಡಮಾರುತವಾದ ಬಿಪೋರ್‌ ಜೋಯ್, ಜೂನ್ 6 ರಂದು … Continued

ಸಲ್ಮಾನ್ ಖಾನ್ ನಮ್ಮ ಮುಂದಿನ ಟಾರ್ಗೆಟ್‌ : ಬಾಲಿವುಡ್‌ ನಟನಿಗೆ ಮತ್ತೆ ಜೀವ ಬೆದರಿಕೆ ಹಾಕಿದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್

ಕೆನಡಾ ಮೂಲದ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಬಾಲಿವುಡ್ ನಟ ಸಲ್ಮಾನ್ ಖಾನ್‌ “ನಮ್ಮ ಟಾರ್ಗೆಟ್‌” ಎಂದು ಜೀವ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ “ಕರುಣೆ ತೋರಿಸಬಹುದು ಎಂದು ಆತ ಹೇಳಿದ್ದಾನೆ. ಇಂಡಿಯಾ ಟುಡೇ ಜೊತೆಗಿನ ಸಂದರ್ಶನದಲ್ಲಿ ಬ್ರಾರ್‌ ಈ ರೀತಿ ಹೇಳಿದ್ದಾನೆ. ” ಸಲ್ಮಾನ್‌ ಖಾನ್‌ ಖಂಡಿತವಾಗಿಯೂ ನಮ್ಮ … Continued

“ನಾವು ಬಿಜೆಪಿ ವಿರುದ್ಧ ಮೈತ್ರಿ ಪ್ರಯತ್ನಿಸುತ್ತಿದ್ದೇವೆ, ಆದರೆ ಕಾಂಗ್ರೆಸ್, ಸಿಪಿಐ(ಎಂ)…” : ಮಮತಾ ಬ್ಯಾನರ್ಜಿ ವಾಗ್ದಾಳಿ

ಕೂಚ್ ಬೆಹಾರ (ಪಶ್ಚಿಮ ಬಂಗಾಳ): ಪಾಟ್ನಾದಲ್ಲಿ ನಡೆದ ಬೃಹತ್ ಪ್ರತಿಪಕ್ಷಗಳ ಸಭೆಯ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ. ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ … Continued

ತಮಿಳಿನ ಖ್ಯಾತ ನಟ ವಿಜಯ ವಿರುದ್ಧ ಪೊಲೀಸ್ ದೂರು ದಾಖಲು

ತಮಿಳು ಸಿನೆಮಾ ರಂಗದ ಖ್ಯಾತ ನಟ ವಿಜಯ ಅವರ ನೂತನ ಸಿನೆಮಾದ ʼನಾ ರೆಡಿʼ ಎಂಬ ಹಾಡಿನಲ್ಲಿ ಮಾದಕ ವಸ್ತು ಸೇವನೆಗೆ (Drug Abuse) ಾವರು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಪೊಲೀಸ್ ದೂರು ದಾಖಲಾಗಿದೆ. ವಿಜಯ ಅವರ ಮುಂಬರುವ ತಮಿಳು ಚಿತ್ರ ಲಿಯೋ ಚಿತ್ರದ ಹಾಡಿನಲ್ಲಿ ಮಾದಕ ವಸ್ತು ಸೇವನೆಗೆ ಪ್ರಚಾರ … Continued

ಕೆಸಿಆರ್ ಪಕ್ಷಕ್ಕೆ ಆಘಾತ : ಕಾಂಗ್ರೆಸ್‌ ಸೇರಿದ 12ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ 12 ಕ್ಕೂ ಹೆಚ್ಚು ಮಾಜಿ ಶಾಸಕರು, ಸಚಿವರು ಮತ್ತು ಪದಾಧಿಕಾರಿಗಳು ಸೋಮವಾರ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ … Continued

ಗೋಮಾಂಸ ಕಳ್ಳಸಾಗಣೆ ಆರೋಪ : ವ್ಯಕ್ತಿಯೊಬ್ಬನ ಹತ್ಯೆ, 11 ಜನರ ಬಂಧನ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಘಟನೆಯು ನಾಸಿಕದ ಇಗತ್‌ಪುರಿ ಪ್ರದೇಶದ ಘೋಟಿ-ಸಿನ್ನಾರ್ ರಸ್ತೆಯ ಗಂಭೀರವಾಡಿ ಬಳಿ ಶನಿವಾರ ಸಂಜೆ 5:30 ರ ಸುಮಾರಿಗೆ ನಡೆದಿದೆ. ಈ ಸಂಬಂಧ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಎಂದು ಘೋಟಿ ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ … Continued

ಹಾಡಹಗಲೇ ಜನನಿಬಿಡ ನಡುರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ, ಗನ್ ತೋರಿಸಿ ಹಣ ದೋಚಿದ ದುಷ್ಕರ್ಮಿಗಳು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನದಟ್ಟಣೆಯ ಸುರಂಗ ಮಾರ್ಗದಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಇಂಡಿಯಾ ಗೇಟ್‌ನಿಂದ ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಡೆಲಿವರಿ ಏಜೆಂಟನ ಕಾರು ಅಡ್ಡಗಟ್ಟಿ ಗನ್ ತೋರಿಸಿ ಕಾರಿನಲ್ಲಿದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ. ಸಜನಕುಮಾರ ಪಟೇಲ್‌ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅವರು … Continued

ಧೂಮಪಾನ ಮಾಡಿದ್ದಕ್ಕೆ ಶಿಕ್ಷಕರು ಥಳಿಸಿದ ನಂತರ 10 ನೇ ತರಗತಿ ವಿದ್ಯಾರ್ಥಿ ಸಾವು

ಪಾಟ್ನಾ: 15 ವರ್ಷದ ಬಿಹಾರದ ಬಾಲಕ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದುದನ್ನು ಹಿಡಿದ ಶಾಲೆಯ ಶಿಕ್ಷಕರು ಆತನಿಗೆ ಥಳಿಸಿದ ನಂತರ ಆತ ಸಾವಿಗೀಡಾಗಿದ್ದಾನೆ. ಶನಿವಾರ ಪೂರ್ವ ಚಂಪಾರಣ್‌ನ ಮಧುಬನ್‌ನಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್ ಆವರಣದಲ್ಲಿ 10 ನೇ ತರಗತಿ ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಲಾಗಿತ್ತು. ಪೂರ್ವ ಚಂಪಾರಣ್ ನಿವಾಸಿ ಬಜರಂಗಿಕುಮಾರ ಎಂದು ಗುರುತಿಸಲಾದ ಬಾಲಕ ತನ್ನ ತಾಯಿಯ ಮೊಬೈಲ್ … Continued

ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ: 12 ಸಾವು, ಹಲವರಿಗೆ ಗಾಯ

ಬೆರ್ಹಾಂಪುರ: ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಮದುವೆ ಸಮಾರಂಭವೊಂದರ ಬಸ್ ಮತ್ತೊಂದು ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬೆರ್ಹಾಂಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬರ್ಹಾಂಪುರ-ತಪ್ತಪಾಣಿ ರಸ್ತೆಯ ದಿಗಪಹಂಡಿ ಪ್ರದೇಶದ ಬಳಿ ಭಾನುವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಮದುವೆ ದಿಬ್ಬಣದ … Continued