ಟಿಸಿಎಸ್‌ ಕಂಪನಿಯಲ್ಲಿ ಹೆಚ್ಚಿದ ಮಹಿಳಾ ಉದ್ಯೋಗಿಗಳ ಕೆಲಸ ತೊರೆಯುವ ಪ್ರಮಾಣ : ಯಾಕೆಂದರೆ….

ಮನೆಯಿಂದ ಕೆಲಸ ಮಾಡುವ ಅವಕಾಶದ ಅಂತ್ಯವು ಐಟಿ ಸಂಸ್ಥೆ ಟಿಸಿಎಸ್‌ ಮಹಿಳಾ ಉದ್ಯೋಗಿಗಳ ಹೆಚ್ಚಿನ ಪ್ರಮಾಣದ ರಾಜೀನಾಮೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಲಿಂಗ ವೈವಿಧ್ಯತೆಯನ್ನು ಉತ್ತೇಜಿಸುವ ನಮ್ಮ ಪ್ರಯತ್ನಗಳಿಗೆ ಇದು ಹಿನ್ನಡೆಯಾಗಿದೆ, ಆದರೆ ನಾವು ಅದನ್ನು ದ್ವಿಗುಣಗೊಳಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ದೂರಸ್ಥ ಅಥವಾ ಮನೆಯಿಂದ ಕೆಲಸ ಮಾಡುವ ಅವಕಾಶದ … Continued

ಮಹಾತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-3 ಜುಲೈ 12 -19ರ ನಡುವೆ ಉಡಾವಣೆ : ಇಸ್ರೋ ಅಧ್ಯಕ್ಷ

ಕೊಟ್ಟಾಯಂ: ಇಸ್ರೋದ ಚಂದ್ರಯಾನದ ಮೂರನೇ ಆವೃತ್ತಿ ಚಂದ್ರಯಾನ-3 ಈ ವರ್ಷದ ಜುಲೈ 12 ಮತ್ತು 19 ರ ನಡುವೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ವೈಕಂನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದ ನೇಪಥ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೇಳಾಪಟ್ಟಿಯ … Continued

ಬಿಪರ್‌ಜೋಯ್ ಚಂಡಮಾರುತ : ಗುಜರಾತ್ ಕರಾವಳಿಯಿಂದ 8,000 ಜನರ ಸ್ಥಳಾಂತರ

ನವದೆಹಲಿ: ಗುಜರಾತ್ ಕರಾವಳಿಯ 10 ಕಿಲೋಮೀಟರ್ ವ್ಯಾಪ್ತಿಯಿಂದ ಎಂಟು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಕಚ್‌ನಲ್ಲಿ ತಿಳಿಸಿದ್ದಾರೆ. ಸಮೀಪಿಸುತ್ತಿರುವ “ಬೈಪರ್‌ಜಾಯ್” ಚಂಡಮಾರುತದ ಮುಖಾಂತರ ತೆಗೆದುಕೊಂಡ ಮುನ್ನೆಚ್ಚರಿಕೆಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. ಸುಮಾರು 1.5 ರಿಂದ 2 ಲಕ್ಷ ಸಣ್ಣ ಮತ್ತು ದೊಡ್ಡ ಪ್ರಾಣಿಗಳನ್ನು ಸ್ಥಳಾಂತರಿಸಲಾಗಿದೆ ಎಂದು … Continued

ಮುಂದಿನ ನಾಲ್ಕು ವಾರಗಳ ಕಾಲ ಭಾರತದಲ್ಲಿ ಮುಂಗಾರು ದುರ್ಬಲ ಎಂದು ಮುನ್ಸೂಚನೆ ನೀಡಿದ ಸ್ಕೈಮೆಟ್ ವೆದರ್‌

ನವದೆಹಲಿ : ಮುಂದಿನ ನಾಲ್ಕು ವಾರಗಳ ಕಾಲ ಭಾರತದಲ್ಲಿ ಮುಂಗಾರು ದುರ್ಬಲವಾಗಿ ಇರಲಿದ್ದು ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ವೆದರ್ ಮುನ್ಸೂಚನೆ ನೀಡಿದ್ದು, ಕೃಷಿಯ ಮೇಲಿನ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ” ವಿಸ್ತೃತ ರೇಂಜ್ ಪ್ರಿಡಿಕ್ಷನ್ ಸಿಸ್ಟಮ್ (ERPS) ಜುಲೈ 6 ರವರೆಗೆ ಅಂದರೆ ಮುಂದಿನ ನಾಲ್ಕು ವಾರಗಳವರೆಗೆ … Continued

ಬಿಪೋರ್‌ ಜಾಯ್‌ ಚಂಡಮಾರುತದ ಹಿನ್ನೆಲೆ: ಗುಜರಾತಿನಲ್ಲಿ 67 ರೈಲುಗಳನ್ನು ರದ್ದುಗೊಳಿಸಿದ ಪಶ್ಚಿಮ ರೈಲ್ವೆ

ನವದೆಹಲಿ : ಗುಜರಾತ್‌ನಲ್ಲಿ ಗುರುವಾರ ಭೂಕುಸಿತವಾಗಲಿರುವ ಬಿಪೋರ್‌ ಜಾಯ್‌ ಚಂಡಮಾರುತದ ಹಿನ್ನೆಲೆಯಲ್ಲಿ ಒಟ್ಟು 67 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಸಿಪಿಆರ್‌ಒ ಪಶ್ಚಿಮ ರೈಲ್ವೆ ಸೋಮವಾರ ತಿಳಿಸಿದೆ. ಗುಜರಾತ್‌ನಲ್ಲಿ ‘ಬಿಪೋರ್‌ ಜಾಯ್’ ಚಂಡಮಾರುತದ ಹಿನ್ನೆಲೆಯಲ್ಲಿ, ಪಶ್ಚಿಮ ರೈಲ್ವೆ ತನ್ನ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 67 ರೈಲು ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿದೆ. ಇದರ ಜೊತೆಗೆ, … Continued

10 ರೂ. ಕೇಳಿದ್ದಕ್ಕೆ 12 ವರ್ಷದ ಮಗನನ್ನೇ ಕತ್ತು ಹಿಸುಕಿ ಸಾಯಿಸಿದ ತಂದೆ

ಚತ್ರಾ (ಜಾರ್ಖಂಡ್): 10 ರೂಪಾಯಿ ಕೇಳಿದ್ದಕ್ಕೆ 48 ವರ್ಷದ ವ್ಯಕ್ತಿಯೊಬ್ಬ ತನ್ನ 12 ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಂಚಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಬಶಿಷ್ಟನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕರೈಲಿಬಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಪ್ಪು ಕುಮಾರ … Continued

ಹಾವನ್ನು ಜಿಂಕೆ ನುಂಗಿತ್ತಾ..! ಹುಲ್ಲಿನಂತೆ ಹಾವನ್ನೇ ಜಗಿದು ನುಂಗಿದ ಜಿಂಕೆ | ವೀಕ್ಷಿಸಿ

ಜಿಂಕೆಗಳು ಸಸ್ಯಹಾರಿ ಪ್ರಾಣಿ. ಹುಲ್ಲು, ಗಿಡ-ಕಂಟಿಗಳನ್ನು ತಿನ್ನುತ್ತವೆ. ಎಂದಾದರೂ ಜಿಂಕೆಗಳು ಹಾವನ್ನು ತಿಂದಿದ್ದನ್ನು ಕೇಳಿದ್ದೀರಾ ಅಥವಾ ನೋಡಿದ್ದೀರಾ..? ಅಚ್ಚರಿಯ ಸಂಗತಿಯಾದರೂ ಇದನ್ನು ನಂಬಲೇಬೇಕು. ಇಲ್ಲೊಂದು ಜಿಂಕೆ ಹಾವನ್ನು ಹುಲ್ಲಿನಂತೆ ಬಾಯಲ್ಲಿ ಜಗಿದು ತಿನ್ನುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ಜಿಂಕೆಯೊಂದು ರಸ್ತೆ … Continued

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ : ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ 14,624 ಅಭ್ಯರ್ಥಿಗಳು

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕಳೆದ ತಿಂಗಳ 28ರಂದು ನಡೆಸಿದ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಇದರಲ್ಲಿ ಒಟ್ಟು 14,624 ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಮುಖ್ಯಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳ ಪಟ್ಟಿಯನ್ನು ಯುಪಿಎಸ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಹಾಗೂ ಈ ಎಲ್ಲ ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಹಾಜರಾಗಲು ಅರ್ಜಿ … Continued

ಮಣಿಪುರ ಜನಾಂಗೀಯ ಹಿಂಸಾಚಾರ; ಶಿಬಿರಗಳಲ್ಲಿ ಆಶ್ರಯ ಪಡೆದ ಮನೆ ತೊರೆದ 50 ಸಾವಿರಕ್ಕೂ ಹೆಚ್ಚು ಸಂತ್ರಸ್ತರು

ಇಂಫಾಲ: ಮಣಿಪುರ ಸರ್ಕಾರ ಶನಿವಾರ ರಾಜ್ಯದಲ್ಲಿ ಅಂತರ್ಜಾಲ ಸೇವೆಗಳ ಮೇಲಿನ ನಿಷೇಧವನ್ನು ಜೂನ್ 15 ರವರೆಗೆ ವಿಸ್ತರಿಸಿದೆ. ಆಯುಕ್ತ (ಗೃಹ) ಟಿ.ರಂಜಿತ್ ಸಿಂಗ್ ಹೊರಡಿಸಿದ ಆದೇಶದಲ್ಲಿ ಬ್ರಾಡ್‌ಬ್ಯಾಂಡ್ ಸೇರಿದಂತೆ ಮೊಬೈಲ್ ಡೇಟಾ ಸೇವೆಗಳ ಅಮಾನತನ್ನು ಜೂನ್ 15 ರ ಮಧ್ಯಾಹ್ನ 3 ರ ವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಇತ್ತೀಚಿನ ವಿಸ್ತರಣೆಯೊಂದಿಗೆ, ಮಣಿಪುರದ ನಾಗರಿಕರು ಈಗ … Continued

ಜೂನ್‌ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6-6.3% : ಮೂಡೀಸ್‌

ನವದೆಹಲಿ: ಭಾರತದ ಆರ್ಥಿಕತೆಯು ಜೂನ್‌ ತ್ರೈಮಾಸಿಕದಲ್ಲಿ ಶೇಕಡ 6 6.3ರ ಮಟ್ಟದಲ್ಲಿ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಭಾನುವಾರ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ವರಮಾನವು ನಿರೀಕ್ಷೆಗಿಂತಲೂ ಕಡಿಮೆಯಾಗುವ ಸಾಧ್ಯತೆಯಿದ್ದು, ಅದರಿಂದಾಗಿ ವಿತ್ತೀಯ ಕೊರತೆಯು ಹೆಚ್ಚಾಗುವ ಆತಂಕವನ್ನು ಅದು ವ್ಯಕ್ತಪಡಿಸಿದೆ. ಆರ್ಥಿಕ ಬೆಳವಣಿಗೆಯ ಕುರಿತು ಮೂಡೀಸ್‌ ಮಾಡಿರುವ ಅಂದಾಜು … Continued