ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಆಕಳ ಕರು, ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸಿ, ಪಾರ್ಥಿವ ಶರೀರಕ್ಕೆ ಪ್ರದಕ್ಷಿಣೆ ಹಾಕಿದ ಮೂಕ ಪ್ರಾಣಿ: ಜನರೂ ಭಾವುಕ

ಹಜಾರಿಬಾಗ್: ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಪ್ರೀತಿಯ ಅನೇಕ ಪ್ರಕರಣಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಆದರೆ ಆಕಳು ಕರುವೊಂದು ತನ್ನ ಮಾಲೀಕ ಸತ್ತಾಗ ತೋರಿದ ಪ್ರೀತಿ ಎಲ್ಲರ ಕಣ್ಣಾಲಿಗಳನ್ನೂ ತೇವವಾಗಿಸಿದೆ. ವ್ಯಕ್ತಿಯ ಮೃತಪಟ್ಟ ನಂತರ, ಅತ ಸಾಕಿದ್ದ ಆಕಳು ಕರು ಅವನ ಮೃತದೇಹದ ಬಳಿಗೆ ತಲುಪಿತು. ಅಷ್ಟೇ ಆದರೆ ಅಂತಹ ವಿಶೇಷ ಇರಲಿಲ್ಲ. ಆದರೆ ಈ … Continued

ಗ್ಯಾಂಗ್‌ಸ್ಟರ್‌ಗಳ ಅಪರಾಧ ಸಿಂಡಿಕೇಟ್‌ ದಮನಕ್ಕೆ ಮುಂದಾದ ಎನ್‌ಐಎ: ದೇಶಾದ್ಯಂತ 60 ಸ್ಥಳಗಳಲ್ಲಿ ದಾಳಿ

ನವದೆಹಲಿ: ಗ್ಯಾಂಗ್‌ಗಳು ಮತ್ತು ಅಪರಾಧ ಸಿಂಡಿಕೇಟ್‌ಗಳನ್ನು ಹತ್ತಿಕ್ಕಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಭಾರತದಾದ್ಯಂತ 60 ಸ್ಥಳಗಳಲ್ಲಿ ದಾಳಿ ನಡೆಸಿತು. ಈ 60 ಸ್ಥಳಗಳಲ್ಲಿ ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಸ್ಥಳಗಳು ಸೇರಿವೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಬಾಂಬಿಹಾ ಗ್ಯಾಂಗ್ ಮತ್ತು ನೀರಜ್ ಬವಾನಾ ಗ್ಯಾಂಗ್‌ಗೆ ಸೇರಿದ … Continued

ಸೆಪ್ಟೆಂಬರ್ 17ರಿಂದ ಪ್ರಧಾನಿ ಮೋದಿಗೆ ನೀಡಿದ ಸಾವಿರಕ್ಕೂ ಹೆಚ್ಚು ಉಡುಗೊರೆಗಳ ಹರಾಜು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾರ್ವಜನಿಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕ್ರೀಡಾಪಟುಗಳು ಹಾಗೂ ಇತರರು ನೀಡಿರುವ 1,200ಕ್ಕೂ ಅಧಿಕ ಉಡುಗೊರೆಗಳ ಹರಾಜು ಪ್ರಕ್ರಿಯೆಯು ಪ್ರಧಾನಿಯವರ ಜನ್ಮದಿನದ ನಿಮಿತ್ತ ಸೆಪ್ಟೆಂಬರ್ 17ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್‌ 2ರ ವರೆಗೆ ಆನ್‌ಲೈನ್‌ನಲ್ಲಿ ನಡೆಯಲಿದೆ. ಬಂದ ಆದಾಯವು ನಮಾಮಿ ಗಂಗಾ ಮಿಷನ್‌ಗೆ ಹೋಗುತ್ತದೆ. ಸೆಪ್ಟೆಂಬರ್ 17 ರಂದು ಹರಾಜು ಆರಂಭವಾಗುತ್ತದೆ ಮತ್ತು … Continued

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಪುನರ್‌ ಸ್ಥಾಪನೆ ಸಾಧ್ಯವಾಗದ ಮಾತು, ಚುನಾವಣಾ ಲಾಭಕ್ಕಾಗಿ ಜನರ ದಾರಿ ತಪ್ಪಿಸುವುದಿಲ್ಲ: ಗುಲಾಂ ನಬಿ ಆಜಾದ್

ಶ್ರೀನಗರ: ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿರುವ ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಗುಲಾಂ ನಬಿ ಆಜಾದ್ ಅವರು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ವಾಯತ್ತತೆಯನ್ನು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಎರಡು ವರ್ಷಗಳ ಹಿಂದೆ ರದ್ದುಗೊಳಿಸಿದ್ದು, ಇದನ್ನು ಮತ್ತೆ ಸ್ಥಾಪನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಮಾಜಿ … Continued

ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಯಿಂದ ಸಲ್ಮಾನ್ ಖಾನ್‌ಗೂ ‘ಮೂಸ್ ವಾಲಾ ಕರ್ ದೇಂಗೆ…’ ಸಂಚು ಬಯಲು

ಚಂಡೀಗಡ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಮತ್ತು ಸಲ್ಮಾನ್ ಖಾನ್‌ಗೆ ಕಳುಹಿಸಲಾದ ಬೆದರಿಕೆಗಳ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿರುವ ಪಂಜಾಬ್‌ನ ಉನ್ನತ ಪೊಲೀಸ್ ಅಧಿಕಾರಿಗಳು ಆರೋಪಿಗಳಲ್ಲಿ ಒಬ್ಬಾತ ಬಾಲಿವುಡ್ ನಟನನ್ನು ಗುರಿಯಾಗಿಸಲು ಮುಂಬೈನಲ್ಲಿ ಸಂಚು ನಡೆಸಿದ್ದರು ಎಂದು ಭಾನುವಾರ ಹೇಳಿದ್ದಾರೆ. ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ, ರಾಜಕಾರಣಿ ಮೂಸೆವಾಲಾ ಹತ್ಯೆಯ ನಂತರ ಜೂನ್‌ನಲ್ಲಿ ಬಾಲಿವುಡ್‌ … Continued

ಇಹಲೋಕ ತ್ಯಜಿಸಿದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ನವದೆಹಲಿ: ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ಭಾನುವಾರ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ದ್ವಾರಕಾ, ಜ್ಯೋತಿಶ್ ಪೀಠದ ಶಂಕರಾಚಾರ್ಯರಾಗಿದ್ದ ಸ್ವಾಮಿ ಸ್ವರೂಪಾನಂದ ಅವರು ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ನರಸಿಂಗ್‌ಪುರ ಜಿಲ್ಲೆಯ ತಮ್ಮ ಆಶ್ರಮದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ … Continued

ಕ್ಲಿನಿಕ್ ಬಾಗಿಲು ತೆರೆಯಲು ತಡವಾಗಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಗುಂಪು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೈದ್ಯರು ಕ್ಲಿನಿಕ್‌ಗೆ ಬೇಗ ಬರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಜನರ ಗುಂಪೊಂದು ಚೆನ್ನಾಗಿ ಥಳಿಸಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಈ ಘಟನೆ ನಡೆದಿದ್ದು, ಆಯುರ್ವೇದ ವೈದ್ಯರನ್ನು ಗುಂಪೊಂದು ಚೆನ್ನಾಗಿ ಥಳಿಸಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಆಯುರ್ವೇದ ವೈದ್ಯರು ತಡವಾಗಿ ಕ್ಲಿನಿಕ್ ಬಾಗಿಲು ತೆರೆದಿದ್ದಾರೆ. ಕ್ಲಿನಿಕ್ ಬಾಗಿಲನ್ನು ತಡವಾಗಿ ತೆರೆದಿದ್ದರಿಂದ ನಮ್ಮನ್ನು … Continued

ನಿಮಗೆ ತಮಿಳು ಹುಡುಗಿಯನ್ನೇ ಮದುವೆ ಮಾಡಿಕೊಡಲು ಸಿದ್ಧ: ಮಹಿಳೆ ಮಾತಿಗೆ ನಾಚಿನೀರಾದ ರಾಹುಲ್ ಗಾಂಧಿ

ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಕಾಂಗ್ರೆಸ್‌ನ ‘ಭಾರತ್‌ ಜೋಡೋ ಯಾತ್ರೆ’ ಅನೇಕ ತಮಾಷೆಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ತಮಿಳುನಾಡಿನಲ್ಲಿ ಸಂಚರಿಸಿದ ಯಾತ್ರೆಯುದ್ದಕ್ಕೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಜನರೊಂದಿಗೆ ಸಂವಾದ ನಡೆಸಿದ್ದಾರೆ. ತಮಿಳುನಾಡಿನಲ್ಲಿ ರಾಹುಲ್ ಅವರು ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ನಡೆದ ತಮಾಷೆಯ ವಿದ್ಯಮಾನದ ಬಗ್ಗೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. … Continued

ಗಣೇಶನಮೂರ್ತಿ ತಬ್ಬಿಕೊಂಡು ವಿಸರ್ಜನೆಗೆ ಒಯ್ಯಲು ಬಿಡದ ಪುಟ್ಟ ಹುಡುಗಿ, ಮೂರ್ತಿ ತಬ್ಬಿಕೊಂಡು ಅಳುವ ಕಂದ | ವೀಕ್ಷಿಸಿ

10 ದಿನಗಳ ಗಣೇಶ ಚತುರ್ಥಿ ಹಬ್ಬವು ಮುಕ್ತಾಯವಾಗಿದ್ದು ಒಂದು ದಿನದ ಹಿಂದೆ ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳಾದ್ಯಂತ ಜನರು ವಿವಿಧ ಜಲಮೂಲಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು. ಒಂದು ಕುಟುಂಬವು ತಮ್ಮ ಗಣಪತಿ ವಿಗ್ರಹವನ್ನು ನಿಮಜ್ಜನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ, ಒಂದು ಚಿಕ್ಕ ಹುಡುಗಿ ಗಣಪತಿ ಬಪ್ಪನನ್ನು ತನ್ನ ಮನೆಯಿಂದ ವಿಸರ್ಜನೆಗೆ ಹೋಗಲು ಬಿಡಲಿಲ್ಲ. ಹಬ್ಬದ ಕೊನೆಯ … Continued

ದೆಹಲಿ ಸರ್ಕಾರದ ಡಿಟಿಸಿ ಬಸ್‌ಗಳ ಖರೀದಿಯಲ್ಲಿ ‘ಅಕ್ರಮ’ ಆರೋಪ ಪ್ರಕರಣ: ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದೆಹಲಿ ಸರ್ಕಾರವು 1000 ಲೋ ಫ್ಲೋರ್ ಬಸ್‌ಗಳನ್ನು ಖರೀದಿಸಿರುವ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಭಾನುವಾರ ಅನುಮೋದಿಸಿದ್ದಾರೆ. ಜೂನ್‌ನಲ್ಲಿ ಬಂದ ದೂರಿನ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ನರೇಶ್‌ಕುಮಾರ್ ಅವರು ಈ ಕುರಿತು ಶಿಫಾರಸು ಮಾಡಿದ್ದರು. ಡಿಟಿಸಿ ಬಸ್‌ಗಳ ಟೆಂಡರ್ ಮತ್ತು ಖರೀದಿಗೆ … Continued